Breaking News
Home / Uncategorized / ತಬ್ಬಲಿಗಳಿಗಾಗಿ ಹಿಕೆ ಹಳ್ಳಿ ಹಿರಿಯರು ಹಿರಿತನ,ಕೂಡ್ಲಿಗಿ ಪೊಲೀಸರು ರಕ್ಷಣೆ ತೋರಬೇಕು

ತಬ್ಬಲಿಗಳಿಗಾಗಿ ಹಿಕೆ ಹಳ್ಳಿ ಹಿರಿಯರು ಹಿರಿತನ,ಕೂಡ್ಲಿಗಿ ಪೊಲೀಸರು ರಕ್ಷಣೆ ತೋರಬೇಕು

Spread the love

-ಬಳ್ಳಾರಿ :ಜಿಲ್ಲೆ ಸಂಡೂರು ತಾಲೂಕು ಕೂಡ್ಲಿಗಿ ಪೊಲೀಸ್ ಠಾಣೆವ್ಯಾಪ್ತಿಯ ಹಿರೀಕೆರಿಯಾಗಿನಹಳ್ಳಿಯಲ್ಲಿ, ಕೆಲ ತಂಗಳ ಹಿಂದೆ ಜರುಗಿದೆ ಎನ್ನಲಾದ ಕೊಲೆಗೆ ಮೂರುಮಕ್ಕಳ ತಾಯಿ ಬಲಿಯಾಗಿದ್ದಾಳೆ.ಅವಳನ್ನು ಕೊಲೆಗೈದ ಪ್ರಮುಖ ಆರೋಪಿಯಂದು ಹೇಳಲಾಗುವ,ಅವಳ ಗಂಡ ಜೈಲುಪಾಲಾಗಿದ್ದಾನೆ ಹೀಗಾಹಿ ಅವಳ ಮೂವರು ಮಕ್ಕಳು ಅಕ್ಷರಸಃ ತಬ್ಬಲಿಯಾಗಿವೆ.ಸಧ್ಯ ಅವರನ್ನು ಮೃತಳ ತವರು ಮನೆಯವರೇ ಮೂವರು ಕಂರಮ್ಮಗಳನ್ನು ಲಾಲನೆ ಪಾಲನೆ ಮಾಡುತ್ತಿದ್ದಾರೆ.ಮೃತಳ ತಾಯಿಯೇ ಮಕ್ಕಳಿಗೆ ತಾಯಿಯಂತೆ ಪೋಷಣೆ ನೀಡುತ್ತಿದ್ದಾಳೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ತಂದೆ ರಂಗಪ್ಪ,ತಾಯಿರತ್ನಮ್ಮ,ಸಹೋದರ ನಾಗರಾಜ ಹೇಳಿಕೆ ನೀಡಿದ್ದಾರೆ.ಜೊತೆಗೆ ಮೃತಳ ಕಂದಮ್ಮ ಸಾಗರನೂ ಕೂಡ ತನ್ನೆದುರಲ್ಲೇ ಜರುಗಿದ ಕೊಲೆಬಗ್ಗೆ ಹೇಳುತ್ತಾನೆ. ಹೇಳಿಕೆ- ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪೋಷಕರು ಹೇಳಿಕೆ ನೀಡಿದ್ದಾರೆ: ಕೆಲ ತಿಂಗಳ ಹಿಂದೆ ತಮ್ಮ ಮಗಳನ್ನು ಅವಳ ಗಂಡ ಹಾಗೂ ಗಂಡನ ಮನೆಯರೆಲ್ಲರೂ ಸೇರಿ ವರದಕ್ಷಿಣೆ ಆಸೆಗೆ ಕೊಲೆ ಮಾಡಿದ್ದಾರೆ.