Breaking News

ಜಿಲ್ಲೆ

ಅರಮನೆ ನಗರಿ ಮದುವಣಗಿತ್ತಿಯಂತೆ ವಿದ್ಯುತ್‌ ದೀಪಾಲಂಕಾರದಿಂದ ಮೀರ ಮೀರ ಮಿಂಚುತ್ತಿದೆ.

ಮೈಸೂರು: ಅರಮನೆ ನಗರಿ ಮದುವಣಗಿತ್ತಿಯಂತೆ ವಿದ್ಯುತ್‌ ದೀಪಾಲಂಕಾರದಿಂದ ಮೀರ ಮೀರ ಮಿಂಚುತ್ತಿದೆ. ಎಲ್ಲೆ ಹೋದ್ರೂ ಕಲರ್‌ ಫುಲ್ ಲೈಟಿಂಗ್ಸ್‌ಗಳು ಎಲ್ಲರನ್ನೂ ಸೆಳೆಯುತ್ತಿದೆ. ಆದ್ರೆ ಇದೇ ಕೊರೊನಾ ಹೆಚ್ಚಾಗಲು ಕಾರಣವಾಗುತ್ತಾ ಅನ್ನೋ ಭಯ ಕಾಡುಲು ಶುರು ಮಾಡಿದೆ. ಎಲ್ಲೇ ನೋಡಿದ್ರೂ ಕಾಣುವ ಝಗಮಗಿಸೋ ದೀಪಾಲಂಕಾರ. ಬೀದಿ ಬೀದಿಗಲ್ಲಿ ಫಳ ಫಳ ಹೊಳೆಯೋ ಕಲರ್‌ ಫುಲ್‌ ವಿದ್ಯುತ್‌ ದೀಪ.. ಮರದ ಮೇಲೆ, ಕಟ್ಟಡದ ಮೇಲೆ, ರಸ್ತೆಯ ಉದ್ದಕ್ಕೂ ಕಣ್ಣು ಕುಕ್ಕುವ ಲೈಟಿಂಗ್ಸ್‌. ಮಿಂಚುವ …

Read More »

ನಿಲ್ಲದ ಉತ್ತರದ ಮಹಾ ಪ್ರವಾಹ- ಹೆಚ್ಚುತ್ತಲೇ ಇದೆ ಭೀಮಾ, ಕೃಷ್ಣಾ ಒಳಹರಿವು

ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಸ್ವಲ್ಪ ತಗ್ಗಿದರೂ ನೆರೆ ಮಾತ್ರ ತಗ್ಗಿಲ್ಲ. ಇನ್ನೂ ಹಲವು ಜನ ಮನೆಗೆ ತೆರಳಲಾಗದೆ ಕಾಳಜಿ ಕೇಂದ್ರಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಇತ್ತ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಇದ್ದು, ಇನ್ನಷ್ಟು ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗುತ್ತಿದೆ. ಹಲವು ರಸ್ತೆಗಳ ಸಂಪರ್ಕ ಕಡಿತವಾಗಿದೆ. ಭೀಮಾ ನದಿಯ ಮಹಾ ಪ್ರವಾಹಕ್ಕೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿ ಅಪಾಯ ಮಟ್ಟ …

Read More »

ಅಕ್ಟೋಬರ್ 31 ರಂದು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸರಳ ಮತ್ತು ಅರ್ಥಪೂರ್ಣವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ  ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 31 ರಂದು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸರಳ ಮತ್ತು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಅವರು ತಿಳಿಸಿದರು. ಮಹರ್ಷಿ ವಾಲ್ಮೀಕಿ ಅವರ ಜಯಂತಿಯ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಷಿ ವಾಲ್ಮೀಕಿ  ಜಯಂತಿಯ ದಿನದಂದು ಕಿಲ್ಲಾಕೋಟೆ ಬಳಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, …

Read More »

ಮಣಗುತ್ತಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ  ವಾಲ್ಮೀಕಿ ಮಹರ್ಷಿ ಮೂರ್ತಿ ಆದಷ್ಟು ಬೇಗ ಎರಡು ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುವುದು

ಬೆಳಗಾವಿ: ಮಣಗುತ್ತಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ  ವಾಲ್ಮೀಕಿ ಮಹರ್ಷಿ ಮೂರ್ತಿ ಪ್ರತಿಷ್ಠಾಪನೆಗೆ ಶಾಸಕ ಸತೀಶ್ ಜಾರಕಿಹೊಳಿ ಶನಿವಾರ  ಅಡಿಗಲ್ಲು ಕಾರ್ಯಕ್ರಮವನ್ನು ನೆರವೇಸಿದರು. ಶಿವಾಜಿ ಪ್ರತಿಮೆ ಸ್ಥಾಪನೆ ವಿವಾದಕ್ಕೆ ಇಡಾಗಿದ್ದ ಮಣಗುತ್ತಿ ಗ್ರಾಮದಲ್ಲಿ,  ಮೂರು ಗ್ರಾಮಗಳ ಗ್ರಾಮಸ್ಥರ ಮುಖಂಡರೊಂದಿಗೆ ಚರ್ಚಿಸಿ, ಒಮ್ಮತ ಅಭಿಪ್ರಾಯದಿಂದ ಮೂರ್ತಿ ಪ್ರತಿಷ್ಠಾಪನೆ ಅಡಿಗಲ್ಲು ಸಮಾರಂಭವನ್ನು ನಡೆಯಿತು. ಇದೇ ವೇಳೆ  ಮಾತನಾಡಿದ ಅವರು, ಗ್ರಾಮದ ಹಿತದೃಷ್ಟಿಯಿಂದ  ಧರ್ಮದಲ್ಲಿ ರಾಜಕೀಯ ಮಾಡುವುದು ಬೇಡ. ಎಲ್ಲರೂ ಗ್ರಾಮದ ಅಭಿವೃದ್ಧಿಗೆ …

Read More »

ಧಾರವಾಡದ ಲಕ್ಷ್ಮಿ ನಾರಾಯಣ ದೇವಸ್ಥಾನದ ಜಾತ್ರೆಗೆ ಈ ವರ್ಷ ನಿರ್ಬಂಧ ಹೇರಲಾಗಿದೆ.

ಧಾರವಾಡ: ಕೊರೊನಾ ಹಿನ್ನೆಲೆ ನಗರದ ಲಕ್ಷ್ಮಿ ನಾರಾಯಣ ದೇವಸ್ಥಾನದ ಜಾತ್ರೆಗೆ ಈ ವರ್ಷ ನಿರ್ಬಂಧ ಹೇರಲಾಗಿದೆ. ಈ ಮೂಲಕ 117 ವರ್ಷಗಳ ಜಾತ್ರೆಗೆ ಈ ವರ್ಷ ಬ್ರೇಕ್ ಬಿದ್ದಂತಾಗಿದೆ. ಕಳೆದ 117 ವರ್ಷಗಳಿಂದ ಧಾರವಾಡ ನಗರದ ರವಿವಾರ ಪೇಟೆಯಲ್ಲಿರುವ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಪಾರಂಪರಿಕವಾಗಿ ಜಾತ್ರೆಯನ್ನು ಆಚರಿಸುತ್ತ ಬಂದಿದ್ದರು. ಅತ್ಯಂತ ವಿಜ್ರಂಭಣೆಯಿಂದ ಮಾಡಲಾಗುವ ದಸರಾ ಹಬ್ಬದ ವೇಳೆಯೇ ಲಕ್ಷ್ಮಿ ನಾರಾಯಣ ಜಾತ್ರೆಯನ್ನು ಮಾಡುವ ಈ ಸಂಪ್ರದಾಯಕ್ಕೆ ಕೊರೊನಾದಿಂದಾ ತಡೆಯಾಗಿದೆ. ಪ್ರತಿ …

Read More »

ಮಂಗಳೂರು ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿದ ಕೊರೊನಾ ವಾರಿಯರ್

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಕೊರೊನಾ ವಾರಿಯರ್ ಎನ್.ಆರ್.ಐ ಫೋರಂನ ಮಾಜಿ ಉಪಾಧ್ಯಕ್ಷೆ, ಚಿಕ್ಕಮಗಳೂರು ಮೂಲದ ಡಾ.ಆರತಿ ಕೃಷ್ಣ ಈ ಬಾರಿಯ ಮಂಗಳೂರು ದಸರಾಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರದಲ್ಲಿ ಗಣಪತಿ, ಶಾರದಾ ಮಾತೆ, ನವದುರ್ಗೆಯರು ಹಾಗೂ ಆದಿಶಕ್ತಿಯ ಮಣ್ಣಿನ ಮೂರ್ತಿಗಳನ್ನು ಏಕಕಾಲದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿಯವರ ಆಶಯದಂತೆ ಕೊರೊನಾ ಹಿನ್ನೆಲೆಯಲ್ಲಿ ಈ …

Read More »

ನನಗೆ 70 ವರ್ಷ ವಯಸ್ಸಾಗಿದೆ. ಅಸಹಾಯಕನಾಗಿದ್ದೇನೆ: ಗೋವಿಂದ ಕಾರಜೋಳ ಕಣ್ಣಿರು

ಬೆಂಗಳೂರು: ನಾನು ನನ್ನ ಇಡೀ ಕುಟುಂಬ ಕೊರೊನಾ ಸೋಂಕಿನಿಂದ ಬಳಲಿದ್ದೇವೆ. ನನಗೆ 70 ವರ್ಷ ವಯಸ್ಸಾಗಿದೆ. ವಯಸ್ಸಾದ ಕಾರಣ 600-700 ಕಿ.ಮೀ ಹೋಗಲು ಅಸಹಾಯಕನಾಗಿದ್ದೇನೆ ಎಂದು  ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಣ್ಣಿರು ಹಾಕಿದ್ದಾರೆ. ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಾರಜೋಳ, ಪ್ರವಾಹ ಪೀಡಿತ ಜಿಲ್ಲೆಗೆ ಭೇಟಿ ನೀಡದೇ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾರೆ ಎಂದು ಒಂದು ಘಟನೆಯನ್ನಿಟ್ಟುಕೊಂಡು ವ್ಯಕ್ತಿಯನ್ನು ಅಳೆಯಬೇಡಿ. ನನಗೆ …

