Breaking News

ರಾಜ್ಯ

ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ. ಬಾಲಚಂದ್ರ ಜಾರಕಿಹೊಳಿ

ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.   ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ ಅಧಿಕಾರಿಗಳನ್ನುದ್ಧೇಶಿಸಿ ದೂರವಾಣಿಯಲ್ಲಿ ಮಾತನಾಡಿದರು. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಸಕಲ ಸೌಲಭ್ಯಗಳನ್ನೊಳಗೊಂಡ …

Read More »

ಜೆಎಸ್‌ಎಸ್ ಆಸ್ಪತ್ರೆಯಲ್ಲಿ 500 ಹಾಸಿಗೆ ನೀಡಲು ಸುತ್ತೂರು ಶ್ರೀಗಳಲ್ಲಿ ಮನವಿ

ಮೈಸೂರು, ಏಪ್ರಿಲ್ 27: ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ 500 ಹಾಸಿಗೆಯನ್ನು ಮೈಸೂರು ಜಿಲ್ಲಾಡಳಿತಕ್ಕೆ ನೀಡುವಂತೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಮಂಗಳವಾರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗೆ ಮನವಿ ಮಾಡಿದರು. ಮಂಗಳವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಆಗಮಿಸಿ, ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೋವಿಡ್ ಚಿಕಿತ್ಸೆಗೆ ನಿಮ್ಮ ಸಂಸ್ಥೆಯ ವ್ಯಾಪ್ತಿಯಲ್ಲಿರುವ …

Read More »

ಮನೆಯಲ್ಲಿ ದಿನಸಿ ಸಂಗ್ರಹಿಸಿದ ಜನರು

ರಾಯಚೂರು: ಲಾಕ್‌ಡೌನ್‌ ದಿನಗಳಲ್ಲಿ ಅಗತ್ಯ ದಿನಸಿ ಸಿಗುತ್ತವೆಯೋ ಇಲ್ಲವೋ ಅಥವಾ ದುಬಾರಿ ಆಗಬಹುದು ಎನ್ನುವ ಆತಂಕದೊಂದಿಗೆ ಜನರು ಮುಗಿಬಿದ್ದು ಸೋಮವಾರ ದಿನಸಿ ಖರೀದಿಸುತ್ತಿರುವುದು ಕಂಡುಬಂತು. ಎಪಿಎಂಸಿ ಆವರಣ, ಚಂದ್ರಮೌಳೇಶ್ವರ ವೃತ್ತ ಹಾಗೂ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ವೃತ್ತ ಮಾರ್ಗದಲ್ಲಿರುವ ಮಳಿಗೆಗಳಲ್ಲಿ ಖರೀದಿ ಭಾರಾಟೆ ಜೋರಾಗಿತ್ತು. ಚೀಲಗಳನ್ನು ಹಿಡಿದು ಸರದಿ ನಿಂತಿದ್ದರು. ಸಾಮಾನ್ಯ ದಿಗಳಲ್ಲಿ ಒಂದು ಚೀಲದಲ್ಲಿ ಸರಕು ಖರೀದಿಸುತ್ತಿದ್ದವರು ಈಗ ಬೈಕ್‌, ಆಟೋ ಹಾಗೂ ಕಾರುಗಳಲ್ಲಿ ದಿನಸಿಗಳನ್ನು ತುಂಬಿಸಿಕೊಂಡು ಒಯ್ಯುತ್ತಿದ್ದಾರೆ. …

Read More »

ಲಾಕ್ ಡೌನ್; ರಾತ್ರಿ 9ರ ನಂತರ ಸರ್ಕಾರಿ ಬಸ್ ಇಲ್ಲ

ಬೆಂಗಳೂರು, ಏಪ್ರಿಲ್ 27; ಕರ್ನಾಟಕ ಸರ್ಕಾರ ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದೆ. ಮಂಗಳವಾರ ರಾತ್ರಿ 9 ಗಂಟೆಯಿಂದ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಗೆ ಬರಲಿದೆ. ಕರ್ನಾಟಕ ಸರ್ಕಾರದ ಮಾರ್ಗಸೂಚಿ ಅನ್ವಯ ಅಗತ್ಯ ಸೇವೆಗಳ ಸರಕು ಸಾಗಣೆಗೆ ಮಾತ್ರ ವಾಹನ ಸಂಚಾರ ಇರುತ್ತದೆ. ಖಾಸಗಿ, ಸರ್ಕಾರಿ ಬಸ್‌ಗಳ ಸಂಚಾರ ರಾಜ್ಯಾದ್ಯಂತ ಸ್ಥಗಿತಗೊಳ್ಳಲಿದೆ.   ಬೆಂಗಳೂರು ನಗರದಿಂದ ಇತರ ಪ್ರದೇಶಗಳಿಗೆ ತೆರಳುವ …

