Breaking News

Laxminews 24x7

ಸೈಬರ್, ಮಹಿಳಾ ದೌರ್ಜನ್ಯ ಪ್ರಕರಣ ಹೆಚ್ಚಳ

ಬೆಳಗಾವಿ:ಪ್ರಸ್ತುತ ದಿನಗಳಲ್ಲಿ ಸೈಬರ್ ಅಪರಾಧಗಳ ಜತೆಗೆ ಮಹಿಳೆಯರ ಮೇಲೆ ವಿವಿಧ ತೆರನಾದ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಕಳವಳ ವ್ಯಕ್ತಪಡಿಸಿದರು. ನಗರದ ಮಹೇಶ್ವರ ಅಂಧ ಮಕ್ಕಳ ಶಾಲೆಯ ಆವರಣದಲ್ಲಿ ಗುರುವಾರ ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಾಣಿಗೆ ತಡೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಗರ, ಗ್ರಾಮೀಣ …

Read More »

ಪಾಲಿಕೆ ಸಿಬ್ಬಂದಿ ಕರ್ತವ್ಯನಿಷ್ಠೆ ಇತರರಿಗೆ ಮಾದರಿ

ಬೆಳಗಾವಿ:ಮಹಾನಗರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿ, ಸಿಬ್ಬಂದಿ ಕರ್ತವ್ಯನಿಷ್ಠೆ ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದರು. ಪಾಲಿಕೆಯ ಚುನಾವಣಾ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಐಆರ ಕಾರ್ಯದ ಪ್ರಗತಿ, ದಾಖಲೆಗಳ ಪರಿಶೀಲನೆ ಹಾಗೂ ಗಣಕೀಕರಣ ಪ್ರಕ್ರಿಯೆ ನಿಗದಿತ ಸಮಯದಲ್ಲಿಯೇ ಪೂರ್ಣಗೊಳಿಸಬೇಕು. ಭಾಷಾ ಸಮಸ್ಯೆ ಸೇರಿ ಸಾಕಷ್ಟು ತೊಂದರೆ,ಕಚೇರಿಯ ದಿನನಿತ್ಯದ ಕೆಲಸದ …

Read More »

ಉಗಾರ ಸಕ್ಕರೆ ಕಾರ್ಖಾನೆ ಮೇಲಿನ ಸುಳ್ಳು ಆರೋಪಗಳಿಗೆ ಖಂಡನೆ

ಬೆಳಗಾವಿ : ಉಗಾರ ಸಕ್ಕರೆ ಕಾರ್ಖಾನೆ ವಿರುದ್ಧ ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತ ಕಾರ್ಖಾನೆ ತೇಜೋವಧೆ ಮಾಡುತ್ತಿದ್ದಾರೆ.  ಕಾರ್ಖಾನೆಯ ಕಾರ್ಯಕ್ಕೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದು, ಇಂತಹ ಸುಳ್ಳು ಅರ್ಜಿಗಳಿಗೆಗೆ ಮಾನ್ಯತೆ ನೀಡಿ, ಸರ್ಕಾರಿ ಇಲಾಖೆಗಳು ವಿನಾಕಾರಣ ತೊಂದರೆ ಕೊಡಬಾರದು ಎಂದು ಆಗ್ರಹಿಸಿ ಉಗಾರ ಶುಗರ್ಸ್‌ ವರ್ಕರ್ಸ್ ಯೂನಿಯನ್‌ನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು. ಉಗಾರ ಸಕ್ಕರೆ ಕಾರ್ಖಾನೆ ವಿರುದ್ಧ ಜಲ, ವಾಯು, ಶಬ್ದ ಮತ್ತು ಭೂ ಮಾಲಿನ್ಯದ ಕುರಿತು …

Read More »

ಪೊಲೀಸ್ ಹುದ್ದೆಗಳ ನೇಮಕಾತಿ; ಅಕ್ರಮ ತಡೆಗೆ ಪೂರ್ವ ಸಿದ್ಧತೆ ಅತ್ಯಗತ್ಯ: ಡಿಸಿ ಮೊಹಮ್ಮದ್ ರೋಷನ್

ಬೆಳಗಾವಿ: ಕರ್ನಾಟಕ ರಾಜ್ಯ ಪೊಲೀಸ್ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇರ ನೇಮಕಾತಿಯ ಪರೀಕ್ಷೆಗಳು ಆಗಸ್ಟ್ 2 ರಂದು ನಡೆಯಲಿದ್ದು, ನಿಯೋಜಿತ ಸಿಬ್ಬಂದಿಗಳು ಪರೀಕ್ಷಾ ಸಮಯದಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಪರೀಕ್ಷಾ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹೇಳಿದರು. ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬುಧವಾರ (ಜು.29) ನಡೆದ ಪೊಲೀಸ್ ಹುದ್ದೆಗಳ ನೇಮಕಾತಿ ಪರೀಕ್ಷಾ ಪೂರ್ವ ಸಿದ್ಧತಾ …

