ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹುಬ್ಬಳ್ಳಿಗೆ ಆಗಮಿಸಿದ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಪರಿಣಾಮ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಸಭೆಯಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡದೇ ಇರುವುದು. ಸರಿಯಾಗಿ ಮಾಸ್ಕ್ ಧರಿಸದೇ ಇರುವುದರಿಂದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕಕ್ಕೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಮೇ 31 ರಂದು ಸಂಜೆ ಹುಬ್ಬಳ್ಳಿಗೆ ಭೇಟಿ ನೀಡಿದ್ದ …
Read More »ಸುರೇಶ ಅಂಗಡಿ ಜನ್ಮದಿನದ ನಿಮಿತ್ತ ಅವರ ಪತ್ನಿ, ಸಂಸದ ಮಂಗಲಾ ಅಂಗಡಿ ಬೆಳಗಾವಿಯ ವಿಶ್ವಹಿಂದೂ ಪರಿಷತ್ ಕೋವಿಡ್ ಸೆಂಟರ್ ಗೆ ತೆರಳಿ ಆರ್ಥಿಕ ನೆರವು
ಬೆಳಗಾವಿ – ಕೇಂದ್ರದ ಮಾಜಿ ಸಚಿವ ಸುರೇಶ ಅಂಗಡಿ ಜನ್ಮದಿನದ ನಿಮಿತ್ತ ಅವರ ಪತ್ನಿ, ಸಂಸದೇ ಮಂಗಲಾ ಅಂಗಡಿ ಬೆಳಗಾವಿಯ ವಿಶ್ವಹಿಂದೂ ಪರಿಷತ್ ನಡೆಸುತ್ತಿರುವ ಕೋವಿಡ್ ಸೆಂಟರ್ ಗೆ ತೆರಳಿ ಆರ್ಥಿಕ ನೆರವು ನೀಡಿದರು. ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್ ಜೊತೆ ತೆರಳಿದ ಮಂಗಲಾ ಅಂಗಡಿ ವಿಶ್ವಹಿಂದೂ ಪರಿಷತ್ ಉತ್ತರ ಕರ್ನಾಟಕ ಸಹಕೋಶಾಧ್ಯಕ್ಷ ಕೃಷ್ಣ ಭಟ್ ಅವರಿಗೆ ತಮ್ಮ ಕಾಣಿಕೆಯನ್ನು ಹಸ್ತಾಂತರಿಸಿದರು. ವಿಜಯ ಜಾಧವ ಹಾಗೂ ವಿಶ್ವಹಿಂದೂ ಪರಿಷತ್ತಿನ …
Read More »ಮಾವಾ ತಯಾರಿಕೆ ಅಡ್ಡೆ ಮೇಲೆ ದಾಳಿ : ಮೂವರ ಬಂಧನ, 2.50 ಲಕ್ಷ ರೂ. ಮೌಲ್ಯದ ಸೊತ್ತು ವಶ
ವಿಜಯಪುರ : ರಾಜ್ಯದಲ್ಲಿ ನಿಷೇಧಿತವಾಗಿರುವ ತಂಬಾಕು ಉತ್ಪನ್ನವಾದ ಮಾವಾ ತಯಾರಿಕೆಯ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು, ಮೂವರನ್ನು ಬಂಧಿಸಿ, 2.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವಿಜಯಪುರ ಗ್ರಾಮೀಣ ಸಿಪಿಐ ಎಸ್.ಬಿ.ಪಾಲಭಾವಿ ಅವರು ತಿಕೋಟ ಪಟ್ಟಣದಲ್ಲಿ ಅಲ್ಲಿನ ಎಸೈ ಎಸ್.ಕೆ.ಲಂಗೋಟೆ ಅವರೊಂದಿಗೆ ಪೆಟ್ರೋಲಿಂಗ್‍ನಲ್ಲಿ ತೊಡಗಿದ್ದಾಗ ಅಕ್ರಮವಾಗಿ ಗುಟ್ಕಾ ತಯಾರಿಸುವ ಮಾಹಿತಿ ಲಭ್ಯವಾಗಿದೆ. ಖಚಿತ ಮಾಹಿತಿ ಆಧರಿಸಿ ಬಡಕಲ್ ಓಣಿ ಹಾಗೂ ಗೌಡರ ಓಣಿಗಳಲ್ಲಿ ಸ್ಥಳೀಯ ಠಾಣೆ …
Read More »ಜೆ.ಹೆಚ್.ಪಟೇಲರು ಕೈಯಲ್ಲಿ ಮೆಟ್ಟು ಹಿಡಿದುಕೊಂಡಿದ್ದೇಕೆ ? ಎಷ್ಟರಮಟ್ಟಿಗೆ ಸರಿ?
