Breaking News

ರಾಜಕೀಯ

ಬೆನಚಿನಮರಡಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

:ಗೋಕಾಕ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಬೆನಚಿನಮರಡಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.   ಪಂಚಾಯಿತಿಯ. ಸಾಮಾನ್ಯ ವರ್ಗ ಮಹಿಳಾ ಮೀಸಲು ಕ್ಷೇತ್ರದ.ವಾರ್ಡ ನಂ.3 ಸುನಂದಾ ಪ್ರಕಾಶ್ ವಡ್ಡರ.     ವಾರ್ಡ್ ನಂ 5. ಮಂಜುಳಾ ಲಕ್ಷ್ಮಣ ಪಾಟೀಲ್. ಹಿಂದುಳಿದ (ಅ) ವರ್ಗ ಮಹಿಳಾ ಮೀಸಲು ಕ್ಷೇತ್ರದಿಂದ ಎರಡು ಮಹಿಳಾ ಅವಿರೋಧವಾಗಿ ಆಯ್ಕೆಯಾಗಿದೆ ಹೀಗಾಗಿ ಈ ಆಯ್ಕೆ ಬಹುತೇಕ ಖಚಿತವಾಗಿದೆ. ಅಧಿಕೃತ ಘೋಷಣೆ ಬಾಕಿ ಇದೆ. ರಾಜಕೀಯ ಪಕ್ಷಗಳಿಗೆ …

Read More »

ಶಿಂದಿಕುರಬೇಟ ಗ್ರಾಮ ಪಂಚಾಯಿತಿಯ 8ವಾಡಿ೯ನ ಅವಗ೯ ಪುರುಷ ಸದಸ್ಯ ರಾಗಿ

  ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮಪಂಚಾಯತಿಯ 8 ನೇ ವಾರ್ಡಿನಲ್ಲಿ ಅವರ್ಗ ವಾಗಿ ಆಯ್ಕೆಯಾದ ಭೀಮಶಿ ಯಲ್ಲಪ್ಪ ಬಿರನಾಳಿ ಹಾಗು ಸಾಮಾನ್ಯ ಮಹಿಳಾ ಸದಸ್ಯ ರಾಗಿ ಮಂಜುಳಾ ವಿಠ್ಠಲ ಕರೋಶಿ ಅವಿರೋಧ ಆಯ್ಕೆಯಾಗಿ ದ್ದಾರೆ ಇವರು ಊರಿಗೆ ಮಾಡಿದ ಸಹಾಯವನ್ನು ಮೆಚ್ಚಿ ಶಿಂದಿಕುರಬೇಟ ಜನರು ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳು ಊರಿಗೆ ನಾವು ಚಿರಋಣಿಯಾಗಿರುತ್ತೇವೆ. ಮತ್ತು ಜನರ ಕಷ್ಟಗಳಿಗೆ ನಾವು ಬಾಗಿ ಆಗಿರುತ್ತೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ …

Read More »

ಹತ್ತರಗಿ ಗ್ರಾಪಂಗೆ ಪತಿ-ಪತ್ನಿ ಅವಿರೋಧ ಆಯ್ಕೆ: ಖಾತೆ ತೆರೆದ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು!!

ಯಮಕನಮರಡಿ: ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಹತ್ತರಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತಿ-ಪತ್ನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಂಚಾಯಿತಿಯ 2 ನೇ ವಾರ್ಡ್‍ನ ಎಸ್‍ಸಿ ಪುರುಷ ಮೀಸಲು ಕ್ಷೇತ್ರದಿಂದ ಉಮೇಶ ನಾಗಪ್ಪಾ ಭೀಮಗೋಳ, 1 ನೇ ವಾರ್ಡ್‍ನ ಎಸ್‍ಸಿ ಮಹಿಳಾ ಮೀಸಲು ಕ್ಷೇತ್ರದಿಂದ ಅಕ್ಷತಾ ಉಮೇಶ ಭೀಮಗೋಳ ಅವರ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿವೆ. ಹೀಗಾಗಿ ಈ ದಂಪತಿಯ ಆಯ್ಕೆ ಬಹುತೇಕ ಖಚಿತವಾಗಿದೆ. ಅಧಿಕೃತ ಘೋಷಣೆ ಬಾಕಿ ಇದೆ. ರಾಜಕೀಯ ಪಕ್ಷಗಳಿಗೆ ತಳಮಟ್ಟದಲ್ಲಿ …

Read More »

