ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಮಾಜಿ ಸಚಿವರ ವಿಚಾರಣೆ ನಡೆಸಿದ್ದಾರೆ. ಸಿಡಿ, ಆಡಿಯೋ ಕ್ಲಿಪ್ ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆಯೂ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ರಮೇಶ್ ಜಾರಕಿಹೊಳಿಯವರನ್ನು 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಲು ರಮೇಶ್ ಜಾರಕಿಹೊಳಿ ನಿರಾಕರಿಸಿದ್ದಾರೆ. ಸಿಡಿಯಲ್ಲಿರುವುದು ನಾನಲ್ಲ, ಅದು ನನ್ನ …
Read More »ಕಾಮೆಡ್ ಕೆ ಪದವಿ ಪೂರ್ವ ಪರೀಕ್ಷಾ ದಿನಾಂಕ ಪ್ರಕಟ
ಬೆಂಗಳೂರು:ಕರ್ನಾಟಕದ ವೈದ್ಯಕೀಯ ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (COMEDK UGET 2021) ನಡೆಸುವ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪದವಿಪೂರ್ವ ಪ್ರವೇಶ ಪರೀಕ್ಷೆ ಜೂನ್ 20 ರಂದು ನಡೆಯಲಿದೆ. ಆನ್‌ಲೈನ್ ಮೋಡ್‌ನಲ್ಲಿ 400 ಪರೀಕ್ಷಾ ಕೇಂದ್ರಗಳೊಂದಿಗೆ ರಾಷ್ಟ್ರದಾದ್ಯಂತ 150 ನಗರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು. 2020 ರಲ್ಲಿ ನೋಂದಾಯಿತ 63,000 ರಂತೆ ಈ ವರ್ಷ ಸುಮಾರು 80,000 ನೋಂದಣಿಗಳನ್ನು ಸಂಘಟಕರು ನಿರೀಕ್ಷಿಸಿದ್ದಾರೆ. ಕಳೆದ ವರ್ಷ, ಪ್ರವೇಶ ಪರೀಕ್ಷೆಯನ್ನು ಮೂರು ಬಾರಿ ಮುಂದೂಡಲಾಯಿತು ಮತ್ತು …
Read More »ಪ್ರತಿಭಟನಾನಿರತ ರೈತರಿಗೂ ಲಸಿಕೆ ನೀಡಿ: ರೈತ ಮುಖಂಡ ರಾಕೇಶ್ ಟಿಕಾಯತ್
ನವದೆಹಲಿ: ದೆಹಲಿಯ ಗಡಿಗಳಲ್ಲಿ 111 ದಿನಗಳಿಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೋವಿಡ್ ಲಸಿಕೆ ನೀಡಬೇಕೆಂದು ರೈತ ಮುಖಂಡ ರಾಕೇಶ್ ಟಿಕಾಯತ್ ಗುರುವಾರ ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಅವರು, ‘ದೇಶದಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಪ್ರತಿಭಟನಾ ಸ್ಥಳದಲ್ಲಿಯೇ ಮುನ್ನೆಚ್ಚರಿಕಾ ಕ್ರಮವಾಗಿ ಸಮಾಜಿಕ ಅಂತರ ಹಾಗೂ ಕೊರೊನಾ ಸಂಬಂಧಿ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಹೋರಾಟದಲ್ಲಿ ಪಾಲ್ಗೊಂಡಿರುವ ರೈತರಿಗೆ ಸರ್ಕಾರವು ಲಸಿಕೆ ನೀಡಬೇಕು. ನಾನು ಕೂಡ ಲಸಿಕೆ …
Read More »ಅಮಾನತುಗೊಂಡ ಪೊಲೀಸ್ ಅಧಿಕಾರಿ ಬಳಿ ಮತ್ತೆರಡು ಲಕ್ಸುರಿ ಕಾರು ಪತ್ತೆ