ಬೆಂಗಳೂರು, ಸುದ್ದಿಒನ್, ಜೂ.01: ಸಮಾಜವಾದಿ ಸಿದ್ಧಾಂತವನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡು ವಿಭಿನ್ನ, ನೇರ ನಿಷ್ಠೂರತೆ ಕಾರಣಕ್ಕೆ ರಾಜ್ಯ ರಾಜಕಾರಣದಲ್ಲಿ ವರ್ಣರಂಜಿತವಾಗಿದ್ದ ಜೆ.ಹೆಚ್.ಪಟೇಲರು ನಾಡು ಕಂಡ ಅಪರೂಪದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದರು. ಹೆಚ್.ಡಿ.ದೇವೇಗೌಡರು, ರಾಮಕೃಷ್ಣಹೆಗಡೆ ಅವರೊಂದಿಗೆ ಅತ್ಯಂತ ಸಲಿಗೆಯಿಂದ ಮಾತನಾಡುವ ಶಕ್ತಿ, ವ್ಯಕ್ತಿತ್ವ ಹೊಂದಿದ್ದರು. ಜೊತೆಗೆ ಹಾಸ್ಯಭರಿತ, ನೇರ, ನಿಷ್ಠೂರತೆ ಮಾತು ಹೆಚ್ಚು ಆತ್ಮೀಯರನ್ನಾಗಿಸುತ್ತಿತ್ತು. ಆದರೆ ನಾಡಿನ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬೇಕಾದರೆ ಕೆಲ ಅರ್ಹತೆಗಳು ಅನಿವಾರ್ಯವಾಗಿ ಇರಲೇಬೇಕು. ಜೊತೆಗೆ ಕೆಲ …
Read More »ಯೋಗೀಶ್ವರ್ ಗೆ ಇಂಧನ ಖಾತೆ ಸಹಿತ ಡಿಸಿಎಂ ಹುದ್ದೆ ನೀಡಿದರೂ ಅಚ್ಚರಿ ಪಡಬೇಕಿಲ್ಲ: ಯತ್ನಾಳ
ವಿಜಯಪುರ : ಸಚಿವ ಸ್ಥಾನದಿಂದ ಸಿ.ಪಿ.ಯೋಗೇಶ್ವರ ಅವರನ್ನು ವಜಾ ಮಾಡುವುದು ಅಸಾಧ್ಯ. ವಿಶಿಷ್ಟ ಕೋಟಾದಲ್ಲಿ ಮಂತ್ರಿಯಾಗಿರುವ ಅವರಿಗೆ ವಜಾ ಬದಲಾಗಿ ಅವರ ನಿರೀಕ್ಷೆಯ ಇಂಧನ ಖಾತೆ ಸಹಿತ ಉಪ ಮುಖ್ಯಮಂತ್ರಿ ಹುದ್ದೇ ನೀಡಿದರೂ ಅಚ್ಚರಿ ಪಡಬೇಕಿಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಯ ವಿಡಿಯೋ ಹಾಕಿರುವ ಯತ್ನಾಳ, ಸಿ.ಪಿ.ಯೋಗೇಶ್ವರ ಅವರ ವಿರುದ್ಧ ಕ್ರಮ ಕೈಗೊಳ್ಳುವ …
Read More »ಕೊವಿಡ್ನಿಂದ ಬೇಗ ಗುಣಮುಖರಾಗೋದು ಹೇಗೆ?; ತಾವು ಉಪಯೋಗಿಸಿದ ತಂತ್ರ ಹೇಳಿದ ಅಭಿಷೇಕ್ ಬಚ್ಚನ್
