ಕಳೆದ ಎರಡು ದಿನಗಳಿಂದ ಮಕ್ಕಳಲ್ಲಿ ಒಮಿಕ್ರಾನ್ ಹೆಚ್ಚಾಗಿದ್ದು, ಶೇ. 100 ಮಕ್ಕಳಲ್ಲಿ 20 ರಿಂದ 30 ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ದರ ಹೆಚ್ಚಾಗಿದೆ. ಡಿ.ಎಚ್.ಓ ಮುನ್ಯಾಳ ಮಾತನಾಡಿ ಜನೇವರಿ 1 ರಿಂದ 3 ನೇ ಅಲೆಯ ಪ್ರಭಾವ ವಾಗಿ ಮಕ್ಕಳಲ್ಲಿ ಅಷ್ಟೊಂದು ಪಾಸಿಟಿವಿಟಿ ಇರಿಲಿಲ್ಲ ಕಳೆದ ಎರಡು ದಿನಗಳಿಂದ ನಿರತಂರವಾಗಿ ಓಮಿಕ್ರಾನ್ ಪ್ರಭಾವ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ 100 ಮಕ್ಕಳು ಕೋವಿಡ್ ಪರೀಕ್ಷೆಗೆ ಒಳಪಟ್ಟರೆ 20 ರಿಂದ 30 ಮಕ್ಕಳಲ್ಲಿ …
Read More »ಬಿಎಂಟಿಸಿಗೆ ಹೊರೆಯಾದ ಎಲೆಕ್ಟ್ರಿಕ್ ಬಸ್‌ಗಳು
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಅದೃಷ್ಟವೇ ಸರಿ ಇದ್ದಂತಿಲ್ಲ. ಗರಿಷ್ಠ ಪ್ರಮಾಣದ ಪ್ರಯಾಣ ದರ ತಗ್ಗಿಸಿ ವೋಲ್ವೋ ಬಸ್‌ಗಳನ್ನು ರಸ್ತೆಗಿಳಿಸಲಾಯಿತು. ಆದರೂ ಅವುಲಾಭದ ಹಳಿಗೆ ಬರುತ್ತಿಲ್ಲ. ಡೀಸೆಲ್ ದುಬಾರಿ ಆಗು ತ್ತಿರುವುದರಿಂದಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಿದೆ. ಅವುಗಳೂ ಈಗ ಗಾಯದ ಮೇಲೆ ಬರೆ ಎಳೆಯುತ್ತಿವೆ! ಪ್ರತಿ ಎಲೆಕ್ಟ್ರಿಕ್ ಬಸ್‌ಗಳು ನಿತ್ಯ ತರುತ್ತಿರುವ ತಲಾ ಆದಾಯ ಸರಾಸರಿ 4,500ರಿಂದ 5,000 ರೂ. ಆದರೆ, ಇದಕ್ಕೆ ಪ್ರತಿಯಾಗಿ ಈಬಸ್‌ಗಳನ್ನು ಪೂರೈಸಿದ ಕಂಪನಿಗಳಿಗೆ ಬಿಎಂಟಿಸಿ …
Read More »ಇತಿಹಾಸದಲ್ಲಿ ಎಂದೂ ರದ್ದಾಗದ ರಥೋತ್ಸವ, ಇಂದು ನಡೆಯುತ್ತಾ?! ಕೆರಳಿದೆ ಭಾರಿ ಕುತೂಹಲ..
ಬಾಗಲಕೋಟೆ: ಈ ದೇವಸ್ಥಾನದಲ್ಲಿನ ರಥೋತ್ಸವ ಇತಿಹಾಸದಲ್ಲಿ ಎಂದೂ ರದ್ದಾದ ಉದಾಹರಣೆಯೇ ಇಲ್ಲ. ಆದರೆ ಇಂದು ರಥೋತ್ಸವ ನಡೆಯುತ್ತದೆಯೇ ಇಲ್ಲವೇ ಎಂಬುದು ಭಾರಿ ಕುತೂಹಲ ಕೆರಳಿಸಿದೆ. ಏಕೆಂದರೆ ಭಕ್ತರು ರಥೋತ್ಸವ ನೆರವೇರಿಸಲು ಕಂಕಣ ತೊಟ್ಟಿದ್ದರೆ, ಅತ್ತ ಪೊಲೀಸರು ಉತ್ಸವ ತಡೆಯಲು ರಣೋತ್ಸಾಹದಿಂದ ಕಾಯುತ್ತಿದ್ದಾರೆ. ಹೌದು.. ಇಂಥದ್ದೊಂದು ಸನ್ನಿವೇಶ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿಯಲ್ಲಿ ಸೃಷ್ಟಿಯಾಗಿದೆ. ಇಲ್ಲಿನ ಐತಿಹಾಸಿಕ ಬನಶಂಕರಿ ದೇವಸ್ಥಾನದ ರಥೋತ್ಸವ ನಡೆಯಬೇಕಿದೆ. ಆದರೆ ರಥೋತ್ಸವ ಜಾಗದ ಎಲ್ಲ ರಸ್ತೆಗಳಲ್ಲೂ …
Read More »ಯಾರೋ ಒಬ್ಬರ ಲಾಭಕ್ಕಾಗಿ ನಿಯಮ ಬದಲಾಯಿಸೋದಕ್ಕೆ ಆಗೋದಿಲ್ಲ: ಆರ್ ಅಶೋಕ್
ಬೆಂಗಳೂರು: ರಾಜ್ಯದಲ್ಲಿ ಜನರ ಹಿತದೃಷ್ಠಿಯಿಂದ, ಆರೋಗ್ಯದ ಹಿತದೃಷ್ಠಿಯಿಂದ ವೀಕೆಂಡ್ ( Weekend Curfew ), ನೈಟ್ ಕರ್ಪ್ಯೂ ( Night Curfew ) ಜಾರಿಗೊಳಿಸಲಾಗಿದೆ. ನಮಗೆ ಜನರ ಹಿತವನ್ನು ಕಾಪಾಡುವುದು ಮುಖ್ಯ. ಅದರ ಹೊರತಾಗಿ ಯಾರೋ ಒಬ್ಬರ ಲಾಭಕ್ಕಾಗಿ ನಿಯಮ ಬದಲಾಯಿಸೋದಕ್ಕೆ ಆಗೋದಿಲ್ಲ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ( Minister R Ashok ) ತಿಳಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿಎಂ ಬಸವರಾಜ ಬೊಮ್ಮಾಯಿ …
