Breaking News

ಬೆಳಗಾವಿಯಲ್ಲಿ ಮಕ್ಕಳ ಕಳ್ಳಿ ಎಂದು ಮಹಿಳೆಯ ಮೇಲೆ ಹಲ್ಲೆ ಮಾಡಿದ ಸಾರ್ವಜನಿಕರು

Spread the love

ಬೆಳಗಾವಿ : ವಾಟ್ಸಾಪ್‌ದಲ್ಲಿ ವೈರಲ್ ಆಗಿದ್ದ ಮಕ್ಕಳ ಅಪಹರಣದ ವದಂತಿಯ ಆಡಿಯೋ ನಂಬಿ ಇಲ್ಲಿನ ನ್ಯೂ ಗಾಂಧಿ ನಗರದ ಜನ, ಸಂಶಯಾಸ್ಪವಾಗಿ ಓಡಾಡುತ್ತಿದ್ದ ಮಹಿಳೆಯೊಬ್ಬಳನ್ನು ಹಿಡಿದು, ಹಲ್ಲೆ ಮಾಡಿ ಕೂಡಿ ಹಾಕಿದ ಘಟನೆ ಶನಿವಾರ ನಡೆದಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.

ನ್ಯೂ ಗಾಂಧಿ ನಗರದ ಬೀದಿಗಳಲ್ಲಿ ಇವತ್ತು ಕಾಣಿಸಿಕೊಂಡ ಮಹಿಳೆ ಭಿಕ್ಷೆ ಬೇಡುತ್ತ ಓಡಾಡುತ್ತಿದ್ದಳು. ಕೈಯಲ್ಲಿ ಪ್ಲಾೃಸ್ಟಿಕ್ ಚೀಲವೊಂದನ್ನು ಹಿಡಿದುಕೊಂಡಿದ್ದನ್ನು ನೋಡಿದ ಜನ, ಮಕ್ಕಳನ್ನು ಅದರಲ್ಲಿ ಹಾಕಿಕೊಳ್ಳಲು ಬಂದಿದ್ದಾಳೆ ಎಂದು ಸಂಶಯಗೊಂಡು, ಹಿಡಿದು ಹಲ್ಲೆ ಮಾಡಿ, ಪೊಲೀಸ್ ಚೌಕಿಯಲ್ಲಿ ಕೂಡಿ ಹಾಕಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಮಾಳಮಾರುತಿ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.
ಗೊಂದಲಕ್ಕೆ ಕಾರಣವಾದ ಆಡಿಯೋ:ಈಚೆಗೆ ಮಕ್ಕಳ ಅಪಹರಣದ ಕುರಿತಾಗಿ ಇಬ್ಬರು ಮಹಿಳೆಯರು ಮಾತನಾಡಿರುವ ಮೊಬೈಲ್ ಸಂಭಾಷಣೆಯ ಹಿಂದಿ ಆಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಕ್ಯಾಂಪ್ ಅಪೋಲೋ ಎದುರಿನ ಸೈಕಲ್ ಅಂಗಡಿಗೆ ಸೈಕಲ್ ರಿಪೇರಿಗೆ ಹೋದಾಗ ಮಗು ಅಪಹರಣವಾದ ಬಗ್ಗೆ ಮಾತನಾಡಿಕೊಂಡಿದ್ದಾರೆ. ಇದು ಸಾಕಷ್ಟು ವಾಟ್ಸಾಪ್ ಗ್ರುಪ್‌ಗಳಲ್ಲಿ ವೈರಲ್ ಆಗಿದ್ದು, ಇದುವೆ ಅಮಾಯಕ ಮಹಿಳೆಯನ್ನು ಜನ ಮಕ್ಕಳ ಕಳ್ಳಿ ಎಂದು ಸಂಶಯಿಸಿಸಲು ಕಾರಣವಾಗಿದೆ.
ಕಳ್ಳಿಯಲ್ಲ: ಬೆಳಗಾವಿ ತಾಲೂಕಿನ ಹಳ್ಳಿಯೊಂದರ ಈ ಮಹಿಳೆಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಮಕ್ಕಳ ಕಳ್ಳಿಯಲ್ಲ. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಾಳೆ. ವಾಟ್ಸಾಪ್‌ದಲ್ಲಿ ವೈರಲ್ ಆಗಿರುವ ಆಡಿಯೋ ಕ್ಲಿಪ್ ಕಾರಣದಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಪೊಲೀಸ್ ಆಯುಕ್ತ ಭೂಷಣ ಬೋರಸೆ ಸ್ಪಷ್ಟನೆ ನೀಡಿದ್ದಾರೆ.
ಈ ಆಡಿಯೋ ವೈರಲ್ ಆದ ತಕ್ಷಣ, ನಮ್ಮ ಸಿಬ್ಬಂದಿ ಇಡೀ ಕ್ಯಾಂಪ್ ಏರಿಯಾ ಪರಿಶೀಲಿಸಿ ನೋಡಿದ್ದಾರೆ. ಆದರೆ ಅಂತಹ ಸ್ಥಳ ಎಲ್ಲೂ ಸಿಕ್ಕಿಲ್ಲ. ಕಳೆದರಡು ತಿಂಗಳಲ್ಲಿ ಯಾವುದೇ ಮಕ್ಕಳ ಅಪಹರಣವೂ ಆಗಿಲ್ಲ. ಬೇರೆ ಯಾವುದೋ ನಗರದ ಕ್ಯಾಂಪ್ ಏರಿಯಾ ಆಗಿರಬಹುದು. ಬೆಳಗಾವಿ ಜನ ಯಾರೂ ವದಂತಿ ನಂಬಬೇಡಿ. ಕಾನೂನು ಕೈಗೆ ತೆಗೆದುಕೊಳ್ಳಬೇಡಿ. ಸಂಶಯಾಸ್ಪದವಾಗಿ ಯಾರೇ ಕಂಡಾಗ 112ಗೆ ಕರೆ ಮಾಡಿ ಎಂದು ಕೇಳಿಕೊಂಡಿದ್ದಾರೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