ಅಭಿಷೇಕ್ ಬಚ್ಚನ್ ಅವರಿಗೆ ಕಳೆದ ವರ್ಷ ಕೊರೊನಾ ಕಾಣಿಸಿಕೊಂಡಿತ್ತು. 29 ದಿನಗಳ ಕಾಲ ಕೊವಿಡ್ನಿಂದ ಬಳಲಿದ್ದ ಅವರು, ನಂತರ ಚೇತರಿಕೆ ಕಂಡಿದ್ದರು. ಈ ಅನುಭವ ಹೇಗಿತ್ತು ಎನ್ನುವ ಬಗ್ಗೆ ಅಭಿಷೇಕ್ ಈಗ ಮಾತನಾಡಿದ್ದಾರೆ. ಕೊವಿಡ್ 19ರ ವಿರುದ್ಧ ಹೋರಾಡುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಅನುಭವ ಹಂಚಿಕೊಂಡಿದ್ದಾರೆ. ‘ಕೊರೊನಾ ಬಂದ ದಿನಗಳು ನನಗೆ ಒಳ್ಳೆಯ ಅನುಭವ ಆಗಿರಲಿಲ್ಲ. ನನ್ನ ನಂಬಿಕೊಂಡಿದ್ದ ಕುಟುಂಬ ಕೂಡ ಇದರಿಂದ ತೊಂದರೆಗೆ ಒಳಗಾಗಿತ್ತು. ನಿಮಗೆ ರೋಗ ಬಂದಿದೆ …
Read More »ಸಿ.ಪಿ.ಯೋಗೇಶ್ವರ್ ಅವರನ್ನು ವಜಾ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಶಕ್ತಿ ಯಡಿಯೂರಪ್ಪನವರಿಗಿಲ್ಲ:ಯತ್ನಾಳ್
ವಿಜಯಪುರ: ರಾಜ್ಯದಲ್ಲಿರುವುದು ಸಿಎಂ ಬಿ.ಎಸ್.ಯಡಿಯೂರಪ್ಪನವರ ಸರ್ಕಾರವಲ್ಲ, ಬಿ.ವೈ.ವಿಜಯೇಂದ್ರ ಸರ್ಕಾರ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಕೆಂಡಕಾರಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಿಎಂ ಯಡಿಯೂರಪ್ಪನವರು ದೆಹಲಿಗೆ ಹೋಗಬೇಕಿತ್ತು. ಆದರೆ ಅವರ ಪುತ್ರ ಬಿ.ವೈ.ವಿಜಯೇಂದ್ರ ದೆಹಲಿಗೆ ಹೋಗಿ ವರಿಷ್ಠರ ಭೇಟಿಗೆ ಮುಂದಾಗಿದ್ದಾರೆ. ರಾಜ್ಯದಲ್ಲಿರುವುದು ಬಿಎಸ್ ವೈ ಸರ್ಕಾರವಲ್ಲ, ವಿಜಯೇಂದ್ರ ಸರ್ಕಾರ ಎಂಬುದು ಇದರಿಂದಲೇ ಸಾಬೀತಾಗುತ್ತದೆ ಎಂದರು. ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ವಜಾ …
Read More »ಸೊಂಕಿತರೊಂದಿಗೆ ವೈದ್ಯೆ ಡ್ಯಾನ್ಸ್ – ಜನರಿಂದ ಮೆಚ್ಚುಗೆ
ಚಿತ್ರದುರ್ಗ: ಆತ್ಮಸ್ಥೈರ್ಯ ತುಂಬಲು ಜಿಲ್ಲೆಯ ವೈದ್ಯರು ಸೋಂಕಿತರ ಜೊತೆ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಕೋವಿಡ್ ಕೇರ್ ಕೇಂದ್ರದಲ್ಲಿ ಕಳೆದ ಹತ್ತು ದಿನಗಳಿಂದ ಕೊರೊನಾ ಸೋಂಕಿತರಿಗೆ ವೈದ್ಯೆ ಶೃತಿ ನೃತ್ಯ ವ್ಯಾಯಾಮ ಮಾಡಿಸುತ್ತಿದ್ದಾರೆ. ಪ್ರತಿ ದಿನ ಹಿಂದಿ ಹಾಡೋಂದಕ್ಕೆ ನೃತ್ಯ ಮಾಡಿಸುವ ವೈದ್ಯೆ ಶೃತಿ, ನಾಗಿನಿ ನಾಗಿನಿ ಹಾಡಿಗೆ ಕೊರೊನಾ ಸೋಂಕಿತರೊಟ್ಟಿಗೆ ಹೆಜ್ಜೆ ಹಾಕಿಸುವ ಮೂಲಕ ಗಮನ ಸೆಳೆದಿದ್ದಾರೆ. …
