Breaking News

ಡಿಕೆಶಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

Spread the love

ಬೆಂಗಳೂರು: ಹಲವು ಸುತ್ತಿನ ಸಭೆಯ ಬಳಿಕ ಡಿಕೆ ಶಿವಕುಮಾರ್‌  ಸಂಪುಟದ ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಚಲುವರಾಯಸ್ವಾಮಿ ಅವರಿಗೆ ಕೃಷಿ, ಜಮೀರ್‌ ಅಹ್ಮದ್‌ ಅವರಿಗೆ ಗೃಹ ಮತ್ತು ವಕ್ಫ್‌ ಖಾತೆಯನ್ನು ನೀಡಲಾಗಿದೆ.

ಸಿದ್ದರಾಮಯ್ಯ ಸಂಪುಟದಲ್ಲಿ ಮುನಿಯಪ್ಪ ಅವರಿಗೆ ಆಹಾರ ಖಾತೆಯನ್ನು ನೀಡಲಾಗಿತ್ತು. ಆದರೆ ಈ ಬಾರಿ ಸಮಾಜ ಕಲ್ಯಾಣ ಸಚಿವಾಲಯವನ್ನು ನೀಡಲಾಗಿದೆ. ಮುನಿಯಪ್ಪ ಅವರು ಸಮಾಜಕಲ್ಯಾಣ ಖಾತೆ ಬೇಕೇಂದು ಪಟ್ಟು ಹಿಡಿದಿದ್ದರು. ಅದರಂತೆ ಈಗ ಆ ಖಾತೆಯನ್ನೇ ಹಂಚಿಕೆ ಮಾಡಲಾಗಿದೆ.

ಪ್ರಮಾಣವಚನ ಸ್ವೀಕರಿಸಿದ 19 ಮಂದಿ ಪೈಕಿ 15 ಮಂದಿಗೆ ಮಾತ್ರ ಈ ಗ ಖಾತೆ ಹಂಚಿಕೆ ಮಾಡಲಾಗಿದೆ. ಸಚಿವರಾದ ನಾಗೇಂದ್ರ , ವಿಜಯಾನಂದ ಕಾಶಪ್ಪನವರ್, ನರೇಂದ್ರ ಸ್ವಾಮಿ, ಟಿ ರಘುಮೂರ್ತಿ ಇಲ್ಲಿಯವರೆಗೆ ಖಾತೆ ಫೈನಲ್‌ ಆಗಿಲ್ಲ. ಈ ಸಚಿವರಿಗೆ ಯಾವ ಖಾತೆ ನೀಡಬೇಕು ಎನ್ನುವುದರ ಬಗ್ಗೆ ಹೈಕಮಾಂಡ್ ಜೊತೆ ಡಿಕೆಶಿ ಚರ್ಚೆ ಮಾಡುತ್ತಿದ್ದಾರೆ. ಎಲ್ಲವೂ ಅಂತಿಮವಾದ ಬಳಿಕ ಸಿಎಂ ಸಚಿವರ ಪಟ್ಟಿಯನ್ನು ಲೋಕಭವನಕ್ಕೆ ಕಳುಹಿಸಲಿದ್ದಾರೆ.

ಯಾರಿಗೆ ಯಾವ ಖಾತೆ?
1. ಚಲುವರಾಯಸ್ವಾಮಿ – ಕೃಷಿ ಇಲಾಖೆ
2. ಬಾಲಕೃಷ್ಣ – ಸಣ್ಣ ನೀರಾವರಿ-
3. ಸಮಾಜ ಕಲ್ಯಾಣ – ಮುನಿಯಪ್ಪ
4. ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ
5. ಬಸವಂತಪ್ಪ- ಬಂದರು ಮೀನುಗಾರಿಕೆ ಇಲಾಖೆ

6. ಮಧುಬಂಗಾರಪ್ಪ- ಪ್ರಾಥಮಿಕ ಶಿಕ್ಷಣ ಇಲಾಖೆ
7. ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ
8. ಜಮೀರ್ ಅಹಮದ್ ಖಾನ್ – ಹೌಸಿಂಗ್
9. ಲಕ್ಷ್ಮಣ್ ಸವದಿ- ಸಹಕಾರ
10. ಅಜಯ್ ಸಿಂಗ್- ಅರಣ್ಯ ಇಲಾಖೆ

11. ಎಸ್. ಎಸ್.ಮಲ್ಲಿಕಾರ್ಜುನ – ಗಣಿಗಾರಿಕೆ
12. ರಿಜ್ವಾನ್ – ಆಹಾರ
13. ಶಿವರಾಜ್ ತಂಗಡಗಿ- ಹಿಂದುಳಿದ ವರ್ಗ
14. ಪುಟ್ಟರಂಗಶೆಟ್ಟಿ- ಪಶುಸಂಗೋಪನೆ ಇಲಖೆ
15. ಶಿವಲಿಂಗೇಗೌಡ – ಅಬಕಾರಿ


Spread the love

About Laxminews 24x7

Check Also

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the loveವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