Breaking News

ರಾಜ್ಯ

ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಭೂ ಹಗರಣ ಕಾರಣ-ಸಿದ್ದರಾಮಯ್ಯ

ಬೆಂಗಳೂರು: ‘ಮೈಸೂರಿನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಭೂ ಹಗರಣ ಕಾರಣ. ಅದರ ಬಗ್ಗೆ ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸಬೇಕು. ವರ್ಗಾವಣೆ ಶಿಕ್ಷೆ ಅಲ್ಲ. ಈ ಇಬ್ಬರೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಮೈಸೂರು ಮಹಾ ನಗರಪಾಲಿಕೆಯ ಆಯುಕ್ತರಾಗಿದ್ದ ಶಿಲ್ಪಾನಾಗ್ ಮತ್ತು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ನಡುವಿನ ಜಗಳಕ್ಕೆ ಬಿಜೆಪಿಯ …

Read More »

ಮುಂಗಾರು ಅಬ್ಬರ.ಮುಂಬಯಿಯಲ್ಲಿ ಧಾರಾಕಾರ ಮಳೆ; ಟ್ರಾಫಿಕ್ ಜಾಮ್, ರೈಲು ಸಂಚಾರ ವ್ಯತ್ಯಯ

ಮುಂಬಯಿ: ನಿಗದಿತ ಸಮಯಕ್ಕಿಂತ ಒಂದು ದಿನ ಮೊದಲೇ ಮುಂಗಾರು ಮಳೆ ಮುಂಬಯಿ ನಗರಿಯನ್ನು ಪ್ರವೇಶಿಸಿದ್ದು, ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಅಲ್ಲದೇ ಸ್ಥಳೀಯ ಬಸ್ ಮತ್ತು ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರಿರುವುದಾಗಿ ಬುಧವಾರ(ಜೂನ್ 09) ಅಧಿಕಾರಿಗಳು ತಿಳಿಸಿದ್ದಾರೆ.   ಇಂದು ಮುಂಬಯಿಗೆ ಮುಂಗಾರು ಮಳೆ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಂಬಯಿ ಕಚೇರಿಯ ವರಿಷ್ಠ ಡಾ.ಜಯಂತ್ ಸರ್ಕಾರ್ ತಿಳಿಸಿರುವುದಾಗಿ ಪಿಟಿಐ ವರದಿ …

Read More »

COVID ಪಾಸಿಟಿವಿಟಿ ರೇಟ್ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?

ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್​ಡೌನ್​ ವಿಧಿಸಿದೆ. ಜೂನ್ 7 ರ ವರೆಗೆ ಇದ್ದ ಲಾಕ್​ಡೌನ್​ನನ್ನು ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇನ್ನು ಒಂದು ವಾರ ವಿಸ್ತರಿಸಿದೆ. ಜೊತೆಗೆ ಯಾವ ಯಾವ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.5 ಕ್ಕೆ ಬರುತ್ತದೋ ಆ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆಗೆ ಅವಕಾಶ ನೀಡಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಹೇಳಿದ್ದಾರೆ. ಸದ್ಯ ರಾಜ್ಯದ ಹಲವು ಜಿಲ್ಲೆಗಳಲ್ಲಿ …

Read More »

ಬರೀ 25 ಸಾವಿರ ರೂಪಾಯಿಗೆ ಹೊಂಡಾ ಆಯಕ್ಟೀವಾ ಖರೀದಿಸಿ; ಬಂಪರ್​ ಆಫರ್ ಪಡೆಯಲು ಹೀಗೆ ಮಾಡಿ

ಕೊರೊನಾ ಸಂದರ್ಭದಲ್ಲಿ ಸ್ವಂತ ವಾಹನ ಅತ್ಯವಶ್ಯಕ ಎನ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಆರ್ಥಿಕ ಚಟುವಟಿಕೆಗಳೆಲ್ಲಾ ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಒಮ್ಮೆಲೆಗೆ ದೊಡ್ಡ ಮೊತ್ತದ ಹಣ ನೀಡಿ ವಾಹನ ಖರೀದಿಗೆ ಕೈ ಹಾಕುವುದೆಂದರೆ ಸಾಮಾನ್ಯ ಜನರ ಜೇಬಿಗೆ ಬಲುಭಾರವಾಗುತ್ತದೆ. ಇಂತಹ ಹೊತ್ತಿನಲ್ಲಿ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಪ್ರಸಿದ್ಧವಾಗಿರುವ ಹೋಂಡಾ ಕಂಪೆನಿಯ ವಾಹನವೊಂದರ ಮೇಲೆ ಭಾರೀ ಆಫರ್​ ನೀಡಲಾಗಿದೆ. ಈ ಆಫರ್​ ಅಡಿಯಲ್ಲಿ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಹೋಂಡಾ ಆಯಕ್ಟೀವಾವನ್ನು ಕೇವಲ …

Read More »

ಸೂರ್ಯಗ್ರಹಣ ಸಮಯ ಆಚರಣೆ ಗರ್ಭಿಣಿಯರಿಗೆ ಎಚ್ಚರಿಕೆ ಮತ್ತು 4 ರಾಶಿಗೆ ಶುಕ್ರದೆಶೆಯ ಶ್ರೀಮಂತರಾಗುವಿರಿ!

