ಬೆಂಗಳೂರು,ನ.24- ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುವುದು ಖಚಿತವಾಗಿದ್ದು, ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ ಎದುರಾಗಿದೆ. ಈ ತಿಂಗಳಾಂತ್ಯಕ್ಕೆ ಕೇಂದ್ರ ಚುನಾವಣಾ ಆಯೋಗ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದೆ. ಇದರ ಜೊತೆಗೆ ರಾಜ್ಯ ಚುನಾವಣಾ ಆಯೋಗ ಗ್ರಾಮಪಂಚಯತ್ ಚುನಾವಣೆಗೆ ಮೂಹೂರ್ತ ನಿಗಧಿ ಮಾಡುವುದು ಖಚಿತವಾಗಿದೆ. ಒಂದು ವೇಳೆ ಚುನಾವಣೆ ಘೋಷಣೆಯಾದರೆ, ಅಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದ್ದು, …
Read More »ಶಿವಸೇನೆ ಶಾಸಕನ ಮನೆ ಮೇಲೆ ಇಡಿ ಅಧಿಕಾರಿಗಳ ದಾಳಿ
ನವದೆಹಲಿ, ನ.24- ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಶಿವಸೇನೆ ಶಾಸಕರೊಬ್ಬರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಅವರ ವಿರುದ್ಧ ಅಕ್ರಮ ವಗಾರ್ವಣೆ ನಿರ್ಬಂಧಕ ಕಾಯ್ದೆಯನ್ವಯ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಸರ್ನಾಯಕ್ ಅವರಿಗೆ ಸೇರಿದ ಕಟ್ಟಡಗಳು , ವಾಣಿಜ್ಯ ಉದ್ಯಮಗಳು, ಬಿಲ್ಡರ್‍ಗಳು, ಅವರೊಂದಿಗೆ ಸಂಪರ್ಕವಿರಿಸಿಕೊಂಡಿರುವ ಪ್ರಮುಖರು ಹಾಗೂ ಕೆಲ ರಾಜಕೀಯ ಮುಖಂಡರುಗಳ ನಿವಾಸಗಳ ಮೇಲೂ ಇಡಿ ಅಧಿಕಾರಿಗಳು …
Read More »ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿದರೆ ನಿಮಗೇನು ಕಷ್ಟ ಹೋರಾಟಗಾರರನ್ನು ಶೂಟ್ ಮಾಡಿ ಬಿಸಾಕಿ:ಋಷಿಸ್ವಾಮಿ
ಡಿಸೆಂಬರ್: ಡಿ.5ರಂದು ಕನ್ನಡ ಹೋರಾಟಗಾರರು ಬಂದ್‍ಗೆ ಕರೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಅರಸೀಕೆರೆ ಕಾಳಿ ಮಠದ ಋಷಿಕುಮಾರ ಎಂಬ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿದರೆ ನಿಮಗೇನು ಕಷ್ಟ. ಅವರು ರಾಜ್ಯದಲ್ಲಿ ಟ್ಯಾಕ್ಸ್ ಕಟ್ಟುತ್ತಿದ್ದಾರೆ ಎಂದು ಮರಾಠಿಗರ ಪರ ಬ್ಯಾಟ್ ಬೀಸಿದ್ದಾರೆ. ಇದರ ಜೊತೆಗೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸ್ವಾಮಿ ಬಿಎಸ್‍ವೈ ಇಂತವರನ್ನೆಲ್ಲಾ ಶೂಟ್ ಮಾಡಿ ಬಿಸಾಕಬೇಕು. ಉತ್ತರಪ್ರದೇಶದಲ್ಲಿ …
Read More »ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ ಡಿಸಿಎಂ ಅಶ್ವತ್ಥನಾರಾಯಣ ಒತ್ತಾಯ