Read More »ಅರಣ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗೃಹಗಳ ಶಂಕುಸ್ಥಾಪನೆ ನೆರೆವೇರಿಸಿದ ಸಚಿವ ಉಮೇಶ್ ಕತ್ತಿ
ಘಟಪ್ರಭಾ ಅರಣ್ಯ ವಿಭಾಗದ ಸಿಬ್ಬಂದಿ ವಸತಿ ಗೃಹಗಳ ಶಂಕುಸ್ಥಾಪನೆಯನ್ನು ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿಯವರು ಸೋಮವಾರದಂದು ನಗರದಲ್ಲಿ ನೆರೆವೇರಿಸಿದರು . ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಕುಮಾರ ಸಾಲಿಮಠ ,ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಎಸ್.ಮರಿಯಪ್ಪ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಈರನಟ್ಟಿ, ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ ಹಾಗೂ ಸಿಬ್ಬಂದಿ ಇದ್ದರು.
Read More »ಬಿಜೆಪಿ ಕಾರ್ಯಕರ್ತರೊಂದಿಗೆ ಜ.18ರಂದು ನಮೋ ಆ್ಯಪ್ ಮೂಲಕ ಆನ್ಲೈನ್ ಸಂವಾದ ನಡೆಸಲಿದ್ದಾರೆ ನರೇಂದ್ರ ಮೋದಿ
ವಾರಣಾಸಿ: ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ತಮ್ಮ ಕ್ಷೇತ್ರ ವಾರಣಾಸಿಯಲ್ಲಿ ಭಾರತೀಯ ಜನತಾ ಪಕ್ಷದ (BJP) ಕಾರ್ಯಕರ್ತರೊಂದಿಗೆ ಮೊದಲ ಬಾರಿಗೆ ಸಂವಾದ ನಡೆಸಲಿದ್ದಾರೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ನಮೋ ಆ್ಯಪ್ ಮೂಲಕ ಕಾಶಿಯಿಂದ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಧಾನಿ ಸಂವಾದ ನಡೆಯಲಿದೆ ಎಂದು ಬಿಜೆಪಿ ಕಾಶಿ ಪ್ರದೇಶ ಘಟಕದ ಅಧ್ಯಕ್ಷ ಮಹೇಶ್ ಚಂದ್ ಶ್ರೀವಾಸ್ತವ ತಿಳಿಸಿದ್ದಾರೆ. ಆ್ಯಪ್‌ನ ಕಾಮೆಂಟ್‌ಗಳ ವಿಭಾಗದಲ್ಲಿ …
Read More »ಚುಚ್ಚು ಮದ್ದು ಪಡೆದ ಮೂರು ಕಂದಮ್ಮಗಳ ಸಾವು ಪ್ರಕರಣದ ಕುರಿತು ಸಂಪೂರ್ಣವಾಗಿ ತನಿಖೆ ಆಗಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಗೋಕಾಕ : ಚುಚ್ಚು ಮದ್ದು ಪಡೆದ ಮೂರು ಕಂದಮ್ಮಗಳ ಸಾವು ಪ್ರಕರಣದ ಕುರಿತು ಸಂಪೂರ್ಣವಾಗಿ ತನಿಖೆ ಆಗಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯ ಮಾಡಿದ್ದಾರೆ. ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಮುಚ್ಚು ಮದ್ದು ಪಡೆದ ಮಕ್ಕಳ ಸಾವಿಗೆ ಕೆಳವರ್ಗದ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. …
Read More »ಕೋವಿಡ್ ಟೆಸ್ಟ್ ವರದಿ ಪಡೆಯಲು ಹೋಗಿದ್ದ ನರ್ಸ್ ಮೇಲೆ ಅತ್ಯಾಚಾರ..!
