ಚಿಕ್ಕಬಳ್ಳಾಪುರ: ತಾಲೂಕಿನ ನಂದಿ ಗ್ರಾಮದ ಸಮೀಪವಿರುವ ಕಣಿವೆ ಬಸವಣ್ಣ ರಸ್ತೆಯಲ್ಲಿ ಥಾರ್ ಜೀಪು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಬೈಕ್ ಸವಾರ ಮೃತಪಟ್ಟು, ವಿದ್ಯಾರ್ಥಿನಿ ಗಾಯಗೊಂಡಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಸೊಣಮಾರನಹಳ್ಳಿಯ ಶಶಿಕುಮಾರ್ (32) ಮೃತ. ಈತನ ಸಹೋದರಿ ಚಂದನಾ (21) ಗಾಯಾಳು. ತಂಗಿಯನ್ನು ಗ್ರಾಮದಿಂದ ಚಿಕ್ಕಬಳ್ಳಾಪುರದಲ್ಲಿನ ಕಾಲೇಜಿಗೆ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಥಾರ್ ಜೀಪು ವೇಗವಾಗಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಬಳಿಕ ಅಪಘಾತಕ್ಕೆ ಕಾರಣನಾದ ಅಪರಿಚಿತ ಚಾಲಕನೇ ಇಬ್ಬರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಶಶಿಕುಮಾರ್ ಆ ವೇಳೆಗಾಗಲೇ ಮೃತಪಟ್ಟಿರುವುದನ್ನು ವೈದ್ಯರು ಖಾತ್ರಿಪಡಿಸಿದ್ದಾರೆ. ಇದರಿಂದ ಆರೋಪಿಯು ಭಯದಲ್ಲಿ ತನ್ನ ವಾಹನವನ್ನು ಪೊಲೀಸ್ ಠಾಣೆಯ ಮುಂಭಾಗ ಬಿಟ್ಟು ಪರಾರಿಯಾಗಿದ್ದಾನೆ. ಹಾಗೆಯೇ ಗಾಡಿಯ ನಂಬರ್ ಪ್ಲೇಟ್ ಗಳನ್ನು ಕಿತ್ತು ಹಾಕಿದ್ದಾನೆ. ನಂದಿ ಗಿರಿಧಾಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಣಿವೆ ಬಸವಣ್ಣ ರಸ್ತೆಯ ಇಳಿಜಾರಿನಲ್ಲಿ ವಾಹನಗಳನ್ನು ವೇಗವಾಗಿ ಓಡಿಸುವಂತಹುದು, ಅಪಘಾತಗಳು ಸಂಭವಿಸುವಂತಹುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Read More »ಜನರಿಗೆ ಲೈಂಗಿಕ ಶಿಕ್ಷಣದ ಅವಶ್ಯವಿದೆ
ಧಾರವಾಡ: ಪ್ರತಿ ವರ್ಷ ನಮ್ಮ ದೇಶದಲ್ಲಿ ಸುಮಾರು 50 ಲಕ್ಷ ಬಲವಂತದ ಗರ್ಭಪಾತ ಘಟನೆಗಳು ನಡೆಯುತ್ತಿದ್ದು, ಜನರಿಗೆ ಲೈಂಗಿಕ ಶಿಕ್ಷಣ ನೀಡುವುದು ಅವಶ್ಯಕವಾಗಿದೆ ಎಂದು ಹಿರಿಯ ಮಹಿಳಾ ಆರೋಗ್ಯ ತಜ್ಞ ಡಾ. ಸಂಜೀವ ಕುಲಕರ್ಣಿ ಹೇಳಿದರು. ಅವರು ಪಂ. ಬಸವರಾಜಶಾಸ್ತ್ರೀ ಕೊಂಡಿಕೊಪ್ಪಮಠ ಸ್ಮರಣಾರ್ಥ ದತ್ತಿ ನಿಮಿತ್ತ ಈಚೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ಸಮಿತಿ, ಭಾರತೀಯ ವೈದ್ಯಕೀಯ ಸಂಘ ಗೋಕಾಕ ಶಾಖೆ ಸಹಯೋಗದಲ್ಲಿ …
Read More »ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ, ಮನೆಗೆ ಕಲ್ಲು ತೂರಿದ ಗುಂಪು
ಚಿಕ್ಕಬಳ್ಳಾಪುರ: ಅನುಚಿತ ವರ್ತನೆಯನ್ನು ಪ್ರಶ್ನಿಸಿದ ಕಾಲೇಜು ವಿದ್ಯಾರ್ಥಿನಿಗೆ ಚಾಕುವಿನಿಂದ ಚುಚ್ಚಿದ್ದು ಬಳಿಕ ಗುಂಪೊಂದು ಆಕೆಯ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದೆ. ಚಿಂತಾಮಣಿ ನಗರದ ಆಶ್ರಯ ಬಡಾವಣೆಯ ಮೇಘನಾ (೧೮). ವಿದ್ಯಾರ್ಥಿನಿಯರಿಗೆ ನೃತ್ಯ ತರಬೇತಿ ನೀಡಿದ ಬಳಿಕ ಮನೆಗೆ ತೆರಳುತ್ತಿದ್ದಾಗ ಕಾರ್ತಿಕ್ ಹಾಗೂ ವಿನೋದ್ ಎಂಬುವರು ಮಾತನಾಡಲು ಮುಂದಾಗಿದ್ದಾರೆ. ಅನುಚಿತವಾಗಿ ವರ್ತಿಸಿದರು ಎನ್ನಲಾಗಿದೆ. ಇದಕ್ಕೆ ಮೇಘನಾ ಅವರನ್ನು ಕೆಳಕ್ಕೆ ತಳ್ಳಿ ಮನೆಗೆ ಓಡಿ ಬಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು …
Read More »ಪೊಲೀಸ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯನ್ನು ಬಲಪಡಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ 2026-27ನೇ ಸಾಲಿನಲ್ಲಿ 7,925 ಪೊಲೀಸ್ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವತಿಯಿಂದ ನೇಮಕಾತಿಗಳನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಡಿಟೆಕ್ಟಿವ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ಸಂಖ್ಯೆ ಕಲ್ಯಾಣ ಕರ್ನಾಟಕ(ಕೆಕೆ) 05, ಉಳಿದ ಭಾಗಕ್ಕೆ (ಎನ್‌ಕೆಕೆ) 15 ಸೇರಿ 20 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಕೆಇಎ …
Read More »ಛತ್ರಪತಿ ಶಹಾಜಿ ಮಹಾರಾಜರ ಸಮಾಧಿ ಅಭಿವೃದ್ಧಿಗೆ ಜಂಟಿ ಹೋರಾಟ: ಕಿರಣ್ ಜಾಧವ್ ಕಾರ್ಯಕ್ಕೆ ಪ್ರಮೋದ್ ಮುತಾಲಿಕ್ ಶ್ಲಾಘನೆ
ಬೆಳಗಾವಿ: ಸ್ವರಾಜ್ಯದ ಮೂಲಪುರುಷ ಛತ್ರಪತಿ ಶಹಾಜಿ ಮಹಾರಾಜರ ಹೊದಗೆರೆ (ಔದಗಿರಿ) ಸಮಾಧಿ ಸ್ಥಳದ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವ ಕುರಿತು ಶ್ರೀರಾಮ ಸೇನೆ ಹಾಗೂ ಸಕಲ ಮರಾಠಾ ಸಮಾಜ ಜಂಟಿಯಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಧಾರ ಕೈಗೊಂಡಿವೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಸಕಲ ಮರಾಠಾ ಸಮಾಜದ ಮುಖಂಡ ಹಾಗೂ ಬಿಜೆಪಿ ನಾಯಕ ಕಿರಣ್ ಜಾಧವ್ ಅವರ ಸಂಪರ್ಕ ಕಾರ್ಯಾಲಯಕ್ಕೆ …
Read More »ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಕೊಡುಗೆ ಅಪಾರ
ಬೆಳಗಾವಿ: ಡಾ.ಫ.ಗು. ಹಳಕಟ್ಟಿ ಅವರು ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಕಷ್ಟಕರ ಜೀವನದಲ್ಲಿಯೂ ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದಂತಹ ಫ.ಗು. ಹಳಕಟ್ಟಿ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಲು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮಿಗಳು ನುಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಗುರುವಾರ(ಜು. 2) ಜರುಗಿದ …
Read More »ವಿಬಿ-ಜಿ ರಾಮ್ ಜಿ’ ಯೋಜನೆ ಜಾರಿ; ಕೂಲಿ ಮೊತ್ತ ಹೆಚ್ಚಳ: ಜಿಪಂ ಸಿಇಒ ರಾಹುಲ್ ಶಿಂಧೆ
