ಬಾಗಲಕೋಟೆ: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಸಾವಿಗೀಡಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರರಾದ ಶ್ರೀನಿವಾಸ ಹಂಸನೂರು (32), ಈಶ್ವರ ಮಾಚಕನೂರು (54) ಸಾವಿಗೀಡಾದವರು. ಬಾಗಲಕೋಟೆ ತಾಲೂಕಿನ ಸೀಗಿಕೇರಿ ಕ್ರಾಸ್ನಲ್ಲಿ ಈ ಅಪಘಾತ ಸಂಭವಿಸಿದೆ. ಕೆಎಸ್ಆರ್ಟಿಸಿ ಬಸ್ ಮುದ್ದೇಬಿಹಾಳದಿಂದ ಬಾಗಲಕೋಟೆ ಮಾರ್ಗವಾಗಿ ಸಂಚರಿಸುತ್ತಿದ್ದು, ಬೈಕ್ ಸವಾರರು ಬಾಗಲಕೋಟೆಯಿಂದ ಸೀಗಿಕೇರಿ ಕಡೆಗೆ ಸಾಗುತ್ತಿದ್ದರು. ಅಪಘಾತದಲ್ಲಿ ಶ್ರೀನಿವಾಸ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಂಭೀರ ಗಾಯಗೊಂಡ …
Read More »ಪೋಕ್ಸೋ ಪ್ರಕರಣ : ‘ಮುರುಘಾಶ್ರೀ’ ಜಾಮೀನು ಅರ್ಜಿ ವಿಚಾರಣೆ ಸೆ.23 ಕ್ಕೆ ಮುಂದೂಡಿಕೆ
ಚಿತ್ರದುರ್ಗ: ಪೋಕ್ಸೊ ಪ್ರಕರಣದಡಿ (POCSO) ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳ (murugha shri) ಜಾಮೀನು ಅರ್ಜಿ ವಿಚಾರಣೆಯನ್ನು ಸೆ.23 ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಜೈಲು ಪಾಲಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಚಿತ್ರದುರ್ಗ 2 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ಇದೀಗ ಅರ್ಜಿ ವಿಚಾರಣೆಯನ್ನು ಸೆ.23 ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ಅಪ್ರಾಪ್ತ …
Read More »ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ರಾಯಭಾಗ ಶಾಸಕ, ಆದಿ ಜಾಂಭವ ನಿಗಮ ಅಧ್ಯಕ್ಷ ದುರ್ಯೋಧನ ಐಹೊಳೆ ಆಸ್ಪತ್ರೆಗೆ ಭೇಟಿ ನೀಡಿ ಆನಂದ ಮಾಮನಿ ಆರೋಗ್ಯ ವಿಚಾರಿಸಿದ್ದಾರೆ.
ಬೆಳಗಾವಿ: ಡೆಪ್ಯುಟಿ ಸ್ಪೀಕರ್, ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಮಾಮನಿ(Anand Mamani) ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಚೆನ್ನೈನಿಂದ ಬೆಂಗಳೂರು ಮನಿಪಾಲ ಆಸ್ಪತ್ರೆಗೆ(Manipal Hospital) ಆನಂದ ಮಾಮನಿ ಅವರನ್ನು ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನ ಮನಿಪಾಲ್ ಆಸ್ಪತ್ರೆಗೆ ಸ್ವಾಮೀಜಿ, ಶಾಸಕರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ರಾಯಭಾಗ ಶಾಸಕ, ಆದಿ ಜಾಂಭವ ನಿಗಮ ಅಧ್ಯಕ್ಷ ದುರ್ಯೋಧನ ಐಹೊಳೆ ಆಸ್ಪತ್ರೆಗೆ ಭೇಟಿ ನೀಡಿ ಆನಂದ …
Read More »ಬೆಳಗಾವಿಯಲ್ಲಿ ಮಹಿಳೆಯರಿಂದ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡಗೆ ತರಾಟೆ
