Breaking News

ಬಿಲ್ಡಿಂಗ್‍ನ ತುತ್ತತುದಿಯಲ್ಲಿ ನಿಂತು ಸ್ಟಾರ್ ನಟನ ತಂಗಿಯ ಲಿಪ್‍ಲಾಕ್………..

Spread the love

ಮುಂಬೈ: ಬಾಲಿವುಡ್ ಹಿರಿಯ ನಟ ಜಾಕಿ ಶ್ರಾಫ್ ಪುತ್ರಿ, ಟೈಗರ್ ಶ್ರಾಫ್ ಸೋದರಿ ಕೃಷ್ಣಾ ಶ್ರಾಫ್ ತನ್ನ ಗೆಳೆಯನ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಹರಿದಾಡುತ್ತಿವೆ.

ಸೋದರ ಜಾಕಿ ಶ್ರಾಫ್ ಸಿಂಗಲ್ ಆಗಿದ್ದರೂ ಸೋದರಿ ಕೃಷ್ಣಾ ಗೆಳೆಯನ ಜೊತೆ ಕೊರೊನಾ ಹಾಲಿಡೇಯನ್ನ ಎಂಜಾಯ್ ಮಾಡ್ತಿದ್ದಾರೆ. ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ನಡುವೆ ಲವ್ ಇದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ಇಬ್ಬರೂ ಮಾತ್ರ ತಾವು ಇನ್ನೂ ಸಿಂಗಲ್ ಅಂತಾನೇ ಹೇಳಿಕೊಂಡಿದ್ದಾರೆ. ಆದ್ರೆ ಟೈಗರ್ ಸೋದರಿ ಬಹು ದಿನಗಳ ಹಿಂದೆ ತನ್ನ ಪ್ರೀತಿಯನ್ನು ಬಹಿರಂಗವಾಗಿಯೇ ಹೇಳಿಕೊಂಡು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.ಬಾಸ್ಕೆಟ್ ಬಾಲ್ ಆಟಗಾರ ಇಬಾನ್ ಹ್ಯಾಂಸ್ ಪ್ರೇಮಪಾಶದಲ್ಲಿ ಕೃಷ್ಣಾ ಬಂಧಿಯಾಗಿದ್ದು, ಸದ್ಯ ಇಬ್ಬರು ಮುಂಬೈನಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೃಷ್ಣಾ ಬಿಕಿನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. 2015ರಲ್ಲಿ ಕೃಷ್ಣಾರ ಟಾಪ್‍ಲೆಸ್ ಫೋಟೋ ಚರ್ಚೆಗೆ ಗ್ರಾಸವಾಗಿತ್ತು


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