ಅವರನ್ನು ಶಿಕ್ಷೆಗೊಳಪಡಿಸಬೇಕೆಂದು ಕೂಡ್ಲಿಗಿ ಪೊಲೀಸರಲ್ಲಿ ಮೊರೆ ಹೋಗಿದ್ದು,ಕೊಲೆಯಲ್ಲಿ ಭಾಗಿಯಾಗಿರುವ ಮೃತಳ ಗಂಡ ಓಬಳೇಶ,ಆತನ ಸಹೋದರ ಚಿತ್ತಪ್ಪ,ಚಿನ್ನಾಪ್ರಪ್ಪ,ಗಂಗಮ್ಮ,ಈ ನಾಲ್ವರು ಆರೋಪಿಗಳ ಮೇಲೆ ದೂರು ನೀಡಿದ್ದೆವು, ಪ್ರಭಾವಿ ವ್ಯಕ್ತಿಗಳು ಹಾಗೂ ಸುಮಾರು ಮುವತ್ತು ಜನ ಹಿರಿಯ ಗ್ರಾಮಸ್ಥರ ಸಮಕ್ಷಮದಲ್ಲಿ,ಕಂದಮ್ಮಗಳ ಹಿತದೃಷ್ಠಿ ಯಿಂದ ಎಲ್ಲರೂ ತೆಗೆದುಕೊಂಡ ತೀಮಾ೯ನಕ್ಕೆ ಒಪ್ಪಿ,ಪುಟ್ಟಕಂದಮ್ಮ ಗಳಿಗೆ ಆರೋಪಿತರಿಂದ 5ಎಕರೆ ಜಮೀನು ಎರೆಡು ಮನೆ ಕೊಡಿಸುವುದಾಗಿ,ಅದಕ್ಕೆ ಪ್ರತಿಯಾಗಿ ಮೂವರನ್ನು ದೂರಿನಿಂದ ಕೈಬಿಡಬೇಕೆಂದು ಇದನ್ನು ಛಾಪಾಕಾಗದದಲ್ಲಿ ಕಂಡಿತ ಬರೆದು ಕೊಟ್ಟಿರುತ್ತಾರೆ.ಈ ಕಾರಣಕ್ಕೆ ಪ್ರಮುಖ ಆರೋಪಿಗಳನ್ನು ಹೊರತು ಪಡಿಸಿ ಉಳಿದವರನ್ನು ದೂರಿನಿಂದ ಹಿಂಪಡೆಯಲು ತೀಮಾ೯ಸಲಾಗಿತ್ತು.

ಆದರೆ ಈಗ ಅವರು ತಾವು ಕೊಟ್ಟಮಾತಿನಂತೆ ನ್ಯಾಯ ಧಮ೯ದಿಂದ ನಡೆದುಕೊಳ್ಳುತ್ತಿಲ್ಲ,ಆರೋಪಿಗಳು ಅವರ ಆತ್ಮೀಯರ ಹತ್ತಿರ ತಾವೇ ಕೊಲೆಮಾಡಿದ್ದು ಏನೂ ಕಿಸಿಯಾಕಾಗಲ್ಲಿಲ್ಲ,ಕೂಡ್ಲಿಗಿ ಪೊಲೀಸರಿಗೆ ಲಕ್ಷಗಟ್ಟಲೆ ಹಣ ಕೊಟ್ಟೀವಿ ಎಂಬಿತ್ತ್ಯಾದಿಯಾಗಿ ಕೇಕೆ ಹಾಕುತ್ತಿದ್ದಾರೆ.ಈ ಮೂಲಕ ಆರೋಪಿಗಳೇ ಪರೋಕ್ಷವಾಗಿ ತಮ್ಮ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡಿರುತ್ತಾರೆ.ಅಪರಾಧಿಗಳಿಂದ ಕಂದಮ್ಮಗಳಿಗೆ ಹಾಗೂ ನಮಗೆ ಮೋಸವಾಗಿದೆ,ಅವರಿಂದ ಪ್ರಣ ಭಯವಿದೆ,ಆರೋಪಿಗಳು ಗೋಮುಖ ವ್ಯಾಘ್ರಾಗಿದ್ದಾರೆ,ನಾಟಕವಾಡಿ ಹಿರಿಯ ಗ್ರಾಮಸ್ಥರನ್ನು,ಜನಪ್ರತಿನಿಧಿಗಳನ್ನು,ಗಣ್ಯಮಾನ್ಯರನ್ನು ದುರುಪಯೋಗಪಡಿಸಿಕೊಂಡಿದ್ದಾರೆ.