Breaking News

ರಾಜ್ಯ

ಇಂದಿರಾ ಗಾಂಧಿ ಸಿನಿಮಾಕ್ಕಾಗಿ ತನ್ನೆಲ್ಲ ಆಸ್ತಿ ಅಡವಿಟ್ಟ ಕಂಗನಾ ರನೌತ್!

ಕಂಗನಾ ರನೌತ್ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವವರು. ಒಂದರ ಹಿಂದೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಕೇಸುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಆದರೆ ನಟನೆ ವಿಷಯಕ್ಕೆ ಬಂದಾಗ ಆಕೆಯನ್ನು ಮೀರಿಸುವ ನಟಿ ಬಾಲಿವುಡ್‌ನಲ್ಲಿ ಮತ್ತೊಬ್ಬರಿಲ್ಲ. ಯಾವುದೇ ಪಾತ್ರವಾದರೂ ಪರಕಾಯ ಪ್ರವೇಶ ಮಾಡುವ ಕಂಗನಾ, ಪಾತ್ರವೇ ತಾವಾಗಿಬಿಡುತ್ತಾರೆ. ಕಂಗನಾರನ್ನು ದ್ವೇಷಿಸುವವರು ಸಹ ಆಕೆಯ ನಟನೆಗೆ ಮಾರು ಹೋಗದೇ ಬೇರೆ ವಿಧಿಯಿಲ್ಲ. ನಟನೆಗೆ ಎರಡು ರಾಷ್ಟ್ರಪ್ರಶಸ್ತಿ ಪಡೆದಿರುವ ಕಂಗನಾ ಇದೀಗ ಮತ್ತೊಂದು ರಾಷ್ಟ್ರಪ್ರಶಸ್ತಿ ಮೇಲೆ ಕಣ್ಣು ಹಾಕಿದಂತೆ …

Read More »

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನೌಕಾಪಡೆಯ ತುಕಡಿಗೆ ಮಂಗಳೂರಿನ ದಿಶಾ ಕ್ಯಾಪ್ಟನ್‌

ಮಂಗಳೂರು: ಇಲ್ಲಿನ ತಿಲಕನಗರದ ದಿಶಾ ಅಮೃತ್‌ ಅವರು, ಇದೇ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸಲಿದ್ದಾರೆ. ನೌಕಾಪಡೆಯ 144 ಸೈನಿಕರನ್ನು ಒಳಗೊಂಡ ತುಕಡಿ ಹಾಗೂ ಸ್ತಬ್ಧಚಿತ್ರವು ಈ ಕವಾಯತಿನಲ್ಲಿ ‘ನಾರಿಶಕ್ತಿ’ಯನ್ನು ಪ್ರದರ್ಶಿಸಲಿದೆ.   ಅಂಡಮಾನ್‌ ನಿಕೋಬಾರ್‌ನಲ್ಲಿ ನೌಕಾಪಡೆಯಲ್ಲಿ ಲೆಫ್ಟಿನೆಂಟ್‌ ಕಮಾಂಡರ್‌ ಆಗಿರುವ ಮಗಳು ಗಣರಾಜ್ಯೋತ್ಸವ ಪರೇಡ್‌ನಲ್ಲಿ ತುಕಡಿಯ ನಾಯಕಿಯಾಗಿ ಹೆಜ್ಜೆಹಾಕುವುದನ್ನು ಕಣ್ತುಂಬಿಕೊಳ್ಳಲು ಆಕೆಯ ತಂದೆತಾಯಿ ಅಮೃತ್ ಕುಮಾರ್‌- ಲೀಲಾ ದಂಪತಿ ನವದೆಹಲಿಗೆ ತೆರಳಿದ್ದಾರೆ. ಮಗಳ ಸಾಧನೆ …

Read More »

ವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಆರೋಪದ ಕುರಿತು ಕಾಂಗ್ರೆಸ್‌ನಿಂದ ಬೆಂಗಳೂರಿನ 300 ಸ್ಥಳಗಳಲ್ಲಿ ನಾಳೆ ಪ್ರತಿಭಟನೆ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಆರೋಪದ ಕುರಿತು ಕ್ರಮಕ್ಕೆ ಆಗ್ರಹಿಸಿ ಬೆಂಗಳೂರಿನ 300 ಸ್ಥಳಗಳಲ್ಲಿ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ನಡೆಸಲಿದೆ. ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಅವರೊಂದಿಗೆ ಭಾನುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎನ್.ಎ.‌ಹ್ಯಾರಿಸ್, ‘ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಆರೋಪಗಳು ಬಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದಲ್ಲಿನ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವುದಕ್ಕಾಗಿ ಬೆಂಗಳೂರಿನ 51 ಮೆಟ್ರೊ ರೈಲು ನಿಲ್ದಾಣಗಳು, 26 ಮೇಲುಸೇತುವೆಗಳು, 200 ಟ್ರಾಫಿಕ್ ಸಿಗ್ನಲ್ …

Read More »

ದಟ್ಟ ಅರಣ್ಯದ ಮಧ್ಯೆ ಶಾಂತಚಿತ್ತವಾಗಿ ಹರಿಯುವ ಜಲಧಾರೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ.

ಖಾನಾಪುರ: ತಾಲ್ಲೂಕಿನ ನಾಗರಗಾಳಿ ಅರಣ್ಯ ವ್ಯಾಪ್ತಿಯಲ್ಲಿರುವ ಜಲಪಾತ ಚಾರಣಪ್ರಿಯರ ಮನ ತಣಿಸುತ್ತಿದೆ. ದಟ್ಟ ಅರಣ್ಯದ ಮಧ್ಯೆ ಶಾಂತಚಿತ್ತವಾಗಿ ಹರಿಯುವ ಜಲಧಾರೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಲೋಂಡಾ, ಉತ್ತರ ಕನ್ನಡ ಜಿ ಖಾನಾಪುರ ಲ್ಲೆಯ ದಾಂಡೇಲಿ ಮತ್ತು ಧಾರವಾಡ ಜಿಲ್ಲೆಯ ಅಳ್ನಾವರ ಅರಣ್ಯದ ಮಧ್ಯೆ ನಾಗರಗಾಳಿ ಅರಣ್ಯ ಪ್ರದೇಶವಿದೆ. ಬಹುತೇಕ ಸಾಗವಾನಿ ಹಾಗೂ ಸೀಸಂ ಮರಗಳಿರುವ ಈ ಕಾಡಿನಲ್ಲಿ ಹರಿಯುವ ಜಲಪಾತ ಮುಂದೆ ಕಾಳಿ ನದಿ ಸೇರುತ್ತದೆ. ಅನುಮತಿ ಬೇಕು: ದಾಂಡೇಲಿಯಿಂದ ನಾಗರಗಾಳಿ ಅರಣ್ಯಕ್ಕೆ …

Read More »

ಬೆಳಗಾವಿ: ಬಾನಂಗಳದಲ್ಲಿ ಗಾಳಿಪಟ ಚಿತ್ತಾರ

ಬೆಳಗಾವಿ: ಇಲ್ಲಿನ ಬಿ.ಎಸ್‌. ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಶನಿವಾರ ಆರಂಭಗೊಂಡ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಹಾರಾಡಿದ ಬಗೆಬಗೆಯ ವಿನ್ಯಾಸಗಳ ಗಾಳಿಪಟಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ಕಾಂತಾರ, ಇಂಡಿಯನ್‌ ಲಿಫ್ಟರ್‌, ಕವ್‌, ಮಾಂತಾ ರೇ, ರಿಂಗ್‌ ಮಾದರಿಯ ಪತಂಗ ಕಣ್ಮನಸೆಳೆದವು. ಗಾಳಿಪಟಗಳ ಹಾರಾಟ ನೋಡಿ ಬಾನಲ್ಲಿ ಜನರ ಮನ ತೇಲಿತು. ಪ್ರತಿವರ್ಷ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗುತ್ತಿತ್ತು. ಕೊರೊನಾ ಆತಂಕದಿಂದಾಗಿ ಕಳೆದ ಎರಡು ವರ್ಷ ರದ್ದಾಗಿತ್ತು. …

