Breaking News

Laxminews 24x7

ವಿಧಾನಸೌಧ ಸ್ಯಾನಿಟೈಸ್, ಅಧಿಕಾರಿ-ನೌಕರರಿಗೆ ತಡವಾಗಿ ಕಚೇರಿಗೆ ಬರಲು ಸೂಚನೆ

ಬೆಂಗಳೂರು, ಜು.6-ವಿಧಾನಸೌಧ ಮೊದಲನೇ ಮಹಡಿಯಲ್ಲಿರುವ ವಿಧಾನಸಭಾ ಕಾವಲುಗಾರರ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಯೊಬ್ಬರಿಗೆ ಕೊರೋನ ಪಾಸಿಟಿವ್ ಬಂದಿದೆ. ಆದುದರಿಂದ ವಿಧಾನಸೌಧದಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ವಿಧಾನ ಸೌಧದಲ್ಲಿರುವ ವಿಧಾನಸಭೆ ಸಚಿವಾಲಯದ ಪ್ರತಿ ಶಾಖೆಯಲ್ಲಿ ಒಬ್ಬರು ಮಾತ್ರ ಬಂದು ಶಾಖೆಯ ಒಳಗೆ ಸ್ಯಾನಿಟೈಸ್ ಮಾಡುವಾಗ ನೋಡಿಕೊಳ್ಳಬೇಕು.   55ವರ್ಷ ದಾಟಿದ ಅಧಿಕಾರಿ ಹಾಗೂ ನೌಕರರುಗಳು ಮಾತ್ರ ನಾಳೆ ಒಂದು ದಿನ ಮಾತ್ರ ವಿಧಾನ ಸಭಾಧ್ಯಕ್ಷರ ಆದೇಶಾನುಸಾರ ರಜೆಯನ್ನು ಘೋಷಿಸಲಾಗಿದೆ. ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ …

Read More »

ಜ್ಯೂಸಿನಲ್ಲಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿನಟಿ ಮೇಲೆ ಅತ್ಯಾಚಾರ

ಬೆಂಗಳೂರು: ಜ್ಯೂಸಿನಲ್ಲಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿ ಕುಡಿಸಿ ಸ್ಯಾಂಡಲ್‍ವುಡ್ ನಟಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಆರೋಪಿಯನ್ನು ಮೋಹಿತ್ ಎಂದು ಗುರುತಿಸಲಾಗಿದೆ. ಈತ ಖಾಸಗಿ ಕಂಪನಿಯಲ್ಲಿ ಸಿಇಒ ಆಗಿ ಕೆಲಸ ಮಾಡುತ್ತಿದ್ದು, ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ಆರೋಪ ಮಾಡುತ್ತಿದ್ದಾರೆ. ಏನಿದು ಪ್ರಕರಣ? ಮೋಹಿತ್ ಮತ್ತು ನಟಿ ಕಳೆದ ವರ್ಷ ರೆಸ್ಟೋರೆಂಟ್‍ನಲ್ಲಿ ಪರಿಚಯವಾಗಿದ್ದರು. ಆರೋಪಿ ಮೋಹಿತ್ ತನ್ನ ಕಂಪನಿ ಬ್ರಾಂಡ್ ಅಂಬಾಸಿಡರ್ ಮಾಡುವುದಾಗಿ …

Read More »

ಕೊರೊನಾ ತಡೆಗೆ ಸೀನಿಯರ್ ಸಿಟಿಜನ್ಸ್ ಲಾಕ್- ರಾಜ್ಯದಲ್ಲಿ ಶೀಘ್ರವೇ ಬರಲಿದೆ ಹೊಸ ಕಾನೂನು!

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇನ್ನಿಲ್ಲದ ಪ್ರಯತ್ನಕ್ಕೆ ಮುಂದಾಗಿದೆ. ಸೀನಿಯರ್ ಸಿಟಿಜನ್‍ಗಳನ್ನ ಲಾಕ್ ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 23 ಸಾವಿರ ಗಡಿ ದಾಟಿದೆ. ಅದರಲ್ಲೂ ಮಹಾನಗರಿ ಬೆಂಗಳೂರಲ್ಲಿ ಪ್ರತಿದಿನ ಸಾವಿರಕ್ಕೂ ಅಧಿಕ ಕೇಸ್‍ಗಳು ಬರ್ತಿವೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ನಾನಾ ಕಸರತ್ತು ಮಾಡ್ತಿದೆ. ರಾಜ್ಯದಲ್ಲಿ ಹಿರಿಯ ನಾಗರೀಕರನ್ನ ಮನೆಯಿಂದ ಹೊರ ಬರದಂತೆ ತಡೆಯಲು ಹೊಸ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ. ಹೌದು. ಕೊರೊನಾ …

