ಮುಂಬೈ: ಬಾಲಿವುಡ್ ಹಿರಿಯ ನಟ ಜಾಕಿ ಶ್ರಾಫ್ ಪುತ್ರಿ, ಟೈಗರ್ ಶ್ರಾಫ್ ಸೋದರಿ ಕೃಷ್ಣಾ ಶ್ರಾಫ್ ತನ್ನ ಗೆಳೆಯನ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಹರಿದಾಡುತ್ತಿವೆ.
ಸೋದರ ಜಾಕಿ ಶ್ರಾಫ್ ಸಿಂಗಲ್ ಆಗಿದ್ದರೂ ಸೋದರಿ ಕೃಷ್ಣಾ ಗೆಳೆಯನ ಜೊತೆ ಕೊರೊನಾ ಹಾಲಿಡೇಯನ್ನ ಎಂಜಾಯ್ ಮಾಡ್ತಿದ್ದಾರೆ. ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ನಡುವೆ ಲವ್ ಇದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ಇಬ್ಬರೂ ಮಾತ್ರ ತಾವು ಇನ್ನೂ ಸಿಂಗಲ್ ಅಂತಾನೇ ಹೇಳಿಕೊಂಡಿದ್ದಾರೆ. ಆದ್ರೆ ಟೈಗರ್ ಸೋದರಿ ಬಹು ದಿನಗಳ ಹಿಂದೆ ತನ್ನ ಪ್ರೀತಿಯನ್ನು ಬಹಿರಂಗವಾಗಿಯೇ ಹೇಳಿಕೊಂಡು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.ಬಾಸ್ಕೆಟ್ ಬಾಲ್ ಆಟಗಾರ ಇಬಾನ್ ಹ್ಯಾಂಸ್ ಪ್ರೇಮಪಾಶದಲ್ಲಿ ಕೃಷ್ಣಾ ಬಂಧಿಯಾಗಿದ್ದು, ಸದ್ಯ ಇಬ್ಬರು ಮುಂಬೈನಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೃಷ್ಣಾ ಬಿಕಿನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. 2015ರಲ್ಲಿ ಕೃಷ್ಣಾರ ಟಾಪ್‍ಲೆಸ್ ಫೋಟೋ ಚರ್ಚೆಗೆ ಗ್ರಾಸವಾಗಿತ್ತು