Breaking News

Laxminews 24x7

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ,ಕೋವಿಡ್-೧೯ ನಿಯಂತ್ರಣ ಹಾಗೂ ನೆರೆಹಾವಳಿ ನಿರ್ವಹಣೆಗೆ ಸಂಬಂಧಿಸಿದಂತೆ ಸಭೆ

ಬೆಳಗಾವಿ- ದೆಹಲಿಯಿಂದ ತಬ್ಲಿಘಿಗಳು, ಅಜ್ಮೇರ್ ನಿಂದ ಜನರು ಹಿಂದಿರುಗಿದ ಬಳಿಕವೂ ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿತ್ತು. ಇದೀಗ ಮಹಾರಾಷ್ಟಗರದಿಂದ ಅತೀ ಹೆಚ್ಚು ಜನರು ಬರುತ್ತಿರುವುದರಿಂದ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿ ಸೂಚನೆ ನೀಡಿದ್ರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್-೧೯ ನಿಯಂತ್ರಣ ಹಾಗೂ ನೆರೆಹಾವಳಿ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು …

Read More »

ಕಿಟ್ ವಿತರಿಸುತ್ತಾರೆ ಎಂಬ ವದಂತಿ ಹಿನ್ನೆಲೆ,ಕೇಂದ್ರ ಸಚಿವ ಸುರೇಶ್ ಅಂಗಡಿ ಕಚೇರಿ ಎದುರು ಜನ ಸೇರಿರುವ ದೃಶ್ಯ

ಬೆಳಗಾವಿ:  ಆಹಾರ ಧಾನ್ಯ ಕಿಟ್ ವಿತರಿಸುತ್ತಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಇಂದು ಕೂಡ ಕೇಂದ್ರ ಸಚಿವ ಸುರೇಶ್ ಅಂಗಡಿ ಕಚೇರಿ ಎದುರು ಜನ ಸೇರಿರುವ ದೃಶ್ಯ ಕಂಡು ಬಂತು. ಇಲ್ಲಿನ ಚನ್ನಮ್ಮ ವೃತ್ತದಲ್ಲಿರುವ ಸಚಿವ ಸುರೇಶ ಅಂಗಡಿ  ಅವರ ಕಚೇರಿ  ಎದುರು  ಸಾವಿರಾರು ಸಂಖ್ಯೆಯಲ್ಲಿ  ಜನರು ಸೇರಿದ್ದರು.  ಸಮಾಜಿಕ  ಅಂತರ ಕಾಯ್ದುಕೊಳ್ಳದೇ, ಕನಿಷ್ಟ ಮಾಸ್ಕ್ ಕೂಡ ಧರಿಸಿರಲಿಲ್ಲ.  ಸುಮಾರು ಐದು ಸಾವಿರ ಆಹಾರ ಧಾನ್ಯ ಕಿಟ್ ನೀಡಲಾಗುತ್ತಿದೆ ಎಂಬ  ವದಂತಿ …

Read More »

ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಬೆಳಗಾವಿ ಯಲ್ಲಿ ಇಂದು ಮೊದಲ ಸಭೆ.. ಸುಮಾರು ವಿಷಯ ಗಳ ಬಗ್ಗೆ ಚರ್ಚ್

ಬೆಳಗಾವಿ- ದೆಹಲಿಯಿಂದ ತಬ್ಲಿಘಿಗಳು, ಅಜ್ಮೇರ್ ನಿಂದ ಜನರು ಹಿಂದಿರುಗಿದ ಬಳಿಕವೂ ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿತ್ತು. ಇದೀಗ ಮಹಾರಾಷ್ಟಗರದಿಂದ ಅತೀ ಹೆಚ್ಚು ಜನರು ಬರುತ್ತಿರುವುದರಿಂದ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿ ಸೂಚನೆ ನೀಡಿದ್ರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್-೧೯ ನಿಯಂತ್ರಣ ಹಾಗೂ ನೆರೆಹಾವಳಿ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು …

Read More »

ಸೊಲ್ಲಾಪುರ ಜೈಲಿನಲ್ಲಿ ಸಿಬ್ಬಂದಿ ಸೇರಿ 60 ಮಂದಿಗೆ ಕೊರೊನಾ……….

