ಗದಗ: ತುಂಗಭದ್ರಾ ನದಿಯ ಪ್ರವಾಹದಿಂದ ಮುಂಡರಗಿ ತಾಲೂಕಿನ ವಿಠಲಾಪುರ ಗ್ರಾಮಕ್ಕೆ ನೀರು ನುಗ್ಗಿದ್ದು, ತಗ್ಗು ಪ್ರದೇಶದಲ್ಲಿರುವ 16 ಮನೆಗಳು ಜಲಾವೃತಗೊಂಡಿವೆ. ವಿಠಲಾಪುರ ಗ್ರಾಮದ 40 ಜನರನ್ನು ಸ್ಥಳೀಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸ್ಥಳಾಂತರಿಸಿ ಕಾಳಜಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.
Read More »108 ಆಂಬುಲೆನ್ಸ್ ಸಿಬ್ಬಂದಿಗಳ ಬೇಜವಾಬ್ದಾರಿತನ! ಮಾನವಿಯತೆ ಮೆರೆದ ಕಂದಾಯ ಇಲಾಖೆ ಅಧಿಕಾರಿ
ತೀರ್ಥಹಳ್ಳಿ : ಜೀವ ಉಳಿಸಲು ವೈದ್ಯರು ಎಷ್ಟು ಮುಖ್ಯವೋ ನಮ್ಮನ್ನು ಆಸ್ಪತ್ರೆಗೆ ಕರೆದೊಯ್ಯಲು ಇರುವ ಆಂಬುಲೆನ್ಸ್ ವಾಹನ ಕೂಡ ಅಷ್ಟೇ ಮುಖ್ಯ. ಆದರೆ ಬೆಂಗಳೂರು 108 ಸಿಬ್ಬಂದಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತವಾದ ಘಟನೆ ಗುರುವಾರ(ಆ.01) ಸಂಜೆ ನಡೆದಿದೆ. ಪುಷ್ಯ ಮಳೆ ಅಬ್ಬರಕ್ಕೆ ತಾಲೂಕಿನಾದ್ಯಂತ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ಪ್ರವಾಹ ಬಂದ ಹಿನ್ನಲೆಯಲ್ಲಿ ಕುರುವಳ್ಳಿಯ ಜಯಚಾಮರಾಜೇಂದ್ರ ತುಂಗಾ ಸೇತುವೆ ಪಕ್ಕ ವಾಸಿಸುವ ಟೆಂಟ್ ತುಂಗಾ ಕಾಲೋನಿ ನಿವಾಸಿಗಳನ್ನು ಪಟ್ಟಣದ ಕೆ ಟಿ ಕೆ …
Read More »ರೈಲಿಗೆ ತಲೆಕೊಟ್ಟು ಅಣ್ಣ ತಂಗಿ ಆತ್ಮಹತ್ಯೆ
ರೈಲಿಗೆ ತಲೆಕೊಟ್ಟು ಅಣ್ಣ ತಂಗಿ ಆತ್ಮಹತ್ಯೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ರೈಲ್ವೆ ಹಳಿಗೆ ಅಣ್ಣ ತಂಗಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ (ಆ.02)ಬೆಳಗ್ಗೆ ನಡೆದಿದೆ. ಶಿಡ್ಲಘಟ್ಟ ಟೌನ್ ನ ಪ್ರೇಮನಗರದ ನಿವಾಸಿಗಳಾದ ಶಿಲ್ಪ ಅಲಿಯಾಸ್ ನವ್ಯ (23) ಹಾಗೂ ಪ್ರಭು (20) ಎನ್ನಲಾಗಿದ್ದು ಬಲಜಿಗ ಜನಾಂಗದವರು ಎನ್ನಲಾಗಿದ್ದು, ಬೆಂಗಳೂರಿನಿಂದ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮಾರ್ಗವಾಗಿ ಕೋಲಾರಕ್ಕೆ ತೆರಳುವ ರೈಲಿಗೆ ರಾತ್ರಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಪೊಲೀಸ್ …
Read More »ಮಾಂಸಾಹಾರಸೇವನೆ ಮಾಡಿದ್ದ ಒಂದೇ ಕುಟುಂಬದ ನಾಲ್ವರ ಸಾವು
ರಾಯಚೂರು: ವಿಷಾಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾದ ಘಟನೆ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಶುಕ್ರವಾರ(ಆ.02) ನಡೆದಿದೆ. ಗ್ರಾಮದ ನಿವಾಸಿಗಳಾದ ಭೀಮಣ್ಣ ಬಾಗ್ಲಿ (70), ಈರಮ್ಮ ಬಾಗ್ಲಿ (62), ಮಲ್ಲೇಶ (21), ಪಾರ್ವತಿ(19) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಯುವತಿ ಮಲ್ಲಮ್ಮ ಸ್ಥಿತಿಯೂ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಮನೆಯಲ್ಲಿ ಕುಟುಂದ ಎಲ್ಲ ಸದಸ್ಯರು ಮಾಂಸಾಹಾರ ಸೇವನೆ ಮಾಡಿದ್ದಾರೆ. ಆರೋಗ್ಯದ ಮೇಲೆ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಸಂಬಂಧಿಗಳು ರಾಯಚೂರು …