ಸೂರ್ಯಗ್ರಹಣ ಸಮಯ ಆಚರಣೆ ಗರ್ಭಿಣಿಯರಿಗೆ ಎಚ್ಚರಿಕೆ ಮತ್ತು 4 ರಾಶಿಗೆ ಶುಕ್ರದೆಶೆಯ ಶ್ರೀಮಂತರಾಗುವಿರಿ! ನಮಸ್ಕಾರ ಬಂಧುಗಳೇ ಜೂನ್ 10ರಂದು ನಡೆಯಲಿದ್ದು ಸೂರ್ಯ ಗ್ರಹಣ ಈ ನಾಲ್ಕು ರಾಶಿಯವರಿಗೆ ಅದೃಷ್ಟವೇ ಅದೃಷ್ಟವು 2021 ರ ಮೊದಲ ಸೂರ್ಯ ಗ್ರಹಣವು ಜ್ಯೇಷ್ಠ ಮಾಸ, ಅಮಾವಾಸ್ಯೆ ತಿಥಿಯಲ್ಲಿ ನಡೆಯಲಿದೆ. ಈ ಗ್ರಹಣದಿಂದ ವಿಶೇಷವಾದ ಘಟನೆಗಳು ನಡೆಯಲಿದೆ. ಸೂರ್ಯ ಗ್ರಹಣದಂದು ಶನಿಯು ವಕ್ರ ವ್ಯವಸ್ಥೆಯಲ್ಲಿ ಇರುವ ಕಾರಣ ಸಂಯೋಗಕ್ಕೆ ಬಂದು ಅದ್ಭುತ ರಾಜ ಯೋಗ ಆರಂಭವಾಗಲಿದೆ. …

Read More »

ಕಲಬುರಗಿ: ವರದಕ್ಷಿಣೆ ಕಿರುಕುಳ; 21 ವರ್ಷದ ಗೃಹಿಣಿ ನೇಣಿಗೆ ಶರಣು

ಕಲಬುರಗಿ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ನೊಂದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ. 21 ವರ್ಷದ ರಚಿತಾ ಎಂಬುವವರೇ ಸಾವಿಗೆ ಶರಣಾದ ಗೃಹಿಣಿ. ಕಳೆದ ಎರಡೂವರೆ ವರ್ಷದ ಹಿಂದೆಯಷ್ಟೇ ವೀರಣ್ಣ ಎಂಬುವರ ಜೊತೆ ರಚಿತಾ ಮದುವೆಯಾಗಿತ್ತು. ಸಿವಿಲ್ ಇಂಜಿನಿಯರ್ ಆಗಿರುವ ವೀರಣ್ಣ, ಮದುವೆ ಬಳಿಕ ಹಣಕ್ಕಾಗಿ ಪೀಡಿಸಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಮಂಗಳವಾರ ಕೂಡ ಹಣ ತವರು ಮನೆಯಿಂದ ಹಣ ತರುವಂತೆ …

Read More »

ಫೇಸ್‌ ಬುಕ್‌ ಗೆಳತಿಯನ್ನು ಮದುವೆ ಆಗೋ ಭರವಸೆ ನೀಡಿ ವಂಚಿಸಿದ್ದು ಎಷ್ಟು ಗೊತ್ತಾ ?

ಗದಗ: ಫೇಸ್‍ಬುಕ್‍ನಲ್ಲಿ ಪರಿಚಯವಾಗಿ ಶಿಕ್ಷಕಿಯ ಬಳಿ 7 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದಿದ್ದ ಮೋಸಗಾರನನ್ನು ಮುಂಡರಗಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರ ಕೊಡಮಗ್ಗಿ ಗ್ರಾಮದ ನೇತಾಜಿ ಮದ್ದನೇರ ಬಂಧಿತ ವ್ಯಕ್ತಿ. ನೇತಾಜಿಗೆ ಫೇಸ್‍ಬುಕ್ ನಲ್ಲಿ ಮುಂಡರಗಿ ಪಟ್ಟಣದ ಖಾಸಗಿ ಶಾಲೆಯ ಶಿಕ್ಷಕಿಯ ಪರಿಚಯ ಆಗುತ್ತದೆ. ಇಬ್ಬರ ಸ್ನೇಹ ಪ್ರೇಮವಾಗಿ ಬದಲಾಗಿತ್ತು. ಒಂದು ಬಾರಿ ಹುಬ್ಬಳ್ಳಿಯಲ್ಲಿಯೂ ಭೇಟಿಯಾಗಿದ್ದಾರೆ. ನೇತಾಜಿ ಸಹ ಮದುವೆ ಮಾಡಿಕೊಳ್ಳುವ ಮಾತು …

Read More »

ಗುರುವಾರ ಸಂಭವಿಸಲಿದೆ ಖಗ್ರಾಸ ಸೂರ್ಯಗ್ರಹಣ; ಭಾರತದಲ್ಲಿ ಎಲ್ಲೆಲ್ಲಿ ಗೋಚರ?

