Breaking News

ಜಿಲ್ಲೆ

ಪ್ರೀತಿಯಲ್ಲಿ ಮೋಸ ಆಗಿದ್ದಕ್ಕೆ ಸಹೋದರ ಆತ್ಮಹತ್ಯೆ; DC ಮುಂದೆ ಗಳಗಳನೇ ಕಣ್ಣೀರಿಟ್ಟ ಯೋಧ..!

ಬೆಳಗಾವಿ: ಪ್ರೀತಿಸಿದ ಹುಡುಗಿಯ ಮನೆಯವರ ವಿರೋಧಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆಗೆ ಸಂಬಂಧಿಸಿದಂತೆ ಮೃತನ ಸಹೋದರ ಹಾಗೂ ಯೋಧ ನನ್ನ ಕುಟುಂಬಕ್ಕೆ ರಕ್ಷಣೆ ಸಿಗುತ್ತಿಲ್ಲ ಎಂದು ಕಣ್ಣಿರಿಟ್ಟಿದ್ದಾನೆ. ಪ್ರೀತಿಸಿದ ಹುಡುಗಿ ಮನೆಯವರು ಮದುವೆಗೆ ವಿರೋಧಿಸಿ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ತಾಲೂಕಿನ‌ ಬೆನಕನಹಳ್ಳಿಯ 31 ವರ್ಷದ ಭರಮಾ ಪಾಟೀಲ್ ಎಂಬಾತ ಅಕ್ಟೋಬರ್ 23ರಂದು ಆತ್ಮಹತ್ಯೆ ಮಾಡಿಕೊಂಡಿದ್ದ.     ಸಹೋದರನ ಸಾವು ನೆನೆದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ …

Read More »

ಪುನೀತ್ ರಾಜ್‍ಕುಮಾರ್ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ

ಬೆಂಗಳೂರು,ಅ.29- ಇಂದು ನಿಧನರಾದ ನಟ ಪುನೀತ್ ರಾಜ್‍ಕುಮಾರ್ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಪುನೀತ್ ಅವರ ತಂದೆ ವರನಟ ಡಾ.ರಾಜ್‍ಕುಮಾರ್ ಅವರು ನಿಧನರಾದಾಗ ಅವರ ನೇತ್ರಗಳನ್ನು ಕೂಡ ದಾನ ಮಾಡಲಾಗಿತ್ತು. ಆ ಸಂದರ್ಭದಲ್ಲೇ ತಮ್ಮ ನೇತ್ರಗಳನ್ನು ದಾನ ಮಾಡುವ ಸಹಮತಕ್ಕೆ ಸಹಿ ಹಾಕಿದ್ದರು. ಅದರಂತೆ ಇಂದು ಅಪ್ಪು ಅವರ ನೇತ್ರಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ. ಡಾ.ರಾಜ್ ಅವರು ಮೃತಪಟ್ಟ ನಂತರ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದರು. ಈಗ …

Read More »

ಬೆಂಗಳೂರಿನಲ್ಲಿ ಇನ್ಮುಂದೆ ಪ್ರತಿಭಟನೆಗೆ ಹೊಸ ರೂಲ್ಸ್; ಹೈಕೋರ್ಟ್ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು

ಬೆಂಗಳೂರು: ಪ್ರತಿಭಟನೆ ವಿಚಾರವಾಗಿ ಸುಖಾಸುಮ್ಮನೆ ರಸ್ತೆಗಿಳಿಯುವ ಮುನ್ನ ಎಚ್ಚರ ವಹಿಸಿ. ಏಕೆಂದರೆ ಬೆಂಗಳೂರಿನಲ್ಲಿ ಇನ್ಮುಂದೆ ಪ್ರತಿಭಟನೆಗೆ ಹೊಸ ನಿಯಮವನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಪ್ರತಿಭಟನೆ, ಜಾಥಾಗಳಿಂದ ಸಾರ್ವಜನಿಕರಿಗೆ ಕಿರಿಕಿರಿ ಹಿನ್ನೆಲೆ ಹೈಕೋರ್ಟ್ ಸೂಚನೆ ನೀಡಿದ್ದು, ಈ ಬೆನ್ನಲ್ಲೇ ಎಚ್ಚೆತ್ತ ಬೆಂಗಳೂರು ಪೊಲೀಸರು ಕರ್ನಾಟಕ ಪೊಲೀಸ್ ಌಕ್ಟ್ ಅಡಿ ನಿಬಂಧನೆ ವಿಧಿಸಲು ಸಿದ್ಧತೆ ನಡೆಸಿದೆ. ಸರ್ಕಾರದಿಂದ ಅನುಮೋದನೆ ಪಡೆಯಲು ನಗರ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದ್ದು, ಯಾವುದೇ ಪ್ರತಿಭಟನೆಗೆ ಕೇವಲ …