ಮುಂಬೈ: ಮಹಾರಾಷ್ಟ್ರದ ಸೊಲ್ಲಾಪುರ ಜೈಲಿನಲ್ಲಿ ಸಿಬ್ಬಂದಿ ಸೇರಿ 60 ಮಂದಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸೊಲ್ಲಾಪುರ ಜಿಲ್ಲಾಧಿಕಾರಿ ಮಿಲಿಂದ್ ಶಂಭಾರ್ಕರ್, ಜೈಲಿನಲ್ಲಿ ಒಟ್ಟು 300 ಮಂದಿ ಕೈದಿಗಳಿದ್ದಾರೆ. ಕೊರೊನಾ ತಗುಲಿದ 60 ಮಂದಿಯ ಪೈಕಿ 8 ಜನ ಜೈಲು ಸಿಬ್ಬಂದಿ ಇದ್ದಾರೆ. ಎಲ್ಲರನ್ನೂ ಸದ್ಯ ಐಸೋಲೇಷನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸೊಲ್ಲಾಪುರ ಜೈಲಿನ ಕೈದಿ ಮತ್ತು ಸಿಬ್ಬಂದಿಗೆ ಕೊರೊನಾ ಗುಣಲಕ್ಷಣಗಳು ಕಂಡು ಬಂದಿದ್ದವು. ಈ …

Read More »

ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ- ಸಿಕ್ಕಿಬಿದ್ದ ಆರೋಪಿ

ಮುಂಬೈ: ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಮಹಿಳೆಯೋರ್ವಳ ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ಸಿಂಗ್ (39) ಬಂಧಿತ ಆರೋಪಿ. ಮುಂಬೈನ ಅಗ್ರಿಪಾಡಾ ಪ್ರದೇಶದ ಸಾರ್ವಜನಿಕ ಶೌಚಾಲಯದಲ್ಲಿ ಬುಧವಾರ ಘಟನೆ ನಡೆದಿದ್ದು, ಗುರುವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆ ಬುಧವಾರ ಮಧ್ಯಾಹ್ನ ಸಾರ್ವಜನಿಕ ಶೌಚಾಲಯಕ್ಕೆ ಹೋಗಿದ್ದರು. ಈ ವೇಳೆ ಪಕ್ಕದ ಶೌಚಾಲಯದಲ್ಲಿದ್ದ ಪ್ರಶಾಂತ್ ಸಿಂಗ್ ತನ್ನ ಮೊಬೈಲ್ ಅನ್ನು ಶೌಚಾಲಯದ ಕಿಟಕಿಯ ಬಳಿ ಇಟ್ಟಿದ್ದ. ಆದರೆ …

Read More »

