Breaking News

Laxminews 24x7

ಎಸ್‌ಐಆರ್‌ ಸಮೀಕ್ಷೆ| ಅಧಿಕಾರಿಯ ಮೇಲೆ ಹಲ್ಲೆ – ರಕ್ತ ಬರುವಂತೆ ಹೊಡೆದಿದ್ದ ಡಿಜೆಹಳ್ಳಿಯ ಇಬ್ಬರು ಅರೆಸ್ಟ್‌

ಬೆಂಗಳೂರು: ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ  ಕೆಲಸಕ್ಕೆ ತೆರಳಿದ್ದ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯಾರಬ್ ಮತ್ತು ದಸ್ತಗೀರ್ ಬಂಧಿತ ಆರೋಪಿಗಳು. ಬುಧವಾರ ಮಧ್ಯಾಹ್ನ ಸುಮಾರು 1:30 ರ ವೇಳೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ  ಹಾಗೂ ಸ್ಲಂ ಡೆವಲಪ್‌ಮೆಂಟ್ ಬೋರ್ಡ್‌ನ ಅಧಿಕಾರಿಗಳ ತಂಡವು ಡಿ.ಜೆ. ಹಳ್ಳಿಯ ರೋಶನ್ ನಗರದಲ್ಲಿರುವ ಕೌಸರ್ ಮಸೀದಿ …

Read More »

ಸತ್ಯದ ಅನ್ವೇಷಣೆಯ ಮೂಲಕ ಜ್ಞಾನ ಸಂಪಾದಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವವರೇ ನಿಜವಾದ ಶಿಷ್ಯರು: ಡಾ. ಎಂ.ಪಿ. ಚಂದ್ರಿಕಾ

ಬಾಗಲಕೋಟೆ,: ಗುರು ಪೂರ್ಣಿಮೆಯು ಗುರು–ಶಿಷ್ಯ ಪರಂಪರೆಯ ಮಹತ್ವವನ್ನು ಸಾರುವ ಪವಿತ್ರ ಹಬ್ಬವಾಗಿದ್ದು, ಜ್ಞಾನ ನೀಡಿದ ಗುರುಗಳಿಗೆ ಕೃತಜ್ಞತೆ ಅರ್ಪಿಸುವ ದಿನವಾಗಿದೆ. ಸತ್ಯದ ಅನ್ವೇಷಣೆಯ ಮೂಲಕ ಜ್ಞಾನವನ್ನು ಸಂಪಾದಿಸಿ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರೇ ನಿಜವಾದ ಶಿಷ್ಯರು ಎಂದು ಬಿ.ವಿ.ವಿ. ಸಂಘದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಎಂ.ಪಿ. ಚಂದ್ರಿಕಾ ಹೇಳಿದರು. ನಗರದ ಬಿ.ವಿ.ವಿ. ಸಂಘದ ನೂತನ ಸಭಾಭವನದಲ್ಲಿ ಬುಧವಾರ ನಡೆದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ೨೦೨೬–೨೭ನೇ ಶೈಕ್ಷಣಿಕ ಸಾಲಿನ …

Read More »

ಜ್ಞಾನಯಾನಕ್ಕೆ ದೀಪ ಹಚ್ಚಿ, ಬದುಕಿನ ಪಯಣದಲ್ಲಿ ಜೊತೆ ನಿಲ್ಲುವವರೇ ಗುರುಗಳು: ಶ್ರೀಮತಿ ಮಂಗಳಗೌರಿ ಹೆಗ್ಡೆ

