ತುಮಕೂರು: ಒಕ್ಕಲಿಗ, ಲಿಂಗಾಯತ ಸಮುದಾಯದ ಮೀಸಲಾತಿ ಸಂಬಂಧ ಪ್ರವರ್ಗ ಬದಲಾವಣೆ ಮಾಡುವ ಮೂಲಕ ‘ರಂಗನ ಮಂಗ ಮಾಡಲು’ ಬಿಜೆಪಿಯವರು ಹೊರಟಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಶುಕ್ರವಾರ ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರವರ್ಗ ಬದಲಾವಣೆ ಮಾಡಿರುವುದರಿಂದ ಎರಡೂ ಸಮುದಾಯಗಳಿಗೂ ಯಾವುದೇ ಪ್ರಯೋಜನವಿಲ್ಲ. ಇದರಿಂದ ಮೀಸಲಾತಿ ಪ್ರಮಾಣದಲ್ಲಿ ಯಾವುದೇ ಹೆಚ್ಚಳ ಆಗುವುದಿಲ್ಲ. ಪ್ರವರ್ಗ ಬದಲಾವಣೆ ಮಾಡಿರುವುದೇ ಸಾಧನೆ. ಈವರೆಗೆ ಮೂಗಿಗೆ ತಪ್ಪ ಹಚ್ಚುತ್ತಿದ್ದವರು, ಈಗ ಹಣೆಗೆ ಹಚ್ಚಿದ್ದಾರೆ. …
Read More »ಪ್ರಧಾನಿ ಮೋದಿ ಅವರ ಮಾತೋಶ್ರೀ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಾಪ*
ಗೋಕಾಕ್- ಪ್ರಧಾನಿ ನರೇಂದ್ರ ಮೋದಿಯವರ ಮಾತೋಶ್ರೀ , ಶತಾಯುಷಿ ಶ್ರೀಮತಿ ಹೀರಾ ಬೇನ ಮೋದಿ ಅವರ ನಿಧನಕ್ಕೆ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಭಾರತಾಂಬೆಯ ಹೆಮ್ಮೆಯ ಪುತ್ರ ನರೇಂದ್ರ ಮೋದಿ ಅವರ ತಾಯಿ ಶುಕ್ರವಾರ ತಡರಾತ್ರಿ ನಿಧನರಾದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು. ಪ್ರಧಾನಿಯವರ ತಾಯಿ ಅತ್ಯಂತ ಸರಳತೆಗೆ ಸಾಕ್ಷಿಯಾಗಿದ್ದರು. ಪ್ರಧಾನಿ ಮೋದಿ ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು …
Read More »ಬೆಳಗಾವಿಗೆ ಗಡಿ ಸಂರಕ್ಷಣ ಆಯೋಗ ಕಚೇರಿ ಕೂಗು
ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಗಡಿ ವಿವಾದ ಮತ್ತೆ ಸದ್ದು ಮಾಡುತ್ತಿರುವುದು ಗಡಿ ಭಾಗದಲ್ಲಿ ಹಲವು ಹೊಸ ಚಟುವಟಿಕೆಗಳಿಗೆ ಜೀವ ನೀಡಿದೆ. ಗಡಿ ಅಭಿವೃದ್ಧಿಗಾಗಿರುವ ಕಚೇರಿಗಳ ಸ್ಥಾಪನೆ ವಿಷಯ ಪ್ರಧಾನವಾಗಿ ಮುನ್ನೆಲೆಗೆ ಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಲವು ದಿನಗಳ ಹಿಂದೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸಿಎಂಗಳ ಸಭೆ ನಡೆಸಿ ಎರಡೂ ರಾಜ್ಯಗಳ ಗಡಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವ ವಿಷಯ ಪ್ರಸ್ತಾವಿಸಿದ ಬಳಿಕ ಸುವರ್ಣ …
Read More »ಸಿದ್ದೇಶ್ವರ ಸ್ವಾಮೀಜಿ ಯೋಗಕ್ಷೇಮ ವಿಚಾರಿಸಿದ ಯತಿಗಳು
ಬಿಜಾಪುರ: ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರನ್ನು ವಿವಿಧ ಯತಿಗಳು ಇಂದು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಸ್ವಾಮೀಜಿ ವಿಜಯಾನಂದಜಿ, ಸ್ವಾಮೀಜಿ ಸ್ವಾಮಿ ಸುಮೇಧಾನಂದಜಿ, ಸ್ವಾಮೀಜಿ ಸ್ವಾಮಿ ನರೇಶಾನಂದಜಿ, ಸ್ವಾಮೀಜಿ ಶಾರದೇಶಾನಂದಜಿ, ಸ್ವಾಮೀಜಿ ಸುಖದೇವಾನಂದಜಿ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಅನಾರೋಗ್ಯದ ನಡುವೆಯೂ ಭಜನೆ ಮಾಡಲು ಆದೇಶ ನೀಡಿದರು. ಅದರಂತೆ ಸ್ಥಳದಲ್ಲೇ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಯತಿಗಳು ಭಜನೆ ಮಾಡಿ ಆಶಯ ಪೂರೈಸಿದರು.
