Breaking News

ಜಿಲ್ಲೆ

ತಿರುಗಿ ಬಿದ್ದ ಸಚಿವಾಕಾಂಕ್ಷಿಗಳು, ಬಿಜೆಪಿಗೆ ಶುರುವಾಯ್ತು ಹೊಸ ಟ್ರಬಲ್..!

ಬೆಂಗಳೂರು,ಜು.28- ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಉಂಟಾಗಬಹುದಾದ ಅಸಮಾಧಾನವನ್ನು ಶಮನಗೊಳಿಸಲು ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ ಬೆನ್ನಲ್ಲೇ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳು ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದು, ಆಡಳಿತಾರೂಢ ಕಮಲ ಪಕ್ಷ ವಿಲವಿಲ ಎನ್ನುವಂತಾಗಿದೆ. ಮಂತ್ರಿಸ್ಥಾನದ ಆಕಾಂಕ್ಷಿಯಾಗಿದ್ದವರಿಗೆ ಏಕಾಏಕಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿದ್ದರಿಂದ ಶಾಸಕರಲ್ಲಿ ಅಸಮಾಧಾನ ಸ್ಫೋಟವಾಗಿದ್ದು, ಕೋವಿಡ್ ಸಂಕಷ್ಟದಲ್ಲಿ ಬಿಳಿ ಆನೆ ಎಂದೆ ಕರೆಯಲ್ಪಡುವ ನಿಗಮ-ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು …

Read More »

ಟಿಪ್ಪು ಹೆಸರಿಲ್ಲದೆ ದೇಶದ ಇತಿಹಾಸ ಅಪೂರ್ಣ : ಡಿಕೆಶಿ

ಬೆಂಗಳೂರು: ದೇಶದ ಇತಿಹಾಸದಲ್ಲಿ ದಾಖಲಾದ ವಿಚಾರವನ್ನ ಬಿಎಸ್‍ವೈ ಸರ್ಕಾರ ಶಾಲಾ ಪಠ್ಯಗಳಿಂದ ಕೈಬಿಡಲು ಹೊರಟಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿರುವ ಡಿಕೆಶಿ, ಪಠ್ಯಪುಸ್ತಕದಿಂದ ಕೈ ಬಿಟ್ಟ ವಿಚಾರ ಸಂಬಂಧ ಸಂಶೋಧಕರು, ಶಿಕ್ಷಣ ತಜ್ಞರೊಂದಿಗೂ ಚರ್ಚಿಸಲಾಗುವುದು. ಇತಿಹಾಸ ತಿರುಚುವ ಮೂಲಕ ಜನರ ದಾರಿ ತಪ್ಪಿಸುತ್ತಿರುವುದನ್ನು ವಿರೋಧಿಸಬೇಕಿದೆ. ಯಾವುದೇ ಕಾರಣಕ್ಕೂ ಇತಿಹಾಸ ಮರೆಮಾಚಲು ಬಿಡುವುದಿಲ್ಲ ಎಂದು ಆಗ್ರಹಿಸಿದ್ದಾರೆ. ಟಿಪ್ಪು ಜಯಂತಿ ಆಚರಿಸುವುದು ಬಿಎಸ್‍ವೈ ಸರ್ಕಾರಕ್ಕೆ …

Read More »

ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿದರೆ ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುತ್ತದೆ

ಬೆಳಗಾವಿ:  ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿದರೆ ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುತ್ತದೆ. ಆದ್ದರಿಂದ ಮೂರು ದಿನಗಳಲ್ಲಿ ಸಮಿತಿಗಳನ್ನು ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು. ಜಿಲ್ಲಾಧಿಕಾರಿ ಕಚೇಯ ಸಭಾಂಗಣದಲ್ಲಿ ಮಂಗಳವಾರ (ಜುಲೈ 28) ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆಗಾಲ ಆರಂಭಗೊಂಡಿರುವುದರಿಂದ ಪ್ರವಾಹ, ಅತಿವೃಷ್ಟಿ ಸೇರಿದಂತೆ ಎಲ್ಲ ಬಗೆಯ ತುರ್ತು ಸಂದರ್ಭಗಳ ನಿರ್ವಹಣೆಗೆ …

Read More »

ಬೆಳಗಾವಿ ಜಿಲ್ಲಾ ಪಂಚಾಯಿತಿ ನೂತನ ಸಿಇಒ ಆಗಿ ದರ್ಶನ ಎಚ್.ವಿ.

