Breaking News

Laxminews 24x7

ʻಕೈʼ ನಾಯಕ ಪವನ್ ಖೇರಾಗೆ ಸುಪ್ರೀಂಕೋರ್ಟ್ ಶಾಕ್ – ತೆಲಂಗಾಣ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನಿಗೆ ತಡೆ

ನವದೆಹಲಿ: ಅಸ್ಸಾಂ ಸಿಎಂ ಪತ್ನಿ ರಿಂಕಿ ಭುಯಾನ್ ಶರ್ಮಾ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸುಪ್ರೀಂಕೋರ್ಟ್ ಶಾಕ್ ಕೊಟ್ಟಿದೆ. ತೆಲಂಗಾಣ ಹೈಕೋರ್ಟ್ ಏ.10 ರಂದು ನೀಡಿದ್ದ ವಾರದ ಮಟ್ಟಿಗಿನ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಆದೇಶಕ್ಕೆ ಕೋರ್ಟ್ ತಡೆ ನೀಡಿದೆ. ಅಸ್ಸಾಂ ಪೊಲೀಸರು ದಾಖಲಿಸಿರುವ ಮಾನನಷ್ಟ, ನಕಲಿ ದಾಖಲೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ …

Read More »

ಅಧ್ಯಯನ ಮತ್ತು ಆತ್ಮಸ್ಥೈರ್ಯ ಯಶಸ್ಸಿನ ಮಂತ್ರ: ಕಟಗಿಹಳ್ಳಿಮಠ

ಬಾಗಲಕೋಟೆ : ಕಲೆ ಇದ್ದಲ್ಲಿ ವಿಕಾಸ ಇರುತ್ತದೆ. ಸರ್ವವ್ಯಾಪಿಯಾದ ಕಲಾ ಕೌಶಲ್ಯದ ಜೊತೆಗೆ ಸೃಜನಶೀಲತೆ, ಜ್ಞಾನ ಮತ್ತು ಆತ್ಮಸ್ಥೈರ್ಯ ಬೆಳಸಿಕೊಂಡರೆ ಬಯಸಿದಂತಹ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಬಿವಿವಿ ಸಂಘದ ಆಡಳಿತ ಅಧಿಕಾರಿಗಳಾದ ಡಾ. ವಿಜಯಕುಮಾರ ಎಸ್. ಕಟಗಿಹಳ್ಳಿಮಠ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಆಂತರಿಕ ಗುಣಮಟ್ಟ  ಭರವಸೆ ಘಟಕ ಹಾಗೂ ಸಾಂಸ್ಕೃತಿಕ ಚಟುವಟಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲಾ ಸಿರಿ ಕಾರ್ಯಕ್ರಮವನ್ನು ಭುವನೇಶ್ವರಿ ದೇವಿ ಭಾವಚಿತ್ರಕ್ಕೆ …

Read More »

ಮರಕ್ಕೆ ಕಾರು ಡಿಕ್ಕಿ – ಸರ್ಕಲ್ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವು

ದಾವಣಗೆರೆ: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ  ಜಿಲ್ಲೆ ಜಗಳೂರು ತಾಲೂಕಿನ ಮುಸ್ಟೂರು- ಕಡಬನಕಟ್ಟೆ ಗ್ರಾಮದ ಮಧ್ಯೆ ನಡೆದಿದೆ. ರಘುನಾಥ್ (45) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಸಿಪಿಐ. ರಘುನಾಥ್ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಡಿಸಿಆರ್‌ಇ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚಿತ್ರದುರ್ಗದ ಕಡೆಯಿಂದ ಜಗಳೂರು ಕಡೆಗೆ ಬರುತ್ತಿರುವಾಗ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ …

Read More »

ಯೋಗೇಶ್‌ ಗೌಡ ಹತ್ಯೆ ಕೇಸ್‌ – ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ದೋಷಿ

