Breaking News

Laxminews 24x7

ಸಾರಿಗೆ ನೌಕರರ ಮುಷ್ಕರ ಎಫೆಕ್ಟ್ :ಖಾಸಗಿ ಬಸ್ಗಳ ಟಾಪ್ ನಲ್ಲಿ ಕುಳಿತು ಪ್ರಯಾಣ

ಬೆಂಗಳೂರು : ಗಂಡ ಹೆಂಡ್ತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಮಾತು ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ. ಸಾರಿಗೆ ನೌಕರರು ಮತ್ತು ಸರ್ಕಾರದ ನಡುವಿನ ಜಟಾಪಟಿ ಎರಡನೇ‌ ದಿನವೂ ಮುಂದುವರೆದಿದ್ದು, ಇವರಿಬ್ಬರ ಮಧ್ಯೆ ಸಿಲುಕಿರುವ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.‌ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರವೇನೋ ಖಾಸಗಿ ಬಸ್​, ಮ್ಯಾಕ್ಸಿಕ್ಯಾಬ್​ಗಳ ಮೊರೆ ಹೋಗಿದೆ. ‌ ಆದರೆ, ಸರಿಯಾದ ಸಮಯಕ್ಕೆ ನಿಗದಿತ ಸ್ಥಳಕ್ಕೆ ತಲುಪಲಾಗದೇ ಸಾಮಾನ್ಯ ಜನರು ಹೈರಾಣಾಗಿದ್ದಾರೆ. ನಗರ ಸಾರಿಗೆ ಬಸ್​ಗಳು …

Read More »

ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಸಿಎಂ ಗರಂ ?

ಏ ನೀನೇನು ತಲೆಕೆಡಿಸಿಕೊಳ್ಳಬೇಡ, ನಮಗೆ ಗೊತ್ತಿದೆ ಸರ್ಕಾರ ಹೇಗೆ ನಡೆಸಬೇಕು ಎನ್ನುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗರಂ ಆಗಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಸಾರಿಗೆ ನೌಕರರ ಮುಷ್ಕರ ಕುರಿತಂತೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮುಷ್ಕರ ನಿರತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಇನ್ಶೂರೆನ್ಸ್, ಪರ್ಮಿಟ್ ಲ್ಯಾಪ್ಸ್ ಆದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಏನಾದ್ರೂ ಅಪಾಯವಾದ್ರೆ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಸಿಎಂ ಗರಂ ಆಗಿದ್ದಾರೆ. …

Read More »

ಸೋಷಿಯಲ್ ಮೀಡಿಯಾ’ದಲ್ಲಿ ‘ಯಡಿಯೂರಪ್ಪ’ ‘ಅಂದು-ಇಂದಿನ’ ಸಾರಿಗೆ ನೌಕರರ ಬಗೆಗಿನ ಹೇಳಿಕೆ ‘ಸಖತ್ ವೈರಲ್.’!

ಸಾರಿಗೆ ನೌಕರರು ಹಾಗೂ ರಾಜ್ಯ ಸರ್ಕಾರದ ನಡುವಿನ ಮುಷ್ಕರ ಸಮರ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರ 6ನೇ ವೇತನ ಆಯೋಗದಂತೆ ವೇತನ ಜಾರಿಗೆ ಬಿಲ್ ಕುಲ್ ಇಲ್ಲ ಅಂದಿದೆ. ಅಲ್ಲದೇ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂಬುದಾಗಿ ಪರಿಗಣಿಸುವಂತ ಬೇಡಿಕೆಗೂ ಯಾವುದೇ ಸ್ಪಷ್ಟವಾದಂತ ಉತ್ತರವನ್ನು ನೀಡಿಲ್ಲ. ಇದರ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ 2016ರ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಂತ ಬಿಎಸ್ ಯಡಿಯೂರಪ್ಪ ಹೇಳಿದ ಮಾತು, 2021ರ ಈಗ ಮುಖ್ಯಮಂತ್ರಿಯಾಗಿದ್ದಂತ …

Read More »