ಮುಂಬಯಿ: ಅಮಾನತುಗೊಂಡಿರುವ ಮುಂಬಯಿ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಸಂಬಂಧಪಟ್ಟ ಇನ್ನೆರಡು ಲಕ್ಸುರಿ ಕಾರುಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್ ಐಎ) ವಶಪಡಿಸಿಕೊಂಡಿದೆ. ಎನ್ ಐಎ ಮೂಲಗಳ ಪ್ರಕಾರ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಡೊ ಕಾರು ವಾಜೆ ನಿವಾಸದಲ್ಲಿ ಪತ್ತೆಯಾಗಿದೆ. ಮರ್ಸಡೀಸ್ ಕಾರನ್ನು ಕೂಡ ಸಚಿನ್ ಮನೆಯಿಂದ ವಶಕ್ಕೆ ಪಡೆಯಲಾಗಿದೆ. ಇದುವರೆಗೆ ಒಟ್ಟು ಐದು ಲಕ್ಸುರಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ವಾಜೆ ಜತೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹಿರಿಯ ಪೊಲೀಸ್ ಇನ್ಸ್ …
Read More »ಹೊತ್ತಿ ಉರಿದ ಕ್ಯಾಂಟರ್: ಚಾಲಕ ಸಜೀವ ದಹನ
ಹಾಸನ: ರಸ್ತೆ ಬದಿ ನಿಲ್ಲಿಸಿದ್ದ ಕ್ಯಾಂಟರ್ ವಾಹನ ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಹಾಸನ ನಗರದ ಹೊರವಲಯದ ಬಿಟ್ಟಗೌಡನಹಳ್ಳಿಯ ಬೈಪಾಸ್ ರಸ್ತೆಯ ಬಳಿ ನಡೆದಿದೆ. ತಮಿಳುನಾಡು ಮೂಲದ ಜಮೀರ್(40) ವಾಹನದಲ್ಲಿಯೇ ಸಜೀವ ದಹನಗೊಂಡ ಚಾಲಕ. ಈತ ತಮಿಳುನಾಡಿನಿಂದ ತಂದ ಸರಕನ್ನು ನಿಗದಿತ ಸ್ಥಳಕ್ಕೆ ತಲುಪಿಸಿ ನಂತರ ಬಿಟ್ಟಗೌಡನಹಳ್ಳಿ ವೃತ್ತದ ಬೈಪಾಸ್ ರಸ್ತೆ ಬದಿ ನಿಲ್ಲಿಸಿ ವಾಹನದಲ್ಲಿಯೇ ಮಲಗಿದ್ದಾನೆ. ಬೆಳಗಿನ ಜಾವದಲ್ಲಿ ಚಾಲಕನ ಸೀಟು ಬಳಿ ಬೆಂಕಿ …
Read More »Covid-19 Karnataka Updates: ಸತತ ನಾಲ್ಕನೇ ದಿನ ಸಾವಿರ ದಾಟಿದ ಹೊಸ ಪ್ರಕರಣ Covid-19 Karnataka Updates: ಸತತ ನಾಲ್ಕನೇ ದಿನ ಸಾವಿರ ದಾಟಿದ ಹೊಸ ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ಸತತ ನಾಲ್ಕನೇ ದಿನ ಹೊಸ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಶುಕ್ರವಾರ 1,587 ಪ್ರಕರಣಗಳು ದೃಢಪಟ್ಟಿವೆ. ಮೂರುವರೆ ತಿಂಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ. ಈವರೆಗೆ ಸೋಂಕಿತರಾದವರ ಸಂಖ್ಯೆ 9.66 ಲಕ್ಷ ದಾಟಿದೆ. ಹೊಸ ಪ್ರಕರಣಗಳು ಏರುಗತಿ ಪಡೆದ ಕಾರಣ ಸಕ್ರಿಯ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಿದ್ದು, 12,067 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 131 ಮಂದಿ ತೀವ್ರ …
Read More »ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಒಂದು ಆಯ್ಕೆ: ಉದ್ಧವ್ ಠಾಕ್ರೆ
ನವದೆಹಲಿ: ಒಂದೇ ಸಮನೆ ಹೆಚ್ಚಳವಾಗುತ್ತಿರುವ ಕೋವಿಡ್ 19 ಸೋಂಕು ತಡೆಯಲು ಲಾಕ್ ಡೌನ್ ಒಂದು ಆಯ್ಕೆಯಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ(ಮಾರ್ಚ್ 19) ತಿಳಿಸಿದ್ದಾರೆ. ಸುದ್ದಿಗಾರರ ಜತೆ ನಡೆಸಿದ ಸಂವಹನದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಜನರು ಕೋವಿಡ್ 19 ಮಾರ್ಗಸೂಚಿಯನ್ನು ಪಾಲಿಸುತ್ತಾರೆ ಎಂಬ ನಂಬಿಕೆ ಇದೆ. ಆದರೂ ಲಾಕ್ ಡೌನ್ ಒಂದು ಆಯ್ಕೆಯಾಗಿದೆ ಎಂದು ಹೇಳಿದರು. ಪರಿಸ್ಥಿತಿ ಕೈಮೀರುವ ಹಂತದಲ್ಲಿ ಲಾಕ್ ಡೌನ್ ನಮ್ಮ ಆಯ್ಕೆಯಾಗಿದೆ. ಆದರೆ ರಾಜ್ಯದ …
