Breaking News

ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ; ಒಬ್ಬ ಅಪ್ಪನಿಗೆ ಹುಟ್ಟದ ನಿನಗೆ ಅಂತ್ಯ ಹಾಡುವ ಕಾಲ ಬಂದಿದೆ’

Spread the love

ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ವಿಚಾರವಾಗಿ ಮುರುಗೇಶ ನಿರಾಣಿ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ವಾಕ್ಸಮರ ನಡೆಯುತ್ತಿದೆ. ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ವಿಚಾರವಾಗಿ ಮುರುಗೇಶ ನಿರಾಣಿ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ವಾಕ್ಸಮರ ನಡೆಯುತ್ತಿದೆ.
ಆರಂಭದಲ್ಲಿ ಜೊತೆಗಿದ್ದ ನಿರಾಣಿ ಸಚಿವ ಸ್ಥಾನ ಸಿಕ್ಕ ಬಳಿಕ ತಮ್ಮ ವರಸೆ ಬದಲಾಯಿದ್ದಾರೆಂಬ ಆರೋಪ ಮಾಡಿದ್ದ ಶಾಸಕ ಯತ್ನಾಳ್, ‘ಪಿಂಪ್ ಸಚಿವ’ ಪದ ಪ್ರಯೋಗ ಮಾಡಿದ್ದರು. ಯತ್ನಾಳ್ ಹೇಳಿಕೆಗೆ ಸಚಿವ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ತಿರುಗೇಟು ನೀಡಿದ್ದಾರ, ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಯತ್ನಾಳ್ ಭಾಷೆಯಲ್ಲಿಯೇ ಪದ ಪ್ರಯೋಗ ಮಾಡಿದ್ದಾರೆ.

ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ. ಬಾಯಿ ಹರುಕನಂತೆ ಮಾತನಾಡುವ ನಾಮರ್ಧ ನಿನ್ನದೇ ಭಾಷೆಯಲ್ಲಿಯೇ ಉತ್ತರನೀಡುತ್ತೇನೆ.

ಒಬ್ಬ ಅಪ್ಪನಿಗೆ ಹುಟ್ಟದ ನಿನಗೆ ಅಂತ್ಯ ಹಾಡುವ ಕಾಲ ಬಂದಿದೆ. ನೇರ ಕಾದಾಟಕ್ಕೆ ಕಣಕ್ಕೆ ಬಂದರೆ ನಿನ್ನ ತಾಕತ್ತು ತಿಳಿಯುತ್ತದೆ. ರಾಜಕೀಯ ಮರುಜನ್ಮ ಕೊಟ್ಟವರಿಗೆರಾಜಕೀಯ ಮರಣ ಶಾಸನ ಬರೆಯುವುದು ಗೊತ್ತಿದೆ.

ಲಕ್ಷಾಂತರ ಜನರಿಗೆ ಅನ್ನ, ಆಶ್ರಯ, ಜೀವನ ಕೊಟ್ಟ ಧರ್ಮಾತ್ಮ ಮುರುಗೇಶ ನಿರಾಣಿಯವರ ತೇಜೋವಧೆಗೆ ನಿಂತ ಮುಠ್ಠಾಳರಿಗೆ ಕಾಲವೇ ಉತ್ತರ ನೀಡುತ್ತದೆ. ಮುರುಗೇಶ ನಿರಾಣಿ ಎಂಬ ಪ್ರಖರ ಸೂರ್ಯನೆದರು ನಿಂತವರು ಭಸ್ಮವಾಗಿದ್ದಾರೆ ನೆನಪಿರಲಿ ಎಂದು ಸಂಗಮೇಶ್ ನಿರಾಣಿ ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ಪತ್ನಿ ಮೃತಪಟ್ಟ 3 ಗಂಟೆಯ ಬಳಿಕ ಪತಿ ಸಾವು; ಒಟ್ಟಿಗೆ ಅಂತ್ಯಕ್ರಿಯೆ

Spread the loveಬೀದರ್: ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ದಂಪತಿಗಳು ಒಂದೇ ದಿನ ಸಾವಿಗೀಡಾದ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