Breaking News

ಜಿಲ್ಲೆ

ಕೋವಿಡ್ ನಂತರ ಬಲಿಷ್ಠ ಭಾರತ ನಿರ್ಮಾಣವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ವಿಜಯಪುರ : ಕೋವಿಡ್ ನಂತರದ ಭಾರತಕ್ಕೆ ವಿಶ್ವದಲ್ಲೇ ವಿಶೇಷ ಸ್ಥಾನ, ವಿಶೇಷ ಗುರುತಿಸುವಿಕೆ ಆರಂಭಗೊಂಡಿದೆ. 21ನೇ ಶತಮಾನದಲ್ಲಿ ಬಲಿಷ್ಠ ಭಾರತ ಕಟ್ಟುವ ಕನಸು ಪ್ರಧಾನಿ ನರೇಂದ್ರ ಮೋದಿ ಅವರಿಂದ ನನಸಾಗಿದೆ. ಯುಎನ್ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರಾತಿನಿಧ್ಯವಿಲ್ಲದೇ ಯಾವ ಸಭೆಗಳೂ ನಡೆಯುವುದಿಲ್ಲ. ಅಷ್ಟರ ಮಟ್ಟಿಗೆ ಭಾರತ ವಿಶ್ವಕ್ಕೆ ಅನಿವಾರ್ಯ ಎನಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಶುಕ್ರವಾರ ನಗರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ …

Read More »

ಸರ್ಕಾರ ಇ ಕಚೇರಿ ಜಾರಿಗೊಳಿಸಿದೆ. ಆದ್ರೆ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಪೂರೈಸುವಲ್ಲಿ ಸರ್ಕಾರ ವಿಫಲ

ಬೆಂಗಳೂರು: ಸಾರ್ವಜನಿಕರಿಗೆ ಒದಗಿಸುವ ಮಾಹಿತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ಇಲಾಖೆಗಳಲ್ಲಿ ಇ ಕಚೇರಿ ಕಡ್ಡಾಯಗೊಳಿಸಲಾಗಿದೆ. ಇ-ಕಚೇರಿಯನ್ನೇನೋ ಕಡ್ಡಾಯಗೊಳಿಸಿದೆ ಆದರೆ ಅದಕ್ಕೆ ಬೇಕಾಗಿರುವ ಸ್ಕ್ಯಾನರ್ ಮತ್ತು ಪ್ರಿಂಟರ್​​ಗಳನ್ನು ಪೂರೈಸಲು ಸರ್ಕಾರ ಮರೆತಿದೆ. ಮಾಹಿತಿ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದೆ. ಅದರ ನಿದರ್ಶನವಾಗಿ ಇ-ಆಡಳಿತ ಕೇಂದ್ರದ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಎಲ್ಲಾ ಇಲಾಖೆಗಳಲ್ಲಿ ಇ …

Read More »

ನಿಪ್ಪಾಣಿ: ಡೆಂಗಿಯಿಂದ ಯುವಕ ಸಾವು

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಡೆಂಗಿಯಿಂದ ಬಳಲುತ್ತಿದ್ದ ತಾಲ್ಲೂಕಿನ ಕಾರದಗಾ ಗ್ರಾಮದ ಯುವಕ ಶುಕ್ರವಾರ ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರೇಮ್ ಸಂಜಯ ಕಮತೆ (19) ಸಾವನ್ನಪ್ಪಿದವರು. ಬಿಎಸ್ಪಿ ಓದುತ್ತಿದ್ದ ಪ್ರೇಮ್ ಎಂಟು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದರು. ಗಡಿಗೆ ಹೊಂದಿಕೊಂಡ ಮಹಾರಾಷ್ಟ್ರದ ಇಚಲಕರಂಜಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಡೆಂಗಿ ತಗಲಿದ್ದು ಖಚಿತವಾಗಿತ್ತು. ಶುಕ್ರವಾರ ಆರೋಗ್ಯ ಹಠಾತ್ ಕ್ಷೀಣಿಸಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು ಕುಟುಂಬದ ಮೂಲಗಳು ತಿಳಿಸಿವೆ. ಯುವಕನ ಸಾವಿನಿಂದ ಗ್ರಾಮದಲ್ಲಿ ಡೆಂಗಿ ಭೀತಿ …

Read More »