Read More »

ಮೋದಿಕನ್ನಡದಲ್ಲಿ ಟ್ವೀಟ್ ಮಾಡಿದ ತಕ್ಷಣ ಕರ್ನಾಟಕದ ಪರ ಇದ್ದಾರೆ ಎಂದಲ್ಲ,ಇಂತಹ ದಪ್ಪ ಚರ್ಮದ ಸರ್ಕಾರವನ್ನು ನಾನು ಎಂದೂ ನೋಡಿಲ್ಲ: ಸಿದ್ದರಾಮಯ್

ಬೆಂಗಳೂರು:  ಪ್ರವಾಹ ಹೊಡತಕ್ಕೆ ಹಲವು ಜಿಲ್ಲೆಗಳಲ್ಲಿ ರಸ್ತೆ, ಕರೆಂಟ್ ಕಂಬ, ಮನೆಗಳು  ಕೊಚ್ಚಿಹೋಗಿವೆ. ಲಕ್ಷಾಂತರ ಎಕರೆ ಬೆಳೆ ನಾಶವಾಗಿದೆ. ಆದ್ರೆ ಕಂದಾಯ ಸಚಿವರು ಕಾಟಾಚಾರಕ್ಕೆ ಪ್ರವಾಹ ಪೀಡಿತ ಪ್ರದೇಶ ಭೇಟಿ ನೀಡಿದ್ದಾರೆ. ಸಿಎಂ ಯಡಿಯೂರಪ್ಪ  ಒಂದು ಜಿಲ್ಲೆಗೂ ಭೇಟಿ ನೀಡಿಲ್ಲ. ಇಂತಹ ದಪ್ಪ ಚರ್ಮದ ಸರ್ಕಾರವನ್ನು ನಾನು ಎಂದೂ ನೋಡಿಲ್ಲ ಅಂತಾ ವಿರೋಧ ಪಕ್ಷ ನಾಯಕ  ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ …

Read More »

ಕರಾಳ ದಿನ ಆಚರಣೆಗೆ ಅನುಮತಿ ನೀಡಬಾರದು: ರಕ್ಷಣಾ ವೇದಿಕೆಯ ಪ್ರತಿಭಟನೆ

ಗೋಕಾಕ : ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ಆಚರಿಸುವ ಕರಾಳ ದಿನ ಆಚರಣೆಗೆ ಅನುಮತಿ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿ, ಸರ್ಕಾರ, ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ಗಡಿ ಜಿಲ್ಲೆ ಬೆಳಗಾವಿಯಲ್ಲಿಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಜಿಲ್ಲಾಡಳಿ ಸರಳ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಿದೆ. ಇದು ಕನ್ನಡಿಗರ ಸಂತೋಷದ ವಿಷಯವಾಗಿದೆ.  ಜಿಲ್ಲೆಯಲ್ಲಿ ಎಂಇಎಸ್ …

Read More »

ಅಥಣಿ ತಾಲ್ಲೂಕಿನ ಸತ್ತಿ ಹೊರವಲಯದಲ್ಲಿ ಅಬಕಾರಿ ದಾಳಿ 1.31 ಕೆ ಜಿ ಗಾಂಜಾ ವಶ ಒಬ್ಬನ ಬಂಧನ

    ಅಥಣಿ ತಾಲೂಕಿನ ಸತ್ತಿ ಗ್ರಾಮದ ದೇವಪ್ಪ ಈರಪ್ಪ ರುದ್ರಗೌಡರ ಇವರ ಸ್ವಂತ   ಜಮೀನಿನಲ್ಲಿ ದಿನಾಂಕ : 17-10-2020 ರಂದು ಸ್ವಂತ ಲಾಭಕ್ಕಾಗಿ ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದ ಬಗ್ಗೆ ಬಂದ ಖಚಿತ ಮಾಹಿತಿ  ಮೇರೆಗೆ ಡಾ : ವೈ ಮಂಜುನಾಥ ಅಬಕಾರಿ ಜಂಟಿ ಆಯುಕ್ತರು , ಬೆಳಗಾವಿ ವಿಭಾಗ ರವರ ಮಾರ್ಗದರ್ಶನದಲ್ಲಿ ಕೆ ಅರುಣಕುಮಾರ ಅಬಕಾರಿ ಉಪ ಆಯುಕ್ತರು ಬೆಳಗಾವಿ ಉತ್ತರ ಜಿಲ್ಲೆ …

Read More »