Read More »ಕುಮ್ಕಿ ಜಮೀನು ಸಮಸ್ಯೆಗೆ ಪರಿಹಾರ: ಸಚಿವ ಆರ್. ಅಶೋಕ್
ಸುವರ್ಣವಿಧಾನಸೌಧ: ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ಐದಾರು ಜಿಲ್ಲೆಗಳಲ್ಲಿರುವ ಕುಮ್ಕಿ ಜಮೀನು ಸಮಸ್ಯೆ ಕುರಿತಾಗಿ ಸಾಧಕ-ಬಾಧಕಗಳು, ಕಾನೂನು ಪರಿಣಾಮಗಳನ್ನು ಕೂಲಂಕುಷವಾಗಿ ಚರ್ಚಿಸಿ ಪರಿಹಾರ ರೂಪದಲ್ಲಿ ಹೊಸ ಕಾಯ್ದೆ ತರುವ ಚಿಂತನೆ ಸರ್ಕಾರದ್ದಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಪರಿಷತ್‌ನಲ್ಲಿ ಬುಧವಾರ ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕ ಚಿಂತನೆ ಹೊಂದಿದೆ ಎಂದು ತಿಳಿಸಿದರು. ಕನ್ನಡ, …
Read More »ಮಿತಿಮೀರಿದ ಅಡಿಕೆ ಬೆಳೆಯಿಂದ ಅಸಮತೋಲನ: ಸದನ ಆತಂಕ
ಬೆಳಗಾವಿ: ಬೇಕಾಬಿಟ್ಟಿಯಾಗಿ ಅಡಿಕೆ ಬೆಳೆಯನ್ನು ಬಯಲುಸೀಮೆ ಸಹಿತ ಹಲವು ಜಿಲ್ಲೆಗಳಲ್ಲಿ ವಿಸ್ತರಣೆ ಮಾಡುತ್ತಿರುವುದು ಅಪಾಯಕಾರಿ. ಇದರಿಂದ ಮುಂದೆ ಬೆಳೆಗಳ ಅಸಮತೋಲನ ಉಂಟಾಗುವ ಭೀತಿ ಇದೆ ಎಂಬ ಕಳವಳ ಬುಧವಾರ ವಿಧಾನಸಭೆಯಲ್ಲಿ ವ್ಯಕ್ತವಾಯಿತು. ಕೃಷಿ ಎದುರಿಸುತ್ತಿರುವ ಅತಿವೃಷ್ಟಿ ಮತ್ತಿತರ ಸಮಸ್ಯೆಗಳಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ನಡೆಯುತ್ತಿದ್ದ ಚರ್ಚೆ ವೇಳೆ ಗೃಹಸಚಿವ ಆರಗ ಜ್ಞಾನೇಂದ್ರ ವಿಷಯ ಪ್ರಸ್ತಾವಿಸಿ, ಅಡಿಕೆ ಬೆಳೆ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವುದನ್ನು ನೋಡಿದರೆ ಅದುವೇ ರೈತರಿಗೆ ಮಾರಕವಾಗುವ ದಿನಗಳು …
Read More »ಕೈಗಾರಿಕೆಗಳಿಗೆ ಜಮೀನು: ಭೂ ಲೆಕ್ಕ ಪರಿಶೋಧನೆಗೆ ಆದೇಶ
ಬೆಳಗಾವಿ: “ಕರ್ನಾಟಕ ಕೈಗಾರಿಕಾ ಪ್ರದೇಶಾಭಿ ವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಕೈಗಾರಿಕೆಗಳ ಸ್ಥಾಪನೆಗೆ ಸ್ವಾಧೀನಪಡಿಸಿಕೊಂಡ ಜಮೀನಿನ ಸಮಗ್ರ ಲೆಕ್ಕ ಪರಿಶೋಧನೆಗೆ (ಲ್ಯಾಂಡ್ ಆಡಿಟ್) 3 ತಿಂಗಳ ಹಿಂದೆ ಆದೇಶಿಸಲಾಗಿದೆ. ವರದಿ ಬಂದ ಕೂಡಲೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ವಿಧಾನಸಭೆಯಲ್ಲಿ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕದ ಮೇಲಿನ ಚರ್ಚೆ ವೇಳೆ ಮಾತ ನಾಡಿ, ಉಕ್ಕು ಮತ್ತು ಉಷ್ಣ ಸ್ಥಾವರ ಸೇರಿದಂತೆ ವಿವಿಧ ಕೈಗಾರಿಕೆಗಳ …
