ನಿನ್ನೆ ಲೋಕಾರ್ಪಣೆಗೊಂಡ ಬೆಳಗಾವಿಯ ಟಿಳಕವಾಡಿ 3ನೇ ರೈಲ್ವೇ ಗೇಟ್‍ನ ಮೇಲ್ಸೇತುವೆಯಲ್ಲಿ ತಗ್ಗು ಬಿದ್ದಿರುವ ಘಟನೆ ನಡೆದಿದೆ. ಹೌದು ನಿನ್ನೆಯಷ್ಟೇ ಸಂಸದೆ ಮಂಗಲಾ ಅಂಗಡಿ ಅವರು 3ನೇ ರೈಲ್ವೇ ಗೇಟ್‍ನಲ್ಲಿ ಮೇಲ್ಸೇತುವೆಯನ್ನು ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಎಂಎಲ್‍ಸಿ ಪ್ರಕಾಶ ಹುಕ್ಕೇರಿ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ರೈಲ್ವೇ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದ್ದರು. ಆದರೆ ಇಂದು ನೋಡಿದ್ರೆ ಈ ಮೇಲ್ಸೇತುವೆಯಲ್ಲಿ ಒಂದು ತೆಗ್ಗು ಕಾಣಿಸಿಕೊಂಡಿದೆ. ಸಧ್ಯ ಗುಂಡಿ ಬಿದ್ದಿರುವ …
Read More »ಬೆಳಗಾವಿ: ಕೈಕೊಟ್ಟ ಬೆಳೆ, ಸಾಲಬಾಧೆಯಿಂದ ಯುವ ರೈತ ಆತ್ಮಹತ್ಯೆ
ಬೆಳಗಾವಿ: ಸಾಲಬಾಧೆ ತಾಳಲಾರದೇ ಯುವ ರೈತನೊಬ್ಬ ತನ್ನ ಒಂದು ವರ್ಷದ ಮಗನ ಜನ್ಮದಿನ ಆಚರಿಸಿದ ಮರುದಿನವೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ವಿನಾಯಕ ನಗರದಲ್ಲಿ ನಡೆದಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ಯುವ ರೈತ ರಾಜಶೇಖರ ಬೋಳೆತ್ತಿನ (34) ಮೃತ ರೈತ. ಮೃತಪಟ್ಟ ರೈತ ಕೃಷಿ ಚುಟುವಟಿಕೆಗಳಿಗೆ ಮಾಡಿಕೊಂಡು ಸಾಲ ತಿರಿಸಲಾಗದೇ ಮನೆಯಲ್ಲಿ ಮಗುವನ್ನು ತೂಗಲು ಕಟ್ಟಿದ್ದ ಜೋಳಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ …
Read More »ಉಪ್ಪಾರ ಸಮುದಾಯದ ಹೋರಾಟಕ್ಕೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಂಬಲ*
*ಗೋಕಾಕ* : ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ನಡೆಸುತ್ತಿರುವ ಉಪ್ಪಾರ ಸಮುದಾಯದ ಹೋರಾಟಕ್ಕೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಗುರುವಾರದಂದು ಹೇಳಿಕೆ ನೀಡಿರುವ ಅವರು, ಉಪ್ಪಾರ ಸಮುದಾಯದ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುವುದಾಗಿ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಉಪ್ಪಾರ ಸಮುದಾಯವಿದೆ. ಶೈಕ್ಷಣಿಕವಾಗಿ, …
Read More »2023ರ ಚುನಾವಣೆ; ಕಾಂಗ್ರೆಸ್ ಟಿಕೆಟ್ ಕೇಳಿದ ಕನ್ನಡ ನಟಿ!
ಬೆಂಗಳೂರು, ಅಕ್ಟೋಬರ್ 12; ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಇದೆ. ರಾಜಕೀಯ ಪಕ್ಷಗಳ ತಯಾರಿ ಚುನಾವಣೆಗೆ ಜೋರಾಗಿದೆ. ಈ ನಡುವೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಮುಂದಿನ ಚುನಾವಣೆಗೆಕಾಂಗ್ರೆಸ್ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ತುಸು ಹೆಚ್ಚಿದೆ. ಈಗ ಕನ್ನಡದ ನಟಿಯೊಬ್ಬರು ನಾನು ಸಹ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಹೇಳುವ ಮೂಲಕ ಚುನಾವಣಾ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ …
Read More »ಅ.15ರ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 5500 ರೂ. ಘೋಷಿಸಿ, ರೈತರಿಗೆ ಸಿಹಿ ಸುದ್ದಿ ಕೊಡಿ: ಸಿಎಂ ಬೊಮ್ಮಾಯಿಗೆ ಬೆಳಗಾವಿ ರೈತ ಮುಖಂಡರ ಆಗ್ರಹ..!
ಪಂಜಾಬ್, ಉತ್ತರಪ್ರದೇಶ ರಾಜ್ಯದಲ್ಲಿ 3800 ರೂಪಾಯಿ ಘೋಷಣೆ ಮಾಡಿದ್ದಾರೆ. ಅದಕ್ಕಿಂತ ಹೆಚ್ಚು 5500 ರೂಪಾಯಿಯನ್ನು ಕರ್ನಾಟಕದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹಿಸಿದ್ದಾರೆ. ಪ್ರತಿ ಟನ್ ಕಬ್ಬಿಗೆ 5500 ರೂಪಾಯಿ ಘೋಷಣೆ ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತ ಮುಖಂಡರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಆದರೆ ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು …
Read More »ತಿಂಗಳಾ ಸರಿಯಾಗಿ ಪಗಾರ್ ಕೊಡರಿ. ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ.!