ಬೆಳಗಾವಿ: ರಾಜ್ಯ ಸರ್ಕಾರ ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿ 500 ಕೋಟಿ ರೂ. ಅನುದಾನ ನೀಡಿದ ಬೆನ್ನಲ್ಲಿಯೇ ಒಕ್ಕಲಿಗರ ಅಭಿವೃದ್ಧಿ ನಿಗಮವೂ ರಚಿಸಲಿ ಎಂದು ಬೆಳಗಾವಿಯಲ್ಲಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಒತ್ತಾಯಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಒಕ್ಕಲಿಗರ ಅಭಿವೃದ್ಧಿ ನಿಗಮ ಆಗಬೇಕು ಎನ್ನುವ ಒತ್ತಾಯಕ್ಕೆ ನನ್ನ ಬೆಂಬಲವೂ ಇದೆ ಎಂದು ಡಿಸಿಎಂ ಹೇಳಿದರು. ಕಾಲೇಜು ಆರಂಭಕ್ಕೆ ವಿದ್ಯಾರ್ಥಿಗಳು, ಪೆÇೀಷಕರ ಒತ್ತಾಯ ಇತ್ತು ಹೀಗಾಗಿ …
Read More »ಕರ್ನಾಟಕ ಬಂದ್‍ಗೆ ಬೆಂಬಲ ನೀಡಿ: ಸಾ.ರಾ.ಗೋವಿಂದು
ಬೆಂಗಳೂರು, ನ.23- ಕನ್ನಡಿಗರ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಇಂದು ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ನಮ್ಮವರಿಂದಲೇ ನಮಗೆ ನಿರಂತರ ಅನ್ಯಾಯವಾಗುತ್ತಿದೆ. ಹಾಗಾಗಿ ನಾವೆಲ್ಲ ಒಟ್ಟಾಗಿ ಹೋರಾಟ ಮಾಡಿ ಕನ್ನಡವನ್ನು, ಕನ್ನಡಿಗರನ್ನು ಕಾಪಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕಾಗಿ ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದ್ದೇವೆ. ಎಲ್ಲರೂ ಬೆಂಬಲ ನೀಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಅಖಿಲ ಕರ್ನಾಟಕ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮನವಿ ಮಾಡಿದರು. ಮರಾಠ ಅಭಿವೃದ್ಧಿ ನಿಗಮ …
Read More »ರಮೇಶ್ ಜಾರಕಿಹೊಳಿ ಕಿಂಗ್ ಮೇಕರ್ ಅಲ್ಲ. ಅವರು ಉತ್ಸಾಹದಿಂದ ಕೆಲಸ ಮಾಡುತ್ತಾರೆ.:ಅಶ್ವತ್ಥನಾರಾಯಣ್
ತುಮಕೂರು, ನ.23- ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ನಾವು ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ಅಸ್ತ್ರ ಬಳಸುತ್ತಿಲ್ಲ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುವವರು ಎಂದು ಡಿಸಿಎಂ ಅಶ್ವತ್ಥನಾರಾಯಣ್ ತಿರುಗೇಟು ನೀಡಿದ್ದಾರೆ. ರೋಷನ್ ಬೇಗ್ ಅವರ ಮೇಲೂ ಸಿಬಿಐ ಅಧಿಕಾರಿಗಳು ಕಾನೂನು ಪ್ರಕಾರ ದಾಳಿ ನಡೆಸಿದ್ದಾರೆ. ಅದರ ವಿಚಾರಣೆಯೂ ನ್ಯಾಯ ಸಮ್ಮತವಾಗಿ ನಡೆಯಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಬಗ್ಗೆ ಮುಖ್ಯಮಂತ್ರಿ ಅವರ ತೀರ್ಮಾನವೇ …
Read More »ಅಮೆರಿಕ ದಂತೆ ನಮ್ಮಲ್ಲಿಯೂ ರಾಜಕೀಯ ದಲ್ಲಿ ವಿಪ್ಲವ ಆಗಲಿದೆ : ಕೊಡಿಶ್ರಿ ಭವಿಷ್ಯ
ದಾವಣಗೆರೆ: ರಾಜ್ಯ ಮತ್ತು ದೇಶದ ರಾಜಕೀಯದಲ್ಲಿ ವಿಪ್ಲವ ಆಗಲಿದೆ ಎಂದು ಹಾಸನ ಜಿಲ್ಲೆಯ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ರಾಜಕೀಯ ವಿಪ್ಲವಕ್ಕೆ ಜನವರಿಯವರೆಗೂ ಸಮಯವಿದೆ. ಈಗಾಗಲೇ ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ಕಡೆ ರಾಜಕೀಯ ಬದಲಾವಣೆ ಆಗುತ್ತಿವೆ. ಅದೇ ರೀತಿ ನಮ್ಮಲ್ಲಿಯೂ ವಿಪ್ಲವ ಆಗಲಿದೆ ಎಂದು ಪರೋಕ್ಷವಾಗಿ ಹೇಳುವ ಮೂಲಕ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂಬುದರ ಬಗ್ಗೆ ಹೇಳಿದರು. ಕೆಲ ದಿನಗಳ ಹಿಂದೆ ಗ್ರಹಣ ಫಲ …