ರಾಯಬಾಗ :A.T.M.ಕಳವು ಯತ್ನ: ಆರೋಪಿ ಬಂಧನ

ರಾಯಬಾಗ: ತಾಲ್ಲೂಕಿನ ಬಾವನಸೌದತ್ತಿ ಗ್ರಾಮದಲ್ಲಿ ಎಟಿಎಂ ಒಡೆಯಲು ಯತ್ನಿಸಿದ ಆರೋ‍ಪಿಯನ್ನು ಎಂಟು ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಬಾವಾನಸೌದತ್ತಿ ನಿವಾಸಿ ಖಾಜಾಸಾಬ್‌ ಬಾಬಾಸಾಬ್‌ ಮುಜಾವರ (25) ಬಂಧಿತ. 2022ರ ಫೆಬ್ರುವರಿ 4ರಂದು ರಾತ್ರಿ ಎಟಿಎಂ ಮುರಿದು ಕಳ್ಳತನಕ್ಕೆ ಯತ್ನಿಸಿದ ಯುವಕ ತಲೆ ಮರೆಸಿಕೊಂಡಿದ್ದ. ಕಬ್ಬಿಣದ ರಾಡ್‌ ಬಳಸಿ ಎಟಿಎಂ ಮುರಿಯಲು ಯತ್ನಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಆದರೆ, ಆರೋಪಿ ಗುರುತು ಸರಿಯಾಗಿ ಪತ್ತೆಯಾಗಿರಲಿಲ್ಲ. ಪ್ರಕರಣದ ತನಿಖೆ ಕೈಗೊಂಡ ರಾಯಬಾಗ …

Read More »

ಯಲ್ಲಮ್ಮನ ‌ಗುಡ್ಡದ ಶ್ರೀ ರೇಣುಕಾದೇವಿ ದೇಗುಲಕ್ಕೆ ಸಿಎಂ ಪತ್ನಿ ಚನ್ನಮ್ಮ ಬೊಮ್ಮಾಯಿ

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪತ್ನಿ ಚನ್ನಮ್ಮ ಬೊಮ್ಮಾಯಿ ಅವರು ನವರಾತ್ರಿ ನಿಮಿತ್ತ ಮನೆ ದೇವತೆ ಸವದತ್ತಿ ಶ್ರೀ ರೇಣುಕಾ ದೇವಿಯ ದರ್ಶನ ಪಡೆದರು. ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಘಟ್ಟಕ್ಕೆ ಎಣ್ಣೆ ಸಮರ್ಪಿಸಿದರು. ಬಳಿಕ ಭಕ್ತಿ ಭಾವದಿಂದ ರೇಣುಕಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ರೇಣುಕಾದೇವಿ ಯಲ್ಲಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ದೇವತೆ. ಹಾಗಾಗಿ ಹುಬ್ಬಳ್ಳಿಯಿಂದ ಖಾಸಗಿ ವಾಹನದಲ್ಲಿ ಬಂದು ಚನ್ನಮ್ಮ ಬೊಮ್ಮಾಯಿ ದೇವಿ ದರ್ಶನ ಪಡೆದರು. ಈ …

Read More »

ಯುವಕನ ಮಿದುಳು ನಿಷ್ಕ್ರಿಯ ಯುವಕನ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು

ಅಥಣಿ: ಮನೆಯಲ್ಲಿ ಜಾರಿಬಿದ್ದು ಗಂಭೀರವಾಗಿ ಗಾಯಗೊಂಡ ಯುವಕನ ಮೆದುಳು ನಿಷ್ಕ್ರೀಯಗೊಂಡ ಹಿನ್ನೆಲೆ, ಕುಟುಂಬಸ್ಥರು ಯುವಕನ ಅಂಗಾಂಗ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಮಂಗಳವಾರ ಪ್ರಶಾಂತ ವಿಠ್ಠಲ ಮಲ್ಲೆವಾಡಿ ಎನ್ನುವ 30 ವರ್ಷದ ಯುವಕ ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಮರಳಿ ಬರುವಾಗ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು‌ ಪೋಷಕರು ಅಥಣಿಯ ಅನ್ನಪೂರ್ಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಕೋಮಾಗೆ …

Read More »

ಬೆಳಗಾವಿ: ಕೊಗನೊಳ್ಳಿ ಆರ್‌ಟಿಒ ಚೆಕ್​​ ಪೋಸ್ಟ್ ಮೇಲೆ‌ ಲೋಕಾಯುಕ್ತರ ದಾಳಿ

ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿರುವ ಕೋಗನೊಳ್ಳಿ ಆರ್‌ಟಿಒ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗಿನಜಾವ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ದಾಳಿಯಲ್ಲಿ ಲಕ್ಷಗಟ್ಟಲೆ ಹಣ ಪತ್ತೆಯಾಗಿದೆ ಎನ್ನಲಾಗಿದ್ದು, ಅಧಿಕಾರಿಗಳು ದಾಖಲೆ ಪರಿಶೀಲನೆ ಮುಂದುವರೆಸಿದ್ದಾರೆ. ಹಣ  ವಸೂಲಿ ಆರೋಪ: ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿದ್ದು, ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸಿಸುವ ಪ್ರಮುಖ ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ರಸ್ತೆ ಪಕ್ಕದಲ್ಲಿರುವ ಆರ್​ಟಿಒ ಚೆಕ್ ಪೋಸ್ಟ್ ಮೂಲಕವೇ ಸಾವಿರಾರು …