Read More »ಕೋವಿಡ್: ಆರೋಗ್ಯ ಸೌಲಭ್ಯಗಳ ಪರಿಶೀಲನೆ
ಬೆಳಗಾವಿ: ಕೋವಿಡ್-19 ಪರಿಸ್ಥಿತಿ ಎದುರಿಸಲು ಆರೋಗ್ಯ ಸೌಲಭ್ಯಗಳ ಸನ್ನದ್ಧತೆ ಖಾತ್ರಿಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಅಣಕು ಪರೀಕ್ಷೆ ನಡೆಯಿತು. ಕೊರೊನಾ 4ನೇ ಅಲೆಯಲ್ಲಿ ಸೋಂಕಿತರು ಚಿಕಿತ್ಸೆಗೆ ದಾಖಲಾದರೆ, ಯಾವುದೇ ತೊಂದರೆಯಾಗದಿರುವುದನ್ನು ಖಚಿತಪಡಿಸಿಕೊಳ್ಳಲು ದ್ರವೀಕೃತ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳು, ಸರಬರಾಜು ವ್ಯವಸ್ಥೆ, ತೀವ್ರ ನಿಗಾ ಘಟಕಗಳು ಮತ್ತು ಇತರೆ ಸೌಲಭ್ಯ ಪರೀಕ್ಷಿಸಲಾಯಿತು. ಜಿಲ್ಲಾಸ್ಪತ್ರೆಯಲ್ಲಿ ನಿತ್ಯ 30 ಕೆ.ಎಲ್ ಸಾಮರ್ಥ್ಯದ ದ್ರವೀಕೃತ ವೈದ್ಯಕೀಯ ಆಮ್ಲಜನಕ …
Read More »ಕಳಪೆ ಕಾಮಗಾರಿ 15 ದಿನಗಳಲ್ಲಿ ಹದಗೆಟ್ಟರಸ್ತೆ
ಖಾನಾಪುರ: ಪಟ್ಟಣದಿಂದ ಕೇವಲ ನಾಲ್ಕು ಕಿ.ಮೀ ಅಂತರದಲ್ಲಿರುವ ರಾಮಗುರವಾಡಿ ಗ್ರಾಮ ಹಲವು ಮೂಲಸೌಕರ್ಯಗಳ ಕೊರತೆಯಿಂದ ಬಡವಾಗಿದೆ. ಜಾಂಬೋಟಿ- ಜತ್ತ ರಾಜ್ಯ ಹೆದ್ದಾರಿಯಿಂದ ಉತ್ತರ ದಿಕ್ಕಿಗೆ 1 ಕಿ.ಮೀ ಅಂತರದಲ್ಲಿರುವ ಈ ಗ್ರಾಮಕ್ಕೆ ಸರಿಯಾದ ಸಂಪರ್ಕ ರಸ್ತೆಯೇ ಇಲ್ಲ. ಇದು ಇಲ್ಲಿನ ಬಹುಮುಖ್ಯ ಸಮಸ್ಯೆ. ರಸ್ತೆ ಸುಸ್ಥಿತಿಯಲ್ಲಿ ಇಲ್ಲದ ಕಾರಣ ಬಸ್‌ಗಳು ಗ್ರಾಮದೊಳಗೆ ಬರುತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತೊಂದರೆ ಅನುಭವಿಸುವುದು ತಪ್ಪಿಲ್ಲ. 2,000 ಜನಸಂಖ್ಯೆ ಹೊಂದಿರುವ ರಾಮಗುರವಾಡಿ ಗ್ರಾಮದಲ್ಲಿ ಸ್ಥಳೀಯ …
Read More »ಮಕ್ಕಳಿಂದ ಕಲಾಪ ವೀಕ್ಷಣೆ
ಬೆಳಗಾವಿ: ಒಂದೆಡೆ ಪ್ರೇಕ್ಷಣೀಯ ಸ್ಥಳಗಳು, ದೇವಾಲಯಗಳಿಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದರೆ, ಮತ್ತೊಂದೆಡೆ ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ. ಇಲ್ಲಿ ಡಿ.19ರಿಂದ ಆರಂಭಗೊಂಡ ವಿಧಾನಮಂಡಲ ಚಳಿಗಾಲದ ಅಧಿವೇಶನ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದಾರೆ. ಈ ಮಧ್ಯೆ, ಸಾವಿರಾರು ವಿದ್ಯಾರ್ಥಿಗಳೂ ಹೆಜ್ಜೆ ಹಾಕುತ್ತಿರುವುದರಿಂದ ಭವ್ಯ ಸೌಧವೀಗ ‘ಶೈಕ್ಷಣಿಕ ಪ್ರವಾಸ’ದ ಕೇಂದ್ರವಾಗಿ ಬದಲಾಗಿದೆ. ಸೌಧದ ಅಂಗಳದಲ್ಲಿ ಮಕ್ಕಳ ಕಲರವ ಕಂಡುಬರುತ್ತಿದೆ. 10 ಸಾವಿರ …
Read More »
Laxmi News 24×7