ಖಾಸಗಿ ವಾಹನಗಳಿಗೆ ತೆರಿಗೆ ವಿನಾಯಿತಿ, ಪರ್ಯಾಯ ಸಾರಿಗೆ ವ್ಯವಸ್ಥೆ: ಡಿಸಿಎಂ ಸವದಿ

ಬೆಂಗಳೂರು: ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಈಗಾಗಲೇ 8 ಬೇಡಿಕೆಗಳನ್ನು ಈಡೇರಿಸಿದ್ದರೂ ರಾಜ್ಯಾದ್ಯಂತ ಸಾರಿಗೆ ನಿಗಮಗಳ ಬಸ್ ಸಂಚಾರವನ್ನು ಸ್ಥಗಿತಗೊಳಿಸುವ ಮೂಲಕ ಮುಷ್ಕರ ಮುಂದುವರೆಸುವ ನಿರ್ಧಾರವನ್ನು ಸಾರಿಗೆ ನೌಕರರ ಒಕ್ಕೂಟದ ಮುಖಂಡರು ಕೈಗೊಂಡಿರುವುದು ನಿಜಕ್ಕೂ ದುರ್ದೈವದ ವಿಚಾರವಾಗಿದೆ ಎಂದು ಸಾರಿಗೆ ಸಚಿವರಾದ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಮುಷ್ಕರದಿಂದ ತೊಂದರೆಯಾಗಬಾರದು ಎಂಬ ಹಿತದೃಷ್ಟಿಯಿಂದ ಸರ್ಕಾರವು ಹಲವು ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಂಡಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು. ಸಾರಿಗೆ ನೌಕರರ ವೇತನ …

Read More »

ಸಾರಿಗೆ ನೌಕರರ ಮುಷ್ಕರ, ಯುಗಾದಿ ಹಬ್ಬ: ನೈರುತ್ಯ ರೈಲ್ವೆಯಿಂದ ಹೆಚ್ಚುವರಿ ರೈಲು ಸಂಚಾರ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ನೈರುತ್ಯ ರೈಲ್ವೆ ಗುರುವಾರದಿಂದ ಏಪ್ರಿಲ್ 14ರವರೆಗೆ ಹೆಚ್ಚುವರಿ ರೈಲಿನ ಸಂಚಾರ ನಡೆಸಲಿದೆ. ಯುಗಾದಿ ಸಮಯದಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಮಾಡುವವರ ಸಂಖ್ಯೆ ಅಧಿಕವಾಗಿರುತ್ತದೆ. ಅಲ್ಲದೆ ಈಗ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ, ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ …

Read More »

BIG NEWS: 1 ರಿಂದ 9 ನೇ ತರಗತಿಗೆ ಪರೀಕ್ಷೆ ಇಲ್ಲದೆ ಪಾಸ್: ಮಹಾರಾಷ್ಟ್ರ ರೀತಿ ರಾಜ್ಯದಲ್ಲೂ ತೀರ್ಮಾನ ಸಾಧ್ಯತೆ

ಮಹಾರಾಷ್ಟ್ರದಲ್ಲಿ ಕೊರೋನಾನ ಎರಡನೇ ಬಾರಿ ಆತಂಕ ಉಂಟು ಮಾಡಿದ ಹಿನ್ನೆಲೆಯಲ್ಲಿ 1 ರಿಂದ 9 ಮತ್ತು 11 ನೇ ತರಗತಿಗೆ ಪರೀಕ್ಷೆ ಇಲ್ಲದೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಬೇಕೆಂಬ ಕುರಿತು ಚರ್ಚೆ ನಡೆದಿದೆ. ಇಂದು 1 …

Read More »

ಮೊಬೈಲ್‌ ವ್ಯಾಲೆಟ್‌ ಮಿತಿ 2 ಲಕ್ಷ ರೂ.ಗೆ : ಆರ್‌ಬಿಐ ಆದೇಶ

ಹೊಸದಿಲ್ಲಿ : ಮೊಬೈಲ್‌ ವ್ಯಾಲೆಟ್‌ ಬಳಕೆದಾರರಿಗೆ ಆರ್‌ಬಿಐ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ನೀವು ವ್ಯಾಲೆಟ್‌ನಲ್ಲಿ 2 ಲಕ್ಷ ರೂ.ವರೆಗೆ ಇಟ್ಟುಕೊಳ್ಳಬಹುದು. ವ್ಯಾಲೆಟ್‌ನಲ್ಲಿ ಇಡ ಬಹುದಾದ ಮೊತ್ತದ ಮಿತಿಯನ್ನು 1 ಲಕ್ಷ ರೂ.ನಿಂದ 2 ಲಕ್ಷ ರೂ.ಗಳಿಗೆ ಏರಿಸಿ ಆರ್‌ಬಿಐ ಬುಧವಾರ ಆದೇಶ ಹೊರಡಿಸಿದೆ. ಅಲ್ಲದೆ ಪೇಟಿಎಂ, ಫೋನ್‌ಪೇ, ಮೊಬಿವಿಕ್‌, ಗೂಗಲ್‌ಪೇ ಸೇರಿದಂತೆ ಪ್ರೀಪೇಯ್ಡ ಮೊಬೈಲ್‌ ವ್ಯಾಲೆಟ್‌ ಕಂಪೆನಿಗಳು ಕೂಡ ಶೀಘ್ರದಲ್ಲೇ ಸಂಪೂರ್ಣ ಕೆವೈಸಿ (ನೋ ಯುವರ್‌ ಕಸ್ಟಮರ್‌) ಪ್ರಕ್ರಿಯೆಯನ್ನು …

Read More »

ತಪ್ಪು ಸಾಬೀತಾಗದಿದ್ದರೂ ಅಮಾನತು ಶಿಕ್ಷೆ ! ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಅವಸ್ಥೆ