ರಾಜ್ಯಾದ್ಯಂತ ಬಸ್ ಸಂಚಾರ ಆರಂಭ

ಬೆಂಗಳೂರು: ಸಾರಿಗೆ ಸಿಬ್ಬಂದಿ ಮುಷ್ಕರ ಅಂತ್ಯಗೊಳಿಸಿದ್ದು, ಸಂಜೆ ಗಂಟೆ ನಂತರ ರಾಜ್ಯಾದ್ಯಂತ ಎಂದಿನಂತೆ ಬಸ್ ಸಂಚಾರ ಆರಂಭವಾಗಿವೆ. ಪ್ರತಿಭಟನಾ ನಿರತ ಸಾರಿಗೆ ಸಿಬ್ಬಂದಿ ಜತೆಗಿನ ಸಂಧಾನ ಯಶಸ್ವಿಯಾಗಿದ್ದು, ಸರ್ಕಾರ 9 ಪ್ರಮುಖ ಬೇಡಿಕೆಗಳ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆ ಮುಷ್ಕರ ಅಂತ್ಯಗೊಳಿಸಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸಾರಿಗೆ ಸಿಬ್ಬಂದಿ 10 ಪ್ರಮುಖ ಬೇಡಿಕೆಗಳಿದ್ದು, ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬ ಬೇಡಿಕೆಗೆ ಹೊರತು ಪಡಿಸಿ 9 ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದ್ದು, …

Read More »

ಶಿಕ್ಷಕರು_ಮತ್ತು_ಇಲಾಖೆಯ_ಸಂಪರ್ಕದ_ಕೊಂಡಿಯಾಗಿ ಶಿಕ್ಷಕರ_ಸಂಘ_ಶ್ರಮಿಸಲಿ : ಕೆಎಂಎಫ್ ಅಧ್ಯಕ್ಷ_ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಶಿಕ್ಷಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಡುವಿನ ಕೊಂಡಿಯಾಗಿ ಶಿಕ್ಷಕರ ಸಂಘದ ಪ್ರತಿನಿಧಿಗಳು ಕರ್ತವ್ಯನಿರ್ವಹಿಸುವಂತೆ ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ರವಿವಾರ ಸಂಜೆ ಮೂಡಲಗಿ ತಾಲೂಕು ಶಿಕ್ಷಕರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಸಮನ್ವಯತೆಯ ಆಧಾರದಲ್ಲಿ ಕರ್ತವ್ಯ ನಿರ್ವಹಿಸಿ ಯಶಸ್ವಿಯಾಗುವಂತೆ ಶುಭ ಕೋರಿದರು. ಮೂಡಲಗಿ ತಾಲೂಕು ಘಟಕಕ್ಕೆ ಶಿಕ್ಷಕರ ಸಂಘಕ್ಕೆ …

Read More »

ಬಿಜೆಪಿ ಶಾಸಕ ಅವರ ಕಾರು ಬೈಕ್ ಗೆ ಡಿಕ್ಕಿ ಇಬ್ಬರು ಮೃತ

ಮುಂಬೈ: ಬಿಜೆಪಿ ಶಾಸಕ ಕಿಶನ್ ಕ್ಯಾಥೋರ್ ಅವರ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮುಂಬೈನ ಟಿಟ್ವಾಲಾದಲ್ಲಿ ನಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ಬೈಕ್ ಸವಾರರಾದ ಅಮಿತ್ ಸಿಂಗ್ (22), ಇಮ್ರಾನ್ ಸಿಂಗ್ (18) ಎಂದು ಗುರುತಿಸಲಾಗಿದೆ. ಅಮಿತ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಮ್ರಾನ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮುರ್ಬಾದ್ ಕ್ಷೇತ್ರದ ಶಾಸಕ ಕ್ಯಾಥೋರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಸಕರ ಕಾರು ಚಾಲಕನಿಗೆ ಗಾಯಗಳಾಗಿವೆ.

Read More »

ಬಿಜೆಪಿ ಶಾಸಕರ ಕಾರು ಅಪಘಾತ; ಇಬ್ಬರು ಸಾವು

  ಮುಂಬೈ: ಬಿಜೆಪಿ ಶಾಸಕ ಕಿಶನ್ ಕ್ಯಾಥೋರ್ ಅವರ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮುಂಬೈನ ಟಿಟ್ವಾಲಾದಲ್ಲಿ ನಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ಬೈಕ್ ಸವಾರರಾದ ಅಮಿತ್ ಸಿಂಗ್ (22), ಇಮ್ರಾನ್ ಸಿಂಗ್ (18) ಎಂದು ಗುರುತಿಸಲಾಗಿದೆ. ಅಮಿತ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಮ್ರಾನ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮುರ್ಬಾದ್ ಕ್ಷೇತ್ರದ ಶಾಸಕ ಕ್ಯಾಥೋರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಸಕರ ಕಾರು ಚಾಲಕನಿಗೆ …

