Breaking News
Home / ಜಿಲ್ಲೆ / ಬೆಳಗಾವಿ / ಕೋವಿಡ್‌: ಆರೋಗ್ಯ ಸೌಲಭ್ಯಗಳ ಪರಿಶೀಲನೆ

ಕೋವಿಡ್‌: ಆರೋಗ್ಯ ಸೌಲಭ್ಯಗಳ ಪರಿಶೀಲನೆ

Spread the love

ಬೆಳಗಾವಿ: ಕೋವಿಡ್‌-19 ಪರಿಸ್ಥಿತಿ ಎದುರಿಸಲು ಆರೋಗ್ಯ ಸೌಲಭ್ಯಗಳ ಸನ್ನದ್ಧತೆ ಖಾತ್ರಿಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಅಣಕು ಪರೀಕ್ಷೆ ನಡೆಯಿತು.

ಕೊರೊನಾ 4ನೇ ಅಲೆಯಲ್ಲಿ ಸೋಂಕಿತರು ಚಿಕಿತ್ಸೆಗೆ ದಾಖಲಾದರೆ, ಯಾವುದೇ ತೊಂದರೆಯಾಗದಿರುವುದನ್ನು ಖಚಿತಪಡಿಸಿಕೊಳ್ಳಲು ದ್ರವೀಕೃತ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳು, ಸರಬರಾಜು ವ್ಯವಸ್ಥೆ, ತೀವ್ರ ನಿಗಾ ಘಟಕಗಳು ಮತ್ತು ಇತರೆ ಸೌಲಭ್ಯ ಪರೀಕ್ಷಿಸಲಾಯಿತು.

 

ಜಿಲ್ಲಾಸ್ಪತ್ರೆಯಲ್ಲಿ ನಿತ್ಯ 30 ಕೆ.ಎಲ್‌ ಸಾಮರ್ಥ್ಯದ ದ್ರವೀಕೃತ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕವಿದೆ. ಪ್ರತಿ ನಿಮಿಷಕ್ಕೆ 1 ಸಾವಿರ ಲೀಟರ್‌ ಉತ್ಪಾದನೆ ಸಾಮರ್ಥ್ಯದ 3 ಪ್ರೆಷರ್‌ ಸ್ವಿಂಗ್ ಅಡ್ಸರಪ್ಶನ್‌ ಘಟಕಗಳು, ವ್ಯಾಕ್ಯೂಮ್‌ ಸ್ವಿಂಗ್‌ ಅಡ್ಸರಪ್ಶನ್‌ ಘಟಕಗಳಿವೆ. 1,160 ಹಾಸಿಗೆಗಳ ಪೈಕಿ 908 ಹಾಸಿಗೆಗಳಿಗೆ ಆಕ್ಸಿಜನ್‌ ಸೌಲಭ್ಯ ಒದಗಿಸಲಾಗಿದೆ. 150 ಹಾಸಿಗೆ ಒಳಗೊಂಡ ತೀವ್ರ ನಿಗಾ ಘಟಕವಿದೆ. 2 ಸಿಟಿ ಸ್ಕ್ಯಾನ್‌ ಮಷಿನ್‌, 1 ಎಂಆರ್‌ಐ ಮಷಿನ್‌, 6 ಅಲ್ಟ್ರಾಸೋನೋಗ್ರಫಿ ಮಷಿನ್‌, 12 ಎಕ್ಸ್‌-ರೇ ಮಷೀನ್‌ ಮತ್ತು 105 ವೆಂಟಿಲೇಟರ್‌ ಲಭ್ಯವಿವೆ.

‘ಜಿಲ್ಲಾಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳಿಂದ ಚಿಕಿತ್ಸೆಗಾಗಿ ಒಬ್ಬ ಕೊರೊನಾ ಸೋಂಕಿತರು ದಾಖಲಾಗಿಲ್ಲ. ಆದರೆ, 4ನೇ ಅಲೆಯಲ್ಲಿ ದಾಖಲಾದರೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಸದ್ಯ ಸೋಂಕಿತರ ಚಿಕಿತ್ಸೆಗಾಗಿ 30 ಹಾಸಿಗೆ, ತೀವ್ರ ನಿಗಾ ಘಟಕದಲ್ಲಿ 10 ಹಾಸಿಗೆ ಕಾಯ್ದಿರಿಸಿದ್ದೇವೆ. ಅಗತ್ಯಬಿದ್ದರೆ ಕೋವಿಡ್-19 ವಾರ್ಡ್‌ ರಚಿಸುತ್ತೇವೆ’ ಎಂದು ಬಿಮ್ಸ್‌ ನಿರ್ದೇಶಕ ಡಾ.ಅಶೋಕ್‌ಕುಮಾರ್‌ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಣಕು ಪರೀಕ್ಷೆ ವೇಳೆ, ಆಮ್ಲಜನಕ ಉತ್ಪಾದನಾ ಘಟಕಗಳು, ಸರಬರಾಜು ವ್ಯವಸ್ಥೆ, ತೀವ್ರ ನಿಗಾ ಘಟಕಗಳು ಮತ್ತು ಇತರೆ ಸೌಲಭ್ಯಗಳಲ್ಲಿ ಸಮಸ್ಯೆ ಕಂಡುಬಂದಿಲ್ಲ. ಎಲ್ಲವೂ ನಿಯಮಾನುಸಾರವಾಗಿ ಕಾರ್ಯ ನಿರ್ವಹಿಸುತ್ತಿವೆ. ನಮ್ಮಲ್ಲಿ ನವಜಾತ ಶಿಶುಗಳಿಗಾಗಿ ವೆಂಟಿಲೇಟರ್‌ಗಳಿವೆ. ಒಂದುವೇಳೆ ತುರ್ತಾಗಿ ಆಮ್ಲಜನಕದ ಕೊರತೆ ಎದುರಾದರೆ ಅನುಕೂಲವಾಗಲೆಂದು 70 ಸಿಲಿಂಡರ್‌ ಹೆಚ್ಚುವರಿಯಾಗಿ ಇರಿಸಿದ್ದೇವೆ’ ‌ಎಂದು ಹೇಳಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್‌ ಸೋಮವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಕೊರೊನಾ ನಿರ್ವಹಣೆಗೆ ಕೈಗೊಂಡಿರುವ ವ್ಯವಸ್ಥೆ ಪರಿಶೀಲಿಸಿದ್ದರು. ಕೋವಿಡ್‌-19 ಪರಿಸ್ಥಿತಿ ಎದುರಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