ಬಾಗಿಲು ಮುಚ್ಚಿದ ಅಟ್ಲಾಸ್ ಸೈಕಲ್ ಕಂಪನಿ – ಸಾವಿರಾರು ನೌಕರರು ಬೀದಿಗೆ

ಲಕ್ನೋ: ಭಾರತದ ಪ್ರಸಿದ್ಧ ಸೈಕಲ್ ತಯಾರಕಾ ಕಂಪನಿಯಾದ ‘ಅಟ್ಲಾಸ್’ ವಿಶ್ವ ಬೈಸಿಕಲ್ ದಿನಾಚರಣೆಯ ದಿನದಂದೇ ದಿಢೀರ್ ಸ್ಥಗಿತಗೊಂಡಿದೆ. ಯಾವುದೇ ಸೂಚನೆ ನೀಡದೇ ಬಾಗಿಲು ಮುಚ್ಚಿದ ಪರಿಣಾಮ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಭಾರೀ ನಷ್ಟದ ಕಾರಣ ಕಂಪನಿಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿ ಉತ್ತರ ಪ್ರದೇಶದ ಘಾಝಿಯಾಬಾದ್‍ನಲ್ಲಿದ್ದ ಅತೀ ದೊಡ್ಡ ಫ್ಯಾಕ್ಟರಿ ಮುಚ್ಚಲಾಗಿದೆ ಎಂದು ತಿಳಿಸಿದೆ. ಈ ಮೂಲಕ ಭಾರತದ ಸೈಕಲ್ ತಯಾರಿಕಾ ಕಂಪೆನಿಯ ಅಂತಿಮ ಘಟಕವೂ …

Read More »

ಬೆಂಗಳೂರು: ಶಲವ್ ಮಾಕ್‍ಟೇಲ್-2 ಕಥೆ ಕೇಳಿ ನಾನು ಥ್ರಿಲ್ ಆದೇ ಎಂದು ಸಂಗೀತ ನಿರ್ದೇಕ ರಘು ದೀಕ್ಷಿತ್ ಅವರು ಹೇಳಿದ್ದಾರೆ.

ಬೆಂಗಳೂರು: ಶಲವ್ ಮಾಕ್‍ಟೇಲ್-2 ಕಥೆ ಕೇಳಿ ನಾನು ಥ್ರಿಲ್ ಆದೇ ಎಂದು ಸಂಗೀತ ನಿರ್ದೇಕ ರಘು ದೀಕ್ಷಿತ್ ಅವರು ಹೇಳಿದ್ದಾರೆ. ಲವ್ ಮಾಕ್‍ಟೇಲ್ 2020ರ ಜನವರಿಯಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಯಶಸ್ಸಿನ ಬೆನ್ನಲೇ ಚಿತ್ರದ ನಿರ್ದೇಶಕ ಮತ್ತು ನಾಯಕ ನಟ ಡಾರ್ಲಿಂಗ್ ಕೃಷ್ಣ ಅವರು ಲವ್ ಮಾಕ್‍ಟೇಲ್ ಸಿನಿಮಾದ ಸಿಕ್ವೇಲ್ ಮಾಡುವುದಾಗಿ ಹೇಳಿಕೊಂಡಿದ್ದರು. ಈಗ ಲಾಕ್‍ಡೌನ್ ಸಮಯದಲ್ಲಿ ಈ ಚಿತ್ರದ ಕಥೆಯನ್ನು ಕೃಷ್ಣ ರೆಡಿ ಮಾಡಿದ್ದಾರೆ …

Read More »

ಕಳೆದ ಎರಡೂವರೆ ತಿಂಗಳುಗಳಿಂದ ಮುಚ್ಚಿದ್ದ ಹೋಟೆಲ್ ತೆರೆಯುವಂತೆ ಸರ್ಕಾರ ಸೂಚನೆ

ಬೆಂಗಳೂರು: ಕೊರೊನಾ ವೈರಸ್ ನಿಂದ ಕಳೆದ ಎರಡೂವರೆ ತಿಂಗಳುಗಳಿಂದ ಮುಚ್ಚಿದ್ದ ಹೋಟೆಲ್ ತೆರೆಯುವಂತೆ ಸರ್ಕಾರ ಸೂಚನೆ ನೀಡಿದೆ. ಕೊರೊನಾ ಭೀತಿಯಿಂದ ಹೋಟೆಲ್‍ಗಳು ಮುಚ್ಚಿದ್ದವು. ಆದರೆ ಇದರ ನಡುವೆ ಪಾರ್ಸೆಲ್ ನೀಡುವುದಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಈಗ ಹಂತ ಹಂತವಾಗಿ ಲಾಕ್‍ಡೌನ್ ಅನ್ನು ಸಡಿಲಿಕೆ ಮಾಡುತ್ತಿದ್ದು, ಹೋಟೆಲ್ ಓಪನ್ ಮಾಡಲು ಅನುಮತಿ ನೀಡಲಾಗಿದೆ. ಜೊತೆಗೆ ಕೆಲ ಮಾರ್ಗ ಸೂಚಿಯನ್ನು ಸೂಚಿಸಲಾಗಿದೆ ಮಾರ್ಗಸೂಚಿ ಏನು? ಹೋಟೆಲ್‍ಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು …

Read More »

ರಾತ್ರಿ ವೇಳೆ ಸಾಕು ಪ್ರಾಣಿಗಳನ್ನ ಬೇಟೆಯಾಡ್ತಿದ್ದ ಚಿರತೆ ಸೆರೆ

ವಿಜಯಪುರ: ರಾತ್ರಿ ವೇಳೆ ಸಾಕು ಪ್ರಾಣಿಗಳನ್ನ ಬೇಟೆಯಾಡುವ ಮೂಲಕ ಜಿಲ್ಲೆಯ ಜನರ ನಿದ್ದೆ ಕೆಡಿಸಿದ್ದ ಚಿರತೆ ಕೊನೆಗೂ ಬೋನಿ ಬಿದ್ದಿದೆ. ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಗ್ರಾಮದ ಹೊರವಲಯದಲ್ಲಿ ಚಿರತೆ ಬಲೆಗೆ ಬಿದ್ದಿದೆ. ಕಳೆದ ಒಂದು ವಾರದಿಂದ ಬಬಲೇಶ್ವರ ತಾಲೂಕಿನ ಬಬಲಾದಿ, ದೇವರಗೆಣ್ಣೂರು, ಗುಣದಾಳ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಈ ಚಿರತೆಯ ಹಾವಳಿ ಹೆಚ್ಚಾಗಿತ್ತು. ಅಷ್ಟೇ ಅಲ್ಲದೇ ರಾತ್ರಿ ಹೊತ್ತು ಎಮ್ಮೆ, ಮೇಕೆ, ಸಾಕು ಪ್ರಾಣಿಗಳ ಬೇಟೆಯಾಡುವ ಮೂಲಕ ಜನರ …

Read More »

ಕಂಟೈನ್ಮೆಂಟ್ ಝೋನ್‍ಗಳನ್ನ ಹೊರತುಪಡಿಸಿ ಬೇರೆಡೆ ಶಾಪಿಂಗ್ ಮಾಲ್‍ಗಳನ್ನು ಓಪನ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

ಬೆಂಗಳೂರು: ಕಂಟೈನ್ಮೆಂಟ್ ಝೋನ್‍ಗಳನ್ನ ಹೊರತುಪಡಿಸಿ ಬೇರೆಡೆ ಶಾಪಿಂಗ್ ಮಾಲ್‍ಗಳನ್ನು ಓಪನ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಕೊರೊನಾ ಭೀತಿಯಿಂದ ಕಳೆದ ಮೂರು ತಿಂಗಳಿಂದ ಶಾಪಿಂಗ್ ಮಾಲ್‍ಗಳನ್ನು ಕ್ಲೋಸ್ ಮಾಡಲಾಗಿದೆ. ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದರೂ ಕೆಲ ಸಡಿಲಿಕೆಗಳನ್ನು ಮಾಡಲಾಗುತ್ತಿದೆ. ಇದರ ನಡುವೆ ಈಗ ಕಂಟೈನ್ಮೆಂಟ್ ಝೋನ್‍ಗಳಲ್ಲದೇ ಇರುವಂತಹ ಪ್ರದೇಶಗಳಲ್ಲಿನ ಶಾಪಿಂಗ್ ಮಾಲ್‍ಗಳನ್ನು ಓಪನ್ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.   ಈ ಹಿಂದೆಯೇ ಜೂನ್ 8ರಿಂದ ಮಾಲ್‍ಗಳನ್ನು ಓಪನ್ ಮಾಡಲಾಗುವುದು …

Read More »