Breaking News

Laxminews 24x7

APMC ಕಾಯ್ದೆ ತರುವಾಗ ರೈತರ ಜತೆ ಚರ್ಚಿಸಿದ್ದಾರಾ? -HDK

ಬೆಂಗಳೂರು: ಎಪಿಎಂಸಿ ಕಾಯ್ದೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಎಪಿಎಂಸಿ ಕಾಯ್ದೆ ತರುವಾಗ ರೈತರ ಜತೆ ಚರ್ಚಿಸಿದ್ದಾರಾ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭವಿದು. ಈ ಸಮಯದಲ್ಲಿ ಸುಗ್ರೀವಾಜ್ಞೆಯ ಮೂಲಕ ಜಾರಿ ಏಕೆ? ತರಾತುರಿಯಲ್ಲಿ ಕಾಯ್ದೆ ಜಾರಿ ಮಾಡುವ ಅಗತ್ಯವೇನಿದೆ? ಮೇ ನಲ್ಲಿ ಸುಗ್ರೀವಾಜ್ಞೆ ತಂದಿದ್ದಾರೆ. ಇದಾದ ಬಳಿಕ ಸಾಕಷ್ಟು ಸಮಯಾವಕಾಶ ಇತ್ತು. ಯಾವ ವಿರೋಧ ಪಕ್ಷದವರನ್ನ ಕರೆದು ಇವರು …

Read More »

ರವಿಶಂಕರ್​​ನನ್ನು ಸಿಸಿಬಿ ಪೊಲೀಸರು ಬಂಧಿಸಿ ಮೊಬೈಲ್ ರಿಟ್ರೈವ್​ ಮಾಡಿದಾಗ ಡ್ರಗ್ಸ್ ಜತೆ ಆತ ಹವಾಲಾ ದಂಧೆ

ಬೆಂಗಳೂರು : ಸ್ಯಾಂಡಲ್​​​​​ವುಡ್​ಗೆ ಡ್ರಗ್ಸ್​ ಜಾಲ ನಂಟು ಆರೋಪ ಪ್ರಕರಣ ಸಂಬಂಧ ಸದ್ಯ ಬಂಧನವಾಗಿರೋ ಆರೋಪಿಗಳು ಕೇವಲ ಡ್ರಗ್ಸ್​ ಪೆಡ್ಲಿಂಗ್ ಮತ್ತು ಸೇವನೆ‌ ಅಷ್ಟೇ ಮಾಡುತ್ತಿರಲಿಲ್ಲ. ಇವರ ಜಾಲ ಕಂಡು ಸಿಸಿಬಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಆರೋಪಿ ರವಿಶಂಕರ್​​ನನ್ನು ಸಿಸಿಬಿ ಪೊಲೀಸರು ಬಂಧಿಸಿ ಮೊಬೈಲ್ ರಿಟ್ರೈವ್​ ಮಾಡಿದಾಗ ಡ್ರಗ್ಸ್ ಜತೆ ಆತ ಹವಾಲಾ ದಂಧೆಯಲ್ಲೂ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ. 5, 10 ರೂಪಾಯಿ ನೋಟುಗಳನ್ನು ಹವಾಲಾಗೆ ಬಳಸಿ, ಲಕ್ಷಕ್ಕೆ ಕೆ.ಜಿ …

Read More »

ತುಂಗಭದ್ರಾ ನದಿ ಸೇತುವೆ ದಿಢೀರನೆ ಕುಸಿದು ಬಿದ್ದಿದ್ದೆ.

