Breaking News

ಆರೋಗ್ಯ ಉಚಿತ ತಪಾಸಣಾ ಶಿಬಿರ 16ರಂದು

Spread the love

ಗೋಕಾಕ: ಉಚಿತ ಕಣ್ಣಿನ ಪೊರೆ ತಪಾಸಣೆ ಬೃಹತ್ ಶಿಬಿರವನ್ನು ಮಾರ್ಚ್‌ 16ರಂದು ಮುಂಜಾನೆ 9ರಿಂದ ಮಧ್ಯಾಹ್ನ 1:30ರ ವರೆಗೆ ತಾಲ್ಲೂಕಿನ ಮಮದಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಶಿಬಿರದಲ್ಲಿ ವಿಶೇಷವಾಗಿ ಮಕ್ಕಳ ತಪಾಸಣೆ, ರಕ್ತದೊತ್ತಡ, ಹೃದಯ, ಚರ್ಮರೋಗ ತಪಾಸಣೆ ಸಹ ಉಚಿತವಾಗಿ ಮಾಡಲಾಗುತ್ತಿದೆ.

ಡಾ.ಎಂ.ಎಸ್.ಕೊಪ್ಪದ, ಡಾ.ಅಶೋಕ ಮುರಗೋಡ, ಡಾ.ಸಿದ್ದಣ್ಣ ಕಮತ, ಕಣ್ಣಿನ ತಜ್ಞ ಡಾ. ಸಂದೀಪ್ ಕೋಲಕಾರ, ಡಾ. ಅಮರ ಮುರುಗೋಡ, ಡಾ.ಪ್ರಮಿತಾ ಮುರುಗೋಡ, ಡಾ.ಪ್ರೀತಿ ಚೌಧರಿ ಹಾಗೂ ನೇತ್ರಾಧಿಕಾರಿ ಉದಯ ಅಲಾಸೆ ಮೊದಲಾದವರು ತಪಾಸಣೆ ನಡೆಸುವರು.

ಮಮದಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ತಮ್ಮ ಆಧಾರ ಕಾರ್ಡ್‌ ಮತ್ತು ಬಿಪಿಎಲ್‌ ಕಾರ್ಡ್‌ಗಳೊಂದಿಗೆ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ಮೂಲಕ ಕೋರಲಾಗಿದೆ.


Spread the love

About Laxminews 24x7

Check Also

ಸಾವಳಗಿಯಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿ – ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಭಕ್ತರ ಅಪಾರ ಸ್ಪಂದನೆ

Spread the loveಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಶೂನ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