ಬೆಂಗಳೂರು: ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ದೋಷಿ ಎಂದು ಕೋರ್ಟ್‌ ಮಹತ್ವದ  ತೀರ್ಪು ನೀಡಿದೆ. ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೇಶ್‌ಗೌಡ  ಕೊಲೆ ಪ್ರಕರಣ ವಿಚಾರಣೆ ನಡೆಸಿದ್ದ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿತು.  ಶಿಕ್ಷೆಯ ಪ್ರಮಾಣವನ್ನು ಕೋರ್ಟ್‌ ನಾಳೆ ಪ್ರಕಟಿಸಲಿದೆ. 21 ಆರೋಪಿಗಳ ಪೈಕಿ 17 ಮಂದಿ ದೋಷಿಗಳಾಗಿದ್ದಾರೆ.  20ನೇ ಆರೋಪಿ ವಾಸುದೇವ ನಿಲಕೇಣಿ, 21ನೇ ಆರೋಪಿ …

Read More »

ಖಾನಾಪೂರ ಪೋಲಿಸ್ ಠಾಣೆಯ ಪೋಲಿಸ್ ಇನ್ಸ್ಪೆಕ್ಟರ್ ಎಲ್ ಎಚ್ ಗೌಂಡಿ ಅವರು ರೌಡಿ ಶೀಟರ್ ಗೆ ಶಾಂತತಾ ಸಭೆಯಲ್ಲಿ ಭಾಗವಹಿಸಲು ಅವಕಾಶ ಇದು ಎಷ್ಟರ ಮಟ್ಟಿಗೆ ಸರಿ ಖಾನಾಪೂರ ಬ್ಲಾಕ್ ಕಾಂಗ್ರೆಸ್ ಸವಾಲು

ಖಾನಾಪೂರ ಪೋಲಿಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಲ್ ಎಚ್ ಗೌಂಡಿ ಅವರು ಮೊನ್ನೆ ಅಷ್ಟೇ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಪೂರ್ವ ಭಾವಿ ಶಾಂತತಾ ಸಭೆಯನ್ನು ಆಯೋಜಿಸಿದರು ಈ ಸಭೆಗೆ ರೌಡಿ ಶೀಟರ್ ಗೆ ಶಾಂತತಾ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು ಖಾನಾಪೂರ ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೀವ್ರ ಆಕ್ಷೇಪಣೆ ಮತ್ತು ಆಕ್ರೋಶತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಈಶ್ವರ ಘಾಡಿ ಅವರು ವ್ಯಕ್ತಪಡಿಸಿದ್ದಾರೆ ಅವರು …

Read More »

ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಚಿಕ್ಕೋಡಿ:ತಾಲೂಕಿನ ಮಜಲಟ್ಟಿ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ರ‍್ಯಾಂಕ್ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಇತ್ತೀಚಿಗೆ ಜರುಗಿದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಶಾಸಕ ದುರ್ಯೋಧನ ಐಹೊಳೆ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ ಮಾತನಾಡಿದ ಶಾಸಕ ದುರ್ಯೋಧನ ಐಹೊಳೆ ಗುರಿ ಇಟ್ಟು ಶ್ರದ್ಧೆಯಿಂದ ನಿರಂತರ ಪ್ರಯತ್ನಿಸಿದರೆ ಯಶಸ್ಸು ಶತಸಿದ್ಧ. ಸರ್ಕಾರಿ ಕಾಲೇಜುಗಳೆಂದರೆ ಕೀಳರಿಮೆ …

Read More »

ಹುಕ್ಕೇರಿ : ಹುಕ್ಕೇರಿ ಘಟಕದಿಂದ ಯಿಂದ ಪಂಢರಪುರಕ್ಕೆ ನೇರ ಬಸ್ ಸೌಲಭ್ಯಕ್ಕೆ ಚಾಲನೆ

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಹುಕ್ಕೇರಿ ಘಟಕದಿಂದ ನೂತನ ಬೆಳಗಾವಿ – ಪಂಡರಪುರ ನೇರ ಬಸ್ ಸೌಲಭ್ಯ ಪ್ರಾರಂಭವಾದ ಹಿನ್ನಲೆಯಲ್ಲಿ ಹುಕ್ಕೇರಿ ಪಂಡರಿನಾಥ ಭಕ್ತ ಮಂಡಳಿ ವತಿಯಿಂದ ಹುಕ್ಕೇರಿ ಬಸ್ ನಿಲ್ದಾಣದಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಸತ್ಕರಿಸಿ ಸಾರಿಗೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಹುಕ್ಕೇರಿ ಬಸ್ ನಿಲ್ದಾಣದಲ್ಲಿ ನೂತನ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಗುರುರಾಜ ಕುಲಕರ್ಣಿ ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕರು ಪಂಡರಪುರಕ್ಕೆ ಹೋಗಬೇಕಾದರೆ ನೇರ ಬಸ್ ಇಲ್ಲದೆ …