Read More »

ಬೆಳಗಾವಿ: ”ಸಾಹಿತ್ಯದಿಂದ ಸೈನಿಕರ ಸ್ಥೈರ್ಯ ಹೆಚ್ಚಳ’: ದಯಾಲನ್

ಬೆಳಗಾವಿ: ‘ದೇಶದ ಗಡಿ ಕಾಯುವ ಸೈನಿಕರಿಗೆ ಸಾಹಿತಿ ನೀಲಗಂಗಾ ಚರಂತಿಮಠ ಅವರಿ ತಮ್ಮ ಕೃತಿಗಳಲ್ಲಿ ದೊಡ್ಡ ಗೌರವ ನೀಡಿದ್ದಾರೆ. ಇಂಥ ಪುಸ್ತಕಗಳಿಂದ ಸೈನಿಕರ ನೈತಿಕ ಸ್ಥೈರ್ಯ ಹೆಚ್ಚುತ್ತದೆ’ ಎಂದು ಕಮಾಂಡೆಂಟ್‌ ಪಿ.ಸಿ. ವಿಂಗ್‌ನ ಬ್ರಿಗೇಡಿಯರ್ ದಯಾಲನ್ ಹೇಳಿದರು.   ಸಾಹಿತಿ ನೀಲಗಂಗಾ ಚರಂತಿಮಠ ಅವರ ‘ಧಾರಿಣಿ’, ‘ಜನನಿ ಜನ್ಮಭೂಮಿ’, ‘ಒಂದೇ ಮಾತರಂ’ ಮತ್ತು ‘ಪ್ರಣಾಮ್’ ಎಂಬ ನಾಲ್ಕು ಪುಸ್ತಕಗಳನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್.ಎಂ. …

Read More »

ಆಸ್ಪತ್ರೆ ನಿರ್ಮಾಣಕ್ಕೆ ₹27 ಕೋಟಿ ಬಿಡುಗಡೆ:ಶಾಸಕ ಅನಿಲ ಬೆನಕೆ

ಬೆಳಗಾವಿ: ನಗರದಲ್ಲಿ ಕ್ರಿಟಿಕಲ್ ಕೇರ್ ಆಸ್ಪತ್ರೆ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ ಅಡಿಯಲ್ಲಿ ₹27 ಕೋಟಿ ಅನುದಾನ ನೀಡಲಾಗಿದೆ. ಶಾಸಕ ಅನಿಲ ಬೆನಕೆ ಪ್ರಯತ್ನ ಮಾಡಿ ಈ ಅನುದಾನ ಮಂಜೂರು ಮಾಡಿಸಿದ್ದಾರೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.   ಜಿಲ್ಲಾಸ್ಪತ್ರೆ ಅಭಿವೃದ್ಧಿ, ಮಲ್ಟಿ ಸೂಪರ್ ಸ್ಪೆಷಾಲಟಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಒತ್ತು ನೀಡಿರುವ ಶಾಸಕ ಅನಿಲ ಬೆನಕೆ, ಬೆಳಗಾವಿಯಲ್ಲಿ ನಡೆದ ಅಧಿವೇಶನ …

Read More »