Read More »308 ಕ್ಕೇರಿದ ಮೃತರ ಸಂಖ್ಯೆ, ಡ್ರೋನ್ ಆಧಾರಿತ ರಾಡಾರ್ ಮೂಲಕ ಪತ್ತೆ ಕಾರ್ಯ
ವಯನಾಡ್ : ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದ ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 308 ಕ್ಕೆ ತಲುಪಿದೆ. ಇನ್ನೂ 300 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೌಕಾಪಡೆ, ಎನ್‌ಡಿಆರ್‌ಎಫ್ ಮತ್ತು ಇತರ ರಕ್ಷಣಾ ತಂಡಗಳು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಇದುವರೆಗೆ ನೂರಾರು ಜನರನ್ನು ರಕ್ಷಿಸಿ ಸುರಕ್ಷಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 40 ತಂಡಗಳೊಂದಿಗೆ ಶೋಧ ಕಾರ್ಯಾಚರಣೆ: ಶುಕ್ರವಾರ ಬೆಳಗ್ಗೆ ಸುಮಾರು 40 ತಂಡಗಳು ಮಂಡಕ್ಕೈ, …
Read More »Rajasthan ದಿಂದ ಬಂದಿದ್ದು ಕುರಿ ಮಾಂಸ: ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳೆದೊಂದು ವಾರದಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದ ರಾಜಸ್ಥಾನದಿಂದ ಕುರಿ ಮಾಂಸದ ಜತೆ ನಾಯಿ ಮಾಂಸ ಬೆರೆಸಿ ತಂದ ಆರೋಪ ಪ್ರಕರಣದ ಲ್ಯಾಬ್ ವರದಿ ಬಂದಿದ್ದು, ಅದು ಕುರಿ ಮಾಂಸ ಎಂಬುದು ವರದಿಯಲ್ಲಿ ದೃಢಪಟ್ಟಿದೆ. ಜೊತೆಗೆ, ಈ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಮಾಂಸದ ಸ್ಯಾಂಪಲ್ ಟೆಸ್ಟಿಂಗ್ ವರದಿಯನ್ನು ಆಹಾರ ಇಲಾಖೆಯು ಪ್ರಕಟಿಸಿದ್ದು, ಅದು ನಾಯಿ ಮಾಂಸ ಅಲ್ಲ, …
Read More »CMಗೆ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಸಂಪುಟದಿಂದ ರಾಜ್ಯಪಾಲರಿಗೆ ಸಲಹೆ
ಬೆಂಗಳೂರು: “ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಟಿ.ಜೆ ಅಬ್ರಾಹಂ ಅವರ ದೂರಿನನ್ವಯ ಮಾನ್ಯ ಮುಖ್ಯಮಂತ್ರಿಗಳಿಗೆ ಜುಲೈ 26ರಂದು ನೀಡಿರುವ ಶೋಕಾಸ್ ನೋಟಿಸ್ ಅನ್ನು ಹಿಂಪಡೆಯಬೇಕು ಎಂದು ರಾಜ್ಯ ಸಚಿವ ಸಂಪುಟ ಮಾನ್ಯ ರಾಜ್ಯಪಾಲರಿಗೆ ಸಲಹೆ ನೀಡಲು ತೀರ್ಮಾನಿಸಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗುರುವಾರ ಹೇಳಿದ್ದಾರೆ. ಸಚಿವ ಸಂಪುಟ ಸಭೆಯ ತೀರ್ಮಾನದ ಬಗ್ಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಸಿಎಂ “ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಡಾ ಪ್ರಕರಣಕ್ಕೆ …
Read More »ಆ. 2ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಯುಸಿವರೆಗೆ ರಜೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರವೂ ಮಳೆ ಮುಂದುವರಿದಿದ್ದು,ಈ ಹಿನ್ನೆಲೆಯಲ್ಲಿ ಶುಕ್ರವಾರ (ಆಗಸ್ಟ್ 02)ರಂದು ಜಿಲ್ಲೆಯ ಪದವಿ ಪೂರ್ವ ಕಾಲೇಜುವರಿಗೆ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್ ಮತ್ತು ಐಟಿಐಗಳಿಗೆ ರಜೆ ಘೋಷಿಸಲಾಗಿಲ್ಲ.
