Breaking News

ಗೋಕಾಕ

ಅಂತರರಾಜ್ಯ ವಂಚಕರ ಜಾಲವನ್ನು ಭೇದಿಸಿದ ಗೋಕಾಕ ಪೊಲೀಸರು

ಬೆಳಗಾವಿ: ಜಿಲ್ಲೆಯ ಗೋಕಾಕದಲ್ಲಿ ಸಾರ್ವಜನಿಕರಿಗೆ ಹಣದ ಆಮಿಷವೊಡ್ಡಿ ವಂಚಿಸುತ್ತಿದ್ದ ಅಂತರರಾಜ್ಯ ವಂಚಕರ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ದಂಧೆಯಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಮಂದಿ ಬಂಧಿಸಲಾಗಿದೆ ಎಂದು ಎಸ್ಪಿ. ಕೆ. ರಾಮರಾಜನ್ ಹೇಳಿದರು. ಗೋಕಾಕದ ಶ್ರೀನಗರದಲ್ಲಿರುವ ಮನೆಯೊಂದರಲ್ಲಿ ಹಣವನ್ನು ನಾಲ್ಕು ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಜಾಲದ ಮೇಲೆ ಗೋಕಾಕ ಶಹರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾದವರನ್ನು ಪರಶುರಾಮ …

Read More »

ಆರೋಗ್ಯ ಉಚಿತ ತಪಾಸಣಾ ಶಿಬಿರ 16ರಂದು

ಗೋಕಾಕ: ಉಚಿತ ಕಣ್ಣಿನ ಪೊರೆ ತಪಾಸಣೆ ಬೃಹತ್ ಶಿಬಿರವನ್ನು ಮಾರ್ಚ್‌ 16ರಂದು ಮುಂಜಾನೆ 9ರಿಂದ ಮಧ್ಯಾಹ್ನ 1:30ರ ವರೆಗೆ ತಾಲ್ಲೂಕಿನ ಮಮದಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ ವಿಶೇಷವಾಗಿ ಮಕ್ಕಳ ತಪಾಸಣೆ, ರಕ್ತದೊತ್ತಡ, ಹೃದಯ, ಚರ್ಮರೋಗ ತಪಾಸಣೆ ಸಹ ಉಚಿತವಾಗಿ ಮಾಡಲಾಗುತ್ತಿದೆ. ಡಾ.ಎಂ.ಎಸ್.ಕೊಪ್ಪದ, ಡಾ.ಅಶೋಕ ಮುರಗೋಡ, ಡಾ.ಸಿದ್ದಣ್ಣ ಕಮತ, ಕಣ್ಣಿನ ತಜ್ಞ ಡಾ. ಸಂದೀಪ್ ಕೋಲಕಾರ, ಡಾ. ಅಮರ ಮುರುಗೋಡ, ಡಾ.ಪ್ರಮಿತಾ ಮುರುಗೋಡ, ಡಾ.ಪ್ರೀತಿ ಚೌಧರಿ ಹಾಗೂ ನೇತ್ರಾಧಿಕಾರಿ …

Read More »

ಯುವ ನಾಯಕ ರಾಹುಲ್ ಜಾರಕಿಹೊಳಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಶುಭಾಶಯ ಕೋರಿದರು

ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಪ್ರಸಾದ್ ನಾಯಿಕ (ನಾಯಕಗೌಡರು) ಅವರ ಮದುವೆಯಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಇತ್ತೀಚೆಗೆ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ವರ–ವಧುವರಿಗೆ ಶುಭಾಶಯ ಕೋರಿದರು. ಈ ವೇಳೆ ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಅಭಿಮಾನಿಗಳೊಂದಿಗೆ ಮಾತನಾಡಿ, ಹೊಸ ದಂಪತಿಗೆ ಸುಖಮಯವಾದ ದಾಂಪತ್ಯ ಜೀವನವಾಗಲಿ ಎಂದು ಆಶಿಸಿದರು. ಮದುವೆ ಸಮಾರಂಭದಲ್ಲಿ ಹಲವಾರು ಗಣ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಕಾರ್ಯಕ್ರಮವು ಹರ್ಷೋದ್ಗಾರಗಳ ನಡುವೆ …

Read More »

ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅಭಿವೃದ್ಧಿಯ ಬಜೆಟ್: ಸಂಸದೆ ಪ್ರಿಯಂಕಾ ಜಾರಕಿಹೊಳಿ

ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಜನಪರವಾದ ಮತ್ತು ರಾಜ್ಯದ ಅಭಿವೃದ್ಧಿ ಯ ಬಜೆಟ್ ಆಗಿದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ರಾಜ್ಯದ ಸರ್ವತೋಮುಖ ಅಭಿವೃದ್ಧಿ ಯ ದೃಷ್ಟಿಯಿಂದ ನಾಡಿನ ಜನಪರವಾದ ಈ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೂ ಉತ್ತಮ ಆದ್ಯತೆ ನೀಡಿರುವುದು ಶ್ಲಾಘನೀಯವಾಗಿದೆ. ಸರ್ವರಿಗೂ ಸಮಪಾಲು ಎಂಬಂತೆ ಎಲ್ಲಾ ಕ್ಷೇತ್ರಕ್ಕೂ ಸಿಎಂ ಸಿದ್ದರಾಮಯ್ಯ ಅವರು ಆದ್ಯತೆ …

Read More »

ಲೋಳಸೂರ ಸೇತುವೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಸಚಿವ ಸತೀಶ್‌ ಜಾರಕಿಹೊಳಿ

ಗೋಕಾಕ: ಗೋಕಾಕ ನಗರದ ಸಮೀಪದ ಲೋಳಸೂರ ಗ್ರಾಮದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ 30.21 ಕೋಟಿ ರೂ. ವೆಚ್ಚದ ಲೋಳಸೂರ ಸೇತುವೆ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಪರಿಶೀಲಿಸಿದರು. ನೂತನ ಸೇತುವೆ ನಿರ್ಮಾಣದಿಂದ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಮಳೆಗಾಲ, ಪ್ರವಾಹದಂತಹ ಸಂದರ್ಭಗಳಲ್ಲಿಯೂ ಸಹ ಅದನ್ನು ಎದುರಿಸಲಿಕ್ಕೆ ಇನ್ನು ಮುಂದೆ ಸರಳವಾಗಲಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಕಿರಿದಾದ ಸೇತುವೆ …

Read More »

ಭಾವಪೂರ್ಣ ಶ್ರದ್ಧಾಂಜಲಿ

ಶ್ರೀಮಠದ ಹಿರಿಯ ಸ್ವಾಮಿಜಿಗಳು, ಸುಕ್ಷೇತ್ರ ತವಗಮಠ) ಗೋಕಾಕ ತಾಲೂಕಿನ ಸುಕ್ಷೇತ್ರ ತವಗ ಮಠದ ಬ್ರಹ್ಮಶ್ರೀ ಶ್ರೀ ಸಿದ್ದಲಿಂಗಯ್ಯ ತವಗಮಠ ಮಹಾಸ್ವಾಮಿಜಿಗಳು ಇಂದು ಸೋಮವಾರ ದಿ. 2.3.2026.ರಂದು ಬೆಳಗಿನ ಜಾವ ಹೃದಯಾಘಾತ ದಿಂದ ಲಿಂಗಕ್ಯರಾಗಿದ್ದು ಮೃತರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬದ ಸದಸ್ಯರಿಗೆ ಹಾಗೂ ಶ್ರೀಮಠದ ಅಪಾರ ಭಕ್ತಾಧಿಗಳಿಗೆ ದುಃಖ ಭರಿಸುವ ಶಕ್ತಿ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥನೆ..

Read More »

ಗೋಕಾಕ: ನಾಪತ್ತೆಯಾಗಿದ್ದ ಆಭರಣ ಕಳ್ಳನ ಬಳಿ ಪತ್ತೆ

ಬೆಳಗಾವಿ: ಅಡ ಇಟ್ಟ ಚಿನ್ನವನ್ನು ಬಿಡಿಸಿಕೊಂಡು ಹೋಗುವಾಗ ಬೈಕ್ ಮುಂದಿನ ಕವರ್‌ನಲ್ಲಿಟ್ಟಿದ್ದ ಚಿನ್ನ ಮಿಸ್ ಆಗಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಓರ್ವ ಕಳ್ಳನನ್ನು ಬಂಧಿಸಿ ಒಟ್ಟು 1.20 ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ರೇವಪ್ಪ ಹಳ್ಳುರ, ಜ.24ರಂದು ಗೋಕಾಕನ ಭಗವಾನ ಶೆಡಜಿ ಅಂಗಡಿಯಲ್ಲಿ ಅಡ ಇಟ್ಟಿದ್ದ 70 ಸಾವಿರ ರೂ. ಮೌಲ್ಯದ 14.5 ಗ್ರಾಂ. ನಕ್ಲೆಸ್ ಹಾಗೂ 50 ಸಾವಿರ ರೂ. ಮೌಲ್ಯದ …

Read More »