Read More »

ಹಾಸನಾಂಬೆಯ ಮೊದಲ‌ ದಿನದ ದರ್ಶನೋತ್ಸವ ಆರಂಭ; ಬೆಳಿಗ್ಗೆಯೇ ದೇವಾಲಯ ದತ್ತ ಲಗ್ಗೆಯಿಟ್ಟ ಸಹಸ್ರಾರು ಭಕ್ತರು

ಹಾಸನ: ಎರಡು ವರ್ಷಗಳ ಬಳಿಕ ಸಾರ್ವಜನಿಕರಿಗೆ ಹಾಸನಾಂಬೆ ದರ್ಶನ ಭಾಗ್ಯ ದೊರೆತಿದೆ. ಹಾಸನಾಂಬೆಯ ಮೊದಲ‌ ದಿನದ ದರ್ಶನೋತ್ಸವ ಇಂದು (ಅಕ್ಟೋಬರ್ 29) ಆರಂಭವಾಗಿದ್ದು, ಬೆಳಿಗ್ಗೆಯೇ ದೇವಾಲಯ ದತ್ತ ಸಹಸ್ರಾರು ಭಕ್ತರು ಲಗ್ಗೆಯಿಟ್ಟಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಭಕ್ತರು ಹಾಸನಾಂಬೆಯ ದರ್ಶನ ಪಡೆಯುತ್ತಿದ್ದಾರೆ. ನೆನ್ನೆ ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆದಿದ್ದು, ಇಂದಿನಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆ. ಆ ನಂತರ ಮಧ್ಯಾಹ್ನ …

Read More »

BREAKING ಮತ್ತೆ ಏರಿದ ಪೆಟ್ರೋಲ್​ ಬೆಲೆ; ರಾಜ್ಯದಲ್ಲಿ ಎಷ್ಟಾಗಿದೆ ಇಂಧನ ದರ?

ಬೆಂಗಳೂರು: ವಾಹನ ಸವಾರರಿಗೆ ಮತ್ತೆ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಇಂದು ಕೂಡ ಪೆಟ್ರೋಲ್​ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ನೆನ್ನೆ ಪೆಟ್ರೋಲ್-ಡೀಸೆಲ್​ ದರಗಳಲ್ಲಿ ಏರಿಕೆ ಕಂಡುಬಂದಿದ್ದು, ಪೆಟ್ರೋಲ್ ದರದಲ್ಲಿ 36 ಪೈಸೆ ಮತ್ತು ಡೀಸೆಲ್ ದರದಲ್ಲಿ 37 ಪೈಸೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 35 ಪೈಸೆ ಮತ್ತು ಲೀಟರ್ ಡೀಸೆಲ್​ ದರದಲ್ಲಿ 36 ಪೈಸೆ ಹೆಚ್ಚಳವಾಗಿದೆ. ಇದರಂತೆ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ …

Read More »

ಶಿವಣ್ಣ ಅಭಿಮಾನಿಗಳಿಗೆ ರಸದೌತಣ – ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಮೇಲೆ ಭಜರಂಗಿ -2

ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ಇಂದು 375 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ವಿಶ್ವದಾದ್ಯಂತ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭಜರಂಗಿ ಹವಾ ಕ್ರಿಯೆಟ್ ಮಾಡಲಿದೆ. ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 5 ಗಂಟೆಗೆ ಅಭಿಮಾನಿಗಳಿಗಾಗಿ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ಮೊದಲ ಶೋ ಗಾಗಿ ತುದಿಗಾಲಲ್ಲಿ ಅಭಿಮಾನಿಗಳು ನಿಂತಿದ್ದರು. ತೆರೆ ಮೇಲೆ ಶಿವಣ್ಣನನ್ನ ನೋಡುತಿದ್ದಂತೆ ಹುಚ್ಚೆದ್ದು ಕುಣಿದ ಅಭಿಮಾನಿಗಳು, ಸ್ಕ್ರೀನ್ ಮುಂದೆ ಹೂ ಎರಚಿ …

Read More »

ಹಾನಗಲ್, ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, ಬಿಜೆಪಿಗೆ ಈಗಲೇ ಭಯ ಶುರುವಾಗಿದೆ: ಸತೀಶ ಜಾರಕಿಹೊಳಿ 

ಸಿಂಧಗಿ ಚುನಾವಣೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ. @Laxminews Gokak ಗೋಕಾಕ: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಹೀಗಾಗಿ, ಬಿಜೆಪಿಗೆ ಈಗಲೇ ಭಯ ಶುರುವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದ ಹಿಲ್ ಗಾರ್ಡನ್ ಗೃಹಕಚೇರಿಯಲ್ಲಿ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭೀತಿಯಿಂದ ಮುಖ್ಯಮಂತ್ರಿಗಳು ಹಾನಗಲ್ ನಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದ್ದಾರೆ ಎಂದರು. ಉಪಚುನಾವಣೆ ಎಂದರೆ ಹಾಗೆ. …