Read More »ಹೊಟ್ಟೆ ತುಂಬಿಸದ ಕಾಳಜಿ ಕೇಂದ್ರ. ಸಂತ್ರಸ್ಥರೇ ತಯಾರಿಸುತ್ತಿದ್ದಾರೆ ಅಡುಗೆ
ಮುಧೋಳ: ಘಟಪ್ರಭಾ ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ಥರಿಗೆ ನೆರವಾಗಬೇಕಿದ್ದ ಕಾಳಜಿ ಕೇಂದ್ರಗಳು ಸಂತ್ರಸ್ಥರ ಹೊಟ್ಟೆ ತುಂಬಿಸುತ್ತಿಲ್ಲ. ಅರೆಹೊಟ್ಟೆ ಊಟ ತಡೆಯದೆ ಸಂತ್ರಸ್ಥರು ಕಾಳಜಿ ಕೇಂದ್ರದಲ್ಲಿಯೇ ಗ್ಯಾಸ್ ಬಳಕೆ ಮಾಡಿ ಹಚ್ಚಿನ ಆಹಾರ ತಯಾರಿಸುತ್ತಿದ್ದಾರೆ. ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಆರಂಭಿಸಿರುವ ಬಿ.ಬಿ. ಮುಧೋಳ ಶಾಲೆಯಲ್ಲಿನ ಸಂತ್ರಸ್ಥರು ತಮ್ಮ ಅಗತ್ಯ ಅಡುಗೆಗಾಗಿ ಕಾಳಜಿ ಕೇಂದ್ರದಲ್ಲಿಯೇ ಗ್ಯಾಸ್ ಒಲೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎರಡು ಚಪಾತಿ ಸಾಲಲ್ಲ : ಹಳ್ಳಿಗಾಡಿನ ರೈತಾಪಿ ವರ್ಗಕ್ಕೆ ಹೊಟ್ಟೆ ತುಂಬಾ ರೊಟ್ಟಿ ತಿಂದಾಗ …
Read More »ಗುಡ್ಡ ಕುಸಿತದಿಂದ ಸ್ಥಗಿತಗೊಂಡ ಅಂಕೋಲಾ – ಕುಮಟಾ ರಾ.ಹೆ 66 ಪುನರಾರಂಭ
ಅಂಕೋಲಾ: ಶಿರೂರು ಬಳಿ ಗುಡ್ಡ ಕುಸಿದ ಪರಿಣಾಮ ಕೆಲ ದಿನಗಳಿಂದ ವಾಹನ ಸಂಚಾರ ಬಂದ್ ಆಗಿದ್ದ ರಾಷ್ಟ್ರೀಯ ಹೆದ್ದಾರಿ ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಜುಲೈ 16ರಂದು ಶಿರೂರು ಬಳಿ ಹೆದ್ದಾರಿಯಲ್ಲಿ ಭೀಕರವಾಗಿ ಗುಡ್ಡಕುಸಿತ ಉಂಟಾಗಿ ಮಂಗಳೂರು – ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಹೆದ್ದಾರಿಯ ಮಧ್ಯೆ ಮಣ್ಣಿನ ರಾಶಿ ಬಿದ್ದು ಮತ್ತು ,11 ಜನ ಕಣ್ಮರೆಯಾಗಿದ್ದರು. ಅದರಲ್ಲಿ 8 ಜನರ ಮೃತದೇಹ ದೊರೆತಿತ್ತು. ಇನ್ನುಳಿದವರಿಗಾಗಿ …
Read More »
Laxmi News 24×7