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಪಿಎಸ್‌ಐ ಹಗರಣದ ಆರೋಪಿ ಒಲವು

ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಆರ್.ಡಿ.ಪಾಟೀಲ ಶುಕ್ರವಾರ ಮಧ್ಯರಾತ್ರಿ ಅಜ್ಞಾತ ಸ್ಥಳದಿಂದ ವಿಡಿಯೊ ಮಾಡಿ, ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. 7 ನಿಮಿಷ 14 ಸೆಕೆಂಡ್‌ಗಳ ವಿಡಿಯೊದಲ್ಲಿ ಪಾಟೀಲ, ‘8-9 ತಿಂಗಳು ಕೆಲ ರಾಜಕೀಯ ಮುಖಂಡರು ಕುತಂತ್ರದಿಂದ ನನ್ನನ್ನು ಹಾಗೂ ನನ್ನ ಸಹೋದರ ಮಹಾಂತೇಶ ಪಾಟೀಲ ಅವರನ್ನು ಪಿಎಸ್‌ಐ ಪ್ರಕರಣದಲ್ಲಿ ಉದ್ದೇಶ ಪೂರ್ವಕವಾಗಿ ಸಿಲುಕಿಸಿದ್ದಾರೆ. ಸಮಾಜ ಸೇವೆ, ಚುನಾವಣಾ ಸ್ಪರ್ಧೆಗೆ ಬರಬಹುದು ಎಂಬ ಭಯದಿಂದ ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ’ …

Read More »

ವಿವೇಕಾನಂದರು ನಮಗೆಲ್ಲ ಪ್ರೇರಣೆ; ಮಲ್ಲಿಕಾರ್ಜುನ ಬಾಳಿಕಾಯಿ

ಬೈಲಹೊಂಗಲ: ಭಾರತ ದೇಶದ ಸನಾತನ ಹಿಂದೂ ಸಂಸ್ಕೃತಿಯನ್ನು ದೇಶ ವಿದೇಶಗಳಲ್ಲಿ ಎತ್ತಿ ಹಿಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ನಮಗೆಲ್ಲರಿಗೂ ಪ್ರೇರಣೆ. ಮಹಾನ್‌ ದೇಶ ಭಕ್ತರನ್ನು, ಸಾಧು-ಸಂತರನ್ನು ಸ್ಮರಿಸುವುದು ಕೇವಲ ಬಿಜೆಪಿ ಸಂಸ್ಕೃತಿಯಲ್ಲಿ ಮಾತ್ರ ಎಂದು ರಾಜ್ಯ ಬಿ.ಜೆ.ಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.   ತಾಲೂಕಿನ ಸಂಪಗಾಂವ ಗ್ರಾಮದ ಬೆ„ಲಬಸವೇಶ್ವರ ದೇವಸಾನದಲ್ಲಿ ಬಿಜೆಪಿ ಯುವ ಮೋರ್ಚಾ ಕಿತ್ತೂರ ಮಂಡಳ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ …

Read More »

ಮೋದಿಗೆ ಸಮನಾದ ನಾಯಕ ಕಾಂಗ್ರೆಸ್​ನಲ್ಲಿ ಯಾರಿದ್ದಾರೆ ಹೇಳಿ?B.S.Y.

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮನಾದ ನಾಯಕ ಕಾಂಗ್ರೆಸ್​ನಲ್ಲಿ ಯಾರಿದ್ದಾರೆ ಹೇಳಿ ಎಂದು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ಸಿಂದಗಿಯಲ್ಲಿ ಶನಿವಾರ ನಡೆದ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಬಿಎಸ್​ವೈ, ಆ ಇಬ್ಬರು ನಾಯಕರು ಮತ್ತೊಮ್ಮೆ ಮೋದಿ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಆ ಕೆಲಸ ಮಾಡ್ತಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ಇರೋದಿಲ್ಲ. ಎಲ್ಲಿದೆಯಪ್ಪಾ ಕಾಂಗ್ರೆಸ್​? ನಿಮ್ಮ ನಾಯಕ ಯಾರು? ಎಂದು ಕಾಂಗ್ರೆಸ್ ಪಡೆಯನ್ನು ಅಣಕಿಸಿದರು. ವಿಜಯಸಂಕಲ್ಪ ಅಭಿಯಾನ …

Read More »