Read More »ಮಸ್ಕಿ ಉಪಚುನಾವಣೆಯಲ್ಲಿ ಯಾವ ಮೋದಿ ಅಲೆಯೂ ನಡೆಯುವುದಿಲ್ಲ.: ಸತೀಶ್ ಜಾರಕಿಹೊಳಿ
ರಾಯಚೂರು : ಮಸ್ಕಿ ಉಪಚುನಾವಣೆಯಲ್ಲಿ ಯಾವ ಮೋದಿ ಅಲೆಯೂ ನಡೆಯುವುದಿಲ್ಲ. ಸ್ಥಳೀಯ ಸಮಸ್ಯೆಗಳು ಹಾಗೂ ಅಭ್ಯರ್ಥಿಯ ಮೇಲೆ ಚುನಾವಣೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಬಿಜೆಪಿಗೆ ಚಾಟಿ ಬೀಸಿದ್ದಾರೆ. ಮಸ್ಕಿ ನಗರದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಸಮಾವೇಶಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಮಸ್ಕಿ ಉಪ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆ, ಚುನಾವಣೆ ಯಾವ ರೀತಿ ಎದುರಿಸಬೇಕು ಎಂಬುವುದರ ಬಗ್ಗೆ ಸಿದ್ದತೆ ನಡದಿದೆ. ಈಗಾಗಲೇ …
Read More »ಸಚಿವಾಕಾಂಕ್ಷಿಗಳಿಗೆ ನಿದ್ದೆ ಕೆಡಿಸಿದ ಸಿಎಂ ಪುತ್ರ :ದೆಹಲಿ ಪ್ರವಾಸ
ಬೆಂಗಳೂರು, ನ.22- ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ತೂಗುಯ್ಯಾಲೆಯಾಗಿರುವಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದಿಢೀರನೆ ನವದೆಹಲಿಗೆ ತೆರಳಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ರಾತ್ರಿ ಏಕಾಏಕಿ ನವದೆಹಲಿಗೆ ತೆರಳಿರುವ ವಿಜಯೇಂದ್ರ ಇಂದು ಪಕ್ಷದ ಕೆಲವು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಭೇಟಿ ಮಾಡಿ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ …
Read More »ಉಗ್ರ ಚಟುವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ: ಪ್ರಹ್ಲಾದ್ ಜೋಶಿ
ಧಾರವಾಡ: ಕಾಶ್ಮೀರದಲ್ಲಿ ಉಗ್ರರ ಪಡೆಯನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಇಂತಹ ದೇಶದ್ರೋಹಿ ಉಗ್ರ ಚಟುವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗ್ಯಾಂಗ್ ಜೊತೆಗಿರುವ ಪಕ್ಷಗಳ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ. ಗುಪ್ಕಾರ್ ಜೊತೆಗಿನ ಸಂಬಂಧದ ಬಗ್ಗೆ ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಏ ರಿಸ್ತಾ ಕ್ಯಾ ಕೆಹತಾ ಹೈ ಎಂದು ಕಾಂಗ್ರೆಸ್ ಹೇಳಬೇಕು. ತಾಯಿಗೆ ಹುಷಾರಿಲ್ಲ ಎಂದು …
Read More »
Laxmi News 24×7