Breaking News

ಶಿವಮೊಗ್ಗದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್ ಐಆರ್ ,ಇನ್ಸ್ಪೆಕ್ಟರ್ ನನ್ನು ಅಮಾನತುಗೊಳಿಸಿ: ಡಿಕೆಶಿ ಆಗ್ರಹ

Spread the love

ಬೆಂಗಳೂರು: ಶಿವಮೊಗ್ಗದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್ ಐಆರ್ ದಾಖಲಿಸಿರುವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ  ಬಿಜೆಪಿ ಕಾರ್ಯಕರ್ತನೊಬ್ಬ ನೀಡಿರುವ ಸುಳ್ಳು ದೂರು ಆಧರಿಸಿ ಸೋನಿಯಾಗಾಂಧಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿ ತನ್ನ ಅಧಿಕಾರ‌ ದುರುಪಯೋಗಪಡಿಸಿಕೊಂಡು ಎಫ್​​ಐಆರ್ ದಾಖಲಿಸಿದ್ದಾರೆ. ಕೂಡಲೇ ಆ ಅಧಿಕಾರಿಯನ್ನ ಅಮಾನತು ಮಾಡಬೇಕು ಎಂದು ಶಿವಕುಮಾರ್ ಒತ್ತಾಯಿಸಿದ್ದಾರೆ.
ಸಿಎಂಗೆ ಮಾತ್ರವಲ್ಲದೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತು ಶಿವಮೊಗ್ಗ ಎಸ್.ಪಿಗೂ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ.

Spread the love

About Laxminews 24x7

Check Also

ಬನ್ನೇರುಘಟ್ಟದ ಆನೆ ಮರಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಹೆಸರು

Spread the loveಶಿವಮೊಗ್ಗ: ಇಲ್ಲಿನ ಮೃಗಾಲಯದಲ್ಲಿ ನೀರಾನೆ  ದಾಳಿಯಿಂದ ಮೃತಪಟ್ಟ ಟ್ರೈನಿ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ  ಅವರ ಹೆಸರನ್ನು ಬನ್ನೇರುಘಟ್ಟದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