Breaking News

ರಾಜ್ಯ

ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿ ಗೊಂದಲ ಇರುವುದರಿಂದ ನಾಳೆ ಅಧಿಕೃತವಾಗಿ ಪ್ರಕಟಣೆ

 ಬೆಳಗಾವಿ :ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿ ಕುರಿತು ಗೊಂದಲ ಇರುವುದರಿಂದ ನಾಳೆ ಅಧಿಕೃತವಾಗಿ ಪ್ರಕಟಣೆ ನೀಡಲಾಗುವುದು ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆ ತಿಳಿಸಿದೆ. ಕಳೆದ ಫೆಬ್ರವರಿಯಲ್ಲಿ ಪ್ರಕಟಿಸಲಾದ ಗೆಜೆಟ್ ಸ್ವಲ್ಪ ಹೊತ್ತಿನ ಮೊದಲು ಜಿಲ್ಲಾಧಿಕಾರಿಗಳ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಬೆಳಗಾವಿ ಮೇಯರ್ ಹುದ್ದೆ ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಉಪಮೇಯರ್ ಹುದ್ದೆ ಸಾಮಾನ್ಯ ಮಹಿಳೆಗೆ ಎಂದು ತಿಳಿಸಲಾಗಿತ್ತು. ಆದರೆ ಕಳೆದ ಫೆಬ್ರವರಿಯಲ್ಲಿ ಪ್ರಕಟಿಸಲಾದ …

Read More »

ಡಿ.ಕೆ.ಶಿವಕುಮಾರ್ ವಿಫಲ ಅಧ್ಯಕ್ಷ ಎಂಬುದು ಸಾಬೀತು; ಕಾಂಗ್ರೆಸ್ ಒಳಜಗಳ ಬಯಲಾಗಿದೆ; ಬಿಜೆಪಿ ರಾಜ್ಯಾಧ್ಯಕ್ಷ್ ವಾಗ್ದಾಳಿ

ಬೆಂಗಳೂರು: ಬಿ ಎಸ್ ವೈ ಮಾರ್ಗದರ್ಶನದಲ್ಲಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಟೀಲ್, ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ ಎಂಬುದು ಮತ್ತೊಮ್ಮೆ ಖಚಿತವಾಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಟೀಲ್, ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ ಎಂಬುದು ಮತ್ತೊಮ್ಮೆ ಖಚಿತವಾಗಿದೆ. ಕಾಂಗ್ರೆಸ್ ಒಳಜಗಳ ಸಾಬೀತಾಗಿದ್ದು, ಡಿ.ಕೆ.ಶಿವಕುಮಾರ್ ವಿಫಲ ಅಧ್ಯಕ್ಷ …

Read More »

ಬೆಳಗಾವಿಯಲ್ಲಿ ಅನಿರಿಕ್ಷಿತ ಫಲಿತಾಂಶ; ಪಾಲಿಕೆ ರಿಸಲ್ಟ್ ಮುಂಬರುವ ಚುನಾವಣೆ ದಿಕ್ಸೂಚಿಯಲ್ಲ ಎಂದ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ನಮಗಿಂತ ಹೆಚ್ಚಾಗಿ ಸಂಪನ್ಮೂಲಗಳೂ ಬಿಜೆಪಿಯವರಿಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂಬ ಮಾತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ. ಬೆಳಗಾವಿ ಪಾಲಿಕೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲುತ್ತೆ ಎಂದುಕೊಂಡಿರಲಿಲ್ಲ. ಹುಬ್ಬಳ್ಳಿ-ಧಾರವಾಡದಲ್ಲಿ ಇನ್ನೂ ಅತಂತ್ರ ಸ್ಥಿತಿಯಿದೆ. …

Read More »

ಕಲಬುರಗಿ ಪಾಲಿಕೆ ಚುನಾವಣೆ: ಯಾರಿಗೂ ಸ್ಪಷ್ಟ ಬಹುಮತ ಇಲ್ಲ; ಜೆಡಿಎಸ್ ಕಿಂಗ್ ಮೇಕರ್- ಗೆದ್ದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

2021: ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಜೆಡಿಎಸ್ ಯಾರಿಗೆ ಜೈ ಅಂತಾರೋ ಅವರೇ ಪಾಲಿಕೆ ಮೇಯರ್ ಆಗಲಿದ್ದಾರೆ. ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ 27 ಸ್ಥಾನ, ಬಿಜೆಪಿ 23 ಸ್ಥಾನ, ಜೆಡಿಎಸ್ 4 ಸ್ಥಾನದಲ್ಲಿ ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಕಲಬುರಗಿ: ಕಲಬುರಗಿ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಲಭಿಸಿಲ್ಲ. ಜೆಡಿಎಸ್ ಬೆಂಬಲಿಸಿದ ಪಕ್ಷಕ್ಕೆ ಮೇಯರ್ ಸ್ಥಾನ ಸಿಗಲಿದೆ. ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಪಕ್ಷ ಕಿಂಗ್ …

Read More »

ಪಾಲಿಕೆಗೆ ಗೆದ್ದವರ ಸಂಪೂರ್ಣ ವಿವರ ಇಲ್ಲಿದೆ.

