Breaking News

ಉಮೇಶ್‌ ಕತ್ತಿ ಸಮಾಧಿಗೆ ಪೂಜೆ- ಗುಟ್ಕಾ ಪ್ಯಾಕೆಟ್ ಇಟ್ಟು ನಮನ

Spread the love

ಚಿಕ್ಕೋಡಿ: ಹೃದಯಾಘಾತದಿಂದ ಸಾವನ್ನಪ್ಪಿದ ಉಮೇಶ್ ಕತ್ತಿ(Umesh Katti) ಸಮಾಧಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿ ಅಂತಿಮ ವಿಧಿ ವಿಧಾನವನ್ನು ಇಂದು ಪೂರೈಸಿದರು.

ನಿನ್ನೆ ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಗದ್ದೆಯಲ್ಲಿ ತಂದೆ ತಾಯಿ ಸಮಾಧಿ ಪಕ್ಕವೇ ಅವರ ಅಂತ್ಯಕ್ರಿಯೆ ನಡೆದಿತ್ತು. ಸಮಾಧಿಗೆ ತೆರಳಿ ಪುತ್ರ ನಿಖಿಲ್ ಕತ್ತಿ, ಅಳಿಯ ನಿತಿನ್ ಪ್ರಭುದೇವ ಅವರು ಪುರೋಹಿತರ ಮಾರ್ಗದರ್ಶನದಂತೆ ಪೂಜೆ ಸಲ್ಲಿಸಿದರು.

ಸಮಾಧಿಗೆ ಪೂಜೆ ಮಾಡಿ ಸಮಾಧಿಯ ಮೇಲೆ ಅವರಿಷ್ಟದ ತಿಂಡಿ, ತಿನಿಸುಗಳನ್ನು ಇಡಲಾಯಿತು. ಜೊತೆಗೆ ಸಮಾಧಿ ಮೇಲೆ ಅವರಿಗೆ ಇಷ್ಟವಾದ ಗುಟ್ಕಾ ಪ್ಯಾಕೇಟ್ ಇಟ್ಟು ನಮನ ಸಲ್ಲಿಸಲಾಯಿತು. ಇಂದು ಕೂಡ ಅವರ ಮನೆಗೆ ಅಭಿಮಾನಿಗಳು ದಂಡೇ ಹರಿದು ಬರುತ್ತಿದೆ.


Spread the love

About Laxminews 24x7

Check Also

ಗಂಡನ ಮನೆಯವರ ಕಿರುಕುಳಕ್ಕೆ ಮಹಿಳೆ ಸಾವು

Spread the loveಬೆಳಗಾವಿ: ಗಂಡನ ಮನೆಯವರು ಕಿರುಕುಳ ಕೊಟ್ಟು ಊಟ, ನೀರು ಕೊಡದೇ ಮಗಳನ್ನು ಕೊಂದು ಹಾಕಿದ್ದಾರೆಂದು ಮೃತ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