ಈಗ ಅವರಿಗೆ ಕವಡೇ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಕಾರಣ ತಾವು ಉಳಿದ ಆರೋಪಿಗಳ ವಿರುದ್ಧ ಶಿಸ್ಥು ಕ್ರಮ ಜರುಗಿಸಬೇಕೆಂದು ಕೂಡ್ಲಿಗಿ ಪೊಲೀಸರಲ್ಲಿ ಮೊರೆಹೋಗಿರುವುದಾಗಿ ಮೃತಳ ಪೋಷಕರು ತಿಳಿಸಿದ್ದಾರೆ. ತಬ್ಬಲಿಗಳನ್ನು ತಬ್ಬಿಕೊಳ್ಳಲು ಗ್ರಾಮಸ್ಥರಲ್ಲಿ ಮನವಿ- ಠಾಣೆಯಲ್ಲಿ ದೂರು ಕೊಡುವ ಸಂದಭ೯ದಲ್ಲಿ ಆರೋಪಿಗಳ ಪರವಾಗಿ ಬಂದ ಗ್ರಾಮಸ್ಥರಾದ ಜೆ.ನಾಗರಾಜ,ದೊಡ್ಡೀರಪ್ಪರ ನವೀನ,ಕೆಬಸಪ್ಪ,ಪೂಜಾರಿ ಓಬಳಪ್ಪ ಸೇರಿದಂತೆ ಒಟ್ಟು ಮುವತ್ತು ಜನ ಪುಣ್ಯಾತ್ಮರು,ದೂರಿನ ಹೇಳಿಕೆಯಲ್ಲಿದ್ದ ಆರೋಪಿಗಳಾದ ಚಿತ್ತಪ್ಪ,ಚಿನ್ನಾಪ್ರಪ್ಪ, ಗಂಗಮ್ಮ ರನ್ನು ತೆಗೆಸಲು ಮನವಿ ಮಾಡಿ ಆರೋಪಿಗಳ ಪರವಹಿಸಿದ್ದರು.ಈಗ ಅವರು ತಾಯಿಯನ್ನು ಕಳೆದು ಕೊಂಡ ಮೂವರು ತಬ್ಬಲಿ ಕಂದಮ್ಮಗಳಿಗೆ ಜರುಗಿರುವ ಮೋಸಕ್ಕೆ ನ್ಯಾಯಕೊಡಿಸಿ ಅವರ ಕಣ್ಣೀರು ಹೊರೆಸಬೇಕಿದೆ,ಒಪ್ಪಂದದ ಪ್ರಕಾರ ಆರೋಪಿಗಳಿಂದ ಅವರಿಗೆ ಸಲ್ಲಬೇಕಿರುವ ಜೀವನಕ್ಕೆ ಆಧಾರಬೇಕಿರುವುದನ್ನು ಅವರಿಗೆ ಶೀಘ್ರವಾಗಿ ಕೊಡಿಸಬೇಕಿದೆ,ಅಗತ್ಯ ರಕ್ಷಣೆಯನ್ನು ಗ್ರಾಮದ ಹಿರಿಯರು ಮೂವರು ಕಂದಮ್ಮಗಳಿಗೆ ನೀಡಬೇಕಿದೆ.ಕಾರಣ ತಮಗೆ ನ್ಯಾಯಕೊಡಿಸುವಲ್ಲಿ ಸಹಕರಿಸಿ ತಮ್ಮ ಹಿರಿತನ ಮೆರೆಯ ಬೇಕಾಗಿದೆ.ಈ ಸಂಬಂಧ ತಾವು ಸಮಸ್ಥ ಗ್ರಾಮಸ್ಥರಲ್ಲಿ, ಪ್ರಭಾವಿಗಳಲ್ಲಿ, ಜನಪ್ರತಿನಿಧಿಗಳಲ್ಲಿ,ಪೊಲೀಸ್ ಅಧಿಕಾರಿಗಳ ಲ್ಲಿ ಮೃತಳ ತಾಯಿ ರತ್ನಮ್ಮ ಈ ಮೂಲಕ ಕೋರಿದ್ದಾರೆ. ಗಣ್ಯರಲ್ಲಿ ಮನವಿ- ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ನ್ಯಾಯ ಒದಗಿಸಬೇಕೆಂದು ತಾವು ಗೃಹ ಇಲಾಖಾ ಸಚಿವರಿಗೆ,ರಾಜ್ಯ ಪೊಲೀಸ್ ಮಹಾನಿಧೇ೯ಶಕರಿಗೆ,ರಾಜ್ಯ ಮಹಿಳಾ ಆಯೋಗ,ರಾಜ್ಯ ಮಾನವಹಕ್ಕು ಆಯೋಗ,ಪತ್ರಿಕೆಗಳ ಹಾಗೂ ಮಾಧ್ಯಮಗಳ ಕೇಂದ್ರ ಕಚೇರಿಗಳಿಗೆ,ಜಿಲ್ಲಾನ್ಯಾಯಾಧೀಶರಿಗೆ,ಜಿಲ್ಲಾಧಿಕಾರಿಗಳಿಗೆ,ಜಿಲ್ಲಾಪೊಲೀಸ್ ವರಿಷ್ಠಾದಿಕಾರಿಗಳಿಗೆ ಪ್ರಕರಣಕ್ಕೆ ಸಂಬಂಧಿಸಿದ ಸೂಕ್ತ ಸಾಕ್ಷಾಧಾರಗಳು,ದಾಖಲುಗಳ ಸಮೇತ ದೂರು ನೀಡಿದ್ದು,ನ್ಯಾಯ ಕೊಡಿಸುವಂತೆ ಮನವಿ ಮಾಡಲಾಗಿದೆ,ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮಿಂದ ಮರುಹೇಳಿಕೆ ಪಡೆಯಬೇಕು,ಕೊಲೆ ಆರೊಪಿಗಳನ್ನು ಬಂಧಿಸಿ ಶಿಕ್ಷೆಯನ್ನು ಕೊಡಬೇಕು,ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿ ಮಾಡಿರುವುದಾಗಿ,ಮೃತಳ ಪೋಷಕರಾದ ಹಿರೇಕೆರಿಯಾಗಿನಹಳ್ಳಿಯ ರಂಗಪ್ಪ,ರತ್ನಮ್ಮ,ನಾಗರಾಜ ತಿಳಿಸಿದ್ದಾರೆ.ಗ್ರಾಮದ ಹಿರಿಯರಿಂದ ಹಾಗೂ ಕೂಡ್ಲಿಗಿ ಪೊಲೀಸರಿಂದ ಸೂಕ್ತ ನ್ಯಾಯ ಸಿಗದಿದ್ದಲ್ಲಿ ಸೂಕ್ತ ರಕ್ಷಣೆ ಸಿಗದಿದ್ದಲ್ಲಿ ಅನಿವಾಯ೯ವಾಗಿ,ಜಿಲ್ಲಾಧಿಕಾರಿಗಳವರ ಕಚೇರಿ ಮುಂದೆ ಮಕ್ಕಳಾದಿಯಾಗಿ ನ್ಯಾಯ ಸಿಗೋವರೆಗೆ ಕುಟುಂಬ ಸದಸ್ಯರೆಲ್ಲರೂ ಉಪಾಸ ಸತ್ಯಾಗ್ರಹ ಮಾಡುವುದಾಗಿ ಅವರು ಹೇಳಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಕೊತ್ವಾಲನ ಚಹಾ ಲೋಟ ಡಿ.ಕೆ ಶಿವಕುಮಾರ್ ಎತ್ತುತ್ತಾ ಇದ್ರು: ಬಿಜೆಪಿ

Spread the love ಬೆಂಗಳೂರು: ಚುನಾವಣೆ ಸಮೀಪಿಸಿದಂತೆ ಪಕ್ಷಕ್ಕೆ ರೌಡಿಗಳ ಸೇರ್ಪಡೆ, ಬಿಬಿಎಂಪಿಯಲ್ಲಿ ಮತದಾರರ ಚೀಟಿ ಅಕ್ರಮ, ಹೀಗೆ ಅನೇಕ ಸಮಸ್ಯೆಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