Breaking News

ರಾಜ್ಯ

ಚಹಾದಲ್ಲಿ ನಿದ್ರೆ ಮಾತ್ರೆ ಕೊಟ್ಟು ಗಾಡಿಯಲ್ಲಿದ 30ಲಕ್ಷ ಮೌಲ್ಯದ ಟೈರ್ ಎಗರಿಸಿದ ಕಿರಾತಕರು ಅಂದರ

ಚಿಕ್ಕೋಡಿ:ಚೆನ್ನೈ ನಿಂದ ಮುಂಬೈಗೆ ಬರುತ್ತಿದ ಲಾರಿಯ ಚಾಲಕನಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಬೆರೆಸಿ ಅವನಿಗೆ ಮತ್ತು ಬರುವ ಹಾಗೆ ಮಾಡಿ ಲಾರಿಯಲ್ಲಿದ 30 ಲಕ್ಷ ಮೌಲ್ಯದ ಟೈರ್ ಗಳನ್ನ ಎಗರಿಸಿದ ಕಿರಾತಕರು ಇವಾಗ ಚಿಕ್ಕೋಡಿ ಪೊಲೀಸರ ಅತಿಥಿ ಗಳಾಗಿದ್ದಾರೆ, ಹೌದು ಹೈವೇ ನಲ್ಲಿ ಇಂಥ ಕರಾಮತ್ ಮಾಡುವುದೇ ಈ ಖದೀಮರ ಕೆಲಸ 10ನೆಯ ತಾರೀಖಿನ ದಿನ ಲಾರಿ ಚಾಲಕನಿಗೆ ನಿದ್ರೆ ಮತ್ತೆ ಬೆರೆಸಿ ಕುಡಿಸಿ ಗಾಡಿಯನ್ನ ಅನ್ಲೋಡ್ ಮಾಡಿದ್ದಾರೆ.ಅದೇರೀತಿ ಈ …

Read More »

CM ಮಾಸ್ಟರ್ ಪ್ಲಾನ್; ಓಲೇಕಾರ ನಿವಾಸಕ್ಕೆ ಬೊಮ್ಮಾಯಿ ಭೇಟಿ

ಹಾವೇರಿ: ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲ ಬೇಕಾಗಿರುವ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಉಪಚುನಾವಣೆ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದು, ಶಾಸಕ ನೆಹರು ಓಲೇಕಾರ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸುವ ಕಾರ್ಯ ಮಾಡಿದ್ದಾರೆ. ಹಾವೇರಿ ನಗರದ ವೈಭವ ಲಕ್ಷ್ಮೀ ಪಾರ್ಕ್ ನಲ್ಲಿರೋ ಶಾಸಕ ಓಲೇಕಾರ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದು, ಹಾನಗಲ್ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮತ್ತು ಓಲೇಕಾರ‌ ನಡುವಿನ‌ ಮುನಿಸು …

Read More »

ಬಿಜೆಪಿ ಭಸ್ಮಾಸುರ ಆದರೆ, ಮಮತಾ ಬ್ಯಾನರ್ಜಿ ದುರ್ಗೆ ಇದ್ದಂತೆ’- ಹೀಗಂದಿದ್ಯಾರು?

ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ದುರ್ಗೆ ಹಾಗೂ ಬಿಜೆಪಿ ಸರ್ಕಾರ ಭಸ್ಮಾಸುರ ಇದ್ದಂತೆ. ಕರಾವಳಿ ರಾಜ್ಯದಿಂದ ಭಸ್ಮಾಸುರನ ನಿರ್ಮೂಲನೆ ಮಾಡುವುದು ಖಚಿತ ಅಂತ ಗೋವಾ ಫಾರ್ವರ್ಡ್ ಪಾರ್ಟಿ ನಾಯಕ ಕಿರಣ್‌ ಖಂಡೋಲ್ಕರ್‌ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಿರ್ಮೂಲನೆ ಮಾಡಲು ಪಶ್ಚಿಮ ಬಂಗಾಳದಿಂದ ದುರ್ಗೆಯನ್ನು ಕರೆತರುವುದು ಅನಿವಾರ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಟಿಎಂಸಿ ಜೊತೆಗೆ ಮೈತ್ರಿ ಹೊಂದುವ ಬಗ್ಗೆ ಮಾತುಕತೆ ನಡೆದಿದೆ ಅಂತ ಅವರು ಹೇಳಿದರು. ಈ ಮಾತಿಗೆ ಸಿಎಂ ಪ್ರಮೋದ್‌ …