Read More »

ಗೋಕಾಕ ಮತಕ್ಷೇತ್ರದ ಕಾನೂನು ಮತ್ತು ಮಾನವ ಹಕ್ಕುಗಳ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು

ಸನ್ಮಾನ್ಯ ಶ್ರೀ.ಸತೀಶ ಎಲ್ ಜಾರಕಿಹೊಳಿ, ಶಾಸಕರು ಯಮಕನಮರಡಿ ಹಾಗೂ ಕರ್ನಾಟಕ ರಾಜ್ಯ ಕಾಂಗ್ರೇಸ ಪಕ್ಷದ ಕಾರ್ಯಾಧ್ಯಕ್ಷರ ನಿರ್ದೇಶನ ಮತ್ತು ಆದೇಶದ ಮೇರೆಗೆ ಶ್ರೀ.ಬಿ. ಕೆ. ಕಂಟಕಾರ ವಕೀಲರು, ಇವರನ್ನು ಗೋಕಾಕ ಮತಕ್ಷೇತ್ರದ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲು ಹರ್ಷಿತನಾಗಿದ್ದೇನೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ಶಿಸ್ತಿಗೆ ಒಳಪಟ್ಟು ಕಾರ್ಯನಿರ್ವಹಿಸುವುದು, ತಾವು ಈ ಕೂಡಲೇ ತಮ್ಮ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷ …

Read More »

ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಅವರನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಭೇಟಿಯಾದ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಬೆಂಗಳೂರು, ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಅವರನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಭೇಟಿಯಾದ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಹೌದು… ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ ಇಬ್ರಾಹಿಂ ನಿವಾಸಕ್ಕೆ ಭೇಟಿ ನೀಡಿ ಜೆಡಿಎಸ್‌ಗೆ ಆಹ್ವಾನ ಕೊಟ್ಟುಬಂದಿದ್ದಾರೆ. ಇದರ ಎಚ್ಚೆತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ …

Read More »

ಸರಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಬದಿಗೊತ್ತಿ ಸರಕಾರದ “ಸಂಧಾನ’ಕ್ಕೆ ಸಹಮತ ವ್ಯಕ್ತಪಡಿಸಿದ್ದ ಸಾರಿಗೆ ನೌಕರರ ಸಂಘದ ಮುಖಂಡರು, ಕೊನೆಯ ಕ್ಷಣದಲ್ಲಿ “ಯೂ-ಟರ್ನ್’ ಹೊಡೆದಿದ್ದಾರೆ.

ಬೆಂಗಳೂರು: ಸರಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಬದಿಗೊತ್ತಿ ಸರಕಾರದ “ಸಂಧಾನ’ಕ್ಕೆ ಸಹಮತ ವ್ಯಕ್ತಪಡಿಸಿದ್ದ ಸಾರಿಗೆ ನೌಕರರ ಸಂಘದ ಮುಖಂಡರು, ಕೊನೆಯ ಕ್ಷಣದಲ್ಲಿ “ಯೂ-ಟರ್ನ್’ ಹೊಡೆದಿದ್ದಾರೆ. ಇದರೊಂದಿಗೆ ಸರಕಾರ-ಸಾರಿಗೆ ನೌಕರರ ನಡುವಿನ ಸಂಘರ್ಷ ಸೋಮವಾರ ಕೂಡ ಮುಂದುವರಿಯುವ ಲಕ್ಷಣಗಳಿವೆೆ. ಸರಕಾರವು ಮುಷ್ಕರನಿರತ ನೌಕರರ ಮುಖಂಡರನ್ನು ರವಿವಾರ ಮಾತುಕತೆಗೆ ಆಹ್ವಾನಿಸಿತ್ತು. ಮಾತುಕತೆ ಬಹುತೇಕ “ಫ‌ಲಪ್ರದ’ವಾಗಿದೆ ಎಂದು ಸರಕಾರ ಮತ್ತು ರಾಜ್ಯ ಸಾರಿಗೆ ನೌಕರರ ಕೂಟ ಇಬ್ಬರೂ ಪ್ರಕಟಿಸಿದ್ದರು. ಸಭೆಯ ಅನಂತರ ಸ್ವಾತಂತ್ರ್ಯ ಉದ್ಯಾನಕ್ಕೆ …

Read More »