ಬೆಳಗಾವಿ:  ಜಿಲ್ಲಾ ಪಂಚಾಯಿತಿ ನೂತನ ಸಿಇಒ ಆಗಿ ದರ್ಶನ ಎಚ್.ವಿ. ಅವರನ್ನು ನೇಮಕಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ದರ್ಶನ ಅವರನ್ನು ಬೆಳಗಾವಿ ಜಿಲ್ಲಾ ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ಬೆಳಗಾವಿ ಜಿಪಂ ಸಿಇಒ ಆಗಿದ್ದ ಡಾ. ಕೆ.ವಿ ರಾಜೇಂದ್ರ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇಲ್ಲಿನ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಡಾ. ಕೆ.ವಿ ರಾಜೇಂದ್ರ ಅವರನ್ನು ದಕ್ಷಿಣ ಕನ್ನಡ …

Read More »

ಶೀಘ್ರದಲ್ಲಿಯೇ ಗೋಕಾಕ-ಮೂಡಲಗಿ ತಾಲೂಕುಗಳಲ್ಲಿ ಕೇಂದ್ರಿಕೃತ ಆಮ್ಲಜನಕ ಪೂರೈಕೆಯ ಘಟಕ ಆರಂಭ : ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಕೊರೊನಾ ಸೋಂಕಿನ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುತ್ತಿರುವದರಿಂದ ಇದನ್ನು ಹೋಗಲಾಡಿಸಲು ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಕೇಂದ್ರೀಕೃತ ಆಮ್ಲಜನಕ ಪೂರೈಕೆಯ ಘಟಕವನ್ನು ಪ್ರಾರಂಭಿಸುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಕಿಟ್‍ಗಳನ್ನು ಹಸ್ತಾಂತರಿಸುವ ಮುನ್ನ ಅಧಿಕಾರಿಗಳೊಂದಿಗೆ ಬೆಂಗಳೂರಿನಿಂದ ದೂರವಾಣಿ ಮೂಲಕ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ಕೊರೊನಾ ರೋಗಿಗಳಿಗೆ ಸಮರ್ಪಕ ಆಕ್ಸಿಜನ್ ವ್ಯವಸ್ಥೆ ಇಲ್ಲದ್ದರಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಗೋಕಾಕ ಮತ್ತು ಮೂಡಲಗಿ …

Read More »

ಕೊರೊನಾ ಕಾಲದಲ್ಲಿ ಶಾಲೆ ತೆರೆಯಲು ಅವಸರವಿಲ್ಲ: ಸುರೇಶ್ ಕುಮಾರ್

ಬೆಂಗಳೂರು: ಕೊರೊನಾ ಸಾಂಕ್ರಾಮಿಕ ಪ್ರಸರಣದ ಈ ಕಾಲಘಟ್ಟದಲ್ಲಿ ಶಾಲೆಗಳನ್ನು ತೆರೆಯುವ ಅವಸರ ಸರ್ಕಾರದ ಮುಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಕೊರೊನಾ ಸಾಮಾಜಿಕ ಸಂದರ್ಭದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಮತ್ತು ಶಾಲಾ ಚಟುವಟಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮಂಗಳವಾರ ಶೈಕ್ಷಣಿಕ ವಲಯದಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ವೆಬಿನಾರ್ ಸಂವಾದದಲ್ಲಿ ಮಾತನಾಡಿದ ಅವರು, ಈ ಸಾಮಾಜಿಕ ಪರಿಸ್ಥಿತಿಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಅವಸರದಲ್ಲಿ ಶಾಲೆ ತೆರೆಯುವುದಿಲ್ಲವಾದರೂ …

Read More »

ಈ ವರ್ಷ ರಸ್ತೆಯಲ್ಲಿ ಗಣಪತಿ ಕೂರಿಸುವಂತಿಲ್ಲ………..

ಬೆಂಗಳೂರು: ಈ ವರ್ಷ ಬೆಂಗಳೂರಿನ ರಸ್ತೆಯಲ್ಲಿ ಗಣಪತಿ ಕೂರಿಸುವಂತಿಲ್ಲ ಎಂದು ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಕೊರೊನಾನಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಗಣೇಶ ಹಬ್ಬ ಮನೆಯಲ್ಲೇ ಮಾಡಿ. ಕೊರೊನಾ ವಿರುದ್ಧ ಹೋರಾಟ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಗಣಪತಿ ಕೂರಿಸಲು ಅವಕಾಶವೇ ಇಲ್ಲ. ಈ ಮೂಲಕ ಹಬ್ಬಗಳನ್ನ ಮನೆಯಲ್ಲಿ ಮಾಡಬೇಕು ಎಂದು ಪಬ್ಲಿಕ್ ಟಿವಿಗೆ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಹಬ್ಬದ ಶಾಪಿಂಗ್ ನೆಪದಲ್ಲಿ ನಿಯಮಗಳನ್ನು ಮೀರಿದರೆ ದಂಡ ವಿಧಿಸಲಾಗುತ್ತಿದೆ. …

