ಬೆಳಗಾವಿ: ಇಲ್ಲಿನ ಹುತಾತ್ಮ ಚೌಕ್‌ನಲ್ಲಿ ಮಂಗಳವಾರ ನಡೆದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ಕರ್ನಾಟಕ-ಮಹಾರಾಷ್ಟ್ರ ಗಡಿ ಹೋರಾಟದಲ್ಲಿ ಮಡಿದವರಿಗೆ ಗೌರವ ಸಲ್ಲಿಸಿದರು. ‘ರಾಜ್ಯದಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು’ ಎಂದು ಒತ್ತಾಯಿಸಿದ ಕಾರ್ಯಕರ್ತರು, ‘ಬೆಳಗಾವಿ, ಖಾನಾಪುರ, ನಿಪ್ಪಾಣಿ, ಬೀದರ್, ಭಾಲ್ಕಿ, ಕಾರವಾರ ಸಹ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಹಿಜೆ’ ಎಂದು ನಾಡವಿರೋಧಿ ಘೋಷಣೆ ಕೂಗಿದರು. ‘ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು …
Read More »ಗಡ್ಕರಿಗೆ ಬೆದರಿಕೆ: ಜೈಲಿನೊಳಗೆ ಮೊಬೈಲ್ ಹೋಗಿದ್ದು ಹೇಗೆ? ಇನ್ನೂ ಸಿಗದ ಸುಳಿವು
ಬೆಳಗಾವಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ ಕೈದಿ ಜಯೇಶ್ ಪೂಜಾರಿ ಕೈಗೆ ಮೊಬೈಲ್ ಫೋನ್ ಕೊಟ್ಟಿದ್ದು ಯಾರು? ಜೈಲಿನೊಳಗೆ ಮೊಬೈಲ್ ಫೋನ್ ಹೋಗಿದ್ದು ಹೇಗೆ? ಎಂಬ ಬಗ್ಗೆ ಅಧಿಕಾರಿಗಳಿಗೆ ಇನ್ನೂ ಸುಳಿವು ಸಿಕ್ಕಿಲ್ಲ. ಹಿಂಡಲಗಾ ಜೈಲಿನಲ್ಲಿ ಇದ್ದುಕೊಂಡೇ ಶನಿವಾರ ಕರೆ ಮಾಡಿದ್ದ ಕೈದಿ, ತಾನು ಭೂಗತಪಾತಕಿ ದಾವೂದ್ ಇಬ್ರಾಹಿಂ ತಂಡದ ಸದಸ್ಯ, ₹100 ಕೋಟಿ ನೀಡುವಂತೆ ಬೆದರಿಕೆ ಒಡ್ಡಿದ್ದ. ಈ ಬಗ್ಗೆ …
Read More »ಈ ಖತರ್ನಾಕ್ ಕಳ್ಳರ ಟಾರ್ಗೆಟ ಮೊಬೈಲ್ ಟವರ್
ಬೆಂಗಳೂರು: ಮೊಬೈಲ್ ಟವರ್ಗಳನ್ನೇ ಟಾರ್ಗೇಟ್ ಮಾಡಿ RRU ಕಾರ್ಡ್ಗಳನ್ನು ಇಬ್ಬರು ಖತರ್ನಾಕ ಕಳ್ಳರು ಕಳ್ಳತನ ಮಾಡುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರು ಖತರ್ನಾಕ ಕಳ್ಳರು ಟವರ್ ಬಳಿ RRU ಕಾರ್ಡ್ ಕಳ್ಳತನ ಮಾಡುತ್ತಿದ್ದರು. ಕೆಂಗೇರಿ, ನಾಗರಬಾವಿ, ಚಂದ್ರಲೇಔಟ್, ಪದ್ಮನಾಭನಗರ ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಮೌಲ್ಯದ RRU (Riote Radio Unit) ಕಳ್ಳತನ ಮಾಡಿದ್ದಾರೆ. ಈ ಘಟನೆ ಸಂಬಂಧ ಇಂಡಸ್ …
Read More »ಡಾ.ವಿಜಯ ಸಂಕೇಶ್ವರ ಅವರಿಗೆ ‘ಶ್ರೀ ಸಿದ್ಧಶ್ರೀ ಪ್ರಶಸ್ತಿ’, ವಿಜಯಾನಂದ ಚಿತ್ರಕ್ಕೆ ‘ಅತ್ಯುತ್ತಮ ಬಯೋಪಿಕ್’ ಪ್ರದಾನ