Read More »

ಕ್ಯಾಂಪ್ ನಲ್ಲಿ ನಡೆದ ಸುಧೀರ ಕಾಂಬಳೆ ಕೊಲೆ ಆರೋಪಿಗಳು ಅರೆಸ್ಟ್

ಬೆಳಗಾವಿ: ಕ್ಯಾಂಪ್ ನಲ್ಲಿ ನಡೆದ ಸುಧೀರ ಕಾಂಬಳೆ ಕೊಲೆ ಆರೋಪಿಗಳು ಅರೆಸ್ಟ್; ಹೆಂಡತಿ, ಮಗಳೇ ಹಂತಕರು  ಇಲ್ಲಿನ ಕ್ಯಾಂಪ್ ಪ್ರದೇಶದಲ್ಲಿ ಸುಧೀರ ಕಾಂಬಳೆ ಎಂಬುವವರನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.   ಮೃತ ಸುಧೀರ್ ಪತ್ನಿ ರೋಹಿಣಿ ಸುಧೀರ ಕಾಂಬಳೆ, ಪುತ್ರಿ ಸ್ನೇಹಾ ಹಾಗೂ ರೋಹಿಣಿಯ ಸ್ನೇಹಿತ ಅಕ್ಷಯ ಮಹಾದೇವ ವಿಠಕರ ಬಂಧಿತರು.  ಸೆಪ್ಟಂಬರ್ 16 ಹಾಗೂ 17ರ ನಡುವಿನ ಅವಧಿಯಲ್ಲಿ ಕ್ಯಾಂಪ್ ನ ಮದ್ರಾಸ್ …

Read More »

P.F.I. ನನ್ನಿಂದಲೇ ಬೆಳೆದಿದ್ದು ಅನ್ನುವುದು ಸುಳ್ಳು: ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಫ್‌ಐ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಬಿಜೆಪಿ ಆರೋಪವನ್ನು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.   “ಸುಳ್ಳು” ಬಿಜೆಪಿ ಮತ್ತು ಸಂಘ ಪರಿವಾರದವರ ಮನೆ ದೇವರು. ಆಧಾರ ರಹಿತ ಸುಳ್ಳು ಪ್ರಚಾರಗಳಿಂದಲೇ ತಮ್ಮ ಅಸ್ತಿತ್ವ ಉಳಿಸಿಕೊಂಡಿರುವ ಈ ಪರಿವಾರ ನನ್ನ ವಿರುದ್ಧ ಇದುವರೆಗೂ ಸಾವಿರದೊಂದು ಸುಳ್ಳುಗಳನ್ನು ಪ್ರಚಾರ ಮಾಡಿದೆ. ಈ ಸುಳ್ಳುಗಳಲ್ಲಿ ಪಿಎಫ್‌ಐ …

Read More »

ಖಂಡಿತವಾಗಿಯೂ ರಮೇಶ್ ಜಾರಕಿಹೊಳಿ ಸಚಿವರಾಗುತ್ತಾರೆ: ನಳಿನ್​ಕುಮಾರ್

ಬೆಳಗಾವಿ: ರಮೇಶ್ ಜಾರಕಿಹೊಳಿ ಖಂಡಿತವಾಗಿಯೂ ಮತ್ತೆ ಸಚಿವರಾಗುತ್ತಾರೆ. ಯಾವಾಗ ಆಗಲಿದ್ದಾರೆ ಎಂಬುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ. ಹಾಲಿ ಬಿಜೆಪಿ ಶಾಸಕರ‌‌ ಮತಕ್ಷೇತ್ರದಲ್ಲಿ ಅವರನ್ನು ಬದಲಾಯಿಸುವ ಪ್ರಶ್ನೆಯಿಲ್ಲ. ಟಿಕೆಟ್​​ ಆಕಾಂಕ್ಷಿಗಳು ಹೆಚ್ಚಾಗಿದ್ದರೆ, ಅದು ಪಕ್ಷದ ಶಕ್ತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಬಿಐ, ಐಟಿ ಎಲ್ಲರ ತನಿಖೆ ಮಾಡುತ್ತವೆ. ಪ್ರಾಮಾಣಿಕವಾಗಿದ್ದರೆ ಭಯಪಡುವ ಅವಶ್ಯಕತೆ ಇಲ್ಲ. ಧೈರ್ಯವಾಗಿ ತನಿಖೆಗೆ ತೆರಳಿ ಉತ್ತರ ನೀಡಬೇಕು …

Read More »