Read More »

ಸಿಎಂ ಆದ್ಮೇಲೆ 7 ಬಾರಿ ದೆಹಲಿ ಪ್ರವಾಸ; ಬೆಂಗಳೂರು ಸಮಸ್ಯೆ ಮರೆತೇ ಬಿಟ್ರಾ ಬೊಮ್ಮಾಯಿ..?

ಕಳೆದ ವಾರವಷ್ಟೇ ದೆಹಲಿ ಯಾತ್ರೆ ಮಾಡಿದ್ದ ಸಿಎಂ ಮತ್ತೆ ಮುಂದಿನ ವಾರ ಡೆಲ್ಲಿಗೆ ಹೋಗೋ ಪ್ಲ್ಯಾನ್ ಹಾಕೊಂಡಿದ್ದಾರೆ. ಸವಾಲುಗಳಿವೆ ಕೇಂದ್ರದ ಜೊತೆ ಉತ್ತಮ ಸಂಬಂಧ ಇರ್ಬೇಕು, ಅದಕ್ಕಾಗಿ ಹೋಗಿ ಬರ್ಲಿ. ಆದ್ರೆ ಪದೇ ಪದೇ ರಾಷ್ಟ್ರ ರಾಜಧಾನಿಗೆ ಹೋಗೋ ಸಿಎಂ ಇತ್ತ ರಾಜ್ಯ ರಾಜಧಾನಿ ಪ್ರವಾಸ ಮಾಡದೇ ಬೆಂಗಳೂರನ್ನ ನಿರ್ಲಕ್ಷಿಸಿದ್ರೆ ಹೇಗೆ? ಹೀಗೊಂದು ಪ್ರಶ್ನೆ ಇದೀಗ ಹುಟ್ಕೊಂಡಿದೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ರೀತಿ ಅಸಮಾಧಾನ ಭುಗಿಲೇಳಬಾರದು. ದೆಹಲಿ ನಾಯಕರಿಗೆ ಕಾಲಕಾಲಕ್ಕೆ …

Read More »

ಕೊನೆಗೂ ಬೆಂಗಳೂರು ಸಿಟಿ ರೌಂಡ್ಸ್​ಗೆ ಬಂದ್ರು ಸಿಎಂ ಬೊಮ್ಮಾಯಿ..!

ಬೆಂಗಳೂರು: ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಸಾಲು ಸಾಲು ಅವಘಡ ಸಂಭವಿಸುತ್ತಿವೆ. ವಾಸ್ತವ ಸ್ಥಿತಿ ಅರಿಯುವ ಉದ್ದೇಶದಿಂದ ಸಿಎಂ ಬಸವರಾಜ್ ಬೊಮ್ಮಾಯಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಿಟಿ ರೌಂಡ್ಸ್​​ ಆರಂಭಿಸಿದ್ದಾರೆ. ಬೆಳ್ಳಂಬೆಳಗ್ಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಸ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದರು. ಬಳಿಕ ಮಳೆಯಿಂದ ಅವಘಡಕ್ಕೊಳಗಾದ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ರಸ್ತೆ ಗುಂಡಿಗಳು, ಟ್ರಾಫಿಕ್ ಜಾಮ್ ಜಂಕ್ಷನ್ಸ್, ಅರ್ಧಕ್ಕೆ ನಿಂತಿರುವ ಕಾಮಗಾರಿಗಳು ಹಾಗೂ ರಾಜಕಾಲುವೆಯನ್ನು …

Read More »