ಪಾಲಿಕೆಗೆ ಗೆದ್ದವರ ಸಂಪೂರ್ಣ ವಿವರ ಇಲ್ಲಿದೆ. 1 ಇಕ್ರಾ ಮುಲ್ಲಾ – ಸ್ವತಂತ್ರ 2 ಮುಜಾಮಿಲ್ ಡೋನಿ -ಕಾಂಗ್ರೆಸ್ 3 ಜ್ಯೋತಿ ಕಡೋಲ್ಕರ್ -ಕಾಂಗ್ರೆಸ್ 4 ಜಯತೀರ್ಥ ಸೌದತ್ತಿ -ಬಿಜೆಪಿ 5 ಅಫ್ರಿಜಾ ಮುಲ್ಲಾ -ಕಾಂಗ್ರೆಸ್ 6 ಸಂತೋಷ್ ಪೆಡ್ನೇಕರ್ -ಬಿಜೆಪಿ 7 ಶಂಕರ್ ಪಾಟೀಲ್ -ಸ್ವತಂತ್ರ 8 ಸೊಹೈಲ್ ಸಂಗೋಲಿ -ಕಾಂಗ್ರೆಸ್ 9 ಪೂಜಾ ಪಾಟೀಲ್ -ಸ್ವತಂತ್ರ 10 ವೈಶಾಲಿ ಬಾತ್ಕಾಂಡೆ -ಸ್ವತಂತ್ರ 11 ಸಮಿಯುಲ್ಲಾ ಮಾಡಿವಾಲೆ -ಕಾಂಗ್ರೆಸ್ …

Read More »

20 ವರ್ಷಗಳಿಂದ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಜನಿಯರ್ ಕೊನೆಗೂ ಎತ್ತಂಗಡಿ

ಬೆಳಗಾವಿ: ಕಳೆದ ಹಲವು ವರ್ಷಗಳಿಂದ ಒಂದೇ ಜಾಗದಲ್ಲಿ ಜಾಂಡ ಹೂಡಿದ್ದ ಎಂಜನಿಯರ್​ನನ್ನು 20 ವರ್ಷಗಳ ಬಳಿಕ ಕೊನೆಗೂ ಎತ್ತಂಗಡಿ ಮಾಡಲಾಗಿದೆ. ಎಸ್.ಆರ್ .ಚೌಗಲಾ ಎಂಬ ದಿನಗೂಲಿ ಎಂಜನಿಯರ್, 1995ರಲ್ಲಿ ದಿನಗೂಲಿ ಆಧಾರದ ಮೇಲೆ ಜ್ಯೂನಿಯರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಬಳಿಕ ಚೌಗಲಾ ತಮ್ಮ ಪ್ರಭಾವ ಬಳಸಿ ಇಪ್ಪತ್ತು ವರ್ಷಗಳಿಂದ ಬಹುತೇಕ ಕಾಲ ರಾಯಭಾಗ ತಾಲೂಕಿನಲ್ಲಿ‌ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಕುಡಚಿ ಪುರಸಭೆ, ರಾಯಭಾಗ ಪಟ್ಟಣ ಪಂಚಾಯಿತಿ, ಮುಗಳಖೋಡ, …

Read More »