ಬಾಗಲಕೋಟೆ: ಪುಣ್ಯಕ್ಷೇತ್ರ ಸಿದ್ಧನಕೊಳ್ಳದ ಸಿದ್ಧೇಶ್ವರ ಮಠದಿಂದ 2023ನೇ ಸಾಲಿನ ‘ಶ್ರೀ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ’ಯನ್ನು ವಿಆರ್ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರಿಗೆ ಪ್ರದಾನ ಮಾಡಲಾಯಿತು. ಮೂರು ದಿನಗಳ ಸಿದ್ಧಶ್ರೀ ಉತ್ಸವದಲ್ಲಿ ಎರಡನೇ ದಿನವಾದ ಭಾನುವಾರ ರಾತ್ರಿ ನಡೆದ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಡಾ.ವಿಜಯ ಸಂಕೇಶ್ವರ ಅವರಿಗೆ ಪ್ರಶಸ್ತಿ ವಿತರಿಸಲಾಯಿತು. ‘ವಿಜಯಾನಂದ’ ಚಿತ್ರಕ್ಕೆ ಅತ್ಯುತ್ತಮ ಬಯೋಪಿಕ್ ಪ್ರಶಸ್ತಿಯನ್ನೂ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ಸಿದ್ಧನಕೊಳ್ಳದ ಧರ್ಮಾಧಿಕಾರಿ ಡಾ. …
Read More »ಆಕಸ್ಮಿಕ ಬೆಂಕಿ: ಉರಿದ ಲಾರಿ
ಚನ್ನಮ್ಮನ ಕಿತ್ತೂರು: ಸಮೀಪದ ಶಿವ ಪೆಟ್ರೋಲ್ ಪಂಪ್ ಬಳಿ ತಮಿಳನಾಡಿಗೆ ಸೇರಿದ ಲಾರಿಯೊಂದಕ್ಕೆ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟಿದೆ. ಪೊಟ್ರೋಲ್ ಪಂಪ್ ಸಮೀಪದಲ್ಲೇ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಭಯದ ವಾತಾವರಣ ಮನೆ ಮಾಡಿತು. ಮುಂಬೈಗೆ ಹೊರಟಿದ್ದ ಲಾರಿ ಚಾಲಕರು ಪಂಪ್ ಬಳಿ ವಿಶ್ರಾಂತಿಗಾಗಿ ತಂಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲಾರಿಯಲ್ಲಿದ್ದ ಎಳನೀರು ಕಾಯಿಗಳೂ ಸುಟ್ಟಿವೆ. ಅಗ್ನಿಶಾಮಕ ದಳದವರು ಮತ್ತು ಪೊಲೀಸರು …
Read More »ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
ತೆಲಸಂಗ: ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ 1979ನೇ ಬ್ಯಾಚಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶನಿವಾರ ನಡೆಯಿತು. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಭಾಸ ಸಜ್ಜನ, ‘ನಮ್ಮ ಶಿಕ್ಷಕರು ಕೇವಲ ಪಠ್ಯ ಬೋಧಿಸಲಿಲ್ಲ. ಜೀವನದಲ್ಲಿ ಎದುರಾಗಬಹುದಾದ ಕಷ್ಟ ಹೇಗೆ ಎದುರಿಸಬೇಕೆಂದು ಕಲಿಸಿದರು. ಮಾದರಿಯಾಗಿ ನಮ್ಮ ಬದುಕು ರೂಪಿಸಿದರು’ ಎಂದು ಸ್ಮರಿಸಿದರು. ಓಗೆಪ್ಪ ಅರಟಾಳ, ಸಾವಿತ್ರಿ ಹಿರೇಮಠ, ಉಮಾ ಪೋತದಾರ, ಶಾಲೆಯಲ್ಲಿ ತಾವು ಕಳೆದ ಬಾಲ್ಯದ ದಿನಗಳನ್ನು ಮೆಲಕು ಹಾಕಿದರು. …
Read More »ರಾಮದುರ್ಗ ಸರ್ಕಾರಿ ಶಾಲೆ ‘ಸ್ಮಾರ್ಟ್’
ರಾಮದುರ್ಗ: ಶಿಕ್ಷಕರು ಮನಸ್ಸು ಮಾಡಿದರೆ ಸಮುದಾಯದ ಸಹಭಾಗಿತ್ವದೊಂದಿಗೆ ಸರ್ಕಾರಿ ಶಾಲೆಯನ್ನೂ ಮಾದರಿಯಾಗಿ ಅಭಿವೃದ್ಧಿಪಡಿಸಬಹುದು. ಇದಕ್ಕೆ ಉತ್ತಮ ಉದಾಹರಣೆ, ತಾಲ್ಲೂಕಿನ ಕುನ್ನಾಳ ಪ್ರಾಥಮಿಕ ಶಾಲೆ. 1926ರಲ್ಲಿ ಈ ಶಾಲೆ ಸ್ಥಾಪನೆಯಾಗಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ, ಶಾಲೆಗೆ ಹೈಟೆಕ್ ಸ್ಪರ್ಶ ಕೊಟ್ಟಿದ್ದಾರೆ. 1ರಿಂದ 8ನೇ ತರಗತಿಯಲ್ಲಿ 253 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಂಪ್ಯೂಟರ್ ಲ್ಯಾಬ್: ಈ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ …
Read More »ಜನಾರ್ದನ ರೆಡ್ಡಿ ವಿರುದ್ಧ ಸ್ಪರ್ಧೆಗೆ ಸಿದ್ಧ: ಸೋಮಶೇಖರ್ ರೆಡ್ಡಿ
ಬಳ್ಳಾರಿ: ಹೊಸ ಪಕ್ಷವನ್ನು ಸ್ಥಾಪಿಸಿರುವ ಜನಾರ್ದನ ರೆಡ್ಡಿ ವಿರುದ್ಧವೇ ಅವರ ಸಹೋದರ ಸೋಮಶೇಖರ ರೆಡ್ಡಿ ಅವರು ಅಸಮಾಧಾನ ಹೊರ ಹಾಕಿದ್ದಾರೆ(Karnataka Election). ಪಕ್ಷ ಕಟ್ಟುವುದು ಬೇಡವೆಂದರೂ ಕೇಳಲಿಲ್ಲ ನಮ್ಮ ಸಹೋದರ. ಪಕ್ಷ ಕಟ್ಟಿರುವುದಕ್ಕೆ ಏನು ಮಾಡುವುದಕ್ಕೆ ಆಗುತ್ತದೆ. ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯಿಂದ ನಾನು ಸ್ಪರ್ಧಿಸುವುದು ನಿಶ್ಚಿತ. ಜನಾರ್ದನ ರೆಡ್ಡಿ ಬಂದು ನಿಂತರೂ ನಾನು ಸ್ಪರ್ಧಿಸುತ್ತೇನೆ, ಇದಕ್ಕಿಂತ ನಾನು ಇನ್ನೇನು ಹೇಳಬೇಕು ಎಂದು ಅವರು ಕೇಳಿದ್ದಾರೆ. ಯಾವತ್ತಿಗೂ ಬಿಜೆಪಿ ಪಾರ್ಟಿ ಬಿಡುವುದಿಲ್ಲ, …
Read More »ಒಂದೇ ಬಾರಿಗೆ 4 ಕರುಗಳಿಗೆ ಜನ್ಮನೀಡಿ ಅಚ್ಚರಿ ಮೂಡಿಸಿದ ಹಸು!
ಬಾಗಲಕೋಟೆ: ಪ್ರಪಂಚದಲ್ಲಿ ಪ್ರತಿದಿನವೂ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲ ವಿಷಯಗಳನ್ನು ನಂಬಲು ಸಹ ಸಾಧ್ಯವಾಗುವುದಿಲ್ಲ. 2 ಮುಖ, 5 ಕಾಲಿನ ಕರುಗಳು ಮತ್ತು ಪ್ರಾಣಿಗಳನ್ನು ನೀವು ನೋಡೇ ಇರುತ್ತೀರಿ. ಒಂದೇ ಬಾರಿಗೆ 2 ಕರುಗಳಿಗೆ ಜನ್ಮನೀಡಿದ ಹಸುಗಳನ್ನೂ ನೀವು ಕಂಡಿರುತ್ತೀರಿ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಹಸುವೊಂದು ಒಂದೇ ಬಾರಿಗೆ 4 ಕರುಗಳಿಗೆ ಜನ್ಮ ನೀಡಿದ್ದು, ಅಚ್ಚರಿ ಮೂಡಿಸಿದೆ. ಹೌದು, ಅಚ್ಚರಿಯಾದರೂ ಇದು ನಿಜ.ಬಾಗಲಕೋಟೆಜಿಲ್ಲೆಯ ಆಸಂಗಿ ಗ್ರಾಮದಲ್ಲಿ ಹಸುವೊಂದು ಒಂದೇ ಬಾರಿಗೆ …
Read More »ಮಿ ವಿವೇಕಾನಂದರು ಕೇವಲ ವ್ಯಕ್ತಿ ಅಲ್ಲ, ಅದೊಂದು ದಿವ್ಯ ಶಕ್ತಿ.:ವೈದ್ಯಾಧಿಕಾರಿ ಡಾ| ಭುವಿ
ಚಿಕ್ಕೋಡಿ: ಸ್ವಾಮಿ ವಿವೇಕಾನಂದರು ಕೇವಲ ವ್ಯಕ್ತಿ ಅಲ್ಲ, ಅದೊಂದು ದಿವ್ಯ ಶಕ್ತಿ. ಅವರು ಚಿಕ್ಯಾಗೊ ಸಮ್ಮೇಳನದಲ್ಲಿ ಮಾಡಿದ ಉಪನ್ಯಾಸ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತದ್ದು ಎಂದು ಕಬ್ಬೂರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಭುವಿ ನುಡಿದರು. ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೆಹರು ಯುವ ಕೇಂದ್ರ ಬೆಳಗಾವಿ, ಯುವ ಸಂಘಗಳ ಒಕ್ಕೂಟದ ತಾಲೂಕಾ ಘಟಕ, ಡಾ.ಅಂಬೇಡ್ಕರ ಕಲಾ ಮತ್ತು …
Read More »
Laxmi News 24×7