ಮುದ್ದೆಯಲ್ಲಿ ವಿಷ ಹಾಕಿದ ಬಾಲಕಿ – ತಂದೆ, ತಾಯಿ ಸೇರಿ ನಾಲ್ವರ ಹತ್ಯೆ

ಚಿತ್ರದುರ್ಗ: 17 ವರ್ಷದ ಬಾಲಕಿಯೊಬ್ಬಳು ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದು ಇಡೀ ಕುಟುಂಬಕ್ಕೆ ಮುದ್ದೆಯಲ್ಲಿ ವಿಷ ಬೆರೆಸಿ ಹತ್ಯೆಗೈದಿರುವ ಆಘಾತಕಾರಿ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಇಸಾಮುದ್ರ ಗ್ರಾಮದಲ್ಲಿ ಜುಲೈ 12 ರಂದು ಈ ಘಟನೆ ನಡೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿ ಮೂಲಕ ಮುದ್ದೆಯಲ್ಲಿ ವಿಷ ಬೆರಸಿರುವ ಸತ್ಯ ಬಯಲಾಗಿದೆ.   ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದ ಬಾಲಕಿ, ಹೆತ್ತವರು, …

Read More »

ಸಲಗ ಚಿತ್ರವಿಮರ್ಶೆ: ರೌಡಿಸಂ ಲೋಕದ ‘ವಸ್ತುನಿಷ್ಠ ರಗಡ್’ ಅನಾವರಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೃತ್ತಿ ಜೀವನಕ್ಕೆ ಬಹುದೊಡ್ಡ ಬ್ರೇಕ್ ಕೊಟ್ಟ ‘ಓಂ’ ಸಿನಿಮಾದಲ್ಲಿ ನಾಯಕ ಅನಿರೀಕ್ಷಿತವಾಗಿ ಮಚ್ಚು ಹಿಡಿದಿರುತ್ತಾನೆ. ಸಲಗದಲ್ಲಿ, ಪ್ರತೀಕಾರಕ್ಕಾಗಿ ಲಾಂಗ್ ಹಿಡಿಯುತ್ತಾನೆ. ದುನಿಯಾ ವಿಜಯ್ ಆಲಿಯಾಸ್ ವಿಜಯ್ ಕುಮಾರ್ ನಿರ್ದೇಶಿಸಿ, ನಟಿಸಿರುವ ಸಲಗ ಚಿತ್ರದ ಒನ್ ಲೈನ್ ಕಥೆಯಿದು. ‘ವರ್ಲ್ಡ್ ಯಾವ ಕಲರ್ ನಲ್ಲಿದ್ದರೇನು, ಅಂಡರ್ ವರ್ಲ್ಡ್ ಮಾತ್ರ ರೆಡ್ ಕಲರ್’ ಎನ್ನುವ ಡೈಲಾಗುಗಳು ಟೀಸರ್ ನಲ್ಲಿವೆ. ಸಲಗ ‘ಎ’ ಸರ್ಟಿಫಿಕೇಟ್ ಸಿನಿಮಾ. ಹಾಗಾಗಿ, ಚಿತ್ರದಲ್ಲಿ …

Read More »

