Breaking News

ಜಿಲ್ಲೆ

ಬೇರೆಯವರ ಹೆಂಡತಿ ಬಗ್ಗೆ ಮಾತನಾಡುವಾಗ ಎಲ್ಲರೂ ಹುಷಾರಾಗಿಬೇಕು

ಬೇರೆಯವರ ಹೆಂಡತಿ ಬಗ್ಗೆ ಮಾತನಾಡುವಾಗ ಎಲ್ಲರೂ ಹುಷಾರಾಗಿಬೇಕು ಎನ್ನುವುದಕ್ಕೆ ನಿದರ್ಶನವಾಗಿ ಚಿಕ್ಕೋಡಿಯಲ್ಲೊಂದು ಘಟನೆ ನಡೆದಿದೆ. ಆತ್ಮೀಯ ಸ್ನೇಹಿತರ ನಡುವೆ ಹೆಂಡತಿ ವಿಚಾರ ಬಂದು ಅದು ಕೊಲೆಯಲ್ಲಿ ಅಂತ್ಯಗೊಂಡಿದೆ. ಆಗಿದ್ದೇನೆಂದರೆ, ಹೆಂಡತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಗೆಳೆಯನನ್ನು ವ್ಯಕ್ತಿಯೊಬ್ಬ ಹೆಂಡ ಕುಡಿಸಿ ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿಯ ಸುನೀಲ್ ಸಾಳುಂಕೆ(೩೪) ಕೊಲೆಯಾದವನು. ಮಹಾಂತೇಶ ಮತ್ತು ರಾಜು ಎಂಬವರನ್ನು ಈ ಕೊಲೆಗೆ ಸಂಬಂಧಿಸಿ ಬಂಧಿಸಲಾಗಿದೆ. ಅಕ್ಟೋಬರ್‌ ೭ರಂದು ಈ ಕೊಲೆ …

Read More »

ತಾಯಿ ಮತ್ತು ಮೂರು ಮಕ್ಕಳು ಸಾವು

ಬೆಳಗಾವಿ ಮೂಲದ ಮೂರು ಹೆಣ್ಣು ಮಕ್ಕಳು ಹಾಗೂ ತಾಯಿಯ ಶವ ಮಹಾರಾಷ್ಟ್ರದ ಜತ್ತ ತಾಲೂಕಿನ ಬಿಳ್ಳೂರು ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ.   ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ನಿವಾಸಿ ಆಗಿರುವ ಸುನಿತಾ ತುಕಾರಾಮ್ ಮಾಳಿ ಮತ್ತು ಪುತ್ರಿಯರಾದ ಅಮೃತಾ, ಅಂಕಿತಾ ಹಾಗೂ ಐಶ್ವರ್ಯಾ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದೆ. ಕಳೆದ ಭಾನುವಾರ ಮುಂಜಾನೆ ಮನೆ ಬಿಟ್ಟು ಹೋಗಿದ್ದ ಮಹಿಳೆ ಮತ್ತು ಮೂವರು ಪುಟ್ಟ ಹೆಣ್ಮಕ್ಕಳು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. …

Read More »

ಇದು ಬರೀ ಜೈಲಲ್ಲೋ ಅಣ್ಣ .. ಕೃಷಿ ಜೊತೆ ಮನಪರಿವರ್ತನಾ ಕೇಂದ್ರ

ಹಾವೇರಿ: ಕಾರಾಗೃಹಗಳು ಕೈದಿಗಳನ್ನು ತಿದ್ದುವ ಮನಪರಿವರ್ತನಾ ಕೇಂದ್ರಗಳಾಗಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಅಪರಾಧ ಮಾಡುವ ಮನಸ್ಸುಗಳು ಕಡಿಮೆಯಾಗುತ್ತವೆ. ಅಲ್ಲದೆ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತವೆ ಎನ್ನುವ ಮಾತಿದೆ. ಈ ಮಾತಿಗೆ ತಕ್ಕಂತೆ ಇದೆ ಹಾವೇರಿ ಜಿಲ್ಲಾ ಕಾರಾಗೃಹ. ಜಿಲ್ಲಾ ಕೇಂದ್ರದ ಸಮೀಪ ಇರುವ ಕೆರಿಮತ್ತಿಹಳ್ಳಿ ಗ್ರಾಮದ ಬಳಿಯ ಜಿಲ್ಲಾ ಕಾರಾಗೃಹ ಕಳೆದ ಕೆಲವು ವರ್ಷಗಳಿಂದ ತನ್ನದೇ ಆದ ವಿಶೇಷ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದೆ. ಕಾರಾಗೃಹದಲ್ಲಿ ಶುದ್ಧ ಕುಡಿಯವ ನೀರಿನ ಘಟಕ, ಸ್ವತಂತ್ರ …

Read More »

ಕರ್ನಾಟಕ ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಕಳೆದ ರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತ

ಬೆಂಗಳೂರು/ಹುಬ್ಬಳ್ಳಿ: ರಾಜ್ಯದಲ್ಲಿ ಅಕಾಲಿಕ ಮಳೆ ಮುಂದುವರೆದಿದೆ. ಸೋಮವಾರ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆ ವ್ಯಾಪಕ ಮಳೆಯಾಗ್ತಿದೆ. ಇದರಿಂದಾಗಿ ಉಭಯ ನಗರಗಳಲ್ಲಿ ವಾಹನ ಸವಾರರು ಪರದಾಡುವಂತಾಯಿತು. ಧಾರಾಕಾರ ಮಳೆಗೆ ವಾಹನ ಸವಾರರ ಪರದಾಟ: ಸಂಜೆ ಸಿಲಿಕಾನ್ ಸಿಟಿಯಲ್ಲಿ ವರುಣದ ಆರ್ಭಟಕ್ಕೆ ವಾಹನ ಸವಾರರು ತತ್ತರಿಸಿ ಹೋದರು. ಮೆಜೆಸ್ಟಿಕ್, ಮಲ್ಲೇಶ್ವರಂ, ಜಯನಗರ, ಶಿವಾಜಿನಗರ, ಯಶವಂತಪುರ, ಜಯನಗರ, ಜೆ ಪಿ ನಗರ ಸೇರಿದಂತೆ ಹೊಸೂರು, ಸರ್ಜಾಪುರ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಅರ್ಧಗಂಟೆಗೂ ಹೆಚ್ಚುಕಾಲ ಧಾರಾಕಾರ ಮಳೆಯಾಗಿದ್ದರಿಂದ …

Read More »

ಲೋಕಾಯುಕ್ತದ ಖಾಲಿ ಹುದ್ದೆಗಳ ಭರ್ತಿ ಜತೆಯಲ್ಲೇ ಸಂಸ್ಥೆಗೆ ಹೆಚ್ಚಿನ ಬಲ ತುಂಬಲು ಹೊಸ ಹುದ್ದೆಗಳನ್ನು ಸೃಜಿಸಲು ರಾಜ್ಯ ಸರ್ಕಾರ ಸಮ್ಮತಿ

ಬೆಂಗಳೂರು: ಲೋಕಾಯುಕ್ತದ ಖಾಲಿ ಹುದ್ದೆಗಳ ಭರ್ತಿ ಜತೆಯಲ್ಲೇ ಸಂಸ್ಥೆಗೆ ಹೆಚ್ಚಿನ ಬಲ ತುಂಬಲು ಹೊಸ ಹುದ್ದೆಗಳನ್ನು ಸೃಜಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ. ಈ ಸಂಬಂಧ ಪ್ರಸ್ತಾವ ಸಲ್ಲಿಸಲು ಡಿಪಿಎಆರ್‌ ಅಧಿಕಾರಿಗಳು ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಪ್ರಸ್ತಾವ ಸಲ್ಲಿಸಲು ಡಿಪಿಎಆರ್‌ ಅಧಿಕಾರಿಗಳು ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ. ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಅಡಿ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಲು ನೀಡಿದ್ದ ಅಧಿಕಾರವನ್ನು 2016ರಲ್ಲಿ ಹಿಂಪಡೆಯಲಾಗಿತ್ತು. ಆ …

Read More »

ಅದ್ಧೂರಿ ಕರ್ನಾಟಕ ರಾಜ್ಯೋತ್ಸವಕ್ಕೆ ಬೆಳಗಾವಿ ಜಿಲ್ಲಾಡಳಿತ ಸಜ್ಜು: ಡಿಸಿ ನಿತೀಶ್ ಪಾಟೀಲ

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳು ಸಾಧಾರಣವಾಗಿ ರಾಜ್ಯೋತ್ಸವ ಆಚರಿಸಲಾಗಿತ್ತು. ಆದರೆ ಈ ಬಾರಿ ವ್ಯವಸ್ಥಿತವಾಗಿ, ಅದ್ಧೂರಿಯಾಗಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು. ಜಿಲ್ಲೆಯಲ್ಲಿ ಈ ಬಾರಿ ಸ್ವಾತಂತ್ರೊö್ಯÃತ್ಸವ ದಿನಾಚರಣೆಗಿಂತಲೂ ರಾಜ್ಯೋತ್ಸವ ಅದ್ಧೂರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಅವರು ತಿಳಿಸಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ (ಅ.10) ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವ್ಯವಸ್ಥಿತ ಪರೇಡ್ …

Read More »

ಮತಾಂತರ ನಿಷೇಧ ಮಾಡದಿದ್ದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣವಾಗುತ್ತಿದ್ದವು: ಕಾಡಸಿದ್ದೇಶ್ವರ ಸ್ವಾಮೀಜಿ

