Breaking News

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುತ್ತಿಗೆಗೆ ಕಬ್ಬಿಣದ ರಾಡ್ ತಗುಲಿ ವ್ಯಕ್ತಿ ಸ್ಥಳದಲ್ಲೇ ಸಾವು

Spread the love

ವದೆಹಲಿ : ದೆಹಲಿ-ಕಾನ್ಪುರ್ ನೀಲಾಚಲ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಬ್ಬಿಣದ ರಾಡ್ ತಗುಲಿ ಪ್ರಯಾಣಿಕ ಸಾವನ್ನಪ್ಪಿರುವ ಘಟನೆ ನಡೆದಿದೆ.

 

ಉತ್ತರ ಮಧ್ಯ ರೈಲ್ವೆಯ ಪ್ರಯಾಗ್‌ರಾಜ್ ವಿಭಾಗದಲ್ಲಿ ದನ್ವಾರ್ ಮತ್ತು ಸೋಮ್ನಾ ನಡುವೆ ಬೆಳಿಗ್ಗೆ 8.45 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕೋಚ್ ಗಾಜಿನ ಕಿಟಕಿಯನ್ನು ಒಡೆದ ಕಬ್ಬಿಣದ ರಾಡ್‌ ವ್ಯಕ್ತಿಯ ಕುತ್ತಿಗೆಗೆ ತಗುಲಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

 

ಮೃತ ವ್ಯಕ್ತಿಯನ್ನು ಹೃಷೇಕೇಶ್ ದುಬೆ ಎಂದು ಗುರುತಿಸಲಾಗಿದೆ. ಕಬ್ಬಿಣದ ರಾಡ್ ಕುತ್ತಿಗೆಗೆ ಚುಚ್ಚಿದಾಗ ಕಿಟಕಿಯ ಬಳಿ ಕುಳಿತಿದ್ದರು ಎನ್ನಲಾಗುತ್ತಿದೆ.

ಘಟನೆ ಸಂಭವಿಸಿದಾಗ ಹಳಿಗಳ ಮೇಲೆ ಕೆಲವು ಕೆಲಸಗಳು ನಡೆಯುತ್ತಿದ್ದವು ಎಂದು ಮೂಲಗಳು ತಿಳಿಸಿವೆ. ಆದರೆ, ಇದುವರೆಗೆ ರೈಲ್ವೆ ಇಲಾಖೆಯಿಂದ ಯಾವುದೇ ದೃಢೀಕರಣ ಬಂದಿಲ್ಲ.

ಮೃತದೇಹವನ್ನು ಜಿಆರ್‌ಪಿಗೆ ಹಸ್ತಾಂತರಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.


Spread the love

About Laxminews 24x7

Check Also

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Spread the loveನವದೆಹಲಿ: ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