Read More »

ಗುಡ್ಡ ಕುಸಿತ- ಸಾವನ್ನಪ್ಪಿದ ಮಕ್ಕಳ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು: ಮಂಗಳೂರಿನ ಗುರುಪುರದ ಬಳಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದು, ಮಕ್ಕಳ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿ ಇಬ್ಬರು ಮಕ್ಕಳ ಕುಟುಂಬಕ್ಕೆ ತಲಾ 5 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ದುಃಖಕರ. ರಕ್ಷಣಾ ಕಾರ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, …

Read More »

‘ಸ್ಟ್ರೈಕರ್’ ಚಿತ್ರ ಅಮೆಜಾನ್ ಪ್ರೈಮ್‍ನಲ್ಲಿ…..

ಕೊರೊನಾ ಕಾಟದಿಂದ ಚಿತ್ರಮಂದಿರಗಳು ಮುಚ್ಚಿಕೊಂಡಿರೋದರ ಬಗ್ಗೆ ಚಿತ್ರ ಪ್ರೇಮಿಗಳಲ್ಲೊಂದು ಕೊರಗಿದೆ. ಅದನ್ನು ಕೊಂಚ ನೀಗಿಸಿ ಮನೆಯೊಳಗೆ ಬಣ್ಣದ ಜಗತ್ತು ಕಣ್ತೆಯುವಂತೆ ಮಾಡುವಲ್ಲಿ ಅಮೆಜಾನ್ ಪ್ರೈಮ್‍ನ ಪಾತ್ರ ದೊಡ್ಡದು. ಈಗಾಗಲೇ ಕನ್ನಡದ ಒಂದಷ್ಟು ಸಿನಿಮಾಗಳು ಅಮೆಜಾನ್ ಪ್ರೈಮ್ ಮೂಲಕ ಲಾಕ್‍ಡೌನ್ ಕಾಲವನ್ನು ಸಹನೀಯವಾಗಿಸಿವೆ. ಅದರಲ್ಲಿಯೇ ಕೆಲ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿವೆ. ಅಂಥಾದ್ದೇ ಆವೇಗದೊಂದಿಗೆ ಇದೀಗ ಪ್ರವೀಣ್ ತೇಜ್ ನಾಯಕನಾಗಿ ನಟಿಸಿರೋ ‘ಸ್ಟ್ರೈಕರ್’ ಚಿತ್ರ ಅಮೆಜಾನ್ ಪ್ರೈಮ್‍ನಲ್ಲಿ ಆಟ ಶುರುವಿಟ್ಟಿದೆ. …

Read More »

60 ವರ್ಷ ಮೇಲ್ಪಟ್ಟವರಿಗೆ ಹೋಂ ಐಸೋಲೇಷನ್ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟು ಬೇರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕಡ್ಡಾಯವಾಗಿ ಹೋಂ ಐಸೋಲೆಷನ್ ಮಾಡಲಾಗುವುದು. ಈ ಸಂಬಂಧ ಕಾನೂನು ಜಾರಿಗೆ ಚಿಂತನೆ ನಡೆದಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ. 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರ ಬರಬಾರದು. ವಾಕಿಂಗ್‍ಗೂ ಬರುವಂತಿಲ್ಲ. ಅವರನ್ನ ಮನೆ ಒಳಗೆ ಇರಿಸುವುದಕ್ಕೆ ಶೀಘ್ರವಾಗಿ ಕಾನೂನು ರೂಪಿಸ್ತೇವೆ. ಜೊತೆಗೆ ಟೆಸ್ಟಿಂಗ್ ಹೆಚ್ಚಿಸ್ತೇವೆ. ಕೋವಿಡ್ ಟೆಸ್ಟ್ ಮಾಡಿಸಿದ 24 ಗಂಟೆಯೊಳಗೆ ರಿಪೋರ್ಟ್ ನೀಡಬೇಕು ಅಂತ …

Read More »

ಬಳ್ಳಾರಿ: ಜಿಲ್ಲೆಯಲ್ಲಿ ಒಂದೇ ದಿನ 139 ಮಂದಿಗೆ ಮಹಾಮಾರಿ ಕೊರೊನಾ ಸೋಂಕು..