ಬೆಳಗಾವಿ: ನಮ್ಮ ಪುಣ್ಯಕ್ಕೆ ಬೊಮ್ಮಾಯಿ ಸರ್ಕಾರ ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದೆ. ಇಲ್ಲವಾದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣ ಆಗುತ್ತಿದ್ದವು. ನಾವು ಬೇರೆಯವರನ್ನು ದೂಷಿಸಲ್ಲ. ನಾವೇ ಎಡವಿದ್ದೇವೆ. ಬಿಟ್ಟು ಹೋದವರನ್ನು ವಾಪಸ್ ಕರೆದುಕೊಂಡು ಬಂದು ಅಣ್ಣ ತಮ್ಮಂದಿರಂತೆ ಇರೋಣ ಎಂದು ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಕೊಲ್ಲಾಪುರದ ಕನ್ನೇರಿ ಮಠದಲ್ಲಿ ನಡೆಯುತ್ತಿರುವ ಸಂತ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಇದು ಸ್ವಾಮೀಜಿಗಳು ಹಾಗೂ ಭಕ್ತರ ಸಮಾವೇಶ. ಸುಮಾರು 400 …

Read More »

ಕನ್ನೇರಿಮಠದಲ್ಲಿ ಕರ್ನಾಟಕ ಭವನ ನಿರ್ಮಾಣ: ಮೂರು ಕೋಟಿ ರೂಪಾಯಿ ಅನುದಾನ

ಬೆಳಗಾವಿ: ತಮ್ಮದೇ ಆದ ಆದರ್ಶ ಇಟ್ಟುಕೊಂಡು ಭಕ್ತರಲ್ಲಿ ಜಾಗೃತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯನ್ನು ಕೊಲ್ಲಾಪುರದ ಕನ್ನೇರಿಮಠ ಮಾಡುತ್ತಿದೆ. ಹೀಗಾಗಿ ಕನ್ನೇರಿಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಮೂರು ಕೋಟಿ ಹಣ ನೀಡಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದು ಆದರ್ಶ ಮಠ: ಮಹಾರಾಷ್ಟ್ರದ ಕೊಲ್ಲಾಪುರದ ಕನ್ನೇರಿ ಸಿದ್ಧಗಿರಿ ಮಠದಲ್ಲಿ ಸಂತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂದು ಸಹೃದಯಿ ಸಂತರ ಸಮಾವೇಶ ನಡೆಯುತ್ತಿರೋದು ಸಂತಸದ ಸಂಗತಿಯಾಗಿದೆ. ಇಲ್ಲಿ …

Read More »

ಪ್ರತಿ ಟನ್ ಕಬ್ಬಿಗೆ 5500 ಬೆಲೆ ಘೋಷಣೆ ಮಾಡುವಂತೆ ರೈತ ಸಂಘದಿoದ ಪ್ರತಿಭಟನೆ

ಪ್ರಸಕ್ತ ಸಾಲಿನಲ್ಲಿ ಕನ್ನು ಬೆಳೆದ ರೈತರಿಗೆ ಪ್ರತೀ ಟನ್ ಕಬ್ಬಿಗೆ 5500 ರೂ ನಿಗದಿ ಮಾಡುವಂತೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳಿAದ ಬೆಳಗಾವಿ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸುರಿಯುವ ಮಳೆಯನ್ನೂ ಲೆಕ್ಕಿಸದೇ ರೈತರು ನಗರದ ಚೆನ್ನಮ್ಮಾ ವೃತ್ತದಲ್ಲಿ ರಸ್ತೆ ತಡೆಯನ್ನು ನಡೆಸಿ ಸರಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.   ಪ್ರಸಕ್ತ ಸಾಲಿನಲ್ಲಿ ರೈತರು ಬೆಳೆದ ಕಬ್ಬಿಗೆ ಪ್ರತೀ ಟನ್‌ಗೆ 5500ರೂ ನೀಡುವಂತೆ ಆಗ್ರಹಿಸಿ ಇಂದು …

Read More »

ತಡರಾತ್ರಿ ಆಗಮಿಸಿದ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ B.L. ಸಂತೋಷ್ ಶಾಲು ಹೊದೆಸಿ ಸ್ವಾಗತಿಸಿದ ಬಾಲಚಂದ್ರ ಜಾರಕಿಹೊಳಿ ಇಂದು ಕನ್ಹೇರಿ ಮಠದ ಸಮಾವೇಶದಲ್ಲಿ ಭಾಗಿ

ಬೆಳಗಾವಿ – ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಬೆಳಗಾವಿಗೆ ಆಗಮಿಸಿದ್ದಾರೆ. ಭಾನುವಾರ ರಾತ್ರಿ 11 ಗಂಟೆ ಹೊತ್ತಿಗೆ ಅವರು ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಬೆಳಗಾವಿಗೆ ತಲುಪಿದರು. ಮಾಜಿ ಸಚಿವ, ಕೆಎಂಎಫ್ ಚೇರಮನ್ ಬಾಲಚಂದ್ರ ಜಾರಕಿಹೊಳಿ ಶಾಲು ಹೊದೆಸಿ ಸಂತೋಷ್ ಅವರನ್ನು ಸ್ವಾಗತಿಸಿದರು. ಈ ವೇಳೆ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ ಸುರಾನಾ, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಮಹಾಂತೇಶ ದೊಡ್ಡಗೌಡರ್, ಬಿಜೆಪಿ ಜಿಲ್ಲಾಧ್ಯಕ್ಷರಾದ …

Read More »