ಬೆಳಗಾವಿಯಲ್ಲಿ ಬಿಜೆಪಿ, ಕಾಂಗ್ರೆಸ್ ಗೆ ಮೊದಲ ಗೆಲುವು

ಬೆಳಗಾವಿ – ಬೆಳಗಾವಿಯ 2 ವಾರ್ಡ್ ಗಳ ಫಲಿತಾಂಶ ಪ್ರಕಟವಾಗಿದೆ. ವಾರ್ಡ್ 15ರಲ್ಲಿ ಬಿಜೆಪಿಯ ನೇತ್ರಾವತಿ ಭಾಗ್ವತ್, ಮತ್ತು ವಾರ್ಡ್ 3ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಕಡೋಲ್ಕರ್ ಗೆಲುವು ಸಾಧಿಸಿದ್ದಾರೆ. ವಾರ್ಡ್ 11ರಲ್ಲಿ ಸಹ ಕಾಂಗ್ರೆಸ್ ಮುನ್ನಡೆಯಲ್ಲಿದೆ. ನೇತ್ರಾವತಿ 40 ಮಗಳಿಂದ ಗೆಲುವು ಸಾಧಿಸಿದ್ದಾರೆ, ಜ್ಯೋತಿ ಹೆಚ್ಚಿನ ಅಂತರದಿಂದ ಗೆದ್ದಿದ್ದಾರೆ. ಬಹುತೇಕ ವಾರ್ಡ್ ಗಳಲ್ಲಿ ಪಕ್ಷೇತರರು ಮನ್ನಡೆಯಲ್ಲಿದ್ದಾರೆ.

Read More »

ಕೇಂದ್ರ ಸರ್ಕಾರಕ್ಕೆ ಬಿಗ್‌ ಶಾಕ್:‌ ರೈತ ಹೋರಾಟಕ್ಕೆ ಬಿಜೆಪಿ ಸಂಸದ ಬೆಂಬಲ

ದೆಹಲಿ: ʼಅವರು ನಮ್ಮದೇ ಮಾಂಸ ಮತ್ತು ರಕ್ತ’ ಎಂದು ರೈತರ ಪ್ರತಿಭಟನೆಗೆ ಪಿಲಿಭಿತ್ ನ ಬಿಜೆಪಿ ಸಂಸದ ವರುಣ್ ಗಾಂಧಿ ಬೆಂಬಲ ನೀಡಿದ್ದಾರೆ. ಬಿಜೆಪಿ ಸಂಸದರಾಗಿದ್ದರೂ ಕೇಂದ್ರ ಸರಕಾರವನ್ನು ಗುರಿಯಾಗಿಸಿಕೊಂಡು ವರುಣ್ ಗಾಂಧಿ ಕಿಸಾನ್ ಮಹಾ ಪಂಚಾಯತ್ ಅನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ರೈತರೊಂದಿಗೆ ಮಾತುಕತೆಗೆ ಮರುಪ್ರವೇಶಿಸಲು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. “ಮುಜಾಫರ್ ನಗರದಲ್ಲಿ ಇಂದು ಲಕ್ಷಾಂತರ ರೈತರು ಪ್ರತಿಭಟನೆಯಲ್ಲಿ ಜಮಾಯಿಸಿದ್ದಾರೆ. ಅವರು ನಮ್ಮದೇ ಮಾಂಸ ಮತ್ತು ರಕ್ತ. ನಾವು ಅವರೊಂದಿಗೆ …

Read More »

ಸಾಲದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ಸಾಲದ ಹೊರೆ ಇಳಿಸಲಿದೆ ಸರ್ಕಾರ -ಹೊಲದಲ್ಲೇ ಸಾಲ ವಿತರಣೆ

ಬೆಂಗಳೂರು: ರೈತರ ಸಾಲದ ಹೊರೆ ಇಳಿಸಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮದುವೆ, ಕಾಯಿಲೆ ಮೊದಲಾದ ಕಾರಣಗಳಿಂದ ರೈತರಲ್ಲಿ ಸಾಲದ ಹೊರೆ ಹೆಚ್ಚಾಗುತ್ತಿದ್ದು, ಇದನ್ನು ಇಳಿಸಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಹೇಳಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗಿದೆ. ರೈತರ ಮಕ್ಕಳ ಶಿಕ್ಷಣ, ಮದುವೆ, ಕುಟುಂಬದ ಆರೋಗ್ಯ ಮೊದಲಾದವುಗಳಿಗೆ ಹೆಚ್ಚಿನ ಖರ್ಚು …

Read More »

ಈ ರಾಷ್ಟ್ರದ ಶಿಲ್ಪಿಗಳು ಶಿಕ್ಷಕರು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

  ಮೂಡಲಗಿ : ಶಿಕ್ಷಕರು ಈ ರಾಷ್ಟ್ರದ ಶಿಲ್ಪಿಗಳು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ನಿಮಿತ್ಯ ಇಲ್ಲಿಯ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ರವಿವಾರದಂದು ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದೇಶ ನೀಡಿರುವ ಅವರು, ಶಿಕ್ಷಕರಿಂದ ಮಾತ್ರ ಈ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವೆಂದು ಹೇಳಿದರು. ಕಳೆದ ಒಂದೂವರೆ ದಶಕದಿಂದ ಅರಭಾವಿ ಮತಕ್ಷೇತ್ರದಲ್ಲಿ ಶಿಕ್ಷಣದ …

Read More »