ಕೋಲ್ಕತ: ಗುರುವಾರ (ಜೂನ್ 10) ಸೂರ್ಯಗ್ರಹಣ ಸಂಭವಿಸಲಿದ್ದು, ಉತ್ತರ ಅಮೆರಿಕ, ಯುರೋಪ್, ಏಷ್ಯಾದ ಭಾಗಗಳಲ್ಲಿ ಕಾಣಲಿದೆ. ಗ್ರಹಣವು ಬೆಳಗ್ಗೆ 11.42ಕ್ಕೆ ಶುರುವಾಗಲಿದೆ. 3.30ರ ಹೊತ್ತಿಗೆ ಖಗ್ರಾಸವಾಗಲಿದ್ದು, 4.52ರ ತನಕ ಮುಂದುವರಿಯಲಿದೆ. 6.41ಕ್ಕೆ ಗ್ರಹಣ ಮುಕ್ತಾಯವಾಗಲಿದೆ ಎಂದು ಕೋಲ್ಕತದ ಎಂಪಿ ಬಿರ್ಲಾ ಪ್ಲಾನೆಟೋರಿಯಂನ ನಿರ್ದೇಶಕ ದೇವಿಪ್ರಸಾದ್ ದುರೈ ಹೇಳಿದ್ದಾರೆ. ಭಾರತದ ಅರುಣಾಚಲ ಪ್ರದೇಶ ಮತ್ತು ಲಡಾಖ್‌ನ ಕೆಲವು ಪ್ರದೇಶಗಳಲ್ಲಿ ಸೂರ್ಯಾಸ್ತಕ್ಕೆ ಮುನ್ನ 3ರಿಂದ 4 ನಿಮಿಷ ಕಾಲ ಗೋಚರಿಸಲಿದೆ. ಲಡಾಖ್‌ನ ಉತ್ತರ …

Read More »

ಒಬ್ಬಂಟಿ ಅಜ್ಜಿಯನ್ನು ಊರಿಗೆ ತಲುಪಿಸಿದ್ರು

ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಬಸ್‌ ನಿಲ್ದಾಣದ ಅಂಗಡಿ ಬಳಿ ಲಾಕ್‌ಡೌನ್‌ ಮಧ್ಯೆ ಅನಾಥಳಂತೆ ಇದ್ದ ಅಜ್ಜಿಯೊಬ್ಬರನ್ನು ಮರಳಿ ಗೂಡು ಸೇರಿಸಲಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಪಟ್ಟಣದಲ್ಲಿ ಸಾರ್ವಜನಿಕರು ನೀಡುವ ಆಹಾರ ಸೇವಿಸುತ್ತ ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಗಮನಿಸಿದ ಪಟ್ಟಣದ ರೈತಸೇವಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ತಂಡ ಆಕೆಯ ಕುಟುಂಬಸ್ಥರಿಗೆ ಮಾಹಿತಿ ಮುಟ್ಟಿಸಿ (ಊರಿಗೆ)ಮನೆಗೆ ಕಳಿಸುವ ಮಾನವೀಯ ಕಾರ್ಯ ಮಾಡಿದೆ. ಅಜ್ಜಿಯ ಬಳಿ ತೆರಳಿ ಆಕೆಗೆ ಧೈರ್ಯ ತುಂಬಿ, ಚಹಾ-ಬಿಸ್ಕಿಟ್‌ ನೀಡಿ ಮಾತನಾಡಿಸಿದಾಗ, ತಾನು …

Read More »

4 ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಮಹಿಳಾ ಪೊಲೀಸ್​ ಕರೊನಾಗೆ ಬಲಿ!

ದಾವಣಗೆರೆ: ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೆಷನರಿ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ 7 ತಿಂಗಳ ಗರ್ಭಿಣಿ ಶಾಮಿಲಿ ಕರೊನಾಗೆ ಬಲಿಯಾದ ದುರ್ಘಟನೆ ಇನ್ನೂ ಹಸಿಯಾಗಿಯೇ ಇದೆ. ಈ ನಡುವೆ ಇಂತಹದ್ದೇ ಮತ್ತೊಂದು ದುರಂತ ಸಂಭವಿಸಿದ್ದು, ಮಹಾಮಾರಿಗೆ 5 ತಿಂಗಳ ಗರ್ಭಿಣಿ ಪೇದೆ ಬಲಿಯಾಗಿದ್ದಾರೆ. ಮಹಿಳಾ ಪೊಲೀಸ್​ ಪೇದೆ ಚಂದ್ರಕಲಾ (34) ಮೃತರು. ದಾವಣಗೆರೆ ಜಿಲ್ಲೆ ಹೊನ್ನಾಳಿ ವೃತ್ತ ಕಚೇರಿಯಲ್ಲಿ ಚಂದ್ರಕಲಾ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಪತಿ …

Read More »