Breaking News
Home / ಜಿಲ್ಲೆ / ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ.

ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ.

Spread the love

..

ಯಾವುದೇ ದೇಶದ ಆರ್ಥಿಕ ಬೆಳವಣಿಗೆಗೆ ಬಹುದೊಡ್ಡ ಸವಾಲು ವ್ಯವಸ್ಥೆಯೊಳಗಿನ ಭ್ರಷ್ಟಾಚಾರವೇ ಆಗಿರುತ್ತದೆ. ಮಾಡುವ ಕೆಲಸಕ್ಕೆ ತಕ್ಕಂತೆ ಸಂಬಳ ಪಡೆಯುತ್ತಿದ್ದರೂ ಕರ್ತವ್ಯ ಪಾಲನೆಗಾಗಿ ಸಾರ್ವಜನಿಕರಿಂದ ಲಂಚ ಸ್ವೀಕರಿಸುವ, ಬೇಕಾದವರಿಗೆ ಅನುಕೂಲ ಮಾ ಡಿಕೊಡುವ, ಹಣಕ್ಕಾಗಿ ಕೆಲಸ ವಿಳಂಬ ಮಾಡುವುದು.. ಹೀಗೆ ಭ್ರಷ್ಟಾಚಾರದ ಮುಖಗಳು ನೂರಾರಿವೆ.

ಪ್ರಾಮಾಣಿಕತೆ ಇಲ್ಲದ ಸಮಾಜವನ್ನು ಭ್ರಷ್ಟಾಚಾರ ಆಕ್ರಮಿಸಿಕೊಂಡು ದೇಶವನ್ನು ಕಾಡಲಾರಂಭಿಸುವುದು ಸಹಜ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಲಂಚಾವತಾರದ ಪ್ರಮಾಣ ಭಾರಿ ಹೆಚ್ಚಾಗಿದೆ. ಅದರ ಪರಿಣಾಮವನ್ನು ಎಲ್ಲರೂ ಅನುಭವಿಸಿಯೇ ಇರುತ್ತಾರೆ.

ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಕಂದಾಯ ಇಲಾಖೆಯ ನಾಡಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ವ್ಯಕ್ತಿ ಒಬ್ಬನ ಕುಟುಂಬದ ವಂಶಾವಳಿ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಸಾಗರ ರಾಠೋಡ ಎಂಬ ಗ್ರಾಮ ಲೆಕ್ಕಾಧಿಕಾರಿಯನ್ನ ತಮ್ಮ ಬಲೆಗೆ ಕೆಡವಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಸಾಗರ ರಾಠೋಡ ಚಿಂಚಲಕಟ್ಟಿ ಫಕೀರಬೂದಿಹಾಳ ಚಿಂಚಲಕಟ್ಟಿ ತಾಂಡಾ ಸರ್ಕಾರಿಹನಮನೇರಿ ಹಾಲಿಗೇರಿ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಚಿಂಚಲಕಟ್ಟಿ ಗ್ರಾಮದ ದುರಗಪ್ಪ ವಡ್ಡರ ಎಂಬ ವ್ಯಕ್ತಿಯ ಕುಟುಂಬದ ವಂಶಾವಳಿ ನೀಡಲು 4 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗುರುವಾರ ಬೆಳಿಗ್ಗೆ ಕಚೇರಿಯಲ್ಲಿ ದುರಗಪ್ಪನ ಹತ್ತಿರ ಒಂದು ಸಾವಿರ ಲಂಚ ಪಡೆಯು ವೇಳೆ ರೆಡ್ ಹ್ಯಾಂಡ ಆಗಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.ದುರಗಪ್ಪನ ದೂರಿನ ಆಧಾರದ ಮೇಲೆ ಡಿವಾಯ್ ಎಸ್‌ಪಿ ಗಣಪತಿ ಗೂಡಾಜಿ ಸಿಪಿಆಯ್ ಚಂದ್ರಶೇಖರ ಮಠಪತಿ ನೇತೃತ್ವದ ಎಸಿಬಿ ತಂಡ ಪ್ರಕರಣ
ದಾಖಲಿಸಿಕೊಂಡು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್​ ಬಿಟ್ಟು ಹೋದವರು ಮತ್ತೇ ವಾಪಸ್​ ಆದರೆ ಆಶ್ಚರ್ಯವೆನಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ

Spread the love ಬೆಳಗಾವಿ: ಈಗಾಗಲೇ ಕಾಂಗ್ರೆಸ್​ ಬಿಟ್ಟು ಹೋದವರು ಮತ್ತೇ ವಾಪಸ್​ ಆದರೆ ಆಶ್ಚರ್ಯವೆನಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