Breaking News

ಜಿಲ್ಲೆ

ಕಮಲ” ಮತ್ತೊಮ್ಮೆ ಅರಳಲು ಕಾರ್ಯಕರ್ತರು ಶ್ರಮಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

  *ವಡೇರಹಟ್ಟಿ (ಮೂಡಲಗಿ)-* ತಮ್ಮೆಲ್ಲ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷ ವಹಿಸಿರುವ ಸಂಘಟನಾತ್ಮಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲು ಶ್ರಮಿಸುವಂತೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ಅರಭಾವಿ ಬಿಜೆಪಿ ಮಂಡಲದಿಂದ ವಿಜಯ ಸಂಕಲ್ಪ ಅಭಿಯಾನದ ನಿಮಿತ್ಯ ಹಮ್ಮಿಕೊಂಡಿದ್ದ ಮತಗಟ್ಟೆ ಶಕ್ತಿಕೇಂದ್ರ, ಪೇಜ್ …

Read More »

ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ಗುಂಡಿನ ದಾಳಿ

ಬೆಳಗಾವಿ: ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಸವಸುದ್ದಿ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದೆ.   ಸಂಬಂಧಿಕರ ನಡುವಿನ ವ್ಯಾಜ್ಯದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.  ಶ್ರೀಶೈಲ್ ಬಾಳಪ್ಪ ಪಾಟೀಲ್ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ 2 ಸುತ್ತು ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಲ್ಲಿ ಯಾರಿಗೂ  ಅಪಾಯವಾಗಿಲ್ಗಾಲ. ಆದರೆ  ಈ ವೇಳೆ ನಡೆದ ಹೊಡೆದಾಟದಲ್ಲಿ, ಗುಂಡು ಹಾರಿಸಿದ ಆರೋಪಿ ಶ್ರೀಶೈಲ ಪಾಟೀಲ ಗಾಯಗೊಂಡಿದ್ದಾನೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು …

Read More »

ಸಂಕೇಶ್ವರ: ಅಪರಿಚಿತ ವಾಹನ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

ಸಂಕೇಶ್ವರ : ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಂಕೇಶ್ವರ ನಗರದ ಹೊರವಲಯದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೋಮವಾರ ರಾತ್ರಿ ನಡೆದಿದೆ.   ಮೃತಪಟ್ಟಿರುವ ವ್ಯಕ್ತಿಯ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಅಪಘಾತದಲ್ಲಿ ಬೈಕ್ ಸವಾರನ ದೇಹವು ಮೂರು ಭಾಗವಾಗಿ ತುಂಡರಿಸಿದಂತಾಗಿದೆ. ಬೈಕ್ ಗೆ ಢಿಕ್ಕಿ ಹೊಡೆದು ಪರಾರಿಯಾಗಿರುವ ಅಪರಿಚಿತ ವಾಹನ ಪತ್ತೆ ಹಚ್ಚಲು ಸಂಕೇಶ್ವರ ಪೊಲೀಸರು …

Read More »

ಸಿದ್ದರಾಮಯ್ಯ ಕ್ಷೇತ್ರದ ಸ್ಫೋಟಕ ಭವಿಷ್ಯ ನುಡಿದ BSY

ಬೆಳಗಾವಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಪರ್ಧೆ ಕ್ಷೇತ್ರದ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಕೋಲಾರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.   ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ. ಕೋಲಾರದಿಂದ ಸ್ಪರ್ಧಿಸಿದರೆ ಅವರಿಗೆ ಸೋಲು ನಿಶ್ಚಿತ. ಇದು ಸಿದ್ದರಾಮಯ್ಯನವರಿಗೂ ಗೊತ್ತು. ಕೋಲಾರದಿಂದ ಸ್ಪರ್ಧಿಸುವುದಾಗಿ ಡ್ರಾಮಾ ಮಾಡ್ತಿದ್ದಾರೆ. ಇದೆಲ್ಲ ರಾಜಕೀಯ ದೊಂಬರಾಟ ಎಂದು ಹೇಳಿದರು. ಅಂತಿಮವಾಗಿ ಸಿದ್ದರಾಮಯ್ಯ ಮೈಸೂರಿಗೆ …

Read More »

ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಹಾಸನ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬದ ಯಜಮಾನಿಗೆ ₹2 ಸಾವಿರ ಸಹಾಯಧನ, 10 ಕೆ.ಜಿ. ಅಕ್ಕಿಯನ್ನು ಕೊಡುವುದಾಗಿ ಭರವಸೆ ನೀಡಿದ್ದೇವೆ.‌ ಅದನ್ನು‌ ಈಡೇರಿಸುತ್ತೇವೆ. ಒಂದು‌ ವೇಳೆ‌ ಈಡೇರಿಸದೇ ಹೋದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇವೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ‌ ಹೇಳಿದರು.   ಇಲ್ಲಿ ಶನಿವಾರ ನಡೆದ ‘ಪ್ರಜಾಧ್ವನಿ‌’ ಯಾತ್ರೆಯಲ್ಲಿ‌ ಮಾತನಾಡಿರುವ ಅವರು, ‘ಈ ಬಗ್ಗೆ ಜಿಲ್ಲೆಯ ಪ್ರತಿಯೊಬ್ಬರಿಗೆ ಪಕ್ಷದ ಕಾರ್ಯಕರ್ತರೂ ಮನವರಿಕೆ ಮಾಡಿಕೊಡಬೇಕು. ಜಿಲ್ಲೆಯಲ್ಲಿ …

Read More »

ಬೆಳಗಾವಿ: ಗೋ ಶಾಲೆಗೆ ಭೂಮಿಪೂಜೆ

ಬೆಳಗಾವಿ: ‘ಗೋಗಳ‎ ರಕ್ಷಣೆ ಹಾಗೂ ಪಾಲನೆ ಮಾಡುವುದು‎ ಪುಣ್ಯದ‎ ಕೆಲಸ. ಇದಕ್ಕಾಗ ಗೋ ಶಾಲೆ ತೆರೆದ ಆಸರೆ ಫೌಂಡೇಷನ್ ಕಾರ್ಯ‎ ಶ್ಲಾಘನೀಯ ಈ‎ ಕಾರ್ಯಕ್ಕೆ ಬೇಕಾದ‎ ಸಹಾಯ, ಸಹಕಾರ ಒದಗಿಸಲು ಸದಾ‎ ಸಿದ್ಧ’ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.   ಇಲ್ಲಿನ ಆಸರೆ ಫೌಂಡೇಷನ್ ವತಿಯಿಂದ ತಾಲ್ಲೂಕಿನ ಕೆ.ಕೆ.ಕೊಪ್ಪ ಗ್ರಾಮದಲ್ಲಿ ತೆರೆದ ಗೋಶಾಲೆಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಚಲನ‎ಚಿತ್ರ ನಟ‎, ನಿರ್ಮಾಪಕ ಅಕ್ಷಯ್ ಚಂದ್ರಶೇಖರ್‎ ಮಾತನಾಡಿದರು. ಫೌಂಡೇಷನ್‌ …

Read More »

ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಗ್ರಾಹಕರ ಆಯೋಗದಿಂದ ದಂಡ

ಧಾರವಾಡ : ಧಾರವಾಡದ ಯು.ಬಿ.ಹಿಲ್ ನಿವಾಸಿ ಅಶೋಕ ಹುದ್ದಾರ ಎಂಬುವವರು ಇಲ್ಲಿನ ಹೆಡ್‍ಪೋಸ್ಟ್ ಕಛೇರಿಯಲ್ಲಿ 15 ವರ್ಷಗಳ ಅವಧಿಯ ಹೆಚ್.ಯು.ಎಫ್, ಪಿ.ಪಿ.ಎಫ್ ಅಕೌಂಟ್ ತೆರೆದು ಸದರಿ ಯೋಜನೆಯಡಿ ಹಣವನ್ನು ತೊಡಗಿಸಿದ್ದರು. ಸದರಿ ಯೋಜನೆಯು ದಿ:31/03/2015 ರಂದು ಮುಕ್ತಾಯವಾಗಿತ್ತು.ತದನಂತರ ದೂರುದಾರ ಸದರಿ ಯೋಜನೆಯನ್ನು ಮತ್ತೆ 5 ವರ್ಷಗಳ ಅವಧಿಗೆ ಅಂದರೆ 01/04/2015 ರಿಂದ 31/03/2020 ರವರೆಗೆ ಮುಂದುವರೆಸಿದ್ದರು. ಆ ಯೋಜನೆ ದಿ:31/03/2020 ರಂದು ಮುಕ್ತಾಯವಾಗಿದ್ದರೂ ಅಲ್ಲಿಯವರೆಗಿನ ಅವರ ವಂತಿಗೆ ಹಣ ಮತ್ತು ಅದರ …