ವಿದ್ಯಾರ್ಥಿಗಳಿಂದ ಗುರುವಿನ ಮಹತ್ವ ಸಾರುವ ಸೊಗಸಾದ ನೃತ್ಯ ಪ್ರದರ್ಶನ ಬಾಗಲಕೋಟೆ: ನಮ್ಮ ಜೀವನದ ಜ್ಞಾನಯಾನಕ್ಕೆ ದೀಪ ಹಚ್ಚಿ, ಬದುಕಿನ ಪಯಣದಲ್ಲಿ ಮಾರ್ಗದರ್ಶನ ನೀಡಿ ಜೊತೆ ನಿಲ್ಲುವವರೇ ಗುರುಗಳು. ಗುರು ಎಂದರೆ ಕೇವಲ ಅಕ್ಷರ ಜ್ಞಾನವನ್ನು ಕಲಿಸುವವರಲ್ಲ; ಜೀವನದ ಏಳುಬೀಳುಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಿ, ಸನ್ಮಾರ್ಗದಲ್ಲಿ ಮುನ್ನಡೆಸುವವರೂ ಗುರುಗಳೇ ಆಗಿದ್ದಾರೆ ಎಂದು ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯ ಪ್ರಾಚಾರ್ಯೆ ಮಂಗಳಗೌರಿ ಹೆಗ್ಡೆ ಹೇಳಿದರು. ಬುಧವಾರ ವಿದ್ಯಾಗಿರಿಯ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ …

Read More »

ಎಸ್‌ಐಆರ್‌ ಸಮೀಕ್ಷೆ| ಅಧಿಕಾರಿಯ ಮೇಲೆ ಹಲ್ಲೆ – ರಕ್ತ ಬರುವಂತೆ ಹೊಡೆದಿದ್ದ ಡಿಜೆಹಳ್ಳಿಯ ಇಬ್ಬರು ಅರೆಸ್ಟ್‌

ಬೆಂಗಳೂರು: ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ  ಕೆಲಸಕ್ಕೆ ತೆರಳಿದ್ದ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯಾರಬ್ ಮತ್ತು ದಸ್ತಗೀರ್ ಬಂಧಿತ ಆರೋಪಿಗಳು. ಬುಧವಾರ ಮಧ್ಯಾಹ್ನ ಸುಮಾರು 1:30 ರ ವೇಳೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಸ್ಲಂ ಡೆವಲಪ್‌ಮೆಂಟ್ ಬೋರ್ಡ್‌ನ ಅಧಿಕಾರಿಗಳ ತಂಡವು ಡಿ.ಜೆ. ಹಳ್ಳಿಯ ರೋಶನ್ ನಗರದಲ್ಲಿರುವ ಕೌಸರ್ …

Read More »

ಸುಪ್ರೀಂನಿಂದ ಜಾಮೀನು ರದ್ದು – ಮೇಘಾಲಯ ಕೋರ್ಟ್‌ಗೆ ಶರಣಾದ ಹನಿಮೂನ್ ಹಂತಕಿ

ಶಿಲ್ಲಾಂಗ್: ಹನಿಮೂನ್‌ಗೆ ಹೋಗಿದ್ದಾಗ ಪ್ರಿಯಕರನೊಟ್ಟಿಗೆ ಸೇರಿ ಪತಿಯನ್ನು ಹತ್ಯೆಗೈದ ಪ್ರಕರಣದ ಆರೋಪಿ ಸೋನಮ್ ರಘುವಂಶಿ  ಸುಪ್ರೀಂಕೋರ್ಟ್ ಆದೇಶದಂತೆ ಇಂದು (ಜು.30) ಶಿಲ್ಲಾಂಗ್‌ನ ವಿಚಾರಣಾ ನಾಯ್ಯಾಲಯದ ಮುಂದೆ ಶರಣಾಗಿದ್ದಾಳೆ. ಈ ಕುರಿತು ಈಸ್ಟ್ ಖಾಸಿ ಹಿಲ್ಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಯಮ್ ಮಾಹಿತಿ ನೀಡಿದ್ದು, ಮಂಗಳವಾರ (ಜು.28) ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಸುಪ್ರೀಂ ಆದೇಶವೇನು? ವಿಚಾರಣೆಗೆ ಅಡ್ಡಿಯಾಗಬಹುದು ಎಂಬ ಕಾರಣ ನೀಡಿ ಸೋನಮ್‌ಗೆ ನೀಡಲಾಗಿದ್ದ ಜಾಮೀನನ್ನು …

Read More »