ತಿರುವನಂತಪುರಂ : ಕೋವಿಡ್ ಸೋಂಕಿತೆ ಮೇಲೆ ಆಯಂಬುಲೆನ್ಸ್ ಚಾಲಕನೋರ್ವ ಅತ್ಯಾಚಾರ ಎಸಗಿದ ಘಟನೆ ಬೆನ್ನಲ್ಲೇ, ಕೇರಳದಲ್ಲಿ ಮತ್ತೊಂದು ರೇಪ್ ಪ್ರಕರಣ ವರದಿಯಾಗಿದೆ. ಸಂತ್ರಸ್ತೆ ಮಲಪ್ಪುರಂನಲ್ಲಿ ಹೋಮ್‌ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ರಜೆ ಮೇಲೆ ಮನೆಗೆ ಮರಳಿದ್ದರು. ಈ ವೇಳೆ ಅವರಿಗೆ ಕೊರೋನಾ ಟೆಸ್ಟ್ ಮಾಡಿಸಿ, ಹೋಂ ಕ್ವಾರಂಟೈನ್‌ಗೆ ಒಳಗಾಗುವಂತೆ ಆರೋಗ್ಯ ಅಧಿಕಾರಿ ಸೂಚಿಸಿದ್ದರು. ಈ ಪ್ರಕಾರ ಆಯಂಟಿಜೆನ್ ಟೆಸ್ಟ್‌ಗೆ ಒಳಗಾಗಿದ್ದರು. ವರದಿಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿತ್ತು. ವರದಿಯ ದಾಖಲೆಯನ್ನು ತೆಗೆದುಕೊಂಡು ಹೋಗಲು ಬಾರಂತೂರಿನ …
Read More »ಲೈಸೆನ್ಸ್ ಇಲ್ಲದೆ ಚಾರ್ಜಿಂಗ್ ಕೇಂದ್ರ ತೆರೆಯಬಹುದು
ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲು ಸರ್ಕಾರ ಮತ್ತೊಂದು ಕ್ರಮಕೈಗೊಂಡಿದ್ದು, ಯಾರು ಬೇಕಾದರೂ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಬಹುದು. ಇದಕ್ಕೆ ಲೈಸೆನ್ಸ್ ಅಗತ್ಯವಿಲ್ಲ. ಖಾಸಗಿ ಸಂಸ್ಥೆ, ವ್ಯಕ್ತಿಗಳು ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ತೆರೆಯಲು ಯಾವುದೇ ಲೈಸೆನ್ಸ್ ಪಡೆಯಬೇಕಿಲ್ಲ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಗೃಹಬಳಕೆಯ ವಿದ್ಯುತ್ ದರದಲ್ಲಿಯೇ ಹಾಲಿ ಇರುವ ಸಂಪರ್ಕ ಬಳಸಿಕೊಂಡು ಕಚೇರಿ ಅಥವಾ ಮನೆಗಳಲ್ಲಿ ತಮ್ಮ ವಾಹನ ಚಾರ್ಜ್ ಮಾಡಿಕೊಳ್ಳಲು ವಾಹನ …
Read More »ಬಿಜೆಪಿ ಶಾಸಕ ಅನಿಲ್ ಬೆನಕೆ ಮತ್ತೆ ಕೋವಿಡ್ ರೂಲ್ಸ್ ಬ್ರೇಕ್
ಬೆಳಗಾವಿ: ಇಲ್ಲಿನ ಉತ್ತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಮತ್ತೆ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ವೀಕೆಂಡ್ ಕರ್ಫ್ಯೂ ದಿನವೇ ಧರ್ಮವೀರ ಸಂಭಾಜಿ ಪಾಟೀಲ್ ಪ್ರತಿಮೆಗೆ ಅಭಿಷೇಕ ಮಾಡಿದ್ದಾರೆ. ಧರ್ಮವೀರ ಸಂಭಾಜಿ ವೃತ್ತದಲ್ಲಿರುವ ಸಂಭಾಜಿ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು. ಮಾಸ್ಕ್ ಹಾಕದೆ ಒಂದೇ ಕಡೆ 20ಕ್ಕೂ ಹೆಚ್ಚು ಜನರು ಜಮಾವಣೆಗೊಂಡಿದ್ದರು. ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಹೀಗಿದ್ದರೂ ಆಡಳಿತ ಪಕ್ಷದ ಶಾಸಕನೇ ಕೋವಿಡ್ ನಿಯಮ ಉಲ್ಲಂಘಿಸಿರುವುದಕ್ಕೆ …
Read More »
Laxmi News 24×7