ಉಡುಪಿ: ಇಲಾಖೆ ವಿಚಾರಣಾ ವರದಿಯಲ್ಲಿ ಆರೋಪ ನಿರಾಧಾರ ಎಂದು ಸಾಬೀತಾಗಿದ್ದರೂ ಹಾಗೂ ಅನಾಮಧೇಯ ದೂರು ಪತ್ರ ಅನೂರ್ಜಿತಗೊಂಡಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದ ಪ್ರಸಂಗ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ. ಎರಡು ವರ್ಷಗಳಿಂದ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಆಗಿರುವ ಮಂಜುಳಾ ಕೆ. ಅವರು ಈಗ ಅಮಾನತು ಶಿಕ್ಷೆ ಎದುರಿಸುತ್ತಿರುವವರು. ಇಲಾಖೆಯಲ್ಲಿ 22 ವರ್ಷ ಸೇವೆ ಸಲ್ಲಿಸಿರುವ ಮಂಜುಳಾ ಅವರು 2 ವರ್ಷ 2 ತಿಂಗಳ ಕಾಲ ಉಡುಪಿ ಬಿಇಒ …

Read More »

ಸಂಚರಿಸದ KSRTC-BMTC ಬಸ್‌ಗಳು: ಪ್ರಯಾಣಿಕರ ಸಂಚಾರಕ್ಕೆ ಅಡಚಣೆ

ಬೆಂಗಳೂರು : ವಿವಿಧ ಬೇಡಿಕೆಗಳು ಹಾಗೂ ಆರನೇ ವೇತನ ಆಯೋಗ ಜಾರಿಗೊಳಿಸಲು ಆಗ್ರಹಿಸಿ ರಾಜ್ಯಾದ್ಯಂತ ನಾಲ್ಕೂ ಸಾರಿಗೆ ನಿಗಮಗಳ ಸಾರಿಗೆ ನೌಕರರು ಮುಂಜಾನೆಯಿಂದ ಬಸ್‌ಗಳನ್ನು ಡಿಪೋಗಳಿಂದ ಹೊರತೆಗೆಯದೇ ಪ್ರತಿಭಟನೆ ಮಾಡುತ್ತಿದ್ದು, ಪ್ರಯಾಣಿಕರಿಗೆ ಅಡಚಣೆ ಉಂಟಾಗಿದೆ. ಸದಾ ಜನಜಂಗುಳಿಯಿಂದ ಜುನುಗುಡುತ್ತಿದ್ದ ಕೆಂಪೇಗೌಡ ಬಸ್‌ ನಿಲ್ದಾಣದ ಬಸ್‌ಗಳಿಲ್ಲದೇ ಬಣಗುಡುತ್ತಿದೆ. ಮುಂಜಾನೆ 5 ಗಂಟೆಯಿಂದ ಕೆಲ ಖಾಸಗಿ ಬಸ್‌ಗಳು ಮಾತ್ರ ಸಂಚಾರ ಆರಂಭಿಸಿವೆ. ಆದರೆ ಸಮರ್ಪಕ ಸೇವೆ ಸಿಗದೇ ಪ್ರಯಾಣಿಕರು ತೀವ್ರ ಬೇಸರವನ್ನು ಹೊರಹಾಕುತ್ತಿದ್ದಾರೆ. …

Read More »

ಮುಂದುವರಿದ ಸಾರಿಗೆ ನೌಕರರ ಮುಷ್ಕರ: ಖಾಸಗಿ ಬಸ್ ಬಳಕೆ, ಪ್ರಯಾಣಿಕರ ಪರದಾಟ

ಬೆಂಗಳೂರು: ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅತ್ತ ಸರ್ಕಾರ ಖಾಸಗಿ ಬಸ್ ಗಳನ್ನು ಬಳಸಲು ಅವಕಾಶ ನೀಡಿದ್ದರೆ, ಇತ್ತರ ಸಾರಿಗೆ ನೌಕರರೂ ಪಟ್ಟು ಬಿಡದೆ ಮುಷ್ಕರ ಮುಂದುವರಿಸಿದ್ದಾರೆ. ಇಂದು ಸಹ ಯಾವುದೇ ಸಾರಿಗೆ ಬಸ್ ಸಂಚಾರ ಕಂಡುಬಂದಿಲ್ಲ. ಹೆಚ್ಚಿನೆಡೆ ಖಾಸಗಿ ಬಸ್ ಗಳನ್ನು ಬಳಸಲಾಗುತ್ತಿದೆ. ಆದರೆ ಪ್ರಯಾಣಿಕರು ಮಾತ್ರ ಪರದಾಡುವಂತಾಗಿದೆ. ಒಂದೆಡೆ ಅನಿರ್ದಿಷ್ಟಾವಧಿ ಖಾಸಗಿ ವಾಹನಗಳ ಕಾರ್ಯಾಚರಣೆಗೆ ಸರ್ಕಾರ …

Read More »