ಬೆಳಗಾವಿ: ಕಳೆದ ನಾಲ್ಕು ದಶಕಗಳಿಂದ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಮಾಡದ ಹಿನ್ನೆಲೆ ರಾಮದುರ್ಗ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಮಹಿಳೆಯರ ತರಾಟೆ ತೆಗೆದುಕೊಂಡ ಹಿನ್ನೆಲೆ ಶಾಸಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ರಾಮದುರ್ಗ ತಾಲೂಕಿನಲ್ಲಿ ನಾಲ್ಕು ದಶಕ ಕಳೆದರೂ ರಸ್ತೆ ಅಭಿವೃದ್ಧಿಗೊಂಡಿಲ್ಲ. ಇದರಿಂದ ಕೊಚ್ಚಿಗೆದ್ದ ಮಹಿಳೆಯರು ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡಗೆ ತರಾಟೆಗೆ ತೆಗೆದುಕೊಂಡರು. ಈ ಘಟನೆ ರಾಮದುರ್ಗ ತಾಲೂಕಿನ ಚಿಕೊಪ್ಪ ಕೆಎಸ್ ಗ್ರಾಮದಲ್ಲಿ ನಡೆದಿದೆ. …
Read More »ಭ್ರಷ್ಟಾಚಾರ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಬಿಎಸ್ವೈ
ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ನೀಡಿದ ಸೂಚನೆ ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಮತ್ತು ನ್ಯಾ. ಹಿಮಾ ಕೊಹ್ಲಿ ಅವರ ಪೀಠ ಸೋಮವಾರ ಪ್ರಕರಣದ ವಿಚಾರಣೆ ನಡೆಸಿದೆ. ಪ್ರಕರಣದ ಹಿನ್ನೆಲೆ: ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಗುತ್ತಿಗೆ ನೀಡುವಾಗ ಭ್ರಷ್ಟಾಚಾರ ಆಗಿದೆ ಎಂದು ಸಾಮಾಜಿಕ ಕಾರ್ಯಕರ್ತ …
Read More »ನಾನು, ಅಧ್ಯಕ್ಷರು ಬಹಳ ಪ್ರೀತಿ ವಿಶ್ವಾಸದಿಂದಿದ್ದೇವೆ: ದೇಶಪಾಂಡೆ
ಬೆಂಗಳೂರು : ನಾನು ಅಧ್ಯಕ್ಷರು ಬಹಳ, ಪ್ರೀತಿ ವಿಶ್ವಾಸದಿಂದಿದ್ದೇವೆ. ಎಲ್ಲರ ಸಹಕಾರದಿಂದ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಆರ್ ವಿ ದೇಶಪಾಂಡೆ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಯಾವುದೇ ಊಹಾಪೋಹಗಳಿಲ್ಲ. ಅವರ ಉದ್ದೇಶ ಭಾರತ್ ಜೋಡೋ ಕಾರ್ಯಕ್ರಮ ಯಶಸ್ವಿಯಾಗಬೇಕೆಂಬುದಾಗಿದೆ. ಎಲ್ಲ ಕಡೆಯಿಂದ ನಮ್ಮ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮಕ್ಕೆ ಬರಬೇಕು. ಇದನ್ನು ಯಶಸ್ವಿಗೊಳಿಸಬೇಕೆಂದು ಹೇಳಿದ್ದಾರೆ ಎಂದರು. ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗಳಿಗೆ ಬೇರೆ ಅರ್ಥ …
Read More »ಡಾ.ಪ್ರಭಾಕರ ಕೋರೆಯವರಿಗೆ ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರ
ಬೆಳಗಾವಿ: 75ನೇ ಜನ್ಮದಿನದ ಅಂಗವಾಗಿ ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಮಹಾರಾಷ್ಟ್ರದ ಬಾರ್ಸಿಯಲ್ಲಿರುವ ಕೆಎಲ್‍ಇ ಸಿಲ್ವರ್ ಜ್ಯೂಬ್ಲಿ ಹೈಸ್ಕೂಲಿನಲ್ಲಿ ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರ ನೆರವೇರಿಸಲಾಯಿತು. ಸಮಾರಂಭದಲ್ಲಿ ತುಲಾಭಾರ ಸ್ವೀಕರಿಸಿ ಮಾತನಾಡಿದ ಡಾ.ಪ್ರಭಾಕರ ಕೋರೆ, ಹಿತೈಷಿಗಳು ಹಾಗೂ ವಿದ್ಯಾರ್ಥಿಗಳ ಪ್ರೀತಿಗೆ ಬೆಲೆ ಕಟ್ಟಲಾಗದು. ಹಿರಿಯರ ಪುಣ್ಯದ ಫಲವಾಗಿ ನಾನು ಜೀವನದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಯಿತು. ಕೆಎಲ್‍ಇ ಸಪ್ತರ್ಷಿಗಳ ಕನಸುಗಳಿಗೆ ಪಥವಾಗಿ ಮುನ್ನಡೆಯಲು ನನಗೆ ಎಲ್ಲರೂ ಜೊತೆಯಾಗಿದ್ದಾರೆ. ಒಬ್ಬ ವ್ಯಕ್ತಿ ಸಾಧನೆಯನ್ನು …