ರಾಜ್ಯದಲ್ಲಿ ಹಲವು ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ, ರಾಹುಲ್‌ ಗಾಂಧಿ ಮಾತನಾಡಿದ್ರಾ? – ಗೋವಿಂದ ಕಾರಜೋಳ

ನವದೆಹಲಿ: ರಾಜ್ಯದಲ್ಲಿ ಹಲವು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ, ರಾಹುಲ್‌ ಗಾಂಧಿ ಈ ಬಗ್ಗೆ ಒಮ್ಮೆಯಾದ್ರೂ ಮಾತನಾಡಿದ್ದಾರಾ? ಯಾಕೆ ಮಾತನಾಡಿಲ್ಲ ಎಂದು ಸಂಸದ ಗೋವಿಂದ ಕಾರಜೋಳ  ಪ್ರಶ್ನೆ ಮಾಡಿದ್ದಾರೆ. ದೆಹಲಿಯಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಹುಲ್‌ ಗಾಂಧಿ ಅವರ ʻಮೂರ್ಖ ಮತ್ತು ಅಂಧಭಕ್ತʼ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಲೋಕಸಭೆ ಒಂದು ಸಾಂವಿಧಾನಿಕ ಸಂಸ್ಥೆ, ಅದರ ಘನತೆ ಗೌರವ ಎತ್ತಿ ಹಿಡಿಯಬೇಕು. ಇದು ಎಲ್ಲರ ಕರ್ತವ್ಯ, ಕಳೆದ ಒಂದು ವಾರದಿಂದ. ವಿಪಕ್ಷಗಳು ಗದ್ದಲ ಮಾಡುತ್ತಿವೆ. …

Read More »

ಕೇಸರಿ ಬಣ್ಣದಲ್ಲಿ ಹಾಕಿ ತಂಡ| ಇದು ದೇಶದ ಇತಿಹಾಸ ಬದಲಿಸುವ ಯತ್ನ: ಪ್ರಿಯಾಂಕಾ ಆಕ್ರೋಶ

ನವದೆಹಲಿ: ಭಾರತೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಜೆರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿರುವ ಹಾಕಿ ಇಂಡಿಯಾ ನಿರ್ಧಾರವನ್ನು ವಯನಾಡ್ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರವಾಗಿ ಖಂಡಿಸಿದ್ದಾರೆ. ದೇಶದ ಇತಿಹಾಸ ಮತ್ತು ಪರಂಪರೆಯನ್ನು ಬದಲಾಯಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಇದೂ ಒಂದು ಎಂದು ಅವರು ಆರೋಪಿಸಿದ್ದಾರೆ. ಮುಂಗಾರು ಅಧಿವೇಶನದ ಆಗಮಿಸಿದ ವೇಳೆ ಸಂಸತ್ತಿನ ಹೊರಗಡೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ತಂಡದ ಸಮವಸ್ತ್ರವನ್ನೇ ಬದಲಾಯಿಸಲಿ ಅಥವಾ ಶಿಕ್ಷಣ …

Read More »

ಆಗಸ್ಟ್ 29 ರಂದು ಹಸೆಮಣೆ ಏರಲಿದ್ದಾರೆ ನಟ ಚಿಕ್ಕಣ್ಣ

ಸ್ಯಾಂಡಲ್‌ವುಡ್‌ನ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ  ಕಾಲಿಡಲು ಸಜ್ಜಾಗಿದ್ದಾರೆ. ಮಂಡ್ಯ ಮೂಲದ ಪಾವನಾ ಜೊತೆ ಚಿಕ್ಕಣ್ಣ ಅವರ ಮದುವೆ ನಿಶ್ಚಯವಾಗಿದ್ದು, ಮದುವೆ ದಿನಾಂಕವೂ ನಿಗದಿಯಾಗಿದೆ. ಆಗಸ್ಟ್ 29 ಮತ್ತು 30 ರಂದು ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯಲಿದೆ. ಈ ಮದುವೆ ಮಹೋತ್ಸವದಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ನಟ-ನಟಿಯರು, ತಂತ್ರಜ್ಞರು ಹಾಗೂ ಗಣ್ಯರು ಭಾಗವಹಿಸುವ ಸಾಧ್ಯತೆಯಿದೆ. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಸದ್ಯ …