Read More »ಪರೀಕ್ಷಾ ಪೇ ಚರ್ಚಾ’ಗೆ ಆಯ್ಕೆ: ಆರ್ಡಿ ಶಾಲೆಯ ಅನುಷಾಗೆ ಅಭಿನಂದನೆ ಸಲ್ಲಿಸಿದ ಸುರೇಶ್ ಕುಮಾರ್
ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ‘ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾದ ಉಡುಪಿ ಜಿಲ್ಲೆಯ ಆರ್ಡಿಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅನುಷಾಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಅನುಷಾಗೆ ಕರೆ ಮಾಡಿದ ಸಚಿವರು, ಪ್ರಧಾನಿಯವರ ಜೊತೆ ಮಾತನಾಡಲು ನೀನು ಆಯ್ಕೆಯಾಗಿರುವುದು ನಮಗೆ ಖುಷಿಯಾಗಿದೆ. ನೀನು ಶಾಲೆಗೆ ಮತ್ತು ರಾಜ್ಯಕ್ಕೆ ಹೆಮ್ಮೆ ತರಬೇಕು ಎಂದು ಹೇಳಿದರು. …
Read More »ಗುಜರಾತ್‌ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆ..!?
ಅಹಮದಾಬಾದ್, ಮಾ.19-ಕೊರೊನಾ ಮಹಾಮಾರಿ ತೀವ್ರಗತಿಯಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನೈಟ್‍ಕಫ್ರ್ಯೂ ಜಾರಿಗೊಳಿಸಿದ್ದರೂ ಮತ್ತಷ್ಟು ತುರ್ತುಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗುಜರಾತ್ ಸರ್ಕಾರ ಸಾರ್ವಜನಿಕ ಬಸ್ ಸಂಚಾರ, ಶಾಲಾ-ಕಾಲೇಜುಗಳು, ಉದ್ಯಾನವನ ಹಾಗೂ ಜಿಮ್‍ಗಳನ್ನು ಬಂದ್ ಮಾಡಲು ಆದೇಶಿಸಿದೆ.ಅಹಮದಾಬಾದ್ ಮತ್ತು ಸೂರತ್‍ನಲ್ಲಿ ರಾತ್ರಿ ಕಫ್ರ್ಯೂ 9 ಗಂಟೆಯಿಂದ ಬೆಳಗ್ಗೆ 6ರ ವರೆಗೆ ಇರಲಿದ್ದು, ಎಲ್ಲ ರೀತಿಯ ವಾಹನ ಸಂಚಾರ ಹಾಗೂ ಜನರ ಓಡಾಟವನ್ನು ನಿಷೇಧಿಸಲಾಗಿದೆ. ಮುಂದಿನ ಏಪ್ರಿಲ್ 10ರ ವರೆಗೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ನಡೆಯಬೇಕಿದ್ದ …
Read More »ಹರಿದ ಜೀನ್ಸ್’ ಸಿಎಂ ತಿರತ್ ಹೇಳಿಕೆಗೆ ಬಿಗ್‍ಬಿ ಮೊಮ್ಮಗಳ ಖಡಕ್ ತಿರುಗೇಟು
ಮುಂಬೈ : ಹರಿದ ಜೀನ್ಸ್ ಪ್ಯಾಂಟ್ ಧರಿಸಬೇಡಿ ಎಂದಿದ್ದ ಉತ್ತರಾಖಂಡ್ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರಿಗೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಉತ್ತರಾಖಂಡ್ ಸಿಎಂ ತಿರತ್ ಸಿಂಗ್ ರಾವತ್ ಅವರು ‘ಯುವತಿಯರು ಶ್ರೀಮಂತರ ಮಕ್ಕಳಂತೆ ಕಾಣಲು ಹರಿದ ಜೀನ್ಸ್ ಧರಿಸಿ ಮೊಣಕಾಲು ತೋರಿಸುತ್ತಾರೆ. ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದು. ಪಾಶ್ಚಾತ್ಯರು ನಮ್ಮ ಸಂಸ್ಕೃತಿ, ಆಚಾರ …
Read More »
Laxmi News 24×7