Read More »

ಡಿ.ಕೆ.ಶಿ ಸಂಜೆ ಡಬಲ್ ಆಗ್ತಾರೆ; ಕಾಂಗ್ರೆಸ್ ಮುಳುಗುತ್ತಿರುವ ಹಡಗು ಆ ಪಕ್ಷಕ್ಕೆ ಯಾರು ಹೋಗ್ತಾರೆ; ಶಾಸಕ ವಿರೂಪಾಕ್ಷಪ್ಪ ತಿರುಗೇಟು

ಹಾವೇರಿ: ಹಾವೇರಿ ಶಾಸಕರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ , ಡಿಕೆಶಿ ಸಂಜೆ ಡಬಲ್ ಆಗ್ತಾರೆ. ಸಾಯಂಕಾಲದ ವೇಳೆ ಅವರು ಮಾತನಾಡಿರಬಹುದು ಎಂದು ಲೇವಡಿ ಮಾಡಿದ್ದಾರೆ.   ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಆ ಪಕ್ಷಕ್ಕೆ ಯಾರು ಹೋಗ್ತಾರೆ? ಈ ಹಿಂದೆ ಕಾಂಗ್ರೆಸ್ ನಾಯಕರು ಟಿಕೆಟ್ ಕೊಡುತ್ತೇವೆ ಎಂದು ಮನೆ ಬಾಗಿಲಿಗೆ ಬಂದಿದ್ದರು. ಆ ಸಂದರ್ಭದಲ್ಲಿಯೇ ನಾನು ಕಾಂಗ್ರೆಸ್ ಗೆ …

Read More »

ಮುಂದಿನ ತಿಂಗಳಿನಿಂದ ಪಡಿತರ ಪುನಃ 10 ಕೆಜಿಗೆ ಹೆಚ್ಚಳ : ಕಂದಾಯ ಸಚಿವ ಆರ್. ಅಶೋಕ್

ಬೆಂಗಳೂರು : ರಾಜ್ಯದ ಪಡಿತರ ಚೀಟಿದಾರರಿಗೆ ಕಂದಾಯ ಸಚಿವ ಆರ್. ಅಶೋಕ್ ಸಿಹಿಸುದ್ದಿ ನೀಡಿದ್ದು, ಬರುವ ತಿಂಗಳಿನಿಂದ ಪಡಿತರೆ ವಿತರಣೆ ಪ್ರಮಾಣವನ್ನು ಪುನಃ 10 ಕೆಜಿಗೆ ಹೆಚ್ಚಿಸಲಾಗುವುದುಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ. ಜಿಲ್ಲಾಡಳಿತ,ಜಿಲ್ಲಾಪಂಚಾಯತ್ ಸಹಯೋಗದಲ್ಲಿ ಇಂದು ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ರಾಗಿಯ ರಾಶಿಪೂಜೆ ಸಲ್ಲಿಸಿ,ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು, ಬಡ ನಿವೇಶನ ರಹಿತರ ಹಕ್ಕುಗಳನ್ನು ಕಾಯಲು …

Read More »

ಜೆಡಿಎಸ್ ಗೆ ಮತ್ತೊಂದು ಆಘಾತ

ವಿಜಯಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್ ಗೆ ಮತ್ತೊಂದು ಆಘಾತವಾಗಿದೆ. ಜೆಡಿಎಸ್ ಅಭ್ಯರ್ಥಿ, ಮಾಜಿ ಯೋಧ ಶಿವಾನಂದ ಸೋಮನಾಳ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಜಯಪುರದಲ್ಲಿ ನಡೆದ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಶಿವಾನಂದ ಸೋಮನಾಳ (55) ಪಂಚರತ್ನ ರಥಯಾತ್ರೆ ಬಳಿಕ ತಮ್ಮ ಕ್ಷೇತ್ರ ಸಿಂದಗಿಗೆ ತೆರಳಿದ್ದರು. ಪರಿಚಯಸ್ಥರ ಮನೆಯಲ್ಲಿ ಕುಳಿತಿದ್ದ ಶಿವಾನಂದ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ.ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು. 15 …

Read More »