Read More »

ಗದಗ ರೈಲು ನಿಲ್ದಾಣದಲ್ಲಿ 9 ಲಕ್ಷ ರೂ. ಮೌಲ್ಯದ 19 ಕೆಜಿ ಗಾಂಜಾ ಜಪ್ತಿ

ಗದಗ: ಗೋವಾಕ್ಕೆ ತೆರಳುತ್ತಿದ್ದ ಶಾಲಿಮಾರ-ವಾಸ್ಕೋ ಎಕ್ಸ್‌ಪ್ರೆಸ್ (Gadag) ರೈಲಿನಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದ್ದು, ನಗರದ ರೈಲ್ವೆ ಪೊಲೀಸರು ಮಾದಕವಸ್ತುವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಇಂದು ಬೆಳಿಗ್ಗೆ 8:06 ರ ಸುಮಾರಿಗೆ, ಶಾಲಿಮಾರದಿಂದ ವಾಸ್ಕೋಗೆ ತೆರಳುತ್ತಿದ್ದ ಶಾಲಿಮಾರ-ವಾಸ್ಕೋ ಎಕ್ಸ್‌ಪ್ರೆಸ್ ರೈಲಿನ ಇಂಜಿನ್ ಹಿಂಭಾಗದ ಜನರಲ್ ಕೋಚ್‌ನ ಶೌಚಾಲಯದ ಬಳಿ 9.56 ಲಕ್ಷ ರೂಪಾಯಿ ಮೌಲ್ಯದ 19.300 ಕೆಜಿ ಗಾಂಜಾ ಪತ್ತೆಯಾಗಿದೆ. ನಗರದ ರೈಲ್ವೆ ಪೊಲೀಸ್ ಠಾಣೆ ಪೊಲೀಸರು ಎಂದಿನಂತೆ …

Read More »

ಕೈಕಾಲು ಸರಿಯಿದ್ರೂ ಶೋಕಿ ಜೀವನಕ್ಕೆ ಅಂಗವಿಕಲನ ವೇಷ – ಖತರ್ನಾಕ್ ಭಿಕ್ಷುಕನ ಅಸಲಿ ಬಣ್ಣ ಬಯಲು

ಬೆಂಗಳೂರು: ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಮಾತಿನ ಹಾಗೆ ಇಲ್ಲೊಬ್ಬ ಹೊಟ್ಟೆಪಾಡಿಗಾಗಿ ಅಂಗವಿಕಲರ  ರೀತಿ ಡ್ರಾಮ ಮಾಡಿ ಸಿಕ್ಕಿಬಿದ್ದಿರುವ ಘಟನೆ ಬ್ಯಾಟರಾಯನಪುರದ  ಐಟಿಐ ಲೇಔಟ್‌ನಲ್ಲಿ ನಡೆದಿದೆ. ಭಿಕ್ಷಾಟನೆ ನಡೆಸುತ್ತಿದ್ದ ಉತ್ತರ ಪ್ರದೇಶ ಮೂಲದ ಮುಖೇಶ್ ಎಂಬ ಯುವಕನ ನೈಜ ಬಣ್ಣ ಇದೀಗ ಬಯಲಾಗಿದೆ. ಕೈ-ಕಾಲುಗಳು ಸಂಪೂರ್ಣವಾಗಿ ಚೆನ್ನಾಗಿದ್ದರೂ, ಶೋಕಿ ಜೀವನ ಹಾಗೂ ಸುಲಭವಾಗಿ ಹಣ ಗಳಿಸುವ ದುರಾಸೆಯಿಂದ ಈತ ಮನಕಲುಕುವಂತೆ ಕುಂಟುತ್ತಾ ಅಂಗವಿಕಲನ ರೀತಿ ನಟಿಸಿ ಜನರನ್ನು ವಂಚಿಸುತ್ತಿದ್ದ. …

Read More »