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ಮದಗಲಟ್ಟಿ ಬಳಿಯಿರುವ ತುಂಗಭದ್ರಾ ನದಿಗೆ ಕಟ್ಟಲಾಗಿರುವ ಸೇತುವೆ ದಿಢೀರನೆ ಕುಸಿದು ಬಿದ್ದಿದ್ದು, ಸಂಭವಿಸುತ್ತಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಇದು ಹಡಗಲಿ ಮತ್ತು ಗದಗ ಮಾರ್ಗ ಸಂಪರ್ಕಸುವ ರಸ್ತೆಯಾಗಿದ್ದು, 2002ರಲ್ಲಿ ನಿರ್ಮಾಣಗೊಂಡಿತ್ತು. ಸೇತುವೆ ಸಾಕಷ್ಟು ಶಿಥಿಲಾವಸ್ಥೆಯಲ್ಲಿದ್ದರೂ ಸಹ ಲೋಕೋಪಯೋಗಿ ಇಲಾಖೆ ಇತ್ತ ಗಮನಹರಿಸಿಲ್ಲ ಎನ್ನಲಾಗಿದೆ. ಸೇತುವೆಯ ನವೀಕರಣದ ಬಗ್ಗೆ ಅನೇಕ ಸಲ ದೂರು ಸಲ್ಲಿಸಿದ್ದರು ಸಹ ಅಧಿಕಾರಿಗಳು ಕ್ಯಾರೇ ಎಂದಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಒಂದೆಡೆ ತುಂಗಾಭದ್ರಾ …

Read More »

ಸಾರ್ವಜನಿಕ ಶೌಚಾಲಯ ಬಳಸಿ ಹಣ ನೀಡದಿದ್ದಕ್ಕೆ ರಾಡ್​ನಿಂದ ಹಲ್ಲೆ!

ನೆಲಮಂಗಲ: ಸಾರ್ವಜನಿಕ ಶೌಚಾಲಯ ಬಳಸಿ ಹಣ ನೀಡದ ಹಿನ್ನೆಲೆಯಲ್ಲಿ ಬಸ್ ಚಾಲಕನ ತಲೆಗೆ ರಾಡ್‌ನಿಂದ ಹಲ್ಲೆ ಮಾಡಿರುವ ಘಟನೆ ನೆಲಮಂಗಲ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯ ಬಳಸಿ ಹಣ ನೀಡಲಿಲ್ಲ ಎಂದು ಶೌಚಾಲಯ ನಿರ್ವಹಣೆ ಮಾಡುತ್ತಿದ್ದ ರಾಜೇಶ್‌ ಎಂಬಾತ ಬಸ್ ಚಾಲಕ ವೆಂಕಟೇಶ್ ಮೇಲೆ ರಾಡ್​ನಿಂದ ಹಲ್ಲೆ ಮಾಡಿದ್ದಾರೆ. ಗಾಯಾಳು ವೆಂಕಟೇಶ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. …

Read More »

ಹ್ಯಾಂಡಿ ಕ್ರಾಫ್ಟ್​ಗೆ 15 ಕೋಟಿ ಹಣ ವಂಚಿಸಿದ್ದ ಆರೋಪಿ ED ಬಲೆಗೆ

ಬೆಂಗಳೂರು: ಹ್ಯಾಂಡಿಕ್ರಾಫ್ಟ್ ಎಫ್ ಡಿ ವಂಚನೆ ಪ್ರಕರಣ ಸಂಬಂಧ ನಾಗಲಿಂಗ ಸ್ವಾಮಿಯನ್ನು ED ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ನಾಗಲಿಂಗಸ್ವಾಮಿ ಹ್ಯಾಂಡಿ ಕ್ರಾಫ್ಟ್​ಗೆ ಸೇರಿದ್ಧ ಸುಮಾರು 15 ಕೋಟಿ ಹಣ ವಂಚನೆ ಮಾಡಿದ್ದ. ಹ್ಯಾಂಡಿ ಕ್ರಾಫ್ಟ್​ಗೆ ಸೇರಿದ್ದ ಒಟ್ಟು ಹದಿನೈದು ಕೋಟಿ ಹಣವನ್ನು ವಿಜಯ ಬ್ಯಾಂಕ್​ನಲ್ಲಿ FD ಇಡಲಾಗಿತ್ತು. ಬ್ಯಾಂಕ್ ಮತ್ತು ಹ್ಯಾಂಡಿ ಕ್ರಾಫ್ಟ್ ನಡುವೆ ಮಧ್ಯವರ್ತಿ ಯಾಗಿದ್ದ ನಾಗಲಿಂಗ ಸ್ವಾಮಿ FD ಇಟ್ಟ ಏಳು ದಿನದಲ್ಲಿ ನಕಲಿ ಸರ್ಕಾರಿ ಲೆಟರ್ ಮತ್ತು …