ಬಳ್ಳಾರಿ: ಜಿಲ್ಲೆಯಲ್ಲಿ ಹೊಸದಾಗಿ 139 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1307ಕ್ಕೆ ಏರಿಕೆಯಾಗಿದೆ.   ಜಿಲ್ಲೆಯಲ್ಲಿ ಇಂದು ಒಂದೇ ದಿನ 139 ಮಂದಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಕೇವಲ ಜಿಂದಾಲ್ ಒಂದರಲ್ಲೇ ಈವರೆಗೆ ಅಂದಾಜು 479 ಮಂದಿ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆ ನೌಕರರಿಗೆ ಕೊರೊನಾ ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1307ಕ್ಕೆ ಏರಿಕೆಯಾಗಿದ್ದು, 580 ಮಂದಿ …

Read More »

ಅಂಧನಿಗೆ ದಾರಿ ಮಾಡಿಕೊಟ್ಟ ನಾಯಿ…………

ಮುಂಬೈ: ಹಲವು ಬಾರಿ ವಿಕಲಚೇತನರಿಗೆ ಯಾರೂ ಸಹಾಯ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ಅಂಧ ವ್ಯಕ್ತಿಗೆ ನಾಯಿ ಸಹಾಯ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಾಯಿ ಅಂಧನಿಗೆ ಸಹಾಯ ಮಾಡುವ ವಿಡಿಯೋವನ್ನು ಪುಣೆಯ ಪೊಲೀಸ್ ಆಯಕ್ತರು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಅಂಧ ವ್ಯಕ್ತಿಯೊಬ್ಬರು ನಡೆದು ಹೋಗುತ್ತಿರುವಾಗ ದಾರಿಯಲ್ಲಿ ಅಡ್ಡಲಾಗಿ ದೊಡ್ಡ ಕೋಲು ಬಿದ್ದಿರುತ್ತದೆ. ಇದನ್ನು …

Read More »

70 ವರ್ಷದ ಅಜ್ಜ, 7 ವರ್ಷದ ಮೊಮ್ಮಗಳು – 6 ದಿನ ರೇಪ್

ಚೆನ್ನೈ: 70 ವರ್ಷದ ಕಾಮುಕ ಅಜ್ಜನೊಬ್ಬ ಏಳು ವರ್ಷದ ಬಾಲಕಿಯನ್ನು ಅತ್ಯಾಚಾರಗೈದಿರುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಏನಿದು ಪ್ರಕರಣ?: ಸಂತ್ರಸ್ತ ಬಾಲಕಿ ಅಪ್ಪ-ಅಮ್ಮ ಹಾಗೂ ಅಣ್ಣನ ಜೊತೆಯಲ್ಲಿ ವಾಸವಾಗಿದ್ದಳು. ಬಾಲಕಿಯ ಪೋಷಕರು ಈರುಳ್ಳಿ ವ್ಯಾಪಾರ ಮಾಡಿಕೊಂಡಿದ್ದು, ಪ್ರತಿನಿತ್ಯ ಮಗನನ್ನು ಕರೆದುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದರು. ಸೇಫ್ ಆಗಿರಲಿ ಎಂದು ಏಳು ವರ್ಷದ ಮಗಳನ್ನು ಅಜ್ಜನ ಬಳಿ …

Read More »

ಸಂಬಂಧಿಕರ ನಡುವಿನ ಜಗಳ ತಾರಕಕ್ಕೇರಿ ಶೂಟೌಟ್……

ಧಾರವಾಡ: ಆಸ್ತಿ ವಿಚಾರಕ್ಕೆ ಸಂಬಂಧಿಕರ ನಡುವಿನ ಜಗಳ ತಾರಕಕ್ಕೇರಿ ಶೂಟೌಟ್ ನಡೆದಿದ್ದು, ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿವಯೋಗಿ ಬಾವಿಕಟ್ಟಿ (44) ಮೃತ ವ್ಯಕ್ತಿ. ನಗರದ ಮದಿಹಾಳದ ಗಣೇಶನಗರದಲ್ಲಿ ಶನಿವಾರ ಕಳೆದ ತಡರಾತ್ರಿ ಘಟನೆ ನಡೆದಿದೆ. ಜಿಲ್ಲೆಯ ಶಿರೂರ ಗ್ರಾಮದ ಶ್ರೀ ಶೈಲ್ ಎಂಬಾತ ತನ್ನ ರಿವಾಲ್ವರ್‌ನಿಂದ ಶಿವಯೋಗಿಯನ್ನು ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ಶಿರೂರ ಗ್ರಾಮದಲ್ಲಿ ಶ್ರೀಶೈಲ್ ಹಾಗೂ ಆತನ ಸಹೋದರಿ ಸುವರ್ಣಾಗೆ ಸಂಬಂಧಿಸಿದ ಆಸ್ತಿ …

Read More »