Breaking News

ಒಂದೇ ದಿನ 2 ಬಾರಿ ತಾಯಿ ಮೇಲೆ ಅತ್ಯಾಚಾರ ಎಸಗಿದ ಪಾಪಿ ಮಗ!

Spread the love

ಮದ್ಯವ್ಯಸನಿ ಯುವಕನೊಬ್ಬ ಜನ್ಮಕೊಟ್ಟ ತಾಯಿ ಮೇಲೆ ಒಂದೇ ದಿನ ಎರಡು ಬಾರಿ ಅತ್ಯಾಚಾರ ಎಸಗಿದ ಹೇಯ ಘಟನೆ ಪಟ್ಟಣದಲ್ಲಿ ಸಂಭವಿಸಿದೆ.

ಶನಿವಾರ (ಜು.9) ಎಂದಿನಂತೆ ರಾತ್ರಿಯೂ ಮದ್ಯ ಸೇವಿಸಿ ಮನೆಗೆ ರೋಕಿ ಜಾನ್​ ಪುಡ್ತೋಳ ಬಂದಿದ್ದ. ಅಂದು ತಡರಾತ್ರಿ ನಿದ್ರೆ ಮಂಪರಿನಲ್ಲಿದ್ದ ತಾಯಿಯನ್ನು ಎಬ್ಬಿಸಿದ ಮಗ, ಏನೋ ಮಾತಾಡಬೇಕು ಎಂದು ಸೋಫಾ ಬಳಿ ಕರೆದು ಬಲಾತ್ಕಾರ ಮಾಡಿದ್ದಾನೆ.

ಈ ಘಟನೆಯಿಂದ ಆಘಾತಕ್ಕೀಡಾದ ತಾಯಿ, ಕಣ್ಣೀರು ಹಾಕುತ್ತಲೇ ಕತ್ತಲಲ್ಲಿ ಮನೆಯ ಹೊರಗೆ ಬಂದು ಸುಮಾರು ಹೊತ್ತು ಒಬ್ಬರೇ ಕುಳಿತು, ನಂತರ ಮಗನಿಂದ ತಪ್ಪಿಸಿಕೊಂಡು ತನ್ನ ಕೋಣೆ ಸೇರಿಕೊಂಡಿದ್ದರು.

ಬೆಳಗ್ಗೆ 6ರ ಸುಮಾರಿಗೆ ಆರೋಪಿ ‘ತಾನು ಎಲ್ಲಿಯೋ ಹೋಗಬೇಕು’ ಎಂದು ಕೂಗಿ ಕರೆದು, ತಾಯಿಗೆ ಬೆದರಿಕೆ ಹಾಕುತ್ತಾ ಮತ್ತೊಮ್ಮೆ ಅತ್ಯಾಚಾರವೆಸಗಿದ್ದಾನೆ ಎಂದು ನಗರ ಪೊಲೀಸ್​ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