Read More »

ಉನ್ನತ ವ್ಯಾಸಂಗಕ್ಕೆ ಬಂದು ಮಾದಕ ವಸ್ತು ಮಾರಾಟ, ವಿದೇಶಿ ಪ್ರಜೆ ಸೇರಿ ಐವರ ಬಂಧನ

ಬೆಂಗಳೂರು,  ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದು ಎಂಸಿಎ ಪದವಿ ವ್ಯಾಸಂಗ ಮಾಡುತ್ತಿದ್ದ ವೇಳೆ ಮಾದಕ ವಸ್ತುಗಳ ಸೇವನೆ ಚಟಕ್ಕೆ ಬಿದ್ದು ಹಣಕಾಸಿನ ತೊಂದರೆಯಿಂದ ತಾನೇ ಮಾದಕ ವಸ್ತುಗಳ ಮಾರಾಟ ಆರಂಭಿಸಿದ್ದ ವಿದೇಶಿ ಪ್ರಜೆ ಸೇರಿ ಐದು ಮಂದಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸೂಡಾನ್ ದೇಶದ ಅಹಮ್ಮದ್ ಒಮರ್ (27), ತಾಬ್‍ಶೇರ್(24), ಲಜೀಮ್(23), ಸೈಯದ್ ಶಕೀರ್(24), ಮೊಹಮ್ಮದ್ ಶಿಹಾಮ್ …

Read More »

ಸಿದ್ದರಾಮಯ್ಯ ಕಾಲಿಗೆ ಬಿದ್ದ ಬಿಜೆಪಿ ಶಾಸಕರು

ಬೆಂಗಳೂರು: ಬಿಜೆಪಿಯ ಇಬ್ಬರು ಶಾಸಕರು ಸೇರಿದಂತೆ ಹಲವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದ ‍ಪ್ರಸಂಗ ವಿಧಾನಸಭೆ ಮೊಗಸಾಲೆಯಲ್ಲಿ ಮಂಗಳವಾರ ನಡೆಯಿತು. ಕಲಾಪ ನಡೆಯುತ್ತಿದ್ದಾಗಲೇ ಚಹಾ ಕುಡಿಯುವ ಸಲುವಾಗಿ ವಿಧಾನಪರಿಷತ್ತಿನ ಸದಸ್ಯ ಸಿ.ಎಂ. ಇಬ್ರಾಹಿಂ ಜತೆಯಲ್ಲಿ ಸಿದ್ದರಾಮಯ್ಯ ಮೊಗಸಾಲೆಗೆ ಬಂದರು. ಆ ಹೊತ್ತಿನಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಜತೆ ಬಿಜೆಪಿ, ಕಾಂಗ್ರೆಸ್ ಸದಸ್ಯರು ಹರಟೆ ಹೊಡೆಯುತ್ತಿದ್ದರು. ಸಿದ್ದರಾಮಯ್ಯ ಅವರನ್ನು ನೋಡುತ್ತಿದ್ದಂತೆ ಎಲ್ಲರೂ ಅವರ ಮುಂದೆ ನಿಂತರು. ಆಗ, …

Read More »

