Breaking News

ಜಿಲ್ಲೆ

ನಟ ಅಪ್ಪು ನಿಧನ ಹಿನ್ನಲೆ ವಿಜಯಪುರ ಸಿನಿಮಾ ಮಂದಿರಗಳಲ್ಲಿ ಶೃದ್ದಾಂಜಲಿ ಕಾರ್ಯಕ್ರಮ ನಡೆಯಿತು.

ವಿಜಯಪುರ: ನಗರದ ಲಕ್ಷ್ಮೀ ಚಿತ್ರಮಂದಿರದಲ್ಲಿ ಶೃದ್ದಾಂಜಲಿ ಸಲ್ಲಿಸಲಾಯಿತು. ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ, ಮಾಡಿ ನಮನ ಸಲ್ಲಿಸಿದ ಅಭಿಮಾನಿಗಳು, ಸಿನಿಮಾ ಮಂದಿರ ಮಾಲಿಕರು, ಸಿಬ್ಬಂದಿ ವರ್ಗದವರು ಶ್ರದ್ಧಾಂಜಲಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಚಿತ್ರಪ್ರದರ್ಶಕ ಸಂಘದಿಂದ ಹಮ್ಮಿಕೊಳ್ಳಲಾಗಿರುವ ಶೃದ್ಧಾಂಜಲಿ ಕಾರ್ಯಕ್ರಮವು ನಗರದ ಲಕ್ಷ್ಮೀ ಚಿತ್ರಮಂದಿರದಲ್ಲಿ ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ, ಭಾಷ್ಪಾಂಜಲಿ ನಮನ ಸಲ್ಲಿಸಿ ಕ್ಯಾಂಡಲ್ ಬೆಳಗಿ ಅಪ್ಪುವಿಗೆ ಅಭಿಮಾನಿಗಳು ಹಾಗೂ ಸಿಬ್ಬಂದಿ ಶ್ರದ್ಧಾಂಜಲಿ ಸಲ್ಲಿಸಿದರು. ಲಕ್ಷ್ಮೀ ಚಿತ್ರಮಂದಿರದಲ್ಲಿ ಭಜರಂಗಿ 2 ಚಿತ್ರ ವೀಕ್ಷಿಸಲು …

Read More »

ಗೋವು ಮಾತೆಗೆ ಪೂಜೆ ಸಲ್ಲಿಸಿದ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.

  ಗೋಕಾಕ್- ದೀಪಾವಳಿ ಬಲಿ ಪಾಡ್ಯಮಿ ದಿನವಾದ ಇಂದು ಶುಕ್ರವಾರದಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿಯಲ್ಲಿ ಗೋ ಮಾತೆಗೆ ಪೂಜೆ ಸಲ್ಲಿಸಿದರು. ಅರಭಾವಿಯ ಬಲಭೀಮ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಗೋವುಗಳಿಗೆ ಹಾರ ಹಾಕಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಗೋವು ಹಿಂದೂ ಸನಾತನ ಧರ್ಮದಲ್ಲಿ ಕಾಮಧೇನು ದೈವಿ ಸ್ವರೂಪಿಯಾಗಿದೆ. ಅಲ್ಲದೇ ಗೋವು ತನ್ನದೇಯಾದ ವಿಶೇಷ ಇತಿಹಾಸವನ್ನು ಹೊಂದಿದೆ. …

Read More »

ಸೇವೆಯಿಂದ ವಜಾಗೊಂಡಿದ್ದ ಕೆ‌ಎಸ್‌ಆರ್‌ಪಿ ಕಾನ್ಸ್‌ಟೇಬಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗೋಕಾಕ ತಾಲೂಕಿನ ಸಂಗನಕೇರಿ ಕ್ರಾಸ್ ಬಳಿ ನಡೆದಿದೆ.