Read More »ಭಜನೆ , ಪೂಜೆ, ಮಾಡೋದು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಬಿಜೆಪಿ ಅವರಿಗೆ: ಸತೀಶ ಜಾರಕಿಹೊಳಿ ಲೇವಡಿ
ಪೂಜೆ, ಭಜನೆ ಮಾಡುವುದು ಬಿಟ್ಟು ಬೇರೆ ಹೆಚ್ಚಿಗೆ ಏನೂ ಬಿಜೆಪಿ ಅವರಿಗೆ ಗೊತ್ತಿಲ್ಲ. ದೇಶದ ಇತಿಹಾಸವನ್ನು ಮೊದಲು ಇವರು ತಿಳಿದುಕೊಳ್ಳಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲೇವಡಿ ಮಾಡಿದ್ದಾರೆ. ಇಂಡಿಯಾ ಪಾಕಿಸ್ತಾನ ಇಬ್ಬಾಗ ಮಾಡಿದ್ದ ಕಾಂಗ್ರೆಸ್‍ನವರು ಇದೀಗ ಭಾರತ್ ಜೋಡೋ ಮಾಡ್ತಿದ್ದಾರೆ ಎಂಬ ಬಿಜೆಪಿ ಟೀಕೆಗೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ಅದು ಕಾಂಗ್ರೆಸ್ ಮಾಡಿದ್ದಲ್ಲ, ಬ್ರಿಟಿಷರೇ ಮಾಡಿದ್ದು. ಈ ಇತಿಹಾಸ ಅವರಿಗೆ ಗೊತ್ತಿಲ್ಲ. …
Read More »ಪತಿ ಜತೆ ಆಟೋದಲ್ಲಿ ಬಂದವಳು, ಗಂಡ ಬಾಡಿಗೆ ಕೊಡಲು ಚಿಲ್ಲರೆ ತರುವಷ್ಟರಲ್ಲಿ ಮಗನೊಂದಿಗೆ ನಾಪತ್ತೆ!; ಆಗಿದ್ದೇನು?
ಬೆಳಗಾವಿ: ಆಟೋದಲ್ಲಿ ಪತಿ ಜತೆಗೇ ಬಂದಿದ್ದ ಪತ್ನಿ, ಬಳಿಕ ಬಾಡಿಗೆ ಹಣ ಕೊಡಲು ಗಂಡ ಚಿಲ್ಲರೆ ತರಲು ಹೋಗಿ ಬರುವಷ್ಟರಲ್ಲಿ ಆಕೆ ಮಗನೊಂದಿಗೆ ಕಣ್ಮರೆಯಾಗಿದ್ದಾಳೆ. ಇಂಥದ್ದೊಂದು ಪ್ರಕರಣ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಈ ಪ್ರಕರಣ ನಡೆದಿದ್ದು, ರುದ್ರವ್ವ ಬಸವರಾಜ್ ಬನ್ನೂರು (30) ಮತ್ತು ಆಕೆಯ ಪುತ್ರ ಶಿವಲಿಂಗಪ್ಪ ಬನ್ನೂರ (2) ನಾಪತ್ತೆಯಾದವರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರುದ್ರವ್ವ ತನ್ನ ಎರಡು ವರ್ಷದ ಪುತ್ರನ ಜೊತೆಗೆ ಇಡಗುಂಡಿಯಲ್ಲಿನ …
Read More »ಸ್ಪಂದನ ಸೂಪರ್ ಹಾಸ್ಪಿಟಲ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ
ಇಂದು ದಿನಾಂಕ 17/09/2022 ರಂದು ಜ್ಯೋತಿ ನಗರ, ಗಣೇಶಪೂರ ಬೆಳಗಾವಿ, ಇಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಹಾಗೂ ಸ್ಪಂದನ ಸುಪರ ಸ್ಪೆಶಾಲಿಸ್ಟ ಹಾಸ್ಪಿಟಲ್ ವತಿಯಿಂದ್ ಉಚಿತ್ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗಾವಿಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಗೋವಿಂದ ಕಾರ್ಜೋಳ ಇವರ ಅಮೃತ ಹಸ್ತದಿಂದ ನೆರೆವೆರಿತು. ಕಾರ್ಯಕ್ರಮದಲ್ಲಿ ಬೆಳಗಾವಿಯ ಸಂಸದರಾದ ಶ್ರೀಮತಿ. …
Read More »
Laxmi News 24×7