ಆನ್‍ಲೈನ್ ಕೆಲಸ ಸೇರಿದಂತೆ ವಿವಿಧ ಕೆಲಸ ಮಾಡುವಂತೆ ಒತ್ತಡ ಹೇರುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಬೆಳಗಾವಿಯಲ್ಲಿ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಎಐಯುಟಿಯುಸಿ ಬೆಳಗಾವಿ ಜಿಲ್ಲಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಸರ್ದಾರ್ ಮೈದಾನದಿಂದ ಆರಂಭವಾದ ಈ ರ್ಯಾಲಿಯು ಜಿಲ್ಲಾಧಿಕಾರಿ ಕಚೇರಿವರೆಗೂ ನಡೆಯಿತು. ಈ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ …
Read More »ರೈಲ್ವೇ ಇಲಾಖೆಯ ಅಧಿಕಾರಿಗಳ ಮೇಲೆ ಶಾಸಕ ಅಭಯ್ ಪಾಟೀಲ್ ಗರಂ
ಬೆಳಗಾವಿ ನಗರದಲ್ಲಿ ರೈಲ್ವೇ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ನಾಲ್ಕು ವರ್ಷಗಳನ್ನು ತೆಗೆದಿಕೊಂಡ ರೈಲ್ವೇ ಇಲಾಖೆಯ ಅಧಿಕಾರಿಗಳ ಮೇಲೆ ಶಾಸಕ ಅಭಯ್ ಪಾಟೀಲ್ ಗರಂ ಆಗಿದ್ದಾರೆ. ನೀವು ಕಾಮಗಾರಿಯನ್ನು ವಿಳಂಬ ಮಾಡಿದ್ದರಿಂದ ಜನ ನಮ್ಮನ್ನು ಬಯ್ಯುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿ ನಗರದಲ್ಲಿ ಟಿಳಕವಾಡಿಯ ಮೂರನೇ ರೈಲ್ವೇ ಗೇಟ್‌ಬಳಿಯ ರೈಲ್ವೇ ಮೇಲ್ಸೇತುವೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಅಭಯ್ ಪಾಟೀಲ್ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಬರಂಗವಾಗಿಯೇ ರೈಲ್ವೆ …
Read More »BJP ಸರ್ಕಾರವನ್ನು ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ: ಸಿದ್ದರಾಮಯ್ಯ
ಬಳ್ಳಾರಿ: ಸರ್ಕಾರ ತಪ್ಪು ಮಾಡಿದಾಗ ಅದನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆದರೆ ಈ ಬಿಜೆಪಿ ಸರ್ಕಾರವನ್ನು (BJP Government) ನಾವು ಯಾರೂ ಪ್ರಶ್ನೆ ಮಾಡುವಹಾಗಿಲ್ಲ. ಪ್ರಶ್ನೆ ಮಾಡಿದರೆ ನಮ್ಮ ಮೇಲೆ ಕೇಸ್ ಹಾಕ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅಸಮಾಧಾನ ವ್ಯಕ್ತಪಡಿಸಿದರು. ಭಾರತ್ ಜೋಡೋ ಯಾತ್ರೆ (Bharath Jodo Yatra) ಹಿನ್ನೆಲೆ ಬಳ್ಳಾರಿಯಲ್ಲಿಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇದೇ 15 ರಂದು ನಡೆಯುವ ಸಾರ್ವಜನಿಕ …
Read More »ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ ಬ್ಯಾನರ್ ತೆರವು; ಪಾಲಿಕೆ ವಿರುದ್ಧ ಕಾಂಗ್ರೆಸ್ ಮುಖಂಡರ ಆಕ್ರೋಶ
ಬಳ್ಳಾರಿ: ಜಿಲ್ಲೆಯಲ್ಲಿ ಪಾಲಿಕೆ ವತಿಯಿಂದ ರಾತ್ರೋರಾತ್ರಿ ಜೆಸಿಬಿ ಮೂಲಕ ಬ್ಯಾನರ್ ತೆರವುಗೊಳಿಸಿದಕ್ಕೆ ಮಹಾನಗರ ಪಾಲಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಪರವಾನಗಿ ಇಲ್ಲದೆ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸಲಾಗಿತ್ತು. ಪಾಲಿಕೆ ಆಯುಕ್ತ ರುದ್ರೇಶ್ ನೇತೃತ್ವದಲ್ಲಿ ಸಂಗಮ್ಮ ಸರ್ಕಲ್, ರಾಯಲ್ ಸರ್ಕಲ್ ಸೇರಿದಂತೆ ಹಲವೆಡೆ ಬ್ಯಾನರ್ ತೆರವುಗೊಳಿಸಲಾಯಿತು. ಸಮಾವೇಶ ಹಿನ್ನೆಲೆ ಅತಿ ಹೆಚ್ಚು ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ. ಬ್ಯಾನರ್ …
Read More »ಬ್ರೇಕ್ ಫೇಲ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ KSRTC ಬಸ್
ಬೆಳಗಾವಿ : ಜಿಲ್ಲೆಯ ಯರಗಟ್ಟಿ ತಾಲೂಕಿನ ತಲ್ಲೂರು ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ನ ಬ್ರೇಕ್ ಫೇಲ್ ಆದ ಹಿನ್ನೆಲೆ ಕಬ್ಬಿನ ಗದ್ದೆಗೆ ನುಗ್ಗಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಜಿಲ್ಲೆಯ ಯರಗಟ್ಟಿ ತಾಲೂಕಿನ ಸೋಮಾಪುರ ಗ್ರಾಮದಿಂದ ತಲ್ಲೂರು ಗ್ರಾಮಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಬಳಿಕ ನಿಯಂತ್ರಣ ತಪ್ಪಿ ತಲ್ಲೂರ ಗ್ರಾಮದ ಬಾಬು ಪಕಾಲಿ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಗೆ …
Read More »
Laxmi News 24×7