ಬೆಳಗಾವಿ: ಸೇವೆಯಿಂದ ವಜಾಗೊಂಡಿದ್ದ ಕೆ‌ಎಸ್‌ಆರ್‌ಪಿ ಕಾನ್ಸ್‌ಟೇಬಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗೋಕಾಕ ತಾಲೂಕಿನ ಸಂಗನಕೇರಿ ಕ್ರಾಸ್ ಬಳಿ ನಡೆದಿದೆ. ಗೋಕಾಕ್ ತಾಲೂಕಿನ ನಲ್ಲಾನಟ್ಟಿ ಗ್ರಾಮದ ನಿವಾಸಿ ರಮೇಶ್ ಬಿಲಕುಂದಿ (26) ಮೃತಪಟ್ಟವರು. ಆದರೆ ಮಗ ಅಪಘಾತದಲ್ಲಿ ಮೃತಪಟ್ಟಿಲ್ಲ, ಸೊಸೆಯೇ ಕೊಲೆ ಮಾಡಿಸಿದ್ದಾಳೆ ಎಂದು ಮೃತನ ತಾಯಿ ಲಕ್ಷ್ಮಿಬಾಯಿ ಆರೋಪಿಸಿದ್ದಾರೆ. ಮಗನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ತಾಯಿ ಕಣ್ಣೀರಿಡುತ್ತಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ …

Read More »

ಡೆತ್ ಸ್ಪಾಟ್’ ಕಳಂಕ ತಪ್ಪಿಸಲು ‘ಕೊಪ್ಪಳ ಡಿಸಿ’ ಮಾಡಿದ್ದೇನು ಗೊತ್ತಾ.?

ಕೊಪ್ಪಳ: ಸದಾ ಕ್ರಿಯಾಶೀಲರಾಗಿ, ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಆಡಳಿತಾಧಿಕಾರಿಯಾಗಿಯೂ ಕೆಲಸ ನಿರ್ವಹಿಸುತ್ತಿರುವಂತ ಕೊಪ್ಪಳ ಜಿಲ್ಲಾಧಿಕಾರಿ ಕಿಶೋರ್ ಸುರಾಳ್ಕರ್, ಇಂದು ಹೊಸ ಸಾಹಸ ಮೆರೆದರು. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಕರ್ಷಿಸೋ ನಿಟ್ಟಿನಲ್ಲಿ, ಸಣಾಪುರ ಜಲಾಶಯದಲ್ಲಿನ ಡೆತ್ ಸ್ಪಾಟ್ ಕಳಂಕ ತಪ್ಪಿಸೋ ಸಲುವಾಗಿ ಮಾಡಿದ ಕಾರ್ಯ ಮಾತ್ರ, ವಿಶೇಷವಾಗಿತ್ತು.   ಸದಾ ಕ್ರೀಯಾಶೀಲವಾಗಿ, ಜಿಲ್ಲಾಧಿಕಾರಿಯಲ್ಲದೇ, ಜಿಲ್ಲೆಯ ಅಭಿವೃದ್ಧಿಗಾಗಿ, ಜನರ ಸಮಸ್ಯೆ ಪರಿಹಾರಕ್ಕಾಗಿ ಕೆಲಸಕೂ ಸೈ ಎನಿಸಿಕೊಂಡವರು ವಿಕಾಸ್ ಕಿಶೋರ್ ಸುರಾಳ್ಕರ್ ( DC Vikash …

Read More »

