Breaking News

ಬೈ ಬೈ ಪಪ್ಪಾ ಎಂದು ಚೆನಾಬ್ ನದಿಗೆ ಜಿಗಿದ ಯುವತಿ – ವಿಡಿಯೋ ವೈರಲ್‌

Spread the love

ಶ್ರೀನಗರ: ಯುವತಿಯೊಬ್ಬಳು ತಂದೆಗೆ ʻಬೈ ಬೈ ಪಪ್ಪಾʼ ಎಂದು ಚೆನಾಬ್ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಜಮ್ಮು ಮತ್ತು ಕಾಶ್ಮೀರದ  ದೋಡಾದ ಪ್ರೇಮ್ ನಗರದಲ್ಲಿ ನಡೆದಿದೆ.

ಯುವತಿ ನದಿಗೆ ಜಿಗಿಯುತ್ತಿರುವ ವಿಡಿಯೋ ವ್ಯಕ್ತಿಯೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಯುವತಿ ಆತ್ಮಹತ್ಯೆ ಮಾಡುವುದಾಗಿ ತಿಳಿಸಿ ʻಬೈ ಬೈ ಪಪ್ಪಾʼ ಎಂದು ನದಿಗೆ ಜಿಗಿದಿರುವುದು ಸೆರೆಯಾಗಿದೆ. ಯುವತಿಗಾಗಿ SDRF ತಂಡ ಮತ್ತು ಸ್ಥಳೀಯ ನಿವಾಸಿಗಳು ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆಕೆಯ ಸುಳಿವು ಇನ್ನೂ ಸಿಕ್ಕಿಲ್ಲ ಎಂದು ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಕೃಷ್ಣ ಲಾಲ್ ಅವರ ಪುತ್ರಿ ಪಾಯಲ್ ದೇವಿ ಎಂದು ಗುರುತಿಸಲಾಗಿದೆ. ಪಾಯಲ್‌ ದೇವಿ ಜಾತ್ರೆಗೆ ಹೋಗಿದ್ದಳು. ಬಳಿಕ ಪರಿಚಿತ ವ್ಯಕ್ತಿಯೊಬ್ಬರ ಜೊತೆ ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಳು. ಬೈಕ್‌ ಸೇತುವೆ ಮೇಲೆ ಬಂದಾಗ ಆಕೆಯ ದುಪ್ಪಟ್ಟಾ ಬೈಕ್‌ ಚಕ್ರಕ್ಕೆ ಸಿಲುಕಿಕೊಂಡಿತ್ತು. ಈ ವೇಳೆ ಬೈಕ್‌ ಚಲಾಯಿಸುತ್ತಿದ್ದ ವ್ಯಕ್ತಿ ಬೈಕ್‌ ನಿಲ್ಲಿಸಿ ದುಪಟ್ಟಾ ಬಿಡಿಸಲು ಮುಂದಾಗಿದ್ದರು. ಆಗ ಪಾಯಲ್‌ ನದಿಯ ಬಳಿ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ನದಿಗೆ ಜಿಗಿದಿದ್ದಾಳೆ.

ಸೇತುವೆಯ ಅಂಚಿಗೆ ಹೋಗಿದ್ದ ಯುವತಿಯನ್ನು ಜನ ಸಮಾಧಾನಪಡಿಸಲು ಪ್ರಯತ್ನಿಸಿದರು. ಜಿಗಿಯದಂತೆ ವಿನಂತಿಸಿದರು. ಬೈಕ್‌ ಚಲಾಯಿಸುತ್ತಿದ್ದ ವ್ಯಕ್ತಿ ಸಹ ಅವಳ ತಂದೆಗೆ ಕರೆ ಮಾಡಿ ಏನಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ವೇಳೆ ತಂದೆ ಸಹ ಮಗಳಿಗೆ ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಆದರೆ ಬೈ ಬೈ ಪಪ್ಪಾ ಎಂದು ಯುವತಿ ನದಿಗೆ ಜಿಗಿದಿದ್ದಾಳೆ ಎಂದು ವರದಿಯಾಗಿದೆ. ರಕ್ಷಣಾ ಸಿಬ್ಬಂದಿ ಆಕೆಯ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ವಿಮಾನ 10 ನಿಮಿಷ ಆಗಸದಲ್ಲೇ ಗಿರಕಿ – 2ನೇ ಪ್ರಯತ್ನದಲ್ಲಿ ಸೇಫ್‌ ಲ್ಯಾಂಡಿಂಗ್!

Spread the loveಲಕ್ನೋ: ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ  ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ಮಂಗಳವಾರ (ಇಂದು) ಲಕ್ನೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