Breaking News
Home / ರಾಜಕೀಯ / ಇದು ಬರೀ ಜೈಲಲ್ಲೋ ಅಣ್ಣ .. ಕೃಷಿ ಜೊತೆ ಮನಪರಿವರ್ತನಾ ಕೇಂದ್ರ

ಇದು ಬರೀ ಜೈಲಲ್ಲೋ ಅಣ್ಣ .. ಕೃಷಿ ಜೊತೆ ಮನಪರಿವರ್ತನಾ ಕೇಂದ್ರ

Spread the love

ಹಾವೇರಿ: ಕಾರಾಗೃಹಗಳು ಕೈದಿಗಳನ್ನು ತಿದ್ದುವ ಮನಪರಿವರ್ತನಾ ಕೇಂದ್ರಗಳಾಗಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಅಪರಾಧ ಮಾಡುವ ಮನಸ್ಸುಗಳು ಕಡಿಮೆಯಾಗುತ್ತವೆ. ಅಲ್ಲದೆ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತವೆ ಎನ್ನುವ ಮಾತಿದೆ. ಈ ಮಾತಿಗೆ ತಕ್ಕಂತೆ ಇದೆ ಹಾವೇರಿ ಜಿಲ್ಲಾ ಕಾರಾಗೃಹ.

ಜಿಲ್ಲಾ ಕೇಂದ್ರದ ಸಮೀಪ ಇರುವ ಕೆರಿಮತ್ತಿಹಳ್ಳಿ ಗ್ರಾಮದ ಬಳಿಯ ಜಿಲ್ಲಾ ಕಾರಾಗೃಹ ಕಳೆದ ಕೆಲವು ವರ್ಷಗಳಿಂದ ತನ್ನದೇ ಆದ ವಿಶೇಷ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದೆ. ಕಾರಾಗೃಹದಲ್ಲಿ ಶುದ್ಧ ಕುಡಿಯವ ನೀರಿನ ಘಟಕ, ಸ್ವತಂತ್ರ ಗ್ರಂಥಾಲಯ ಸೇರಿದಂತೆ ಹಲವು ವೈಶಿಷ್ಟ್ಯಗಳಿಂದ ಹಾವೇರಿ ಜಿಲ್ಲಾ ಕಾರಾಗೃಹ ಗಮನ ಸೆಳೆಯುತ್ತಿದೆ.

ಕೃಷಿ ಚಟುವಟಿಕೆಗೆ ಅವಕಾಶ: ಈ ಕಾರಾಗೃಹದಲ್ಲಿ ಸದ್ಯ 162 ಜನ ಕೈದಿಗಳಿದ್ದಾರೆ. ಈ ಜೈಲು ಹಕ್ಕಿಗಳಿಗೆ ಕೃಷಿ ಚಟುವಟಿಕೆಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾರಾಗೃಹಕ್ಕೆ ಸೇರಿದ 16 ಎಕರೆ ಜಮೀನಿನಲ್ಲಿ ಕೈದಿಗಳು ಊಟಕ್ಕೆ ಬೇಕಾಗುವ ತರಕಾರಿ ಮತ್ತು ಸೊಪ್ಪನ್ನು ಬೆಳೆಯಲಾಗುತ್ತದೆ.

ಬದನೆಕಾಯಿ, ಟೊಮೆಟೋ, ಮೆಣಸಿನಕಾಯಿ, ಕೋಸು ಸೇರಿದಂತೆ ವಿವಿಧ ತರಕಾರಿ ಬೆಳೆಯಲಾಗುತ್ತದೆ. ಅಲ್ಲದೇ ಅದರ ಜತೆಗೆ ಕೊತ್ತಂಬರಿ, ಕರಿಬೇವು, ಪಾಲಕ್ ಮತ್ತು ಮೆಂತೆ ಸೇರಿದಂತೆ ವಿವಿಧ ಸೊಪ್ಪುಗಳನ್ನ ಸಹ ಬೆಳೆಯಲಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ 3 ಲಕ್ಷ ರೂಪಾಯಿ ಆದಾಯವನ್ನು ಕಾರಾಗೃಹ ಉಳಿತಾಯ ಮಾಡುತ್ತದೆ.

Special activities in Haveri District Jail

ಕೃಷಿ ಚಟುವಟಿಕೆಯಲ್ಲಿ ನಿರತರಾದ ಕೈದಿಗಳು

‘ಮಂತ್ ಆಫ್ ದಿ ಜೈಲ್’ ಪ್ರಶಸ್ತಿ: ಕಾರಾಗೃಹದ ಈ ಕೃಷಿ ಚಟುವಟಿಕೆಗಳು ಜೈಲು ಹಕ್ಕಿಗಳಿಗೆ ಆದಾಯವನ್ನು ತರುತ್ತಿವೆ. ಕಾರಾಗೃಹಕ್ಕೆ ಸೇರಿದ ಜಮೀನಿನಲ್ಲಿ ಮೆಕ್ಕೆಜೋಳ, ಪೇರಲ, ತೆಂಗು, ನಿಂಬೆ ಸಹ ಬೆಳೆಯಲಾಗುತ್ತಿದೆ. ಜಿಲ್ಲಾ ಕಾರಗೃಹದಲ್ಲಿ ಕೃಷಿ ಚಟುವಟಿಕೆಗಳಿಗಾಗಿ 2 ಎತ್ತುಗಳನ್ನು ಸಹ ಸಾಕಲಾಗಿದೆ. ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಹಾವೇರಿ ಜಿಲ್ಲಾ ಕಾರಾಗೃಹ ಮೇ ತಿಂಗಳಲ್ಲಿ ರಾಜ್ಯಮಟ್ಟದ ‘ಮಂತ್ ಆಫ್ ದಿ ಜೈಲ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಪ್ರಶಸ್ತಿ ಸ್ಥಾಪಿಸಿದ ನಂತರ ಮೊದಲ ಬಾರಿಗೆ ಈ ಗೌರವಕ್ಕೆ ಪಾತ್ರವಾದ ಜೈಲು ಹಾವೇರಿಯದ್ದು ಎನ್ನುವ ಹೆಗ್ಗಳಿಕೆ ಪಡೆದಿದೆ.


Spread the love

About Laxminews 24x7

Check Also

ಬೆಳಗಾವಿ ಪ್ರದೇಶ ಮಹಾರಾಷ್ಟ್ರಕ್ಕೆ: ಅಂಜಲಿ ಹೇಳಿಕೆಗೆ ಸ್ಪಷ್ಟನೆ ನೀಡಲು BJP ಆಗ್ರಹ

Spread the love ಬೆಂಗಳೂರು: ‘ಬೆಳಗಾವಿ ಜಿಲ್ಲೆಯ ಕೆಲವು ತಾಲ್ಲೂಕುಗಳು ಮಹಾರಾಷ್ಟ್ರಕ್ಕೆ ಸೇರಬೇಕಾಗಿವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