Read More »

ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಕೊಚ್ಚಿ ಹೋದ ಯುವಕ, 24 ಗಂಟೆ ಕಳೆದರೂ ಪತ್ತೆಯಾಗದ ಶವ

ದಾವಣಗೆರೆ: ಜಿಲ್ಲೆಯಲ್ಲಾದ ಭಾರಿ ಮಳೆಗೆ ಚಿರಡೋಣಿ ಹಾಗೂ ದೊಡ್ಡಘಟ್ಟ ಗ್ರಾಮಗಳ ನಡುವಿನ ಹಳ್ಳ ತುಂಬಿ ಹರಿಯುತ್ತಿದೆ. ಈ ಹಳ್ಳದಾಟಲು ಹೋಗಿ ಯುವಕ ಕೊಚ್ಚಿ ಹೋದ ಘಟನೆ ದಾವಣಗೆರೆಯಲ್ಲಿ ಸಂಭವಿಸಿದೆ. ಶಿವರಾಜ್ (23) ನೀರು ಪಾಲದ ಯುವಕ. ಘಟನೆ ಸಂಭವಿಸಿ 24 ಗಂಟೆ ಕಳೆದರೂ ಯುವಕನ ಶವ ಪತ್ತೆಯಾಗಿಲ್ಲ. ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳವನ್ನು ದಾಟಲು ಮುಂದಾಗಿದ್ದ ಯುವಕ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಕಳೆದ 24 ಗಂಟೆಗಳಿಂದ ಹಳ್ಳಕ್ಕೆ …

Read More »

ಬೆಳಗಾವಿಯ ಸುವರ್ಣ ‌ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗುರುವಾರ ಲಕ್ಷ ಕಂಠ ಗೀತಗಾಯನ ನಡೆಯಿತು.

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಕನ್ನಡಕ್ಕಾಗಿ ನಾವು’ ಅಭಿಯಾನದಲ್ಲಿ ಬೆಳಗಾವಿಯ ಸುವರ್ಣ ‌ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗುರುವಾರ ಲಕ್ಷ ಕಂಠ ಗೀತಗಾಯನ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುವ ಲಕ್ಷ ಕಂಠ ಕನ್ನಡ ಗೀತಗಾಯನ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಗೀತಗಾಯನವನ್ನು ಪ್ರಸ್ತುತಪಡಿಸಿದರು. ರಾಷ್ಟ್ರಕವಿ ಕುವೆಂಪು ವಿರಚಿತ ‘ಬಾರಿಸು ಕನ್ನಡ ಡಿಂಡಿಮ’; ನಿಸಾರ್ ಅಹಮದ್ ಅವರ ‘ಜೋಗದ ಸಿರಿ‌ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ …

Read More »

ಮಾತಾಡ್ ಮಾತಾಡ್ ಕನ್ನಡ” ಎಂಬ ವಿನೂತನ ಕಾರ್ಯಕ್ರಮ ಪ್ರಕಾಶ ಹೊಳೆಪ್ಪನವರ

ಗೋಕಾಕ: ನಗರದ ಎಲ್ಲ ಸಾರ್ವಜನಿಕ ಬಂಧುಗಳಿಗೆ ತಿಳಿಸುವದೇನೆಂದರೆ ಬರುವ 01 ನವೆಂಬರ 2021 ರ ಕರ್ನಾಟಕ ರಾಜ್ಯೋತ್ಸವವನ್ನು ಸರಕಾರ ಸೂಚಿಸಿದಂತೆ ಅತಿ ವಿಜೃಂಭಣೆಯಿಂದ ಹಾಗೂ ನಿಯಮಾನುಸಾರ ಆಚರಿಸುವ ನಿಟ್ಟಿನಲ್ಲಿ “ಮಾತಾಡ್ ಮಾತಾಡ್ ಕನ್ನಡ” ಎಂಬ ವಿನೂತನ ಕಾರ್ಯಕ್ರಮವನ್ನು ದಿನಾಂಕ 31-10-2021 ರಂದು ಮುಂಜಾನೆ 10-00 ಘಂಟೆಯಿಂದ ನಗರದ ಸಮುದಾಯ ಭವನದಲ್ಲಿ ರಂಗೋಲಿ ಬಿಡಿಸುವ ಕಾರ್ಯಕ್ರಮ ಹಾಗೂ ದೇಶಿ ತಿಂಡಿಗಳ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.   ಆದಕಾರಣ ಸದರಿ ಕಾರ್ಯಕ್ರಮದಲ್ಲಿ ಗೋಕಾಕ …

Read More »