ಬೆಂಗಳೂರಿಗೆ ಹೊರಟಿದ್ದ ಟ್ರಕ್‌ನಲ್ಲಿದ್ದ 9,000 ಮೊಬೈಲ್‌ ಲೂಟಿ

ಮಥುರಾ: ಬೆಂಗಳೂರಿಗೆ ಹೊರಟಿದ್ದ ಟ್ರಕ್‌ನಿಂದ 7 ಕೋಟಿ ರೂಪಾಯಿ ಮೌಲ್ಯದ ಸುಮಾರು 9,000 ಮೊಬೈಲ್ ಫೋನ್‌ಗಳನ್ನು ಲೂಟಿ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ದುಷ್ಕರ್ಮಿಗಳು ಚಾಲಕನನ್ನು ಥಳಿಸಿ ವಾಹನದಿಂದ ಹೊರಕ್ಕೆ ಎಸೆದಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ‘ಒಪ್ಪೋ ಮೊಬೈಲ್ ಕಂಪನಿಯ ಮ್ಯಾನೇಜರ್ ಸಚಿನ್ ಮಾನವ್ ಸಲ್ಲಿಸಿದ ದೂರಿನಲ್ಲಿ, ಫರೂಖಾಬಾದ್ ಜಿಲ್ಲೆಯ ಚಾಲಕ ಮುನೀಶ್ ಯಾದವ್ ಅವರು ಅಕ್ಟೋಬರ್ 5 ರಂದು ಬೆಳಿಗ್ಗೆ ಗ್ರೇಟರ್ ನೋಯ್ಡಾದಿಂದ ಮೊಬೈಲ್‌ಗಳನ್ನು ತುಂಬಿದ್ದ ಟ್ರಕ್ …

Read More »

ಸಿಎಂ ನೋಡಲು ಬಂದ ಬಾಲಕನಿಗೆ ಪೊಲೀಸ್‌ ಏಟು: ರಕ್ತ ಸುರಿಸಿಕೊಂಡು ಹೋದ ಬಾಲಕ

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಮುಖ್ಯಮಂತ್ರಿಯನ್ನು ನೋಡಲು ಬಂದ ಬಾಲಕನ ತಲೆಗೆ ಪೊಲೀಸ್‌ ಸಿಬ್ಬಂದಿಯೊಬ್ಬರು ಟೋಪಿಯಿಂದ ಹೊಡೆದಿದ್ದರಿಂದ ಗಾಯವಾಗಿ ರಕ್ತ ಸುರಿದಿದೆ. ನಿತಿನ್‌ ಎಂಬ ಬಾಲಕ ಗಾಯಗೊಂಡಿದ್ದಾನೆ. ಕಾರ್ಯಕ್ರಮ ಇನ್ನೂ ಆರಂಭವಾಗಿರಲಿಲ್ಲ. ಮುಖ್ಯಮಂತ್ರಿ ಸಹಿತ ಗಣ್ಯರು ಸಭಾಂಗಣಕ್ಕೆ ಬಂದಿರಲಿಲ್ಲ. ಈ ಸಮಯದಲ್ಲಿ ವೇದಿಕೆಯ ಪಕ್ಕಕ್ಕೆ ಬಂದಿದ್ದ ಬಾಲಕನ ತಲೆಗೆ ಪೊಲೀಸರೊಬ್ಬರು ಟೋಪಿಯಿಂದ ಹೊಡೆದಾಗ ಗಾಯವಾಗಿ ರಕ್ತ ಬಂದಿದೆ. ‘ನಾನು ಹೊಡೆದಿಲ್ಲ. ಬಾಲಕನೇ …

Read More »

ಡೆಂಘೆ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

ಗದಗ: ಲಕ್ಷಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಡೆಂಘೆ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಶುಕ್ರವಾರ ಮೃತಪಟ್ಟಿದ್ದಾಳೆ. ವೈಶಾಲಿ ಶಿವಪ್ಪ ಲಮಾಣಿ (16) ಮೃತೆ. ಈಕೆ ಮುಳಗುಂದದ ಮುರಾರ್ಜಿ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಳು. ಅ.5ರಂದು ವಸತಿ ಶಾಲೆಯಲ್ಲಿಯೇ ಜ್ವರ ಕಾಣಿಸಿಕೊಂಡಿದ್ದರಿಂದ ಮನೆಗೆ ಆಗಮಿಸಿದ್ದಳು. 7ರಂದು ಲಕ್ಷೆಮೕಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಳೆ. ಗುಣವಾಗದ್ದರಿಂದ ಅ.14ರಂದು ಧಾರವಾಡ ಎಸ್​ಡಿಎಂಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಾವನ್ನಪ್ಪಿದ್ದಾಳೆ ಎಂದು ಪಾಲಕರು ತಿಳಿಸಿದ್ದಾರೆ.

Read More »