Read More »

ಬೆಳಗಾವಿ ವಾಣಿಜ್ಯೋದ್ಯಮ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

2026-27ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸ್ವಪ್ನಿಲ್ ಶಾ ಆಯ್ಕೆಯಾಗಿದ್ದಾರೆ. ಉದಯ ಜೋಶಿ ಹಿರಿಯ ಉಪಾಧ್ಯಕ್ಷರಾಗಿ, ರಾಜೇಂದ್ರ ಮುತಗೆಕರ್ ದ್ವಿತೀಯ ಉಪಾಧ್ಯಕ್ಷರಾಗಿ, ಮನೋಜಕುಮಾರ್ ಎನ್. ಮತ್ತಿಕೊಪ್ಪ ಗೌರವ ಕಾರ್ಯದರ್ಶಿಯಾಗಿ, ವಿನಿತ್ ಹರಕುಣಿ ಜಂಟಿ ಗೌರವ ಕಾರ್ಯದರ್ಶಿಯಾಗಿ ಹಾಗೂ ರಮೇಶ್ ಲದ್ದಡ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಹಾಗೂ ನಿರ್ಗಮಿತ ಗೌರವ ಕಾರ್ಯದರ್ಶಿ ಸತೀಶ್ ಕುಲಕರ್ಣಿ ಅವರ ಉಪಸ್ಥಿತಿಯಲ್ಲಿ ನಡೆದ ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ …

Read More »

ರಸ್ತೆಯಲ್ಲಿ ಕೆಜಿಗಟ್ಟಲೆ ಮೊಳೆ ಚೆಲ್ಲಿ ಪಂಚರ್ ದಂಧೆ – ಕಿಡಿಗೇಡಿಗಳು ಕೊನೆಗೂ ಲಾಕ್‌!

ಬೆಂಗಳೂರು: ರಸ್ತೆಯಲ್ಲಿ ಬೇಕೆಂದೇ ಮೊಳೆಗಳನ್ನು ಚೆಲ್ಲಿ ಬೈಕ್ ಮತ್ತು ಕಾರುಗಳನ್ನು ಪಂಚರ್ ಮಾಡುತ್ತಿದ್ದ ಇಬ್ಬರು ಖದೀಮರನ್ನು ಜಾಲಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಜಾಲಹಳ್ಳಿಯ ಎಂಇಎಸ್ ರಿಂಗ್ ರಸ್ತೆ ಬದಿಯಲ್ಲಿ ಪಂಚರ್ ಶಾಪ್ ನಡೆಸುತ್ತಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ತಮ್ಮ ಅಂಗಡಿಗೆ ವ್ಯಾಪಾರ ಹೆಚ್ಚಿಸಿಕೊಳ್ಳುವ ದುರಾಸೆಯಿಂದ, ಇವರು ಬೈಕ್‌ನಲ್ಲಿ ಬಂದು ರಸ್ತೆಯುದ್ದಕ್ಕೂ ಕೆಜಿಗಟ್ಟಲೆ ಮೊಳೆಗಳನ್ನು ಚೆಲ್ಲಿ ಹೋಗುತ್ತಿದ್ದರು. ಸವಾರರು ಪಂಚರ್ ಆದ ವಾಹನಗಳನ್ನು ತಳ್ಳಿಕೊಂಡು …

Read More »

ಶಾಲೆಗೆ ತೆರಳುವಾಗ ಥಾರ್‌ ಡಿಕ್ಕಿ – 10 ವರ್ಷದ ಬಾಲಕಿ ಸ್ಥಳದಲ್ಲೇ ಸಾವು

ನೆಲಮಂಗಲ: ತನ್ನ ದೊಡ್ಡಮ್ಮನ ಜೊತೆಗೆ ಶಾಲೆಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಬಾಲಕಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ದಾರುಣ ಸಾವಿಗೀಡಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಬೆಂಗಳೂರು  ಹೊರವಲಯದ ನೆಲಮಂಗಲ ತಾಲೂಕಿನ ಬೀರವಾರ ಗ್ರಾಮದ ಬಳಿ ನಡೆದಿದ್ದು 10 ವರ್ಷದ ಲಿಖಿತಾ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಲಿಖಿತ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇಂದು ತಾಯಿ ತಿಂಡಿ ಮಾಡಿಸಿ ಕೆಲಸಕ್ಕೆ ತೆರಳಿದ್ದಾರೆ. ನಂತರ …

