Breaking News

ಬೆಂಗಳೂರು ಈಗ 5 ಕಮಿಷನರೇಟ್ – ಆರ್. ಹಿತೇಂದ್ರ ನೂತನ ಚೀಫ್ ಕಮಿಷನರ್!

Spread the love

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ  ಸರ್ಕಾರ ಬೃಹತ್ ಆಡಳಿತಾತ್ಮಕ ಬದಲಾವಣೆ ಮಾಡಿದ್ದು, ಬುಧವಾರ (ನ.18) ಒಟ್ಟು 32 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್(Bengaluru City Police) ವ್ಯವಸ್ಥೆಯನ್ನು ಐದು ಪ್ರತ್ಯೇಕ ಕಮಿಷನರೇಟ್‌ಗಳಾಗಿ ವಿಭಜಿಸಿದ ಬೆನ್ನಲ್ಲೇ ಈ ಮಹತ್ವದ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಾಂತ್ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರ ಎಡಿಜಿಪಿ ಹಾಗೂ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ 1996ನೇ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿ ಸೀಮಾಂತ್ ಕುಮಾರ್ ಸಿಂಗ್(Seemant Kumar Singh) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಅವರನ್ನು ತೆರವಾಗಿದ್ದ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ADGP) ನಿಯೋಜಿಸಲಾಗಿದೆ.

ಸೀಮಾಂತ್ ಕುಮಾರ್ ಸಿಂಗ್ ಅವರ ನಿರ್ಗಮನದಿಂದ ತೆರವಾದ ಸ್ಥಾನಕ್ಕೆ ಹಾಗೂ ನೂತನ ಕಮಿಷನರೇಟ್ ವ್ಯವಸ್ಥೆಯ ಮುಖ್ಯಸ್ಥರಾಗಿ 1996ನೇ ಬ್ಯಾಚ್‌ನ ಹಿರಿಯ ಅಧಿಕಾರಿ ಆರ್. ಹಿತೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಈವರೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರು, ಇನ್ನು ಮುಂದೆ ಬೆಂಗಳೂರು ನಗರ ಎಡಿಜಿಪಿ ಹಾಗೂ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ  ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಹೀಗೆ ಐದು ವಿಭಾಗಗಳಾಗಿ ವಿಂಗಡಿಸಿ, ಐದು ನೂತನ ಕಮಿಷನರೇಟ್ ಹುದ್ದೆಗಳನ್ನು ಸೃಷ್ಟಿಸಿ ಅಧಿಕಾರಿಗಳನ್ನು ನೇಮಿಸಲಾಗಿದೆ.

ಇದರೊಂದಿಗೆ, ಸ್ಥಳ ನಿರೀಕ್ಷೆಯಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಎಂ. ನಿಂಬಾಳ್ಕರ್ ಅವರಿಗೆ ಬೆಂಗಳೂರು ನಗರ (ಸಂಚಾರ) ಪೊಲೀಸ್ ಆಯುಕ್ತರ ಹುದ್ದೆಯ ಜೊತೆಗೆ, ಮೇಲ್ದರ್ಜೆಗೇರಿಸಲಾದ ರೌಡಿ ನಿಗ್ರಹ ದಳದ (Anti-Rowdy Squad) ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆಯನ್ನೂ ನೀಡಲಾಗಿದೆ. ಇವರು ನೂತನ ಮುಖ್ಯ ಆಯುಕ್ತರ ಅಡಿಯಲ್ಲಿ ನಗರದ ಅಪರಾಧ ನಿಯಂತ್ರಣದ ಮೇಲ್ವಿಚಾರಣೆ ನಡೆಸಲಿದ್ದಾರೆ.

ಯಾವ ವಿಭಾಗಕ್ಕೆ ಯಾರು?
ಬೆಂಗಳೂರು ಕೇಂದ್ರ ಪೋಲಿಸ್ ಆಯುಕ್ತ – ಲಾಬೂರಾಮ್
DCP ಕೇಂದ್ರ : ಅಕ್ಷಯ್ ಮಚ್ಚೀಂದ್ರ
DCP ಗಾಂಧಿನಗರ: ಲಕ್ಷ್ಮಿ ಗಣೇಶ್
DCP ಇಂದಿರಾನಗರ: ಚೆನ್ನಬಸವಣ್ಣ,
DCP ಟ್ರಾಫಿಕ್ ಸೆಂಟ್ರಲ್: ಲೋಕೇಶ್ ಜಗಲಾಸರ್

ಬೆಂಗಳೂರು ಪೂರ್ವ ಪೋಲಿಸ್ ಆಯುಕ್ತ ಡಾ. ಪಿ ಎಸ್ ಹರ್ಷ
DCP ವೈಟ್ ಫೀಲ್ಡ್ : ಶ್ರೀ ಹರಿ ಬಾಬು
DCP ಪೂರ್ವ : ಗೀತಾ
DCP ಟ್ರಾಫಿಕ್ ಈಸ್ಟ್ : ಅನೂಪ್ ಶೆಟ್ಟಿ

ಬೆಂಗಳೂರು ಪಶ್ಚಿಮ ಪೋಲಿಸ್ ಆಯುಕ್ತ – ವಿಕಾಸ ಕುಮಾರ್ ವಿಕಾಸ್
DCP ಪಶ್ಚಿಮ: ಹುದ್ದೆ ಖಾಲಿ
DCP ಕೆಂಗೇರಿ: ಯತೀಶ್
DCP ಪೀಣ್ಯ : ಅಶೋಕ್ ಕೆ.ವಿ
DCP ಟ್ರಾಪಿಕ್ ಪಶ್ಚಿಮ : ಸ್ನೇಹ

ಬೆಂಗಳೂರು ಉತ್ತರ ಪೋಲಿಸ್ ಆಯುಕ್ತ – ಎಂಬಿ ಬೋರ ಲಿಂಗಯ್ಯ
DCP ನಾರ್ತ್ : ವಿಕ್ರಮ್ ಅಮ್ಟೆ
DCP ನಾರ್ತ್ ಈಸ್ಟ್: ಮಿಥುನ್ ಕುಮಾರ್
DCP ಯಶವಂತಪುರ (ನಾರ್ತ್ ವೆಸ್ಟ್) : ನಾಗೇಶ್
DCP ಟ್ರಾಫಿಕ್ ನಾರ್ಥ್: ಜಯಪ್ರಕಾಶ್

ಬೆಂಗಳೂರು ದಕ್ಷಿಣ ಪೋಲಿಸ್ ಆಯುಕ್ತ ವಂಶಿ ಕೃಷ್ಣ
DCP ಸೌತ್ : ವಂಶಿ ಕೃಷ್ಣ
DCP ಎಲೆಕ್ಟ್ರಾನಿಕ್ ಸಿಟಿ : ನಾರಾಯಣ್
DCP ಸೌತ್ ಈಸ್ಟ್ : ಮಹಮದ್ ಸುಜೀತ
DCP ಟ್ರಾಫಿಕ್ ಸೌತ್ : ಗೋಪಾಲ್ ಬ್ಯಾಕೋಡ್


Spread the love

About Laxminews 24x7

Check Also

ಪ್ರದೀಪ್ ಈಶ್ವರ್ ಕುಟುಂಬಕ್ಕೆ ಮಹಾಲಕ್ಷ್ಮಿಯ ಆಗಮನ – ತಂದೆಯಾದ ಸಂಭ್ರಮದಲ್ಲಿ ಶಾಸಕ

Spread the loveಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