Read More »

ಹುಟ್ಟೂರಿನಲ್ಲಿ ನೆರವೇರಿದ ನಿರ್ಮಾಪಕ ರಾಮು ಅಂತ್ಯ ಸಂಸ್ಕಾರ

ತುಮಕೂರು: ಕೋವಿಡ್‌ನಿಂದ ಮೃತಪಟ್ಟ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಪತಿ ರಾಮು ಅಂತ್ಯಕ್ರಿಯೆ ಕುಣಿಗಲ್ ತಾಲ್ಲೂಕಿನ ಕೊಡಗಿಹಳ್ಳಿ ಗ್ರಾಮದಲ್ಲಿರುವ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿತು. ಕೋವಿಡ್ ನಿಯಮದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು.ರಾಮು ಪಾರ್ಥೀವ ಶರೀರಕ್ಕೆ ಮಾಲಾಶ್ರೀ ಅಂತಿಮ ನಮನ ಸಲ್ಲಿಸಿದರು. ಪುತ್ರ ಆರ್ಯನ್ ಅಂತ್ಯ ಸಂಸ್ಕಾರದ ವಿಧಿಗಳನ್ನು ನೆರವೇರಿಸಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಪುತ್ರಿ ಅನನ್ಯ ಇದ್ದರು. ಕೋವಿಡ್‌ನಿಂದ ಬಳಲುತ್ತಿದ್ದ ಚಿತ್ರ ನಿರ್ಮಾಪಕ, ನಟಿ ಮಾಲಾಶ್ರೀ ಅವರ ಪತಿ …

Read More »

ಅಥಣಿ ಹೆಸ್ಕಾಂನಲ್ಲಿ ಭಾರಿ ಭ್ರಷ್ಟಾಚಾರ!

ಅಥಣಿ: ಪಟ್ಟಣ ಮತ್ತು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಹಾಗೂ ನಿರ್ಮಾಣಗೊಂಡ ನೂತನ ಬಡಾವಣೆಗಳಿಗೆ ವಿದ್ಯುತ್‌ ಸಂಪರ್ಕ ನೀಡುವಾಗ ಸಾಕಷ್ಟು ಅವ್ಯವಹಾರ ನಡೆದ ಬಗ್ಗೆ ಸಾರ್ವಜನಿಕರಿಂದ ಚಿಕ್ಕೋಡಿಯ ಹೆಸ್ಕಾಂ ಜಾಗೃತದಳ ಪೊಲೀಸ್‌ ಠಾಣೆಗೆ ದೂರು ಹೋಗಿದ್ದವು. ಆ ದೂರುಗಳನ್ನಾಧರಿಸಿ ಹೆಸ್ಕಾಂ ಜಾಗೃತದಳ ಪರಿಶೀಲನೆ ನಡೆಸಿ, ಮೇಲ್ನೋಟಕ್ಕೆ ಅವ್ಯವಹಾರ ಕಂಡು ಬಂದಿದ್ದರಿಂದ ಕೆಲವು ಅಂಶಗಳ ಮಾಹಿತಿ ಕೋರಿ ನೋಟಿಸ್‌ ನೀಡಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ನೇರವಾಗಿ ಬಡಾವಣೆಗಳಿಗೆ ವಿದ್ಯುತ್‌ ಸಂಪರ್ಕ …

Read More »

14 ದಿನ ಲಾಕ್ ಡೌನ್ ಹಿನ್ನೆಲೆ..ಗೋಕಾಕನಲ್ಲಿ‌ ಮಧ್ಯಾಹ್ನವೇ ಅಂಗಡಿ-ಮುಂಗಟ್ಟು ಬಂದ್

ಸರಕಾರದ ಕೊರಾನಾ ಹೊಸ ಮಾರ್ಗಸೂಚಿ ಬೆನ್ನಲ್ಲೆ ಗೋಕಾಕದಲ್ಲಿ ಅಂಗಡಿ ಮುಗ್ಗಟುಗಳನ್ನು ಬಂದ್ ಮಾಡಿಸಲು ಮುಂದಾದ ಪೋಲಿಸ್ ಮತ್ತು ನಗರಸಭೆ ಅಧಿಕಾರಿಗಳು. ಹೌದು ಕೊರಾನಾ2ಅಲೆಯು ತನ್ನ ಅಟ್ಟಹಾಸವನ್ನು ದಿನದಿನಕ್ಕೂ ಸಾವು ಪಡೆಯಯತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಸಾರ್ವಜನಿಕರು ಕೊರಾನಾ ಬಗ್ಗೆ ನಿರ್ಲಕ್ಷ ವಹಿಸುತ್ತಿರುವುದು ಇನ್ನೊಂದು ಕಡೆ, ಹೇಗಾದರೂ ಮಾಡಿ ಕೊರಾನಾದಿಂದ ಸರಕಾರ ಸಾರ್ವಜನಿಕರನ್ನು ರಕ್ಷಿಸಲು ಹೊಸ ಮಾರ್ಗಸೂಚಿ ಸಂಜೆಯಿಂದ ಅನ್ವಯವಾಗಲೆಂದು ಬಿಡುಗಡೆ ಮಾಡಿತ್ತು, ಆದರೆ ಗೋಕಾಕ ನಗರದಲ್ಲಿ ಇವತ್ತು ಸಂಜೆ …