Read More »

ಬಾಲರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್‌ ಯೋಗಿರಾಜ್‌ರಿಂದ ಪ್ರಧಾನಿಗೆ ಸಿದ್ಧವಾಗಿದೆ ವಿಶೇಷ ಉಡುಗೊರೆ

ಮೈಸೂರು: ಆ.1ರಂದು ಪ್ರಧಾನಿ ನರೇಂದ್ರ ಮೋದಿ  ಅವರು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿಗೆ ಬಾಲರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್‌ ಯೋಗಿರಾಜ್‌  ಅವರು ವಿಶೇಷ ಉಡುಗೊರೆಯೊಂದನ್ನು ನೀಡಲಿದ್ದಾರೆ. ಆ.1ರಂದು ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿಗಳಿಗೆ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ಸ್ವಾಮಿ ವಿವೇಕಾನಂದರ ಏಕಶಿಲಾ ಮೂರ್ತಿಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ಮೂರ್ತಿ 8.5 ಕೆಜಿ ತೂಕದ, 1.5 ಅಡಿ ಎತ್ತರದ ವಿಯೆಟ್ನಾಂ ಮಾರ್ಬಲ್‌ನಲ್ಲಿ …

Read More »

ಕೊಡಗಿನಲ್ಲಿ ಗಾಳಿ ಮಳೆ ಆರ್ಭಟ ಜೋರು – ಹಾರಂಗಿ ಜಲಾಶಯದಿಂದ 5,365 ಕ್ಯೂಸೆಕ್ ನೀರು ಕಾವೇರಿ ನದಿಗೆ

ಮಡಿಕೇರಿ: ಕೊಡಗಿನಲ್ಲಿ  ಮತ್ತೆ ಮಳೆಯ ಆರ್ಭಟ ಜೋರಾಗಿದೆ. ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಿದ ಹಿನ್ನೆಲೆ, 5,365 ಕ್ಯೂಸೆಕ್‌ ನೀರನ್ನ ಕಾವೇರಿ ನದಿಗೆ  ಹರಿಸಲಾಗಿದೆ. ಬುಧವಾರದಿಂದ ಜಿಲ್ಲೆಯಾದ್ಯಂತ ಗಾಳಿ-ಮಳೆಯ ತೀವ್ರತೆ ಹೆಚ್ಚಾಗಿದ್ದು, ನದಿ, ತೋರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ನಿರಂತರ ಮಳೆಯ ಪರಿಣಾಮ ಕಾವೇರಿ ನದಿಯ ನೀರಿನ ಮಟ್ಟವೂ ಏರಿಕೆಯಾಗಿದ್ದು, ಹಾರಂಗಿ ಜಲಾಶಯಕ್ಕೆ  ಒಳಹರಿವು ಹೆಚ್ಚಿದೆ. ನಿರಂತರ ಮಳೆಯ ಪರಿಣಾಮ ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ನದಿಯ ತಗ್ಗು ಪ್ರದೇಶಗಳಲ್ಲಿ …

Read More »

ಪಶ್ಚಿಮ ಘಟ್ಟದಲ್ಲಿ ವರುಣನ ಅಬ್ಬರ – ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ ಗೋಕಾಕ್ ಫಾಲ್ಸ್

ಬೆಳಗಾವಿ: ಕಳೆದ ಕೆಲವು ದಿನಗಳ ವಿರಾಮದ ಬಳಿಕ ಇದೀಗ ಪಶ್ಚಿಮ ಘಟ್ಟದಲ್ಲಿ  ವರುಣನ ಅಬ್ಬರ ಜೋರಾಗಿದೆ. ಘಟಪ್ರಭಾ ನದಿಗೆ  ಜೀವಕಳೆ ಬಂದಿದ್ದು, ಗೋಕಾಕ್ ಫಾಲ್ಸ್, ಬಟವಾಡೆ ಜಲಪಾತದಲ್ಲಿ ನೀರು ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗೋಕಾಕ್ ಜಲಪಾತವು  ಮೈದುಂಬಿ ಹರಿಯುತ್ತಿದೆ. ಮಳೆ ಹೆಚ್ಚಾದ ಹಿನ್ನೆಲೆ ದೃಶ್ಯ ವೈಭವವೇ ಸೃಷ್ಟಿಯಾಗಿದ್ದು, 171 ಅಡಿ ಮೇಲಿನಿಂದ ನೀರು ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ. ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜಲಪಾತಗಳಿಗೆ ಜೀವಕಳೆ ಬಂದಿದೆ. …

Read More »