Read More »

ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿ ಬಾಬು ಪಾಟೀಲ ನೇಮಕ

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೆಳಗಾವಿ ಗ್ರಾಮಾಂತರ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಿಗೆ ಇಂದು ನೇಮಕಾತಿ ಮಾಡಲಾಗಿದೆ. ವಿಶೇಷವಾಗಿ ಹಳ್ಳಿಮಟ್ಟದ ಕಾರ್ಯಕರ್ತರಿಗೆ ಸ್ಥಾನಮಾನ ನೀಡಿರುವುದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನುಂಟು ಮಾಡಿದೆ. ಒಂದು ರಾಜಕೀಯ ಪಕ್ಷವನ್ನು ಗಟ್ಟಿಗೊಳಿಸಲು ತಳಮಟ್ಟದ ಕಾರ್ಯಕರ್ತರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂಬ ಸಂದೇಶ ಇದರಿಂದ ವ್ಯಕ್ತವಾಗಿದೆ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದ ಅಂಗವಾಗಿ, ಹಳ್ಳಿಯ ಯುವಕ ಹಾಗೂ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾದ ಬಾಬು ಪಾಟೀಲ ಅವರಿಗೆ, …

Read More »

​ಬೆಳಗಾವಿಯಲ್ಲಿ ಸಚಿವ ಸ್ಥಾನಕ್ಕಾಗಿ ಶುರುವಾಯ್ತು ‘ಕೈ’ ಕಸರತ್ತು: ಕುಂದಾನಗರಿಯಲ್ಲಿ ಸಚಿವ ಸಂಪುಟದ ಸರ್ಕಸ್!

​ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಈಗ ಸಚಿವ ಸಂಪುಟ ಪುನಾರಚನೆಯದ್ದೇ ಸದ್ದು. ಅದರಲ್ಲೂ ಕುಂದಾನಗರಿ ಬೆಳಗಾವಿ ಜಿಲ್ಲೆಗೆ ಮತ್ತೊಂದು ಮಂತ್ರಿಗಿರಿ ಸಿಗುತ್ತಾ ಎಂಬ ಚರ್ಚೆ ಈಗ ಗಲ್ಲಿಯಿಂದ ದಿಲ್ಲಿಯವರೆಗೆ ಹಬ್ಬಿದೆ. ಸದ್ಯ ಜಿಲ್ಲೆಯ ಇಬ್ಬರು ಪ್ರಭಾವಿ ನಾಯಕರು ಸಚಿವ ಸಂಪುಟದಲ್ಲಿದ್ದರೂ, ಮತ್ತೊಂದು ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ. ​ಐವರು ಶಾಸಕರಿಂದ ಹೈಕಮಾಂಡ್ ಮಟ್ಟದಲ್ಲಿ ಲಾಬಿ ​ಸದ್ಯ ಬೆಳಗಾವಿ ಜಿಲ್ಲೆಯಿಂದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. …

Read More »

ಹೆಚ್​​ಎಎಲ್ ಏರ್​ಪೋರ್ಟ್​ನಲ್ಲಿ​ ಪ್ರಧಾನಿ ಮೋದಿ ಸ್ವಾಗತಿಸಿ 18 ವಿವಿಧ ಬೇಡಿಕೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರಿಗಾಗಿ 26,000 ಕೋಟಿ ರೂ.ಗಳ ವಿಶೇಷ ಅನುದಾನ, ಮೇಕೆದಾಟು ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ ಸೇರಿ ಪ್ರಧಾನಿ ಮೋದಿ ಅವರಿಗೆ ವಿವಿಧ ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯ ಸಲ್ಲಿಸಿದರು.ಆದಿಚುಂಚನಗಿರಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ, ಇಂದು ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು. ಈ ವೇಳೆ, ಸಿಎಂ ರಾಜ್ಯದ 18 ವಿವಿಧ ಬೇಡಿಕೆಗಳ ಪಟ್ಟಿಯನ್ನು ಪ್ರಧಾನಿಗೆ ಸಲ್ಲಿಸಿದರು. …

Read More »