Breaking News

ಅಕ್ಕಿ ಕೇಳಿದ ವ್ಯಕ್ತಿಗೆ ಸತ್ತರೆ ಒಳ್ಳೆಯದು ಎಂದ ಆಹಾರ ಸಚಿವ ಉಮೇಶ ಕತ್ತಿ, ಒದ್ದು ಹೊರಹಾಕಿ ಎಂದ ಎಚ್ಡಿಕೆ

Spread the love

ಬೆಂಗಳೂರು – ಅಕ್ಕಿ ಕೇಳಿದ ವ್ಯಕ್ತಿಗೆ ಸತ್ತರೆ ಒಳ್ಳೆಯದು ಎಂದ ಆಹಾರ ಸಚಿವ ಉಮೇಶ ಕತ್ತಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕಿಡಿ ಹೊತ್ತಿಸಿದೆ.

ಉಮೇಶ ಕತ್ತಿಯನ್ನು ಒದ್ದು ಹೊರ ಹಾಕಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರೆ, ತಕ್ಷಣ ರಾಜಿನಾಮೆ ಪಡೆಯಿರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಉಮೇಶ ಕತ್ತಿ ಹೇಳಿಕೆಗೆ ವಿಷಾದಿಸುತ್ತೇನೆ ಎಂದಿದ್ದಾರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ಉಮೇಶ ಕತ್ತಿ ಹೇಳಿಕೆ ಮತ್ತು ಅದಕ್ಕೆ ಸಮರ್ಥನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಆದರೆ ಜನರ ಮುಂದೆ ಕ್ಷಮೆ ಕೇಳುವುದಲ್ಲ ಕೂಡಲೇ ಉಮೇಶ ಕತ್ತಿ ರಾಜಿನಾಮೆ ಪಡೆಯಿರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗ್ರಹಿಸಿದ್ದಾರೆ. ಅಧಿಕಾರ ಇರುವವರ ಬಳಿ ಜನ ಕೇಳುತ್ತಾರೆ. ಅವರು ಸಂಕಷ್ಟದಲ್ಲಿದ್ದಾರೆ. ಇಂತಹ ಸಚಿವರಿಂದ ಕೂಡಲೇ ರಾಜಿನಾಮೆ ಪಡೆಯಲಿ ಎಂದು ಶಿವಕುಮಾರ ಹೇಳಿದ್ದಾರೆ.ಈಗಾಗಲೆ ಸರಕಾರದ ಮಾನ ಹರಾಜಾಗಿ ಹೋಗಿದೆ. ಅಳಿದುಳಿದ ಮರ್ಯಾದೆ ಉಳಿಸಿಕೊಳ್ಳಲು ಇಂತಹ ಸಚಿವರನ್ನು ಒದ್ದು ಹೊರಹಾಕಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