Read More »

ವಿಡಿಯೋ ಕಾಲ್ ಮಾಡಿ ವೈದ್ಯರ ಸಲಹೆ ಪಡೆದು ಹೆರಿಗೆ ಮಾಡಿಸಿದ ಮಹಿಳೆಯರು

ಹಾವೇರಿ : ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆ ಪಡೆದು ಮಹಿಳೆಯರು ಹೆರಿಗೆ ಮಾಡಿಸಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ 2:30ರ ಸುಮಾರಿಗೆ ವಾಸವಿ ಪತ್ತೆಪೂರ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದ್ರೆ ಸಂಡೇ ಲಾಕ್ ಡೌನ್ ಇದ್ದ ಕಾರಣ ಇಡೀ ನಗರವೇ ಸ್ತಬ್ಧವಾಗಿತ್ತು. ಹೀಗಾಗಿ ವಾಸವಿ ಪತ್ತೆಪೂರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಿರಲ್ಲಿಲ್ಲ. ಇತ್ತ ಮಹಿಳೆಯ ಆಕ್ರಂದನ ಮತ್ತು ಕಿರುಚುವುದನ್ನ ಕಂಡ ಸ್ಥಳೀಯ …

Read More »

ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ಸಂದರ್ಶನ

ಚೆನ್ನೈ: ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ರಾಜಕೀಯ ಸೇರುವುದಂತೂ ಪಕ್ಕಾ ಆಗಿದೆ. ಅದಕ್ಕೂ ಮುನ್ನ ತನ್ನೂರು ಕರೂರಿನಲ್ಲಿ ಜನರೊಂದಿಗೆ ಬೆರೆತು ವಿವಿಧ ಚಟುವಟಿಕಗೆಳಲ್ಲಿ ಅವರು ತೊಡಗಿಕೊಂಡಿದ್ದಾರೆ. ರೈತರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದ್ದಾರೆ. ಇತ್ತೀಚೆಗೆ ತಮಿಳು ವಾಹಿನಿಯೊಂದಕ್ಕೆ ಅವರ ನೀಡಿರುವ ಸಂದರ್ಶನ ತಮಿಳುನಾಡಿನ ರಾಜಕೀಯದಲ್ಲಿಯೇ ಸಂಚಲನ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಅಪಮೌಲ್ಯೀಕರಣವನ್ನು ಶ್ಲಾಘಿಸಿದ್ದಾರೆ. ಪ್ರಧಾನಿ ಕಚೇರಿಯನ್ನು ಸಾರ್ವಜನಿಕರ ಸಂಪರ್ಕಕಕ್ಕೂ ಲಭ್ಯವಾಗುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ಆಡಳಿತವನ್ನು ಮೆಚ್ಚಿದ್ದು …

Read More »

ಅಸಮಾಧಾನ ಸ್ಫೋಟ: ಇಲ್ಲದನ್ನ ಮೈಮೇಲೆ ಎಳೆದುಕೊಂಡ ಸಿಎಂ, ಕಟೀಲ್‌ ಫಜೀತಿ

ಬೆಂಗಳೂರು: ಸರ್ಕಾರಕ್ಕೆ ಒಂದು ವರ್ಷ ತುಂಬಿದ ಖುಷಿಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪಕ್ಷದ ಶಾಸಕರುಗಳಿಗೆ ನಿಗಮ ಮಂಡಳಿ ಗಿಫ್ಟ್ ಕೊಟ್ಟಿದ್ದೇ ತಡ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದೆ. ಹೌದು… ಸಿಎಂ ಯಡಿಯೂರಪ್ಪ ಭಿನ್ನಮತೀಯ ಶಾಸಕರನ್ನು ಓಲೈಸುವ ಸಂಬಂಧ 24 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು.ಈ ಮೂಲಕ ಭಿನ್ನಮತ ಶಮನದ ತಂತ್ರಗಾರಿಕೆ ಅನುಸರಿಸಿದ್ದರು. ಆದ್ರೆ, ನಿಗಮ ಮಂಡಳಿ ತಂತ್ರಗಾರಿಕೆ ವರ್ಕ್ ಔಟ್ ಆದಂತೆ ಕಾಣಿಸುತ್ತಿಲ್ಲ. ಆಕಾಂಕ್ಷಿಗಳಾಗಿದ್ದವರಿಗೆ ನಿಗಮ …

Read More »