ಬೆಳಗಾವಿ: ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕಾ ಮಿಷನ್ (VB-G RAM G) ಯೋಜನೆಯು ಜುಲೈ-1 ರಿಂದ ಜಾರಿಯಾಗಿದ್ದು, ಈ ಹಿಂದೆ ಕೂಲಿಕಾರರಿಗೆ ನಿಗದಿಪಡಿಸಲಾಗಿದ್ದ ಕೂಲಿ ಮೊತ್ತವನ್ನು ಕೂಡ ಹೆಚ್ಚಳ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ಒಬ್ಬ ಕೂಲಿಕಾರರಿಗೆ ಪ್ರತಿ ದಿನಕ್ಕೆ ರೂ.370 ಇದ್ದ ಕೂಲಿ …
Read More »ಪದ್ಮಶ್ರೀ ಡಾ. ಪ್ರಭಾಕರ ಕೊರೆ ಅವರಿಗೆ ಅಭಿನಂದನಾ ಸಮಾರಂಭ
ಬೆಳಗಾವಿ: ಕೆಎಲ್ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಕಾಹೇರ್) ಮಾನ್ಯ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನಗೊಂಡ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭ ಕೆಎಲ್ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಕಾಹೇರ್), ಪರಿಗಣಿತ ವಿಶ್ವವಿದ್ಯಾಲಯ ವತಿಯಿಂದ ಭಾರತ ಸರ್ಕಾರವು ಶಿಕ್ಷಣ, ಆರೋಗ್ಯ, ಸಾಹಿತ್ಯ ಕ್ಷೇತ್ರಗಳಿಗೆ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ‘ಪದ್ಮಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಿರುವ ಹಿನ್ನೆಲೆಯಲ್ಲಿ ಸಂಸ್ಥೆ …
Read More »ರಾಮದುರ್ಗದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ, 25 ಸಾವಿರ ದಂಡ
ಬೆಳಗಾವಿ: ರಾಮದುರ್ಗ ತಾಲೂಕಿನ ಚಿಂಚಖಂಡಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಘಟನೆಯ ಹಿನ್ನೆಲೆ ಆರೋಪಿ ಕೆಂಚಪ್ಪ ಹಣಮಂತ ವಜ್ರಮಟ್ಟಿ, ಚಿಂಚಖಂಡಿ ಗ್ರಾಮದ ನಿವಾಸಿ. ಇವನು ಫಿರ್ಯಾದಿ ದುಂಡವ್ವ ಕಲ್ಲೋಳಪ್ಪ ಮುದೇನ್ನವರ ಮತ್ತು ಅವರ ಮಗ ಲಕ್ಷ್ಮಣ ಕಲ್ಲೋಳಪ್ಪ ಮುದೇನ್ನವರ ಅವರೊಂದಿಗೆ ಖಾಸಗಿ ಗೆಳೆತನ ಹೊಂದಿದ್ದ. ದಿನಾಂಕ 22-06-2025 ರಂದು ಇಬ್ಬರೂ ಕೂಡಿಕೊಂಡು ರಾಮದುರ್ಗಕ್ಕೆ …
Read More »ಇದೇ ಜೂಲೈ 4 ರಂದು ಬಿ.ವಿ.ವಿ.ಸಂಘದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭ
ಬಾಗಲಕೋಟೆ, : ಬಿ.ವಿ.ವಿ. ಸಂಘದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯದ 2023–2026ನೇ ಸಾಲಿನ ಪದವಿ ಪ್ರದಾನ ಸಮಾರಂಭ ಇದೇ ದಿನಾಂಕ 4 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಬಸವೇಶ್ವರ ಇಂಜೆನೀಯರಿಂಗ್ ಕಾಲೇಜು ಗ್ಯಾಲರಿ ಸಭಾಂಗಣದಲ್ಲಿ ಜರುಗಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಅವರು ವಹಿಸುವರು, ಬೆಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀಮತಿ ಪ್ರಭಾವತಿ ಹಿರೇಮಠ ಮುಖ್ಯ ಅತಿಥಿಯಾಗಿ, ನಿವೃತ್ತ ವಿಶೇಷ …
Read More »
Laxmi News 24×7