ಬಿಜೆಪಿ ಆಡಳಿತ ಯಂತ್ರದ ದುರ್ಬಳಕೆಯಿಂದ ಕಾಂಗ್ರೆಸ್ ಸೋಲು: ಶಿವಾನಂದ ಪಾಟೀಲ

ವಿಜಯಪುರ: ದುಡ್ಡು ಹಂಚಿ ಗೆದ್ದಿರುವ ಚುನಾವಣೆ ಇದು. ದುಡ್ಡು ಪ್ರಭಾವ ಬೀರಿದೆ. ಆಡಳಿತ ಯಂತ್ರದ ದುರ್ಬಳಕೆ ಮಾಡಿಕೊಂಡು ಬಿಜೆಪಿ ಗೆಲುವು ಸಾಧಿಸಿದೆ ಎಂದು ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿದ್ದಾರೆ. ಸಿಂದಗಿ ಉಪ ಚುನಾವಣೆ ಫಲಿತಾಂಶದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ಕ್ಷೇತ್ರದಲ್ಲಿ ಅಧಿಕಾರದ ದುರ್ಬಳಕೆ, ಹಣ ಬಲವನ್ನೆಲ್ಲ ಮೀರಿ ಕಾಂಗ್ರೆಸ್ ಪರ ಮತ ಹಾಕಿದ ಕ್ಷೇತ್ರದ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.   ಸಿಂದಗಿ …

Read More »

ನಾಲ್ವರಿಗೆ ಜಗದ ಬೆಳಕು ತೋರಿದ ರಾಜಕುಮಾರ್‌

ಬೆಂಗಳೂರು: ಅಕಾಲಿಕವಾಗಿ ನಿಧನರಾದ ನಟ ಪುನೀತ್ ರಾಜಕುಮಾರ್‌ ಅವರ ಕಣ್ಣು ನಾಲ್ವರಿಗೆ ಜಗದ ಬೆಳಕು ತೋರಿದೆ. ಸಾವಿನ ಬಳಿಕ ಮಣ್ಣಿನಲ್ಲಿ ಮಣ್ಣಾಗಲಿದ್ದ ಕಣ್ಣನ್ನು ಪುನೀತ್ ಕುಟುಂಬ ದಾನ ಮಾಡಿದ್ದರಿಂದಾಗಿ, ನಾಲ್ವರ ಬಾಳಿನಲ್ಲಿ ಇಲ್ಲಿಯವರೆಗಿದ್ದ ಅಂಧಕಾರ ದೂರವಾಗಿ ಹೊರಜಗತ್ತನ್ನು ನೋಡುವ ಸೌಭಾಗ್ಯ ದೊರಕಿದೆ.   ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ ಅವರು, ‘ಪುನೀತ್ ಅವರ ಕಣ್ಣಿನ ಕಾರ್ನಿಯಾದ ಮುಂದಿನ ಮತ್ತು ಹಿಂದಿನ ಪದರಗಳನ್ನು ಬೇರ್ಪ ಡಿಸುವ …

Read More »

ರಾಜ್ಯೋತ್ಸವ: ‍‍ಪ್ರಶಸ್ತಿ ಮೊತ್ತ ₹ 1 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ

ಬೆಂಗಳೂರು : ‘ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆಗೆ ಕನಿಷ್ಠ ವಯೋಮಿತಿ ‌60 ವರ್ಷ ಪೂರೈಸಬೇಕೆಂಬ ನಿಯಮವನ್ನು ಮುಂದಿನ ವರ್ಷದಿಂದ ಸಡಿಲಿಸುವ ಜೊತೆಗೆ, ಪ್ರಶಸ್ತಿ ಮೊತ್ತವನ್ನು ₹ 1 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.   ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ನಡೆದ 66ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇನ್ನು ಮುಂದೆ ಈ ಪ್ರಶಸ್ತಿಗೆ ಯಾರೂ ಅರ್ಜಿ ಸಲ್ಲಿಸುವ ಅಗತ್ಯ …

Read More »