ಘಟಪ್ರಭಾ ಕೆನಾಲ್‌ಗೆ ಸೇತುವೆ ನೆಲಸಮ ಸತೀಶ ಜಾತಕಿಹೋಳಿ ಪರಿಶೀಲನೆ

  ಸಂಕೇಶ್ವರ–ಯರಗಟ್ಟಿ ರಾಜ್ಯ ಹೆದ್ದಾರಿಯ ಘಟಪ್ರಭಾ ಪಟ್ಟಣದ ಸಮೀಪ, ಘಟಪ್ರಭಾ ಕೆನಾಲ್‌ಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹಳೆಯ ಸೇತುವೆ ಗಂಭೀರ ಬಿರುಕು ಬಿಟ್ಟು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿರುವುದರಿಂದ ಅದನ್ನು ನೆಲಸಮ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಚಿವ ಸತೀಶ ಜಾರಕಿಹೋಳಿ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿದರು. ಸಾರ್ವಜನಿಕರ ಸುರಕ್ಷತೆಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿ, ಅಂದಾಜು ರೂ. 5.00 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯವನ್ನು 45 ದಿನಗಳೊಳಗೆ …

Read More »

ಗೋಕಾಕ:ಕಾರಿನಲ್ಲಿ ರಿವಾಲ್ವರ್ ಇಟ್ಟುಕೊಂಡು ಓಡಾಡ್ತಿದ್ದವನು ಲಾಕ್

ಬೆಳಗಾವಿ ಜಿಲ್ಲೆ ಗೋಕಾಕ್ ನಗರತ ಕೋರ್ಟ್ ಸರ್ಕಲ್ ನಲ್ಲಿ ಪತ್ತೆ. ಅನುಮಾನಾಸ್ಪದ ಕಾರನ್ನ ತಡೆದು ಗೋಕಾಕ್ ಪೊಲೀಸರಿಂದ ಪರಿಶೀಲನೆ. ಆಗ ಲೈಸನ್ಸ್ ರಿವಾಲ್ವಾರ್ ಕಾರ್ ಡ್ಯಾಶ್ ಬೋರ್ಡ್ ನಲ್ಲಿ ಪತ್ತೆ. ಕಾರ್ ಚಾಲಕ ಬಾಗಲಕೋಟೆ ಜಿಲ್ಲೆ ನಿವಾಸಿ ರಮೇಶ ಕೇಸರಗೊಪ್ಪ ಚೌವಾಣ 52 ಅರೇಸ್ಟ್. ರಿವಾಲ್ವಾರ್ ಲೈಸನ್ಸ್ ಬಾಗಲಕೋಟೆ ಜಿಲ್ಲೆಗೆ ಮಾತ್ರ ಸಿಮೀತ. ರಿವಾಲ್ವಾರ್ ನವೀಕರಣ ಮುಗಿದಿದ್ದರೂ ಪೊಲೀಸ್ ಠಾಣೆ ಜಮಾ ಮಾಡಿಲ್ಲ. ಹೀಗಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲು. …

Read More »

ಗೋಕಾಕ  ಕೋರ್ಟ್ ಆವರಣದಲ್ಲಿ” ಕೋರ್ಟ್ ಕ್ಯಾಂಟಿನ್” ಉದ್ಘಾಟಿಸಿದ ಸಚಿವ ಸತೀಶ್ ಜಾರಕಿಹೊಳಿ

ಈ ಸಂದರ್ಭದಲ್ಲಿ ಮಾನ್ಯ ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶರಾದ ಶ್ರೀ ಉಮೇಶ ಆತನೂರೆ, ಮಾನ್ಯ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶರಾದ ಶ್ರೀ ಮಾಹಾದೇವ ಕಾನಟ್ಟಿ, ಮಾನ್ಯ ಪ್ರಧಾನ ದಿವಾನಿ ಹಾಗೂ ಜೆಎಂಎಫ್ ಸಿ ನ್ಯಾಯಾಧೀಶರಾದ ಶ್ರೀಮತಿ ಚೈತ್ರಾ ಕುಲಕರ್ಣಿ ಹಾಗೂ ಗೋಕಾಕ ವಕೀಲರ ಸಂಘದ ಅಧ್ಯಕ್ಷರಾದ ಸುಭಾಷ್ ಪಾಟೀಲ್ , ಉಪಾಧ್ಯಕ್ಷರಾದ ವಿಠ್ಠಲ ಜಾಗನೂರ, ಬಸವರಾಜ ದಂಡಿನ, ಪ್ರಧಾನ ಕಾರ್ಯದರ್ಶಿ ವಿಠ್ಠಲ ಮೆಳವಂಕಿ, ಜಂಟಿ ಕಾರ್ಯದರ್ಶಿ ಸಿದ್ದಲಿಂಗ ವಡೇರಹಟ್ಟಿ, ಅಪ್ಪಣ್ಣಾ …

Read More »