ಪ್ರಥಮ ಭಾಷೆಗೆ 481 ವಿದ್ಯಾರ್ಥಿಗಳು ಗೈರು ಹಾಜರು

ಬೆಳಗಾವಿ: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ 2ನೇ ದಿನವಾದ ಮಂಗಳವಾರ ಪ್ರಥಮ ಭಾಷೆ ವಿಷಯದ ಪರೀಕ್ಷೆ ನಡೆಯಿತು. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ನೋಂದಾಯಿಸಿದ್ದ 2,700 ಮಂದಿಯಲ್ಲಿ 2,540 ವಿದ್ಯಾರ್ಥಿಗಳು ಹಾಜರಾದರು. 160 ಮಂದಿ ಗೈರು ಹಾಜರಾದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 4,005 ಮಕ್ಕಳು ನೋಂದಾಯಿಸಿದ್ದರು. ಇವರಲ್ಲಿ 3,684 ಮಂದಿ ಹಾಜರಾದರು. 321 ವಿದ್ಯಾರ್ಥಿಗಳು ಗೈರು ಹಾಜರಾದರು. ಯಾರೂ ಡಿಬಾರ್‌ ಆಗಿಲ್ಲ ಎಂದು ಡಿಡಿಪಿಐಗಳಾದ ಎ.ಬಿ. ಪುಂಡಲೀಕ ಹಾಗೂ ಗಜಾನನ ಮನ್ನಿಕೇರಿ ತಿಳಿಸಿದ್ದಾರೆ.

Read More »

ಸಿಮೆಂಟ್ ಬೆಲೆ ಏರಿಕೆ: ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ಆಗ್ರಹ

ಬೆಳಗಾವಿ: ‘ಸಿಮೆಂಟ್ ಬೆಲೆ ದಿನೇ ದಿನೇ ಹೆಚ್ಚುತ್ತಿದ್ದು, ಸ್ಥಿರತೆ ಕಾಪಾಡಿಕೊಂಡು ಗ್ರಾಹಕರ ವಿಶ್ವಾಸ ಗಳಿಸಲು ಕಂಪನಿಗಳು ಸಹಕರಿಸುತ್ತಿಲ್ಲ. ಇದರಿಂದ ನಮಗೆ ಆಗುತ್ತಿರುವ ತೊಂದರೆ ನಿವಾರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಜಿಲ್ಲಾ ಸಿಮೆಂಟ್ ಮಾರಾಟಗಾರರ ಸಂಘದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ‘ಸಮಸ್ಯೆ ಬಗೆಹರಿಯದಿದ್ದರೆ ಸೋಮವಾರ (ಸೆ.28)ದಿಂದ ಸಿಮೆಂಟ್ ಮಾರಾಟ ಬಂದ್ ಮಾಡಲಾಗುವುದು’ ಎಂದು ತಿಳಿಸಿದರು. ‘ಬೆಲೆಯಲ್ಲಿ ಸ್ಥಿರತೆ ಕಾಪಾಡುವಂತೆ ಕೋರಿದರೂ ಕಂಪನಿಗಳವರು ಸ್ಪಂದಿಸುತ್ತಿಲ್ಲ. ಹೀಗಾಗಿ, ಜಿಲ್ಲಾಡಳಿತ …

Read More »

ಕೊರೊನಾ ವೈರಸ್ ಅಬ್ಬರ : ಇಂದು 7 ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ

ನವದೆಹಲಿ : ತೀವ್ರ ಗೊಳ್ಳುತ್ತಿರುವ ಕೊರೊನಾವೈರಸ್ ಸಾಂಕ್ರಾಮಿಕ ರೋಗಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರ್ನಾಟಕ ಸೇರಿ ಏಳು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಹತ್ವದ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಕರೋನ ಕೇಸ್‌ ಪರಿಸ್ಥಿತಿ ಹೆಚ್ಚು ಗಂಭೀರವಾಗಿರುವ ರಾಜ್ಯಗಳು / ಯುಟಿಗಳ ಮೇಲೆ ಕೇಂದ್ರೀಕರಿಸಿ ದೇಶಾದ್ಯಂತ ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನಿಯಮಿತವಾಗಿ ಸಭೆ ನಡೆಸುತ್ತಿದ್ದಾರೆ ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಹಾರಾಷ್ಟ್ರ ವು ಅತ್ಯಂತ ಭೀಕರ ವಾದ ಕರೋನ ಪೀಡಿತ ರಾಜ್ಯವಾಗಿ ಮುಂದುವರೆದಿದ್ದು, ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ, ತಮಿಳುನಾಡು, …

Read More »