ಉತ್ತರ ಪ್ರದೇಶ ಚುನಾವಣಾ ಮೇಲೆ ಬೆಲೆ ಏರಿಕೆ ಪರಿಣಾಮ ಬೀರುವದಿಲ್ಲ:ಅರವಿಂದ ಬೆಲ್ಲದ

ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಸಲು ಕೇಂದ್ರ ಕ್ರಮಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗಲಿದೆ ಎಂಬ ವಿಶ್ವಾಸವನ್ನು ಶಾಸಕ‌ ಅರವಿಂದ ಬೆಲ್ಲದ ವ್ಯಕ್ತಪಡಿಸಿದರು. ನಗರದಲ್ಲಿಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು,ಬೆಲೆ ಏರಿಕೆಯಾಗುತ್ತಿರುವದು ಸರ್ಕಾರದ ಗಮನಕ್ಕೆ ಇದೆ. ಸರ್ಕಾರ ಬೆಲೆ ಇಳಿಕೆ ಮಾಡಲು ಯತ್ನಿಸುತ್ತಿದೆ ಎಂದರು. ತೆರಿಗೆ ವಸೂಲಿ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ತಗೆದುಕೊಳ್ಳಲಿದೆ. ಎಲ್ಲಾ ರಾಜ್ಯಗಳಿಗಿಂತಲೂ ರಾಜ್ಯ ಸರ್ಕಾರ ಕಡಿಮೆ ತೆರಿಗೆ ಇದೆ. …

Read More »

ಬೆಳಗಾವಿಯ ಸಿಪಿಇಡ್ ಮೈದಾನದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಬೆಳಗಾವಿಯ ಸಿಪಿಇಡ್ ಮೈದಾನದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಇನ್‍ನ್ಯೂಸ್ ಪ್ರಧಾನ ಸಂಪಾದಕರಾದ ರಾಜಶೇಖರ್ ಪಾಟೀಲ್, ಸಂಯುಕ್ತ ಕರ್ನಾಟಕ ಪತ್ರಿಕೆ ಹಿರಿಯ ವರದಿಗಾರ ವಿಲಾಸ್ ಜೋಶಿ ಅವರನ್ನು ಸತ್ಕರಿಸಿದರು. ಇನ್ನು ಸಂಗೀತ ಕ್ಷೇತ್ರದಿಂದ ಕೆಎಲ್‍ಇ ಕ್ಯಾಂಪಸ್‍ನ ಯಾದವೇಂದ್ರ ಪೂಜಾರಿ, ಶೌರ್ಯ ಗೋಕಾಕ್ ತಾಲೂಕಿನ ಅಂಕಲಗಿಯ ರೈಲ್ವೇ ಹೋಮ್ ಗಾರ್ಡ ಹೊಳೆಪ್ಪ ನೇಸರಗಿ, ಸಾಹಿತ್ಯ …

Read More »

ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಸರಕಾರ ಬದ್ಧ : ಸಚಿವ ಗೋವಿಂದ ಕಾರಜೋಳ 66 ನೇ ಕರ್ನಾಟಕ ರಾಜ್ಯೋತ್ಸವ : ಕನ್ನಡ ಹೋರಾಟಗಾರರು, ಪತ್ರಕರ್ತರಿಗೆ ಸನ್ಮಾನ

ಬೆಳಗಾವಿ : ಕೋವಿಡ್ ಹಿನ್ನೆಲೆಯಲ್ಲಿ ೬೬ ನೇ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.   ಜಿಲ್ಲಾಡಳಿತ ವತಿಯಿಂದ ನಗರದ ಸಿಪಿಎಡ್ ಮೈದಾನದಲ್ಲಿ ಸೋಮವಾರ (ನ.೧) ರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿತ್ತು.   ಜಿಲ್ಲಾ ಉಸ್ತುವಾರಿ ಸಚಿವರೂ ಅಗಿರುವ ಜಲಸಂಪನ್ಮೂಲ (ಬೃಹತ್ ಮತ್ತು ಮಧ್ಯಮ) ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಅವರು‌ ರಾಷ್ಟ್ರಧ್ವಜಾರೊಃಣ ನೆರವೇರಿಸಿದರು.   ತಾಯಿ ಭುವನೇಶ್ವರಿದೇವಿಗೆ ಪೂಜೆ ಸಲ್ಲಿಸಿ ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. …

Read More »