Breaking News
Home / ಜಿಲ್ಲೆ / ಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿಯಲ್ಲಿ ಆಯೂಸ್ಮಾನ ಕಾರ್ಡಿನ ಕಂಟಕ

ಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿಯಲ್ಲಿ ಆಯೂಸ್ಮಾನ ಕಾರ್ಡಿನ ಕಂಟಕ

Spread the love

“ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿಯಲ್ಲಿ ಆಯೂಸ್ಮಾನ ಕಾರ್ಡಿನ ಕಂಟಕ ಕವಿದಿದೆ”


ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಯಲ್ಲಿ ಕೈಲಾಸಕ್ಕೆ ತಲುಪಿರುವ ಆಯುಷ್ಮಾನ್ ಕಾಡಿನ ದರ.ಹೌದು ಇಲ್ಲಿ ಸಾಯಿ ಸೇವಾ ಕೇಂದ್ರದಲ್ಲಿ ತಮಗೆ ಮನಸ್ಸಿಗೆ ಬಂದ ಹಾಗೆ ಸಾರ್ವಜನಿಕರಲ್ಲಿ ಹಗಲು ದರೋಡೆ ನಡೆಸಿರುವ ಇಂಥವರಿಗೆ. ಐ ಡಿ ಕೋಟ್ಟ ಪುಣ್ಯಾತ್ಮರು ಯಾರು. ಅದೇ ಅಂತಾರಲ್ಲ ಚೋರ್ ಗುರು ಚಂಡಾಲ್ ಶಿಷ್ಯ ಅನ್ನೋ ಹಾಗೆ. ಸಂಗೀತಕ್ಕಾದರೆ ತಾಳ ತಂಬೂರಿ ಇರುತ್ತೆ ಇಂಥ ದಂದೆ ಮಾಡುವರಿಗೆ ಮಾಡಿದ್ದೇ ನ್ಯಾಯ ನಡೆಸಿದ್ದೆ ಸಿದ್ಧಾಂತ. ಎಲ್ಲರೂ ಹೀಗೆ ಇರ್ತಾರೆ ಅಂತ ಹೇಳೋಕೆ ಆಗಲ್ಲ. ಬೇರೊಂದು ಕಡೆ ಬಹಳ ಎಂದರೆ ಒಂದು ಕಾರ್ಡಿಗೆ 20ರಿಂದ 30ರೂ ತೆಗೆದುಕೊಳ್ಳುತ್ತಾರೆ. ಆದರೆ ಇವರು ಎರಡರಿಂದ ಮೂರು ದಿನದಲ್ಲಿ ಶ್ರೀಮಂತರಾಗಬೇಕು. ಬಡವರಿಗೆ ಏನಾದರೂ ಪರವಾಗಿಲ್ಲ ನಾವು ಮಾತ್ರ ಚೆನ್ನಾಗಿರಬೇಕು.
ಅನ್ನೋ ಮನೋಭಾವನೆಯನ್ನು ಹೊಂದಿದ್ದ ಇಂಥವರಿಗೆ ಏನು ಮಾಡಲು ಸಾಧ್ಯ. ಸಾಧ್ಯವಾದಷ್ಟು ಇಂಥವರ ಐ ಡಿ ಗಳನ್ನು ನಿಷ್ಕ್ರಿಯಗೊಳಿಸಿ. ಹಿಂದೆ ಮಾಡಿಕೊಂಡು ಬಂದಿರುವ ಕಾರ್ಯಕ್ಕೆ ತಕ್ಕ ದಂಡ ವಿಧಿಸಿ. ಒಂದುವೇಳೆ ಈ ಕೆಲಸ ಆಗದೇ ಹೋದರೆ ಇದರಲ್ಲಿ ಒಂದು ಪಾಲು ಅಧಿಕಾರಿಗೂ ಹೋಗುತ್ತದೆ ಎಂದು ಪರಿಪೂರ್ಣವಾಗಿ ತಿಳಿದುಬರುತ್ತದೆ. ಪ್ರತಿಯೊಂದು ಕಾರ್ಡಿಗೆ 100ರೂ ಅಂದರೆ ಪಾಪ ಬಡವರಿಗೆ ಎಲ್ಲಿಂದ ತರಬೇಕು. ಅದೇ 100 ರೂಪಾಯಿ ಇದ್ದರೆ ಮತ್ತೆ 4 ದಿನ ಮನೆಮಂದಿ ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡುವ ಪರಿಸ್ಥಿತಿಯಲ್ಲಿ ಇರುವಾಗ. ಸರ್ಕಾರ ಈ ಸವಲತ್ತನ್ನು ಬಡವರಿಗಾಗಿ ತಂದಿರೋದು. ಬಡಜನರನ್ನು ಹಿಂಸಿಸಿದರೆ ಏನು ಪ್ರಯೋಜನ. ಇಲ್ಲಾಂದ್ರೆ ಇಲ್ಲಿಗೆ ನಿಲ್ಲಿಸಿಬಿಡಿ ಇಂತಹ ಸ್ಕೀಮ್ಗಳನ್ನಾ ಜಾರಿಗೆ ಜಾರಿಗೆ ತರೋದೇನಿದೆ. ಜಾರಿಗೆ ತರೋದು ಮುಖ್ಯವಲ್ಲ ಇದನ್ನಾ ಎಷ್ಟು ಜನಾ ದುರುಪಯೋಗ ಪಡಿಸಿಕೊಳ್ತಾರೆ ಎಷ್ಟು ಜನಾ ಪ್ರಯೋಜನಾ ಪಡ್ಕೋತಾರೆ ಅನ್ನೋದು ಮುಖ್ಯ. ಅನುದಾನಕ್ಕಿಂತಾ ಅನುಕಂಪ ದೊಡ್ಡದು ಅನ್ನೋ ಹಾಗೆ ಅಪರೂಪಕ್ಕೆ ಸಿಕ್ಕ ಅಮೃತದಂತಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಗಮನಕ್ಕೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.


Spread the love

About Laxminews 24x7

Check Also

ವನ್ಯಜೀವಿಗಳ ದಾಹ ತೀರಿಸುವ ಕೃತಕ ನೀರಿನ ತೊಟ್ಟಿಗಳು

Spread the loveಹಾನಗಲ್: ಕಡು ಬೇಸಿಗೆ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಸಿದೆ. ಕಾಡಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ಸಂಕಷ್ಟ ಅರಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