Read More »ಕೊರೊನಾ ಪಾಸಿಟಿವ್ ಇದ್ದರೂ ಅನಗತ್ಯವಾಗಿ ಕಾರಿನಲ್ಲಿ ಕುಟುಂಬ ಸಮೇತ ಓಡಾಡುತ್ತಿದ್ದ ವ್ಯಕ್ತಿ
ಚಿಕ್ಕೋಡಿ: ಕೊರೊನಾ ಪಾಸಿಟಿವ್ ಇದ್ದರೂ ಅನಗತ್ಯವಾಗಿ ಕಾರಿನಲ್ಲಿ ಕುಟುಂಬ ಸಮೇತ ಓಡಾಡುತ್ತಿದ್ದ ವ್ಯಕ್ತಿಯನ್ನು ಪೆÇಲೀಸರುವ ತಡೆದು ಆಸ್ಪತ್ರೆಗೆ ರವಾನಿಸಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ಹುಕ್ಕೇರಿ ಪಟ್ಟಣದ ಕೋರ್ಟ್ ವೃತ್ತದಲ್ಲಿ ಹುಕ್ಕೇರಿ ಸಿಪಿಐ ರಮೇಶ್ ಚಾಯಾಗೋಳ ನೇತೃತ್ವದಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಪಾಸಿಟಿವ್ ಇರುವ ವ್ಯಕ್ತಿ ಕುಟುಂಬ ಸಮೇತ ಪರ ಊರಿಗೆ ತೆರಳುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಪಾಸಿಟಿವ್ ಇರುವುದನ್ನ ಸ್ವತಃ ರೋಗಿಯೇ ಹೇಳುತ್ತಿದ್ದಂತೆ ಗರಂ ಆದ …
Read More »ದೇಶದಲ್ಲೇ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಚಿತ್ರದುರ್ಗದಲ್ಲಿ ಪತ್ತೆ
ಚಿತ್ರದುರ್ಗ, ಜೂನ್ 1: ಕೊರೊನಾ ಸೋಂಕಿನ ನಂತರ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್‌ನಂತಹ ನಾನಾ ಸೋಂಕಿನ ಸುಳಿಗೆ ಜನ ಸಿಲುಕುತ್ತಿದ್ದು, ಈಗ ಚರ್ಮ ಫಂಗಸ್‌ನ್ನು ಎದುರಿಸುವಂತಾಗಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ದೇಶದ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಚಿತ್ರದುರ್ಗದ 54 ವರ್ಷದ ರೋಗಿಯಲ್ಲಿ ಸ್ಕಿನ್ ಮ್ಯೂಕರ್ ಮೈಕೋಸಿಸ್ ಪತ್ತೆಯಾಗಿದೆ ಎಂದು ಇಎನ್‌ಟಿ ತಜ್ಞ ಡಾ.ಪ್ರಹ್ಲಾದ್ ತಿಳಿಸಿದ್ದಾರೆ. 54 ವರ್ಷದ ಪಂಚಾಕ್ಷರಪ್ಪ ಒಂದು ತಿಂಗಳ ಹಿಂದೆ …
Read More »
Laxmi News 24×7