Read More »

ʼಲಾಕ್‌ ಡೌನ್ʼ ಭೀತಿಯಿಂದ ಬೆಂಗಳೂರು ತೊರೆಯುತ್ತಿರುವ ಜನ

ರಾಜ್ಯದಲ್ಲಿ ಕೊರೊನಾ ವೈರಸ್​ ತಾಂಡವವಾಡ್ತಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಡೆಡ್ಲಿ ವೈರಸ್​ ಕಾಟ ಮಿತಿಮೀರಿದೆ. ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್​ಡೌನ್​ ಹೇರಿದ್ದು ರಾಜ್ಯ ರಾಜಧಾನಿಯ ಬಹುತೇಕ ಮಂದಿ ಕಳೆದ ವರ್ಷದಂತೆಯೇ ಈ ವರ್ಷವೂ ಸಹ ತವರೂರಿಗೆ ವಾಪಸ್ಸಾಗ್ತಾ ಇದ್ದಾರೆ. ಕೊರೊನಾ ಬಂದರೆ ವೈದ್ಯಕೀಯ ಸೌಲಭ್ಯ ಸಿಗದೇ ಹೋದರೆ ಎನ್ನುವ ಭಯ, ಲಾಕ್​ಡೌನ್​ನಿಂದಾಗಿ ಹೊಟ್ಟೆಪಾಡು ಹೇಗೆ ಎಂಬ ಆತಂಕ ಈ ಎಲ್ಲಾ ಕಾರಣಗಳಿಂದಾಗಿ ಬೆಂಗಳೂರಿನ ಬಹುತೇಕ ಮಂದಿ ಊರು ಖಾಲಿ …

Read More »

ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿ

ಚಿಕ್ಕಬಳ್ಳಾಪುರ: ಮೂರು ತಿಂಗಳ ಗರ್ಭಿಣಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾಶಾಪುರ ಗ್ರಾಮದಲ್ಲಿ ನಡೆದಿದೆ. ಪವಿತ್ರ (22) ಮೃತ ಮಹಿಳೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ದುಗ್ಗಿನಾಯ್ಕನಪಲ್ಲಿ ನಿವಾಸಿ ಪವಿತ್ರಾಳನ್ನ ಇದೇ ಬಾಗೇಪಲ್ಲಿ ತಾಲೂಕಿನ ಕಾಶಪುರ ಗ್ರಾಮದ ಮಧು ಕಳೆದ 5 ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದ. ಮದುವೆಯಾದ ನಂತರ ಪವಿತ್ರಳ ಗಂಡ ಮಧು ಹಾಗೂ ಆಕೆಯ ಅತ್ತೆ ವರದಕ್ಷಿಣೆಗಾಗಿ ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಹಿಯಾಳಿಸಿ …

Read More »

ಚಿತ್ರರಂಗಗಳ ಮೇಲೆ ಪರಿಣಾಮ ಬೀರುತ್ತಿರುವ ಲಾಕ್ ಡೌನ್ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಗೋಷಿಸಿರುವ ಹಿನ್ನಲೆಯಲ್ಲಿ ಅನೇಕ ವಿಭಾಗಗಳಿಗೆ ತೊಂದರೆ ಆಗಿದ್ದು, ಸಿನೆಮಾ ಚಿತ್ರೀಕರಣದ ಮೇಲೆ ಸರ್ಕಾರ ನಿರ್ಬಂಧ ವಿಧಿಸಿದೆ ಎಂದು ವರದಿಯಾಗಿದೆ . ಇದರಿಂದ ಸಹಜವಾಗಿಯೇ ಧಾರವಾಹಿ ಮತ್ತು ಸಿನೆಮಾ ಚಿತ್ರೀಕರಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ . ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕೆಲವೆ ಕೆಲವು ಚಟುವಟಿಕೆಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ . ಇದರಲ್ಲಿ ಸಿನೆಮಾ ಶೂಟಿಂಗ್ ಸೇರಿಲ್ಲ . ಇದರಿಂದ ಸಹಜವಾಗಿಯೇ …

Read More »