ಟೆಹ್ರಾನ್: ಇರಾನ್‌ನ ) ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅವರ ಭಾರತದ ಪ್ರತಿನಿಧಿಯಾದ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ, ಭಾರತದ ಜನರಿಗೆ ದೀಪಾವಳಿಯ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಆಗ್ರಾದಲ್ಲಿರುವ ‘ಶಹೀದ್-ಎ-ಸಾಲಿಸ್’ ಅವರ ಪುಣ್ಯಕ್ಷೇತ್ರಕ್ಕೆ ನಾಲ್ಕು ದಿನಗಳ ಭೇಟಿ ನೀಡಿದ್ದ ಸಂದರ್ಭದಲ್ಲಿ, ಡಾ. ಇಲಾಹಿ ಅವರು ಈ ಹಬ್ಬದ ಶುಭಾಶಯಗಳನ್ನು ವ್ಯಕ್ತಪಡಿಸುವುದರ ಜೊತೆಗೆ, ಎಲ್ಲಾ ಭಾರತೀಯರು ಸದಾ ಸುಖವಾಗಿರಲಿ ಎಂದು ಪ್ರಾರ್ಥಿಸಿದ್ದಾರೆ. ದೀಪಾವಳಿಯು ಸಂತೋಷ ಮತ್ತು ಬೆಳಕಿನ ಹಬ್ಬವಾಗಿದೆ ಎಂದು ಬಣ್ಣಿಸಿದ ಅವರು, ಪ್ರತಿಯೊಬ್ಬ ಭಾರತೀಯರು ಸಮೃದ್ಧಿಯಿಂದಿರಲಿ. ಭಾರತ ಮತ್ತು ಇರಾನ್ ಎರಡೂ ರಾಷ್ಟ್ರಗಳು ನಿರಂತರವಾಗಿ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದ್ದಾರೆ.
ಆಗ್ರಾದಲ್ಲಿ ‘ಶಹೀದ್-ಎ-ಸಾಲಿಸ್’ ಅವರ ಸಮಾಧಿ ಸ್ಥಳವಿದೆ. ಇವರು ಮೊಘಲ್ ಕಾಲದಲ್ಲಿ ಹುತಾತ್ಮರಾಗಿದ್ದರು. ಸಾವಿರಾರು ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ನಾಲ್ಕು ದಿನಗಳ ‘ಮಜ್ಲಿಸ್’ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತದೆ.
ಶಹೀದ್-ಎ-ಸಾಲಿಸ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ಆಗ್ರಾ ಮಜ್ಲಿಸ್‌ನ ಸಂಯೋಜಕ ಮಿರ್ಜಾ ಶಫೀಕ್ ಹಸನ್ ಶಫಾಕ್ ಅವರು, ವಿದೇಶದಿಂದ ಬಂದ ಅತಿಥಿಯೊಬ್ಬರು ಭಾರತದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿರುವುದು ತಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಮಾತನಾಡಿದ್ದಾರೆ.
ನಮಸ್ಕಾರ, ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಭಾರತದ ಸಮಸ್ತ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ಹಾಗೂ ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಂಕೇತಿಸುತ್ತದೆ. ಇರಾನ್ ಮತ್ತು ಭಾರತದ ನಡುವಿನ ಸಂಬಂಧವು ಶತಮಾನಗಳಷ್ಟು ಹಳೆಯದಾಗಿದ್ದು, ಇದು ನಮ್ಮ ಹಂಚಿಕೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಲ್ಲಿ ಬೇರೂರಿದೆ. ಈ ದೀಪಾವಳಿಯು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಧನ್ಯವಾದಗಳು ಎಂದು ಭಾರತದಲ್ಲಿ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಎಕ್ಸ್ ಪೋಸ್ಟ್ ಹಂಚಿಕೊಂಡಿದ್ದಾರೆ.
Laxmi News 24×7